ನನ್ನ ಬ್ಲಾಗ್ ಪಟ್ಟಿ

ಶನಿವಾರ, ಮೇ 14, 2011

ಭಾರತ್ ಮಾತಾ ಕೀ ಜೈ ಅಂದರೆ ಜೋಕೆ!

1923ರಲ್ಲಿ ಆಂಧ್ರದ ಕಾಕಿನಾಡದಲ್ಲಿ ಕಾಂಗ್ರೆಸ್್ನ ವಾರ್ಷಿಕ ಅಧಿವೇಶನಆಯೋಜನೆಯಾಗಿತ್ತು. ಅವು ‘ವಂದೇ ಮಾತರಂ’ನೊಂದಿಗೆ ಆರಂಭವಾಗುವುದು ಅದಾಗಲೇ ಸಂಪ್ರದಾಯವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪ್ರೇರಕ ಶಕ್ತಿಯಾಗಿದ್ದ ಆ ಗೀತೆಯನ್ನು ಹಾಡಬೇಕೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್್ಗೆ ಆಹ್ವಾನ ಕಳುಹಿಸಿಕೊಡಲಾಗಿತ್ತು. ಭಾರತೀಯ ಶಾಸ್ತ್ರೀಯ ಸಂಗೀತ ಕಲಿಸಲೆಂದೇ ಗಂಧರ್ವ ಮಹಾವಿದ್ಯಾಲಯ ರಚಿಸಿದ ಮಹಾನುಭಾವ ಅವರು. ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಭಜನೆಗೂ ಸಂಗೀತ ಸಂಯೋಜನೆ ಮಾಡಿದ್ದವರು ಅವರೇ. ಸ್ವಾತಂತ್ರ್ಯ ಚಳವಳಿಯ ನೇರ ಸಂಪರ್ಕ ಹೊಂದಿದ್ದ ಅವರು ಲೋಕಮಾನ್ಯ ತಿಲಕ್, ಲಾಲಾ ಲಜಪತ್ ರಾಯ್, ಗಾಂಧೀಜಿಯವರಿಗೆ ಚಿರಪರಿಚಿತರು. ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇ ಮಾತರಂ ಅನ್ನು ಹಾಡುತ್ತಿದ್ದವರೇ ಅವರು. ಅಂತಹ ಪಲುಸ್ಕರ್ ಕಾಕಿನಾಡ ಅಧಿವೇಶನಕ್ಕೂ ಆಗಮಿಸಿದರು. ಸಂಪ್ರದಾಯದಂತೆ ವಂದೇ ಮಾತರಂ ಹಾಡಲು ಆರಂಭಿಸಿದರು. ಅಷ್ಟರಲ್ಲಿ, ನಿಲ್ಲಿಸಿ….. ಎಂಬ ಅಬ್ಬರ! ಕಾಂಗ್ರೆಸ್ ಅಧ್ಯಕ್ಷ ಮೌಲಾನ ಅಹಮದ್ ಅಲಿ, ಪಲುಸ್ಕರ್್ರನ್ನು ಅರ್ಧಕ್ಕೇ ತಡೆದು ಬಿಟ್ಟರು.

ಇಸ್ಲಾಮ್್ನ ಕಾನೂನಿನಂತೆ ಸಂಗೀತ ನಿಷಿದ್ಧ ಎಂದರು!

ಅದನ್ನು ಕೇಳಿ ಕೆಂಡಾಮಂಡಲರಾದ ಪಲುಸ್ಕರ್, ‘ಸ್ವಾಮಿ, ಇದು ರಾಷ್ಟ್ರೀಯ ಮಹಾಸಭೆ. ಇದು ಯಾವುದೇ ಒಂದು ಧರ್ಮದ ಗುತ್ತಿಗೆಯಲ್ಲ. ಇದು ಮಸೀದಿಯೂ ಅಲ್ಲ. ಹೀಗಿರುವಾಗ ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂ ಹಾಡಬೇಡ ಎಂದು ಅಡ್ಡಿಪಡಿಸಲು ನಿಮಗ್ಯಾವ ಅಧಿಕಾರವಿದೆ? ಸಂಗೀತ ನಿಮ್ಮ ಮತಕ್ಕೆ ವಿರುದ್ಧ ಎನ್ನುವುದಾದರೆ ನಿಮ್ಮ ಅಧ್ಯಕ್ಷ ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಬಾಜಾ ಭಜಂತ್ರಿ ನಡೆದಾಗ ಅದು ಮೌಲಾನ ಸಾಹೇಬರಿಗೆ ಹೇಗೆ ಹಿಡಿಸಿತು?’ ಎಂದು ಜಾಡಿಸಿದರು.

ಅವತ್ತು ‘ವಂದೇ ಮಾತರಂ’ ಗೀತೆಯನ್ನಿಟ್ಟುಕೊಂಡು ದೇಶ ಒಡೆಯಲು ಹೊರಟಿದ್ದರು.

ಆದರೂ ಅದು ಧರ್ಮದ ಆಧಾರದ ಮೇಲೆ ದೇಶ ವಿಭಜನೆಯ ಕೂಗಿಗೆ ಮೂಲ ಕಾರಣವಾಯಿತು, ಕೊನೆಗೆ ದೇಶವೂ ಇಬ್ಭಾಗವಾಯಿತು. ಒಬ್ಬ ಮೌಲಾನ ಅಹಮದ್ ಅಲಿ, ಸರ್ ಇಕ್ಬಾಲ್ ಅಹಮದ್, ಮಹಮದ್ ಅಲಿ ಜಿನ್ನಾ ಹಾಗೂ ಮುಸ್ಲಿಂ ಲೀಗ್ ಮಾಡಿದ ದ್ರೋಹವೇ ಸಾಕಾಗಿತ್ತು. ಈಗ ಮತ್ತೆ ಅಂಥದ್ದೇ ಅಪಸ್ವರಗಳು ಕೇಳಿ ಬಂದಿವೆ. ಅಂದು ಮೂಲಭೂತವಾದಿ ಮುಸ್ಲಿಮರು ದೇಶ ಒಡೆದರು, ಇಂದು ಸೆಕ್ಯುಲರ್್ವಾದಿ ಹಿಂದುಗಳೇ ಸಮಾಜ ಒಡೆಯಲು ಹೊರಟಿದ್ದಾರೆ! ಏಪ್ರಿಲ್ ಮೊದಲ ವಾರ ರಾಜಧಾನಿ ದೆಹಲಿಯ ಜಂತರ್್ಮಂತರ್ ಮುಂದೆ ನಡೆದ ಅಣ್ಣಾ ಹಜಾರೆಯವರ 4 ದಿನಗಳ ಉಪವಾಸ ಸತ್ಯಾಗ್ರಹದ ವೇಳೆ ವೇದಿಕೆಯ ಮೇಲೆ ರಾರಾಜಿಸುತ್ತಿದ್ದ ಭಾರತ ಮಾತೆಯ ಭಾವಚಿತ್ರ, ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಜಂತರ್ ಮಂತರ್ ಎದುರು ಸೇರಿದ್ದ ಜನಸ್ತೋಮದಿಂದ ಮೊಳಗುತ್ತಿದ್ದ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳ ಬಗ್ಗೆಯೂ ಇದೀಗ ಅಪಸ್ವರ ಕೇಳಿಬರುತ್ತಿದೆ. ಮಹಿಳಾ ಹೋರಾಟಗಾರ್ತಿಯರಾದ ಕವಿತಾ ಕೃಷ್ಣನ್, ನಂದಿನಿ ಓಜಾ ಹಾಗೂ ಕೆಲವರು ಭಾರತದ ನಕ್ಷೆಯ ಮೇಲೆ ಭಾರತ ಮಾತೆಯ ಭಾವಚಿತ್ರ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಣ್ಣಾ ಹಜಾರೆಯವರು ವಿರೋಧಿಗಳ ಒತ್ತಡಕ್ಕೆ ಅನಿವಾರ್ಯವಾಗಿ ಮಣಿದಿದ್ದಾರೆ. ದಿ ಡೆಕ್ಕನ್ ಹೆರಾಲ್ಡ್್ನಲ್ಲಿ ಪ್ರಕಟವಾದ ಈ ಕೆಳಗಿನ ಸುದ್ದಿಯನ್ನು ಗಮನಿಸಿ.

New symbol for Hazare’s movement


New Delhi, April 14, DH News Service


The tricolour will replace the Bharat Mata image that was in the background set-up of the stage erected at Jantar Mantar on which Hazare was lying on a fast-unto-death for the Jan Lokpal Bill. The background set-up had an image of Bharat Mata encircled by the map of India. Now the map will encircle Tiranga.


According to sources, the movement leaders decided to give a secular character to the logo as some civil society members were uneasy on displaying an image which is identified as a Hindu religious symbol. Bharat Mata is considered to be an incarnation of Devi Durga. “The issue was raised in the strategic meeting held after Hazare ended his fast. Women activists like Kavita Krishnan, Nandini Ojha and others raised the issue and requested the movement leaders to replace the image. It did not take long for the leaders to agree to replace the image,” said sources.

ಇದೆಂಥಾ ತಕರಾರು? ಏಕಿಂಥಾ ಅಪಸ್ವರ?

ಭಾರತ ಮಾತೆ ದುರ್ಗೆಯ ಅವತಾರ, ಅದರಲ್ಲಿ ಹಿಂದು ಅಂಶವಿದೆ ಎನ್ನುವುದಾದರೆ ಈ ದೇಶದಲ್ಲಿ ಹಿಂದು ಅಲ್ಲದ್ದು ಏನಿದೆ? ಭಾರತ ಮಾತೆಯ ಭಾವಚಿತ್ರದ ಕೆಳಗೆ ಅಣ್ಣಾ ಹಜಾರೆ ಉಪವಾಸ ಕುಳಿತರೆ ಕೋಮುವಾದವಾಗುತ್ತದೆಯೆ? ಹಾಗಾದರೆ ಶ್ರೀರಾಮನನ್ನು ಅದರ್ಶ ಪುರುಷನನ್ನಾಗಿ ಇಟ್ಟುಕೊಂಡಿದ್ದ, ಈ ದೇಶವನ್ನು ರಾಮರಾಜ್ಯವನ್ನಾಗಿಸಬೇಕೆಂಬ ಕನಸು ಹೊಂದಿದ್ದ ಮಹಾತ್ಮ ಗಾಂಧೀಜಿ ಅವರೂ ಕೋಮುವಾದಿಯಾಗಿದ್ದರೆ? ಮಾತೆತ್ತಿದರೆ ಗಾಂಧೀಜಿ ಉಲ್ಲೇಖಿಸುತ್ತಿದ್ದುದೇ ಭಗವದ್ಗೀತೆ. ಅದು ಯಾವ ಧರ್ಮದ ಬೈಬಲ್? 1930, ಮಾರ್ಚ್ 12ರಂದು ಗಾಂಧೀಜಿ ದಂಡಿ ಯಾತ್ರೆಗೆ ಹೊರಟಾಗ ಅವರನ್ನು ಹಿಂಬಾಲಿಸುತ್ತಿದ್ದ ಸಾವಿರಾರು ಭಾರತೀಯರು ಗಾಂಧೀಜಿಯವರ ನೆಚ್ಚಿನ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಗೀತೆಯನ್ನು ಭಜಿಸುತ್ತಾ ಸಾಗುತ್ತಿದ್ದರು. ಅದು ಯಾರನ್ನು ಸ್ತುತಿಸುವ ಗೀತೆ? ಸತ್ಯಾಗ್ರಹಿಗಳನ್ನೂ ಕಟ್ಟರ್್ಪಂಥೀಯರೆಂದು ಕರೆಯುತ್ತೀರಾ? ಗಾಂಧೀಜಿಯನ್ನು ಕೋಮುವಾದಿ ನಾಯಕ ಎನ್ನುವುದಕ್ಕಾಗುತ್ತಾ?

ಅಖಂಡ ಭಾರತದ ನೆಲದಲ್ಲಿ ಇದುವರೆಗೂ ನಡೆದ ಎಲ್ಲ ಕ್ರಾಂತಿಗಳಿಗೂ ಹಿಂದು ಧರ್ಮದ ಒಂದಲ್ಲ ಒಂದು ಅಂಶಗಳು ಪ್ರೇರಣೆಯಾಗಿವೆ. ಅದರಲ್ಲೆಲ್ಲ ಮತಾಂಧತೆಯನ್ನು ಹುಡುಕುವುದು ಸರಿಯೇ? ಬ್ರಿಟಿಷರ ವಿರುದ್ಧ ದೇಶವಾಸಿಗಳನ್ನು ಒಗ್ಗೂಡಿಸುವ ್ನಸಲುವಾಗ್ನಿ ಬಂಕಿಮ ಚಂದ್ರ ಚಟರ್ಜಿಯವರು ತಾಯಿ ಭಾರತಿಯನ್ನು ದುರ್ಗೆಗೆ ಹೋಲಿಸಿ ಬರೆದರು. ಕೊನೆಗೆ ಸಾಂಕೇತಿಕವಾಗಿ ಭಾರತಮಾತೆಯನ್ನು ದುರ್ಗೆಯಂತೆಯೇ ಚಿತ್ರಿಸಲಾಯಿತು. ಅದರಲ್ಲಿ ತಪ್ಪೇನಿದೆ? ತಕರಾರು ತೆಗೆದವರಿಗೆ 1947ರಲ್ಲಿಯೇ ಪ್ರತ್ಯೇಕ ರಾಷ್ಟ್ರ ನೀಡಿದ್ದಾಗಿದೆ. ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳಿಗೆ ನಾವು ಆಶ್ರಯ ಕೊಟ್ಟಿದ್ದೇವೆಯೇ ಹೊರತು ಅವುಗಳ ಋಣದಲ್ಲಿ ನಾವಿಲ್ಲ. ಮತ್ತೇಕೆ ಅಪಸ್ವರ? ಕ್ರೈಸ್ತರಾದ ಯೇಸುದಾಸ್್ಗೆ ಸರಸ್ವತಿ, ಗಣಪತಿಗೆ ವಂದಿಸಲು ಯಾವ ಬೇಸ ರವೂ ಆಗುವುದಿಲ್ಲ, ಮುಸ್ಲಿಮರಾದ ಎ.ಆರ್. ರೆಹಮಾನ್್ಗೆ ‘ವಂದೇ ಮಾತರಂ’ ಎಂದು ಹಾಡುವಾಗ ಧರ್ಮ ಅಡ್ಡಿ ಬರುವುದಿಲ್ಲ. ಹಾಗಿರುವಾಗ ಹಿಂದುವಾಗಿ ಹುಟ್ಟಿ ಅಹಿಂದುವಂತೆ ವರ್ತಿಸುವ ಈ ಎಡಬಿಡಂಗಿಗಳದ್ದೇನು ತಕರಾರು?

ಈ ಕವಿತಾ ಕೃಷ್ಣನ್, ನಂದಿನಿ ಓಜಾ, ಮೇದಾ ಪಾಟ್ಕರ್, ಮಲ್ಲಿಕಾ ಸಾರಾಭಾಯ್, ಜಾವೆದ್ ಅನಂದ್್ನಂತವರ ಮಾತನ್ನೇ ಕೇಳುತ್ತಾ ಹೋದರೆ ಈ ದೇಶದ ಎಲ್ಲ ಸಂಕೇತಗಳನ್ನೂ ಬದಲಿಸಬೇಕಾಗುತ್ತದೆ!

ನಮ್ಮ ತ್ರಿವರ್ಣ ಧ್ವಜದಲ್ಲೂ ಕೇಸರಿಯಿದೆ. ಅದೂ ಹಿಂದುತ್ವದ ಸಂಕೇತ, ಅದನ್ನೂ ತೆಗೆಯಿರಿ ಎಂದರೆ ಏನು ಮಾಡಬೇಕು? ಏಕಲವ್ಯ, ದ್ರೋಣಾಚಾರ್ಯ, ಅರ್ಜುನ ಪ್ರಶಸ್ತಿ ಇವರೆಲ್ಲ ಹಿಂದು ಪುರಾಣಪುಣ್ಯ ಕಥೆಗಳ ಕ್ಯಾರೆಕ್ಟರ್್ಗಳು. ನಾಳೆ ಅವುಗಳೂ ಬೇಡ ಎನ್ನಬಹುದು. ಆಗ ಏನು ಮಾಡುತ್ತೀರಿ? ನಮ್ಮ ದೇಶದ ರಾಷ್ಟ್ರೀಯ ಚಿಹ್ನೆಯಲ್ಲಿ (National Emblem) ಬೌದ್ಧದರ್ಮದ ‘ಧರ್ಮಚಕ್ರ’ವಿದೆ. ಬೌದ್ಧಧರ್ಮ ಹಿಂದು ಧರ್ಮದ byproduct. ನಾಳೆ ಧರ್ಮಚಕ್ರದಲ್ಲೂ ಕೋಮುವಾದವನ್ನು ಹುಡುಕಿದರೆ? ಅಷ್ಟೇ ಅಲ್ಲ, ರಾಷ್ಟ್ರೀಯ ಚಿಹ್ನೆಯ ಕೆಳಗೆ ‘ಸತ್ಯ ಮೇವ ಜಯತೆ’ ಎಂದು ಬರೆಯಲಾಗಿದೆ. ಸತ್ಯ ಮೇವ ಜಯತೆ ಎಲ್ಲಿಂದ ಬಂತು? ನಮ್ಮ ಉಪನಿಷತ್್ಗಳಿಂದಲ್ಲವೆ? ಅದರ ಬಗ್ಗೆಯೂ ತಕರಾರು ಎತ್ತಿದರೆ? ನಮ್ಮ ಕರೆನ್ಸಿ, ಸ್ಟ್ಯಾಂಪ್ ಪೇಪರ್್ಗಳ ಮೇಲಿರುವ ಧರ್ಮಚಕ್ರ ಹಾಗೂ ಸತ್ಯ ಮೇವ ಜಯತೆಗಳನ್ನೂ ತೆಗೆದುಹಾಕಿ ಎಂದು ಬೊಬ್ಬೆ ಹಾಕಿದರೆ? ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆಯ ಬಗ್ಗೆ ಅಮೆರಿಕ ಎಷ್ಟೇ ಮಾತನಾಡಿದರೂ ಅದರ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವುದು ಬೈಬಲ್ ಮೇಲೆ ಪ್ರತಿಜ್ಞೆಗೈದೇ ಅಲ್ಲವೆ? ಹಾಗಿರುವಾಗ ಯಕಃಶ್ಚಿತ್ ಕವಿತಾ ಕೃಷ್ಣನ್, ನಂದಿನಿ ಓಜಾ ವಿರೋಧಕ್ಕೆ ಮಣಿದು ಭಗವಾಧ್ವಜ ಹಾಗೂ ಭಾರತ ಮಾತೆಯನ್ನು ತೆಗೆಯಲು ಒಪ್ಪಿದ್ದೇಕೆ?

ಈ ಮಧ್ಯೆ ‘ಓಪನ್ ಮ್ಯಾಗಝಿನ್್’ ಎಂಬ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕ ಮನು ಜೋಸೆಫ್ ಎಂಬಾತ ತನ್ನ ಲೇಖನದಲ್ಲಿ, ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹವನ್ನು ಗೇಲಿ ಮಾಡುತ್ತಾ, “Hazare, who is on a raised platform, has acquired many of the mannerisms of Mohandas Gandhi, including a thoughtful tilt of his head. Behind him are images of Gandhi and a very shapely Mother India.ಎಂದು ಬರೆದಿದ್ದಾನೆ ಅತ ಬರೆದಿರುವುದನ್ನು ನೋಡಿದರೆ ತನ್ನ ತಾಯಿಯನ್ನೂ ಅದೇ ರೀತಿ ನೋಡುತ್ತಾನೇನೋ ಎಂಬ ಅನುಮಾನ ಕಾಡುತ್ತದೆ. ಈ ಮತಾಂತರಗೊಂಡ ಮನುಜೋಸೆಫ್, ತನ್ನ ಧರ್ಮದ ಮಾತೆಯ ಬಗ್ಗೆ ಹೀಗೆಯೇ ಬರೆದಿದ್ದರೆ ಸುಮ್ಮನೆ ಬಿಡುತ್ತಿದ್ದರೆ? ಅಣ್ಣಾ ಉಪವಾಸದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಲಾರ್ಡ್ ಮೇಘಾನಂದ್ ದೇಸಾಯಿ ಹಾಗೂ ರಾಜ್್ದೀಪ್ ಸರ್್ದೇಸಾಯಿ ಕೂಡ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳ ಬಗ್ಗೆ ಕಟಕಿಯಾಡಿದ್ದಾರೆ.

ಈ ಘಟನೆಗಳನ್ನೆಲ್ಲ ನೋಡಿದರೆ ಮುಂದೊಂದು ದಿನ ಜನ ತಾವು ಹಿಂದು ಎಂದು ಹೇಳಿಕೊಳ್ಳುವುದಕ್ಕೇ ಅಂಜಬೇಕಾದ ಪರಿಸ್ಥಿತಿ ಸೃಷ್ಟಿಸಬಹುದು, ಹಣೆಗೆ ತಿಲಕ ಇಟ್ಟರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎನ್ನಬಹುದು. ಭಗವದ್ಗೀತೆಯನ್ನೂ ಕೋಟ್ ಮಾಡಬೇಡಿ ಎಂದು ತಾಕೀತು ಹಾಕಬಹುದು. ವಿವೇಕಾನಂದರ ಫೋಟೋ ಹಾಕುವುದಕ್ಕೇ ವಿರೋಧ ವ್ಯಕ್ತಪಡಿಸುವವರು ಇನ್ಯಾವುದನ್ನು ಬಿಟ್ಟಾರು? ಹಿಂದು ಧರ್ಮಕ್ಕೆ ಸಂಬಂಧಿಸಿದ ಎಲ್ಲ ಸಂಕೇತಗಳೂ ಇವರಿಗೆ ಕೋಮುವಾದದಂತೆ ಕಾಣುತ್ತಿವೆ. ಈಗಲೇ ಎಚ್ಚೆತ್ತುಕೊಂಡು ಕವಿತಾ ಕೃಷ್ಣನ್, ನಂದಿನಿ ಓಜಾ, ಮೇಧಾ ಪಾಟ್ಕರ್ ಮುಂತಾದ ಅಹಿಂದುಗಳು, ಶಬ್ನಮ್ ಹಶ್ಮಿ, ಶಬಾನಾ ಆಜ್ಮಿ, ತೀಸ್ತಾ ಸೆತಲ್ವಾಡ್ ಅವರಂತಹ ‘Sick”larವಾದಿಗಳಿಗೆ ಬುದ್ಧಿ ಕಲಿಸದಿದ್ದರೆ ನಮ್ಮ ದೇಶವನ್ನು ಹಾಳುಗೆಡವಲು ಮತ್ತೆ ಮೊಘಲರು, ಬ್ರಿಟಿಷರು ಬರಬೇಕಿಲ್ಲ, ಇವರೇ ಸಾಕು!

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ