ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಹದಿನಾರು ಪರ್ಸೆಂಟ್‌ಗೇ ಇಷ್ಟು ಹೆದರುವುದಾದರೆ…?


ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅದರಲ್ಲಿ ಎನ್‌ಡಿಎ ಬಲಾಬಲ 143. ಎನ್‌ಡಿಎ ಅನ್ನು ಒಡೆದು ನೋಡಿದರೆ ಜೆಡಿಯು ಪಾಲು 88 ಹಾಗೂ ಬಿಜೆಪಿ ಸಂಖ್ಯೆ 55. 2005ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಬಳಿ 54 ಶಾಸಕರಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕತಾಂತ್ರಿಕ ಜನತಾ ಪಾರ್ಟಿಗೆ ಸಿಕ್ಕಿದ್ದು ಕೇವಲ 10 ಸೀಟುಗಳು! ಲಾಲು ಹಾಗೂ ಪಾಸ್ವಾನ್ ಅವರಂತೂ ನಿತೀಶ್ ಕುಮಾರ್ ಅವರ ಬದ್ಧವೈರಿಗಳು. ಹೀಗಾಗಿ ಯಾವುದೇ ದೃಷ್ಟಿಯಲ್ಲಿ ನೋಡಿದರೂ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದೇ, ಇಂದಿಗೂ ಅಧಿಕಾರದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿರುವುದೇ ಬಿಜೆಪಿಯ 55 ಶಾಸಕರ ಕೃಪೆಯಿಂದ. ಅಂದು ಬಿಜೆಪಿ ಬೆಂಬಲ ಕೊಡದಿದ್ದರೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಲು ಸಾಧ್ಯವಿತ್ತೆ? ಇಂತಹ ವಾಸ್ತವದ ಹೊರತಾಗಿಯೂ ನಿತೀಶ್ ಕುಮಾರ್ ಉಡಾಫೆಯಿಂದ, ಸೊಕ್ಕಿನಿಂದ ಏಕೆ ವರ್ತಿಸುತ್ತಿದ್ದಾರೆ?

ಕಳೆದ ಶನಿವಾರ, ಭಾನುವಾರ (ಜೂನ್ 12, 13) ಬಿಹಾರದ ರಾಜಧಾನಿ ಪಟನಾದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಗಳ ಸಭೆ ಆಯೋಜನೆಯಾಗಿತ್ತು. ಅದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ‘ಸ್ವಾಭಿಮಾನ ಯಾತ್ರೆ’ಯನ್ನು ಹಮ್ಮಿಕೊಂಡಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದರು. ಆ ಸಂಬಂಧ ಅಲ್ಲಿನ ಸ್ಥಳೀಯ ಭಾಷಾ ಪತ್ರಿಕೆಗಳಲ್ಲಿ ಸಹಜ ಹಾಗೂ ಸಾಂಪ್ರದಾಯಿಕವಾಗಿ ಜಾಹೀರಾತು ಗಳನ್ನು ನೀಡಲಾಗಿತ್ತು. ೨೦೦೯ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮಿತ್ರಪಕ್ಷ ಅಕಾಲಿದಳ ಪಂಜಾಬ್‌ನ ಲುಧಿಯಾನಾದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಬೃಹತ್ ರ್‍ಯಾಲಿ ಏರ್ಪಡಿಸಿದ್ದ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖಾಮುಖಿಯಾಗಿದ್ದ ನಿತೀಶ್ ಕುಮಾರ್ ಹಾಗೂ ಮೋದಿ ಪರಸ್ಪರ ಕೈಹಿಡಿದು ಫೋಟೋಕ್ಕೆ ನಗೆ ಚೆಲ್ಲಿದ್ದರು. ಬಿಹಾರದಲ್ಲಿರುವ ಮೋದಿ ಅಭಿಮಾನಿಗಳು ಜೂನ್ 12ರಂದು ನೀಡಿದ ಪತ್ರಿಕಾ ಜಾಹೀರಾತುಗಳಲ್ಲಿ ಆ ಫೋಟೋವನ್ನು ಛಾಪಿಸಿದ್ದರು. 2008ರಲ್ಲಿ ಕೋಸಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿ ಬಿಹಾರವೇ ಸಂಕಷ್ಟಕ್ಕೀಡಾಗಿದ್ದಾಗ ಗುಜರಾತ್ ನೀಡಿದ್ದ ಧಾರಾಳ ನೆರವಿನ ಬಗ್ಗೆ ಜಾಹೀರಾತಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಆದರೆ ಬೆಳಗ್ಗೆ ಪತ್ರಿಕೆಗಳನ್ನು ನೋಡಿದ ಕೂಡಲೇ ಕೆಂಡಾಮಂಡಲರಾದ ನಿತೀಶ್ ಕುಮಾರ್, ಎಷ್ಟು ಬಾಲಿಶವಾಗಿ ವರ್ತಿಸಿದರೆಂದರೆ ಜಾಹೀರಾತು ನೀಡಿದ್ದ ಏಜೆನ್ಸಿಯ ಮೇಲೆ ಪೊಲೀಸ್ ದಾಳಿ ಮಾಡಿಸಿದರು. ಮೋದಿ ಜತೆಗಿನ ತಮ್ಮ ಫೋಟೋವನ್ನು ಪ್ರಕಟಿಸಿದ್ದಕ್ಕಾಗಿ ಬಿಜೆಪಿಯ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಕಾರ್ಯಕಾರಿ ಸಭೆಗಾಗಿ ಪಟನಾಕ್ಕೆ ಬಂದಿದ್ದ ಬಿಜೆಪಿ ಹಿರಿಯ ನಾಯಕರಿಗಾಗಿ ಜೂನ್ 12ರ ಸಂಜೆ ಏರ್ಪಡಿಸಿದ್ದ ಔತಣಕೂಟವನ್ನೂ ರದ್ದು ಮಾಡಿದರು!
ಈ ಬಾರಿ ಬಿಜೆಪಿ ತೆಪ್ಪಗೆ ಕುಳಿತುಕೊಳ್ಳಲಿಲ್ಲ.

“ನಾವು ಮೈತ್ರಿಧರ್ಮವನ್ನು ಪಾಲಿಸುತ್ತೇವೆ, ಆದರೆ ಆತ್ಮಗೌರವ ಬಿಟ್ಟಲ್ಲ” ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಗುಡುಗಿದರು. ಆನಂತರ ನಿತೀಶ್ ಕುಮಾರ್ ಸದ್ಯಕ್ಕೆ ತಣ್ಣಗಾಗಿದ್ದಾರೆ. ಆದರೆ ತಮ್ಮನ್ನು ರಾಜಕೀಯವಾಗಿ ಮೇಲೆ ತಂದ ಜಾರ್ಜ್ ಫರ್ನಾಂಡಿಸ್ ಅವರನ್ನೇ ಪಕ್ಷದಿಂದ ಹೊರಹಾಕಿದ, ಶರದ್ ಯಾದವ್‌ರನ್ನು ಮೂಲೆಗುಂಪು ಮಾಡಿದ ಅವರು ಇನ್ನು ಮೂರ್ನಾಲ್ಕು ತಿಂಗಳು ಗಳಲ್ಲಿ ಬಿಜೆಪಿಯಿಂದ ಹೊರನಡೆದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಜತೆಗಿನ ತಮ್ಮ ಒಂದು ಫೋಟೋವನ್ನು ಪ್ರಕಟಸಿದ ಮಾತ್ರಕ್ಕೆ ಇಷ್ಟೆಲ್ಲಾ ರಂಪ ಮಾಡಬೇಕಿತ್ತಾ? ಅದರಲ್ಲಿ ಕುಪಿತಗೊಳ್ಳುವಂಥದ್ದೇ ನಿತ್ತು? ಜಾಹೀರಾತು ಕಂಪನಿ ಮೇಲೆ ದಾಳಿ ಮಾಡಿಸಿದ್ದೇಕೆ? ಅವರೇನಾದರೂ ಮೋದಿ ಮತ್ತು ನಿತೀಶ್ ಕುಮಾರ್ ಅವರ ಪ್ರತ್ಯೇಕ ಫೋಟೋಗಳನ್ನು ಜೋಡಿಸಿ ಪ್ರಕಟಿಸಿದ್ದರೆ? ಅಥವಾ ಅದೇನು ಕಂಪ್ಯೂಟರ್‌ನಲ್ಲಿ morph ಮಾಡಿದ ಚಿತ್ರವಾಗಿತ್ತೆ? ಲುಧಿಯಾನಾ ರ್‍ಯಾಲಿಯಲ್ಲಿ ನಗುನಗುತ್ತಾ ಫೋಟೋಕ್ಕೆ ಪೋಸು ಕೊಟ್ಟು ಈಗ ಸಿಡುಕುತ್ತಿರುವುದೇಕೆ? ಜನನಾಯಕರ ಫೋಟೋ, ವಿಡಿಯೋಗಳನ್ನು ಯಾರು ಬೇಕಾದರೂ ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದು. ಹಾಗಿದ್ದರೂ ನಿತೀಶ್ ಏಕಾಗಿ ಕೋಪ-ತಾಪ ವ್ಯಕ್ತಪಡಿಸುತ್ತಿದ್ದಾರೆ? ಕಷ್ಟದ ಸಮಯದಲ್ಲಿ ನೀಡಿದ್ದ ಸಹಾಯವನ್ನು ಹೇಳಿಕೊಳ್ಳುವುದು ಅನಾಗರಿಕತೆ ಎಂದು ಕೋಪದಿಂದ ಹೇಳಿಕೆ ನೀಡಿದ ನಿತೀಶ್ ಮಾಡಿದ್ದೇನು? ಬಿಜೆಪಿ ಸರಕಾರದಲ್ಲಿ ಕೇಂದ್ರ ರೈಲ್ವೆ ಸಚಿವರಾಗುವುದಕ್ಕೆ ಅಡ್ಡಿಯಿಲ್ಲ, ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವು ದಕ್ಕೂ ಅಭ್ಯಂತರವಿಲ್ಲ. ಹೀಗಿದ್ದರೂ ಬಿಜೆಪಿ ನಾಯಕರಿಗಾಗಿ ಏರ್ಪಡಿಸಿದ್ದ ಔತಣಕೂಟವನ್ನು ರದ್ದು ಮಾಡಿದ್ದು ಯಾವ ನಾಗರಿಕತೆ? ನಿತೀಶ್ ಕುಮಾರ್ ಇದೇ ಮೊದಲು ಈ ರೀತಿ ತಗಾದೆ ತೆಗೆದಿಲ್ಲ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಬಿಜೆಪಿ ಅಭ್ಯರ್ಥಿಗಳ ಪರ ಮೋದಿಯವರು ಪ್ರಚಾರಾಂದೋಲನಕ್ಕೆ ಬರ ಕೂಡದು ಎಂದೂ ಷರತ್ತು ಹಾಕಿದ್ದರು. 2001ರಿಂದ 2010, ಜೂನ್ 12ರವರೆಗೂ ಮೋದಿ ಒಮ್ಮೆಯೂ ಬಿಹಾರಕ್ಕೆ ಕಾಲಿಟ್ಟಿರಲಿಲ್ಲ, ಅದಕ್ಕೆ ಅವಕಾಶವನ್ನೂ ಕೊಟ್ಟಿರಲಿಲ್ಲ. ಆಗ ಲಾಲು, ತದನಂತರ ನಿತೀಶ್ ಕುಮಾರ್. ಏಕೆ? ನರೇಂದ್ರ ಮೋದಿ ಎಂದ ಕೂಡಲೇ ಇವರೆಲ್ಲ ಏಕೆ ಬೆಚ್ಚಿಬೀಳುತ್ತಾರೆ? ಏಕಿಂಥ ದಿಗಿಲು? ಕಳೆದ ನಾಲ್ಕೂವರೆ ವರ್ಷದಿಂದ ಬಿಜೆಪಿಯಿಂದಾಗಿ ಅಧಿಕಾರ ಅನುಭವಿಸುತ್ತಾ ಬಂದಿ ರುವ ನಿತೀಶ್‌ಗೆ ಈಗ ‘Sick’ular ಇಮೇಜ್‌ನ ಚಿಂತೆಯೇಕೆ ಆರಂಭವಾಯಿತು?

ಎಲ್ಲ ಹದಿನಾರು ಪರ್ಸೆಂಟ್ ವೋಟಿಗಾಗಿ!

ಬಿಹಾರದಲ್ಲಿ 16 ಪರ್ಸೆಂಟ್ ಮುಸ್ಲಿಂ ಮತದಾರರಿದ್ದಾರೆ. ಆದರೆ ಆ 16 ಪರ್ಸೆಂಟ್‌ಗಾಗಿ ಎಂಥೆಂಥ ರಾಜಕೀಯ ನಡೆಯುತ್ತದೆ ನೋಡಿ? 2004ರ ಲೋಕಸಭೆ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರು ಕುಖ್ಯಾತ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಹೋಲುವ(Look-alike) ಮೌಲಾನಾ ಮೆರಾಜ್ ಖಾಲಿದ್ ನೂರ್ ಎಂಬಾತನನ್ನು ಮುಸ್ಲಿಮರ ಗಲ್ಲಿ ಗಲ್ಲಿಗಳಿಗೆ ಕರೆದು ಹೋಗಿ ಮತಯಾಚನೆ ಮಾಡಿದ್ದರು! ಆನಂತರ ನಡೆದ ಅಸೆಂಬ್ಲಿ ಚುನಾವಣೆ ವೇಳೆ, ‘ಈ ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ಬಿಟ್ಟುಕೊಡಬೇಕು’ ಎಂದು ಹೇಳಿಕೆ ನೀಡಿದರು. ಅದರ ಬೆನ್ನಲ್ಲೇ ಮುಸ್ಲಿಮರಿಗೆ ಪ್ರತ್ಯೇಕ ಮೀಸಲು ನೀಡಬೇಕೆಂದು ಒತ್ತಾಯಿಸಿದ್ದರು. “ತಮ್ಮ ಆಡಳಿತವಿರುವವರೆಗೂ ನರೇಂದ್ರ ಮೋದಿ ಬಿಹಾರಕ್ಕೆ ಕಾಲಿಡುವುದಕ್ಕೂ ಅವಕಾಶ ನೀಡುವುದಿಲ್ಲ” ಎಂದು ಲಾಲು ಯಾದವ್ ಬಹಿರಂಗ ಹೇಳಿಕೆ ನೀಡಿದ್ದರು. ಹಾಗೇ ಮಾಡಿ ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ೨೪೩ ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ೯ ಸೀಟು. ಆದರೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೆಹಬೂಬ್ ಅಲಿ ಕೈಸರ್ ಎಂಬವರನ್ನು ತಂದು ಕೂರಿಸಿದೆ.

ಹದಿನಾರು ಪರ್ಸೆಂಟ್ ವೋಟಿನ ಮಹಿಮೆ ಸ್ವಾಮಿ!!

ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಣ್ಣಿಗೆ ದೊಡ್ಡದಾಗಿ ಕಾಣುತ್ತಿರುವುದೂ ಅದೇ 16 ಪರ್ಸೆಂಟ್. ಇನ್ನೈದು ತಿಂಗಳಲ್ಲಿ ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದರೆ ಪ್ರಶ್ನೆಯೇನೆಂದರೆ ಕೇವಲ 16 ಪರ್ಸೆಂಟ್ ವೋಟುಗಳಿಗಾಗಿ ಲಾಲು, ಪಾಸ್ವಾನ್, ನಿತೀಶ್ ಏಕೆ ಒಬ್ಬರ ಮೇಲೆ ಒಬ್ಬರು ಮುಗಿ ಬೀಳುತ್ತಾರೆ? ಬಿಹಾರದಲ್ಲಿ ಮುಸ್ಲಿಮರನ್ನು ಬಿಟ್ಟರೆ ಯಾರೂ ಮತದಾರರೇ ಇಲ್ಲವೆ? ಇದು ಯಾವುದೋ ಒಂದು ರಾಜ್ಯದ, ಪಕ್ಷದ ಕಥೆಯಲ್ಲ, ದೇಶದ ಎಲ್ಲ ಕಡೆಗಳಲ್ಲೂ, ರಾಜಕಾರಣಿಗಳಲ್ಲೂ ಕಾಣುತ್ತಿರುವ ಜಾಡ್ಯದ ವ್ಯಥೆ. ಈ ದೇಶದ ಸಂಪನ್ಮೂಲದ ಮೇಲೆ ಮುಸ್ಲಿಮರಿಗೇ ಮೊದಲ ಹಕ್ಕು ಎನ್ನುತ್ತಾರೆ ಪ್ರಧಾನಿ ಮನಮೋಹನ್ ಸಿಂಗ್. ಮುಂದಿನ ಜನ್ಮವಿದ್ದರೆ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸುತ್ತಾರೆ ಮಾಜಿ ಪ್ರಧಾನಿ ದೇವೇಗೌಡ. ಈ ದೇಶದಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರಾರೂ ಇಲ್ಲವೆ?

ಏಕಿಂಥ ತುಷ್ಟೀಕರಣ?

ಮುಸ್ಲಿಮರ ಒಂದು ವೈಶಿಷ್ಟ್ಯವೇನೆಂದರೆ ಅವರು unifocal ಆಗಿ, ಅಂದರೆ ಒಟ್ಟಾಗಿ ಒಂದೇ ಪಕ್ಷ, ಅಭ್ಯರ್ಥಿಗೆ ವೋಟು ಕೊಡುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ, ಮುಸ್ಲಿಮರನ್ನು ಸೆಳೆದುಕೊಂಡರೆ ಅವರ ಸಂಪೂರ್ಣ ಮತಗಳು ಬುಟ್ಟಿಗೆ ಬಿದ್ದಂತೆ. ಹಿಂದೂಗಳಂತೂ ಒಟ್ಟಾಗಿ ಮತಹಾಕುವವರಲ್ಲ. ಅಂತಹ ಅಯೋಧ್ಯಾ ಚಳವಳಿಗೇ ಹಿಂದೂಗಳನ್ನು ಸರಿಯಾಗಿ ಧ್ರುವೀಕರಣ ಗೊಳಿಸಲು ಸಾಧ್ಯವಾಗಲಿಲ್ಲ. ಹಾಗಿರುವಾಗ ಮುಸ್ಲಿಮರ ಮತಗಳ ಜತೆಗೆ ಜಾತಿ ಮತ ಗಳನ್ನು ಸೆಳೆದುಕೊಂಡರೆ ಗೆಲುವು ಖಚಿತ ಎಂಬ ಭಾವನೆ ನೆಲೆಗೊಂಡಿದೆ. ಮುಸ್ಲಿಮರನ್ನು ಸೆಳೆದುಕೊಳ್ಳಬೇಕೆಂದರೆ ಅವರ ಮುಂದೆ ಸೈತಾನನೊಬ್ಬನನ್ನು ಸೃಷ್ಟಿಸಬೇಕು. ದುರದೃಷ್ಟವಶಾತ್, ನರೇಂದ್ರ ಮೋದಿ ಇಂಥದ್ದೊಂದು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರೆ ಅಷ್ಟೇ. ನಿತೀಶ್ ಕುಮಾರ್ ಕೋಪಿಸಿಕೊಂಡಿರುವುದರ ಹಿಂದೆಯೂ ಇಂಥದ್ದೇ ಲೆಕ್ಕಾಚಾರವಿದೆ. ಆದರೆ ಮೋದಿ ನಿಜಕ್ಕೂ ಸೈತಾನರಾ? 2002ರಲ್ಲಿ ಗಲಭೆ, ಹಿಂಸಾಚಾರ ನಡೆದಿರಬಹುದು. ಆದರೆ ಆನಂತರ ಯಾವ ಪರಿಸ್ಥಿತಿ ಸೃಷ್ಟಿಯಾಗಿದೆ? ಅಂತಹ ರಾಜೇಂದ್ರ ಸಾಚಾರ್ ಸಮಿತಿಯೇ, ನರೇಂದ್ರ ಮೋದಿ ಮುಖ್ಯಮಂತ್ರಿಯಾದ ನಂತರ ಗುಜರಾತ್‌ನಲ್ಲಿ ಮುಸ್ಲಿಮರ ಸ್ಥಿತಿಗತಿಯಲ್ಲಿ ಪ್ರಗತಿಯಾಗಿದೆ ಎಂದು ಅಂಕಿ-ಅಂಶ ಸಮೇತ ವರದಿ ನೀಡಿದೆ. ಆದರೂ ಮೋದಿಯವರನ್ನು ಏಕೆ ಮುಸ್ಲಿಮರ ಶತ್ರು ಎಂಬಂತೆ ಚಿತ್ರಿಸುತ್ತಾರೆ? ಮೋದಿಯೆಂದರೆ ಏಕೆ ಎಲ್ಲರೂ ಭಯಭೀತರಾಗುತ್ತಾರೆ?

ಇಂಥದ್ದೊಂದು ಭಯವನ್ನು ಸೃಷ್ಟಿಸಿರುವುದೇ ಮಾಧ್ಯಮಗಳು. 1. ನರೇಂದ್ರ ಮೋದಿಯೆಂದರೆ ಮುಸ್ಲಿಂ ವಿರೋಧಿ ಹಾಗೂ ಅವರೇ ನಾದರೂ ಪ್ರಧಾನಿಯಾದರೆ ಮುಸ್ಲಿಮರಿಗೆ ಅಪಾಯ. 2. ನರೇಂದ್ರ ಮೋದಿಯವರವನ್ನು ಮುಸ್ಲಿಮರೆಂದೂ ಒಪ್ಪಿಕೊಳ್ಳುವುದಿಲ್ಲ. 3. ನರೇಂದ್ರ ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮರು ಕುಪಿತ ಗೊಳ್ಳುತ್ತಾರೆ. ಈ ರೀತಿ ಭಯಗಳನ್ನು ಸೃಷ್ಟಿಸುತ್ತಾ ಬಂದಿರುವ ಮಾಧ್ಯಮಗಳು, ಕಳೆದ ೮ ವರ್ಷಗಳಲ್ಲಿ ಮೋದಿಯವರನ್ನು ತುಳಿ ಯಲು ಎಂಥೆಂಥ ಪ್ರಯತ್ನ ಮಾಡಿವೆ ಗೊತ್ತಾ? ೨೦೧೦, ಮಾರ್ಚ್ ೪ರಂದು ಸಂಜೆ ಎನ್‌ಡಿಟಿವಿಯಲ್ಲಿ ಪ್ರಸಾರವಾದ ಸುದ್ದಿಯ ಶೀರ್ಷಿಕೆ ಹೇಗಿತ್ತು ಅಂತಿರಾ?

“”Modi Godman Sex Scandal”

ಆ ದಿನ ಸ್ವಾಮಿ ನಿತ್ಯಾನಂದ ಅವರ ಸೆಕ್ಸ್ ಹಗರಣ ಬಹಿರಂಗವಾಗಿತ್ತು. ಹಿಂದೊಮ್ಮೆ ನಿತ್ಯಾನಂದ ಹಾಗೂ ಮೋದಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದರು. ಆ ಸಂದರ್ಭ ದಲ್ಲಿ ನಿತ್ಯಾನಂದ ಹೆಣ್ಣುಮಕ್ಕಳ ಶಿಕ್ಷಣ ಯೋಜನೆಗೆ 4 ಲಕ್ಷ ರೂ. ದೇಣಿಗೆ ನೀಡಿದ್ದರು. ಅಲ್ಲಿಗೆ ವಿಷಯ ಮುಗಿಯಿತು. ಆದರೆ ಒಂದೇ ವೇದಿಕೆ ಹಂಚಿಕೊಂಡ ಮಾತ್ರಕ್ಕೆ, ಸಹಾಯ ಧನವನ್ನು ಸ್ವೀಕರಿಸಿದ ಕಾರಣಕ್ಕೆ ನಿತ್ಯಾನಂದ ಮೋದಿಯವರ ಗಾಡ್‌ಮ್ಯಾನ್ ಆಗುವುದಕ್ಕೆ ಸಾಧ್ಯವೆ? ಒಂದೆಡೆ ಮಾಧ್ಯಮಗಳು ಮೋದಿಯವರನ್ನು ಕೆಟ್ಟದಾಗಿ ಚಿತ್ರಿಸುವ ಕೆಲಸವನ್ನು ಸಂಧ್ಯಾವಂದನೆಯಂತೆ ಮಾಡಿಕೊಂಡು ಬರುತ್ತಿದ್ದರೆ, ಇನ್ನೊಂದೆಡೆ ಸೋನಿಯಾ ಗಾಂಧಿಯವರ ಕೇಂದ್ರ ಸರಕಾರ ಯಾರ್‍ಯಾರು ಮೋದಿಯವರ ವಿರುದ್ಧ ಪ್ರಚಾರಾಂದೋಲನ ಮಾಡುತ್ತಾರೋ ಅವರಿಗೆ ‘ಪದ್ಮ’ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾ ಹಿಸುವ, ಇಲ್ಲವೆ ರಾಜ್ಯಸಭೆಗೆ ನಾಮಕರಣ ಮಾಡಿ ಸಂತೈಸುವ ಕೆಲಸ ಮಾಡುತ್ತಿದೆ.

ಉದಾಹರಣೆ ಬೇಕಾ?

ಮುಸ್ಲಿಮರನ್ನು ಮದುವೆಯಾದ ನಂತರ ಹಿಂದೂ ವಿರೋಧಿಗಳಾಗಿ ಪರಿವರ್ತನೆಯಾದವರ ದೊಡ್ಡ ಗುಂಪೇ ಇದೆ ಬಿಡಿ. ಅವರಲ್ಲಿ ಇತ್ತೀಚೆಗೆ ಬಹಳ ಗಮನ ಸೆಳೆದಾಕೆ ಅತುಲ್ ಸೆತಲ್ವಾಡ್ ಹಾಗೂ ಸೀತಾ ಸೆತಲ್ವಾಡ್ ಪುತ್ರಿ ತೀಸ್ತಾ ಸೆತಲ್ವಾಡ್. ಜಾವೆದ್ ಆನಂದ್ ಎಂಬುವರನ್ನು ವಿವಾಹವಾಗಿರುವ ಆಕೆ ಅದೆಷ್ಟು ಸುಳ್ಳು ಕಥೆಗಳನ್ನು ಸೃಷ್ಟಿಸಿ ಹರಡಿದ್ದಳು, ಮೋದಿಯವರ ವಿರುದ್ಧ ಪ್ರಚಾರಾಂದೋಲನ ಮಾಡಿದ್ದಳು ಎಂಬುದನ್ನು 2010, ಮಾರ್ಚ್ 25ರ ಸಂಚಿಕೆಯಲ್ಲಿ ‘ಇಂಡಿಯಾ ಟುಡೆ’ಯಂತಹ ಸೆಕ್ಯುಲರ್ ಪತ್ರಿಕೆಯೇ “Inhuman rights” ಶೀರ್ಷಿಕೆಯಡಿ ಬಯಲು ಮಾಡಿದೆ. ಸುಪ್ರೀಂಕೋರ್ಟನ್ನೇ ದಾರಿತಪ್ಪಿಸಿದ್ದ ಆಕೆಗೆ ಸೋನಿಯಾ ಸರಕಾರ 2007ರಲ್ಲಿ “ಪದ್ಮಶ್ರೀ” ಪ್ರಶಸ್ತಿ ನೀಡಿತು! ಇನ್ನು ಜಾವೆದ್ ಅಖ್ತರ್ ಯಾರಿಗೆ ಗೊತ್ತಿಲ್ಲ ಹೇಳಿ? ಅವರೊಬ್ಬ ಅದ್ಭುತ ಸಿನಿಮಾ ಸಾಹಿತ್ಯ ರಚನೆಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಧರ್ಮ ಪ್ರತಿಪಾದನೆಗಿಳಿದಿರುವ ಜಾವೆದ್ ಅಖ್ತರ್, 2007ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ(PIL)ಯೊಂದನ್ನು ಹಾಕಿದರು. ಗುಜ ರಾತ್‌ನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಅದರ ಬೆನ್ನಲ್ಲೇ ಅಖ್ತರ್‌ಗೆ (2007ರಲ್ಲಿ ) “ಪದ್ಮ ಭೂಷಣ” ಪ್ರಶಸ್ತಿ ನೀಡಲಾಯಿತು. ‘ಮೌತ್ ಕಾ ಸೌದಾಗರ್’ ಎಂದು ಬರೆದುಕೊಟ್ಟ ಮಹಾಶಯ ಕೂಡ ಇವರೇ ಎಂಬ ಬಲವಾದ ಗುಮಾನಿಗಳಿವೆ! ಅದಕ್ಕೆ ಸಿಕ್ಕ ಪ್ರತಿಫಲವೇನು ಗೊತ್ತೆ? 2010ರಲ್ಲಿ ರಾಜ್ಯಸಭೆಗೆ ನಾಮಕರಣ ಮಾಡಿ ಸಂತೈಸಲಾಗಿದೆ! ತನ್ನ ನೃತ್ಯದಿಂದ ಹೆಸರು ಮಾಡಿದ್ದ ಮಲ್ಲಿಕಾ ಸಾರಾಭಾಯಿ ಎಂಬಾಕೆ ಮೋದಿ ವಿರೋಧಿಯಾಗಿ ಹೊರಹೊಮ್ಮಿದ ಕೂಡಲೇ ಆಕೆಗೆ ‘ಪದ್ಮವಿಭೂಷಣ’(2009ರಲ್ಲಿ) ನೀಡಲಾಯಿತು! ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯನ್ಯಾಯಮೂರ್ತಿ ವಿ.ಎನ್. ಖಾರೆ ಹೆಸರು ಕೇಳಿದ್ದೀರಾ? ತೀಸ್ತಾ ಸೆತೆಲ್ವಾಡ್ ಕಟ್ಟಿದ ಹುಸಿ ಕಥೆ ಗಳನ್ನು ಯಥಾವತ್ತಾಗಿ ನಂಬಿದ ನ್ಯಾಯಮೂರ್ತಿ ಖಾರೆಯವರು, ಮೋದಿಯವರನ್ನು ಕಟುವಾಗಿ ಟೀಕಿಸಿದ್ದರು. ೨೦೦೪ರಲ್ಲಿ ಅವರು ನಿವೃತ್ತರಾದಾಗ ಖ್ಯಾತ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ಮಾರು ದ್ದದ ಸಂದರ್ಶನ ನೀಡಿ, “ಮೋದಿ ಸರಕಾರ ಗಲಭೆಕೋರರ ಜತೆ ಕೈಜೋಡಿಸಿತ್ತು” ಎಂದು ಆಪಾದನೆ ಮಾಡಿದ್ದರು. ೨೦೦೬ರಲ್ಲಿ “ಪದ್ಮಭೂಷಣ” ಪ್ರಶಸ್ತಿ ಅವರನ್ನು ಅರಸಿಕೊಂಡು ಬಂತು.

ಸೋನಿಯಾ ಗಾಂಧಿಯವರ ಗಮನ ಸೆಳೆಯಬೇಕೆಂದರೆ ಇರುವ ಅತ್ಯಂತ ಸರಳ, ಸುಲಭ ಮಾರ್ಗವೆಂದರೆ ಮೋದಿಯವರನ್ನು ಜರಿಯುವುದು. ಈ ರೀತಿಯ ನಕಾರಾತ್ಮಕ ಪ್ರಚಾರಾಂದೋಲನದ ಮೂಲಕ ಮೋದಿಯೆಂದರೆ ಎಲ್ಲರೂ ಭಯಪಡುವಂತಹ ಪರಿಸ್ಥಿತಿ ಯನ್ನು ಸೃಷ್ಟಿಸಲಾಗಿದೆ. ಖಂಡಿತ 2002ರಲ್ಲಿ ನಡೆದ ಘಟನೆಯನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಹಾಗಂತ ಮೋದಿಯವರನ್ನು, ಹಿಂದೂಗಳನ್ನು ಮಾತ್ರ ದೂಷಿಸುವುದು ಎಷ್ಟು ಸರಿ? ಒಂದು ಮಾತು ನೆನಪಿಟ್ಟುಕೊಳ್ಳಿ, Hindus never act, they only react.. ಗುಜರಾತ್‌ನಲ್ಲಿ ಆಗಿದ್ದೂ ಅದೇ. ಒಂದು ವೇಳೆ, ಗೋಧ್ರಾ ಘಟನೆ ಸಂಭವಿಸದಿದ್ದರೆ ಗುಜರಾತ್ ಹಿಂಸಾಚಾರ ಸಂಭವಿಸುತ್ತಿರಲಿಲ್ಲ. ಹಿಂದೂಗಳು ತಾವಾಗಿಯೇ ಪ್ರಾರಂಭಿಸಿದ ಒಂದು ಕೋಮು ಹಿಂಸಾಚಾರವನ್ನು ಉದಾಹರಿಸಿ ನೋಡೋಣ?

1947ರಲ್ಲಿ ದೇಶ ವಿಭಜನೆಯಾದಾಗ 7 ಪರ್ಸೆಂಟ್ ಮುಸ್ಲಿಮ ರಿದ್ದರು. ಈಗ 16 ಪರ್ಸೆಂಟ್‌ಗೇರಿದ್ದಾರೆ. 2001ರ ಜನಗಣತಿ ಪ್ರಕಾರ 12 ವರ್ಷ ವಯೋಮಾನದೊಳಗಿನವರನ್ನು ಗಣನೆಗೆ ತೆಗೆದುಕೊಂಡರೆ ಮುಸ್ಲಿಮರ ಪ್ರಮಾಣ 18 ಪರ್ಸೆಂಟ್!! ಇತ್ತ ಸಾಕುವುದಕ್ಕಾಗುವುದಿಲ್ಲ, ಸೊಂಟ ಜಾರಿ ಹೋಗುತ್ತದೆ, ಫಿಗರ್ ಹಾಳಾಗುತ್ತದೆ, ಒಂದೇ ಮಗುವಿಗೆ ಎಲ್ಲ ಸೌಲಭ್ಯ ಕೊಡೋಣ ಎಂಬಂತೆ ವರ್ತಿಸುತ್ತಿರುವ ನವ ಹಿಂದೂ ದಂಪತಿಗಳ ಮನಸ್ಥಿತಿ ಇನ್ನು 50-60 ವರ್ಷಗಳಲ್ಲಿ ಧಾರ್ಮಿಕ ಜನಸಂಖ್ಯಾ ಅನುಪಾತವನ್ನು ಅಡಿಮೇಲು ಮಾಡುವ, ಹಿಂದೂಗಳೇ ಅಲ್ಪಸಂಖ್ಯಾತರಾಗುವ ಅಪಾಯಕಾರಿ ಸೂಚನೆಗಳನ್ನೂ ತೋರು ತ್ತಿದೆ. ಹಾಗಿರುವಾಗ, 16 ಪರ್ಸೆಂಟ್‌ಗೇ ಇಷ್ಟು ಹೆದರುತ್ತಾರೆ, ಓಲೈಕೆ ಮಾಡುತ್ತಾರೆಂದರೆ ಅವರ ಸಂಖ್ಯೆ 25-30 ಪರ್ಸೆಂಟಾದರೆ ಗತಿಯೇನು?

ಕೃಪೆ : ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ