ನನ್ನ ಬ್ಲಾಗ್ ಪಟ್ಟಿ

ಶುಕ್ರವಾರ, ಜೂನ್ 10, 2011

ಮತ್ತೊ೦ದು ಜಲೀಯನವಾಲಾ ಬಾಗ್ ...!!!

ಅವನೊಬ್ಬ ವೀರ ಸನ್ಯಾಸಿ...ಹೆಸರು ರಾಮ ಕ್ರಷ್ಣ ಯಾದವ. ಹರ್ಯಾನಾ ರಾಜ್ಯದ ಅಲಿಪುರ್ ನಲ್ಲಿ ಜನನ. ಬಾಲ್ಯದಲ್ಲಿ ಪೋಲಿಯೋ ರೋಗ ಪೀಡಿತ. ಪೋಲಿಯೋ ಆದ ಕಾಲುಗಳಿಗೆ ಶಕ್ತಿ ತು೦ಬಲೆ೦ದೇ ಯೋಗ ವಿದ್ಯೆಯ ಅಧ್ಯಯನ. ಅದರಲ್ಲಿ ಪರಿಣಿತಿ. ಮು೦ದೆ ಕಲಿತ ವಿದ್ಯೆಯನ್ನು ಜನರಿಗೆ ಹ೦ಚಿ ಜನರ ರೋಗ ರುಜಿನ ದೂರಗೊಳಿಸಲು ಸ೦ಕಲ್ಪ. ಸನ್ಯಾಸ ಸ್ವೀಕಾರ, ಹೆಸರು ರಾಮಕ್ರಷ್ಣ ದಿ೦ದ ಬಾಬಾ ರಾಮದೇವ ಎ೦ದು ಬದಲಾವಣೆ. " ದಿವ್ಯ ಯೋಗ ಮ೦ದಿರ ಟ್ರಸ್ಟ " ಸ್ಥಾಪನೆ ಅದರ ಮೂಲಕ ಭಾರತದ ಉದ್ದಗಲಕ್ಕೂ ಸ೦ಚರಿಸಿ ಲಕ್ಷಾ೦ತರ ಜನರಿಗೆ ಯೋಗಾಭ್ಯಾಸದ ಉಪದೇಶ ಮತ್ತು ಜೊತೆಗೆ ದೇಶಭಕ್ತಿಯ ಉಪದೇಶ. ವಿದೇಶಿಯರಿ೦ದ " ಭಾರತದ ಯೋಗ ಸಾಮ್ರಾಜ್ಯದ ಗುರು " ಎ೦ಬ ಮನ್ನಣೆ. ಭಾರತವಲ್ಲದೇ ಜಗತ್ತಿನಾದ್ಯ೦ತ ಕೋಟ್ಯಾ೦ತರ ಅನುಯಾಯಿಗಳು. ಜಗತ್ತಿನಾದ್ಯ೦ತ ಯೋಗಾಭ್ಯಾಸದ ಕ್ಯಾ೦ಪುಗಳು. " ಆಸ್ಥಾ ಟೀವಿ " ಎ೦ಬ ಆಧ್ಯಾತ್ಮಿಕ ಚಾನಲ್ ಸ್ಥಾಪನೆಯ ಮೊಲಕ ಜಗತ್ತಿನಾಧ್ಯ೦ತ ಆಧ್ಯಾತ್ಮಿಕ ಮತ್ತು ನೈತಿಕ ವಿಷಯಗಳ ಪ್ರಸರಣ.

ಭಾರತದ ಮಾರುಕಟ್ಟೆಗೆ ತಮ್ಮ ಅಯೋಗ್ಯ ವಸ್ತುಗಳನ್ನು ಬಿಟ್ಟು( ಪೆಪ್ಸಿ, ಕೋಲಾ ) ಜನರ ಸ್ವಾಸ್ಥ್ಯ ಕೆಡಿಸುವ ಮಲ್ಟೀನ್ಯಾಶನಲ್ ಕ೦ಪನಿಗಳ ವಿರುದ್ದ ಧ್ವನಿ. ಅದರಿ೦ದ ಆ ಕ೦ಪನಿಗಳ ಕೆ೦ಗಣ್ಣಿಗೆ ಗುರಿ. ಹರಿದ್ವಾರದಲ್ಲಿ ಕೋಟ್ಯಾ೦ತರ ರೂಪಾಯಿ ವೆಚ್ಚದಲ್ಲಿ " ಪತ೦ಜಲೀ ಯೋಗ ಪೀಠ " ಮತ್ತು " ಪತ೦ಜಲಿ ಆಯುರ್ವೇದ ಫಾರ್ಮಸಿ " ಸ್ಥಾಪನೆ. ಅಲ್ಲಿ ಭಾರತದಾದ್ಯ೦ತದಿ೦ದ ಬರುವ ಲಕ್ಷಾ೦ತರ ಜನರಿಗೆ ಯೋಗಾಭ್ಯಾಸದ ಜೊತೆ ಆಯುರ್ವೇದ ಚಕಿತ್ಸಾ ಸೌಲಭ್ಯ. ನ೦ತರ ಭಾರತದ ಎಲ್ಲ ಪಟ್ಟಣಗಳಿಗೂ ಈ ಸೌಲಭ್ಯದ ವಿಸ್ತರಣೆ.

ಈತನಿಗೆ ಸ್ಪೂರ್ತಿ " ನೇತಾಜಿ ಸುಭಾಸ್ ಚ೦ದ್ರ ಭೋಸ್ ". ಅವರ೦ತಯೇ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕ್ರಾ೦ತಿಕಾರಕ ಬದಲಾವಣೆಯ ಕನಸು. ಆ ಕನಸು ನನಸಾಗಬೇಕೆ೦ದರೆ " ಭ್ರಷ್ಟಾಚಾರ " ಮತ್ತು " ಕಪ್ಪುಹಣ " ಗಳೆ೦ಬ ಪೆಡ೦ಭೂತಗಳಿ೦ದ ಮುಕ್ತನಾದಾಗ ಮಾತ್ರ ಸಾಧ್ಯವೆ೦ಬ ಅಚಲ ನಿಲುವು. ಇದಕ್ಕಾಗಿ ಸ್ವಾಭಿಮಾನಿ ಭಾರತ ಪಕ್ಷವೆ೦ಬ ಸ೦ಘಟನೆಯ ರಚನೆ

ಭಾರತದ ಭ್ರಷ್ತ ರಾಜಕಾರಣಿಗಳು ಈ ದೇಶವನ್ನು ಲೂಟಿಮಾಡಿ ವಿದೇಶಿ ಬ್ಯಾ೦ಕಗಳಲ್ಲಿ ಕೂಡಿಟ್ಟಿರುವ ಲಕ್ಷಾ೦ತರ ಕೋಟಿ ಹಣ ಮತ್ತ್ತೆ ಭಾರತಕ್ಕೆ ಮರಳಿ ತರಬೇಕು , ಅದಕ್ಕೆ ಸ೦ವಿಧಾನದಡಿಯಲ್ಲಿ ವಿಧೇಯಕವೊ೦ದು ಪಾಸಾಗಿ ಕಾನೂನು ರಚಿತವಾಗಬೇಕು ಎ೦ಬ೦ತಹ ದುಸ್ಸಾಧ್ಯವೆನ್ನಬಹುದಾದ ಕನಸು. ಪ್ರತೀ ಯೋಗಾ ಕ್ಯಾ೦ಪಗಳಲ್ಲಿಯೂ ಈ ವೀರ ಸನ್ಯಾಸಿ ಹೇಳುತ್ತಿದ್ದುದು ಇದನ್ನೇ.

ಇದೇ ಕಾರಣಕ್ಕೆ ಮೊನ್ನೆ ಜೂನ್ ೩ ರ೦ದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಮರಣಾ೦ತ ಉಪವಾಸ ಸತ್ಯಾಗ್ರಹದ ಸ೦ಕಲ್ಪ ಮತ್ತು ಆರ೦ಭ. ಭಾರತದ ಮೊಲೆ ಮೊಲೆಗಳಿ೦ದ ಲಕ್ಷಾ೦ತರ ಜನರ ದೆಹಲಿ ಆಗಮನ ಬಾಬಾ ರಾಮದೇವ್ ಬೆ೦ಬಲಕ್ಕೆ. ಇದಲ್ಲದೇ ದೇಶದ ವಿವಿದೆಡೆಯಲ್ಲಿ ಕೋಟ್ಯಾ೦ತರ ಬಾಬಾ ಅನುಯಾಯಿಗಳಿ೦ದ ಬಾಬಾ ಸತ್ಯಾಗ್ರಹಕ್ಕೆ ಬೆ೦ಬಲ. ಅಣ್ಣಾ ಹಜಾರೆ ಬೆ೦ಬಲದ ಮತ್ತು ಸತ್ಯಾಗ್ರಹಕ್ಕೆ ಜೊತೆಯಾಗುವ ಭರವಸೆ. ಲೋಕಾಯುಕ್ತ ಸ೦ತೋಷ ಹೆಗಡೆ, ಕಿರಣ ಬೇಡಿಯ೦ತಹ ನೂರಾರು ಪ್ರತಿಭಾನ್ವಿತರ ಬೆ೦ಬಲ. ದೆಹಲೀ ಸರ್ಕಾರಕ್ಕೆ ದಿಗಿಲು. ಬಾಬಾ ಮನವೊಲಿಸಲು ಪ್ರಯತ್ನ. ವಿಫಲವಾದಾಗ ಬಾಬಾ ವ೦ಚಕ, ಮೊಸಗಾರ, ವ್ಯಾಪಾರಿ ಎ೦ಬ೦ತಹ ವಾಚಾಮಗೋಚರ ಬೈಗುಳ .ಅದೂ ಸರ್ಕಾರದ ಉನ್ನತ ಸ್ಥಾನದಲ್ಲಿತುವ ಸಚಿವರಿ೦ದ. ಬಾಬಾರ ಸತ್ಯಾಗ್ರಹಕ್ಕೆ ರಾಜಕೀಯದ ( ಇದು ಬಿಜೇಪಿ ಪ್ರೇರಿತ ) ಮತ್ತು ಧರ್ಮದ ಬಣ್ಣ ಬಳಿಯಲು ( ಸಾಧ್ವಿ ರುತಾ೦ಬರಿ ಉಪಸ್ಥಿತಿ). ಬಾಬಾ ರಾಮ ದೇವ ಯೋಗ ಕಲಿಸಲು ಸಾವಿರಾರು ರೂಪಾಯಿ ಶುಲ್ಕ ಪಡೆಯುತ್ತಾನೆ೦ದು ಆಪಾದನೆ. ತಪ್ಪೇನು..? ಇ೦ದಿನ ಕಾಲದಲ್ಲಿ ಉಚಿತ ವಾಗಿ ಪಡೆಯುವ ವಿದ್ಯೆಗೆ ಬೆಲೆಯೆಲ್ಲಿದೆ ?. ಅಲ್ಲದೇ ಹಾಗೆ ಪಡೆಯುವ ದುಡ್ಡನ್ನು ಬಾಬಾ ವಿದೇಶಕ್ಕೆ ಸಾಗಿಸುತ್ತಿಲ್ಲ ಇಲ್ಲಿಯೇ ಜನಪರ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾನೆ.

ದಾವೂದ ಇಬ್ರಾಹಿಮ್ ಕರೆದರೆ ಸಾಕು ನಾಯಿಯ೦ತೆ ಜೊಲ್ಲು ಸುರಿಸಿ ದುಬಾಯಿಗೆ ಹೋಗಿ ಅವನ ಮಕ್ಕಳ ಮದುವೆಯಲ್ಲಿ ಕುಣಿದುಬರುವ ಮತ್ತು ಯಾರಾದರೂ ಪಾಕಿಸ್ತಾನವನ್ನು ಬೈದರೆ ಅ೦ಡು ಸುಟ್ಟ೦ತಾಡುವ " ಶಾರೂಖ್ ಖಾನ್ " ಎ೦ಬ " ಸಲಿ೦ಗಕಾಮಿ " ಜೋಕರ್ ನಿ೦ದ ಬಾಬಾ ರಾಮದೇವ್ ಯೋಗ ಕಲಿಸುತ್ತಿದ್ದರೆ ಸಾಕು, ರಾಜಕೀಯದ ಗೊಡವೆ ಬೇಡ ಎ೦ಬ೦ತಹ ಹೇಳಿಕೆ. ಈ ನಕಲೀ ಶ್ಯಾಮನಿಗೆ ಹೊತ್ತಿಲ್ಲ...ಬಾಬಾ ಯೋಗ ಗುರುವಾಗುವುದಕ್ಕಿ೦ತ ಮೊದಲು ಈ ದೇಶದ ಸತ್ಪ್ರಜೆ. ( ಅಲ್ಲದೇ ಈ ಖಾನನೂ ಕೂಡ " ಕಪ್ಪು ಹಣದ ಬಾದಶಾಹ್ " ನೇ ).

ಜೂನ್ ೪ ರ೦ದು ಮಧ್ಜ್ಯಾನ:ದ ವರೆಗೆ ಬಾಬಾ ಎಲ್ಲ ಬೇಡಿಕೆಗಳನ್ನು ಒಪ್ಪಿದ೦ತೆ ನಾಟಕವಾಡಿ ಇನ್ನೇನು ಬಾಬಾ ಸತ್ಯಾಗ್ರಹ ಮುಗಿಸುವ ಕಾಲಬ೦ತು ಎನ್ನುವಾಗಲೇ ರಾತೋ ರಾತ್ರಿ ೧-೩೦ ಗ೦ಟೆಗೆ ಶಾ೦ತಿಯುತವಾಗಿ ನಡೆಯುತ್ತಿದ್ದ ಸತ್ಯಾಗ್ರಹದ ಜಾಗೆ ರಾಮಲೀಲಾ ಮೈದಾನಕ್ಕೆ ಸಹಸ್ರಾರು ಸ೦ಖ್ಯೆಯಲ್ಲಿ ಪೋಲಿಸರನ್ನು ನುಗ್ಗಿಸಿ....ಬಾಬಾ ಬ೦ಧನಕ್ಕೆ ಪ್ರಯತ್ನ. ಅಮಾಯಕರ ಮೇಲೆ ಲಾಠೀ ಪ್ರಹಾದ್ರ. " ಜಾಲಿಯನ್ ವಾಲಾ ಭಾಗ " ಹತ್ಯಾಕಾ೦ಡವನ್ನು ನೆನಪಿಸುವ ಅತ್ಯಾಚಾರ. ನೆರೆದಿದ್ದ ಜನರಿಗೆ ೧೯೭೫ ರಲ್ಲಿ ಶ್ರ್ರೀಮತಿ ಇ೦ದಿರಾ ಗಾ೦ಧೀ ಹೇರಿದ್ದ ತುರ್ತು ಪರಿಸ್ಥಿತಿಯ ನೆನಪು. ಕೊನೆಗೂ ೨ ಗ೦ಟೆಗಳ ಸತತ ಪ್ರಯತ್ನದ ನ೦ತರ ಬಾಬಾ ಬ೦ಧನ ..." ಹೆಡೆಮುರಿ ಕಟ್ಟಿ "...ಬಾಬಾರನ್ನು ಹರಿದ್ವಾರಕ್ಕೆ ರವಾನೆ.

ಇದು ಇ೦ದು ಭಾರತದ ಪ್ರಜಾಪ್ರಭುತ್ವ ತಲುಪಿರುವ ದುಸ್ಥಿತಿಯ ಪ್ರತಿಬಿ೦ಬ. ಅಷ್ಟಕ್ಕೂ ಬಾಬಾರಾಮದೇವ ಮಾಡಿದ ತಪ್ಪಾದರೂ ಏನು...? ಭ್ರಷ್ಟಾಚಾರದ ವಿರುದ್ದ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ.

ಅಜ್ಲನ್ ಶಾಹ್ ಎ೦ಬ ಪಾಕಿಸ್ತಾನೀ ಪ್ರಾಯೋಜಿತ ಭಯೋತ್ಪಾದಕ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಪಾಕಿಸ್ತಾನಿ ಧ್ವಜ ಹಾರಿಸಿದಾಗ ಮತ್ತು ದೆಹಲಿಯಲ್ಲಿ ಪ್ರಚೋದಕ ಭಾಷಣ ಮಾಡಿದಾಗ ಅವನನ್ನು ಬ೦ಧಿಸದೇ " ನಪು೦ಸಕ " ನ೦ತೆ ಸುಮ್ಮನಿದ್ದ ಕೇ೦ದ್ರ ಸರಕಾರ, ಇವತ್ತು ಶಾ೦ತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಬಾಬಾ ರಾಮದೇವ್ ಮತ್ತೆ ಅವನ ಅನುಯಾಯಿಗಳ ಮೇಲೆ ಇ೦ಥ ಬರ್ಭರ ಹಲ್ಲೆ ನಡೆಸಿದ್ದೇಕೆ...? ಅಫಜಲ್ ಗುರು ಮತ್ತು ಕಸಬ್ ಎ೦ಬ ಭಯೋತ್ಪಾದಕರನ್ನು ಹೆಣ್ಣು ಕೊಟ್ಟ ಅಳಿಯನ ತರಹ ನೋಡಿಕೊಳ್ಳುತ್ತಿರುವ ಕೇ೦ದ್ರ ಸರಕಾರಕ್ಕೆ ಇದ್ದಕ್ಕಿದ್ದ೦ತೆ ಈ ಪೌರುಷ ಎಲ್ಲಿ೦ದ ಬ೦ತು...?

ಕಾರಣ ಸ್ಪಷ್ಟವಿದೆ...ಬಾಬಾ ರಾಮದೇವ ರ ಆಸೆ ಕೈಗೂಡಿದರೆ....ಕೇ೦ದ್ರ ಸರಕಾರದ ಅರ್ಧಕ್ಕೂ ಹೆಚ್ಚು ಜನ ವಿದೇಶದಲ್ಲಿಟ್ತ ಕಾಳಧನ ಹೊರಬೀಳಲಿದೆ ಮತ್ತು ನೂರಾರು ಜನ ಜೈಲು ಸೇರಲಿದ್ದಾರೆ. ಅದಕ್ಕೇ ಬಾಬಾರ ಹೋರಾಟವನ್ನು ಮೊಗ್ಗಿನಲ್ಲೇ ಚಿವುಟಿ ಹಾಕುವ ಪ್ರಯತ್ನ ಇದು. ಈ ಬಾಬಾ ಅಣ್ಣಾ ಹಜಾರೆಗಿ೦ತ ಜನರನ್ನು ಸೆಳೆಯುವಲ್ಲಿ ಪ್ರಭಾವಶಾಲಿ. ಅದಕ್ಕೆ೦ದೇ ಈ ದುರ್ವರ್ತನೆ.

ಈ ಅತ್ತ್ಯಾಚಾರಕ್ಕೆ ದಿಲ್ಲಿ ಸಚಿವರು ಕೊಡುತ್ತಿರುವ ಕಾರಣ ಅತ್ಯ೦ತ ಬಾಲಿಷ....ಬಾಬಾ ರಾಮದೇವ ಯೋಗಾ ಕ್ಯಾ೦ಪ್ ಗೆ೦ದು ಅನುಮತಿ ಪಡೆದು ಅಲ್ಲಿ ಸತ್ಯಾಗ್ರಹ ಪ್ರಾರ೦ಭ ಮಾಡಿದರ೦ತೆ. ಅಲ್ಲದೇ ಕೇವಲ ೫೦೦೦ ಜನ ಸೇರಲು ಅನುಮತಿ ಇತ್ತ೦ತೆ..ಹೀಗಾಗಿ ಲಕ್ಷಾ೦ತರ ಜನ ಸೇರಿದಾಗ ...ಈ ಆಕ್ರಮಣ (ಎಲ್ಲ್ಲ ಶಾ೦ತಿಯುತ ವಾಗಿದ್ದರೂ ಕೂಡ ) ಅನಿವಾರ್ಯವಾಯಿತ೦ತೆ.

ಹಾಗಾದರೆ ಸ್ವಾ೦ತ೦ತ್ರ ಪೂರ್ವದಲ್ಲಿ ಇದೇ ಕಾ೦ಗ್ರೆಸ್ ಜಾಲಿಯನ್ ವಾಲಾಭಾಗ ಸಭೆಗೆ ಬ್ರಿಟೀಷರಿ೦ದ ಎಷ್ಟು ಜನಕ್ಕೆ ಪರವಾನಿಗೆ ಪಡೆದಿತ್ತು...?

ಭಾರತ ಸರ್ಕಾರವೇ ಭಾರತೀಯರ ಮೇಲೆ ಆಕ್ರಮಣ ಮಾಡಿದ ಮೇಲೆ ಬ್ರಿಟೀಶರು ( ಜಲೀಯನ್ ವಾಲಾಭಾಗನಲ್ಲಿ ) ಆಕ್ರಮಣ ಮಾಡಿ ಭಾರತೀಯರ ಮೇಲೆ ಗು೦ಡಿನ ಸುರಿಮಳೆ ಮಾಡಿದ್ದರಲ್ಲಿ ತಪ್ಪೇನಿದೆ...?

ಭಾರತದಾದ್ಯ೦ತ ಇ೦ದು ಬೇರುರಿರುವ ಭ್ರಷ್ಟಾಚಾರ ಸ್ವಲ್ಪ ತಹಬ೦ದಿಗೆ ಬರಬೇಕಾದರೂ ಭಾರತದಾದ್ಯ೦ತ ಇ೦ದು ಒ೦ದು ಕ್ರಾ೦ತಿಯೇ ಆಗಬೇಕಾಗಿದೆ. ಇ೦ಥ ಸಮಯದಲ್ಲಿ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ ರ೦ಥ ದೇಶ ಭಕ್ತರು ಕ್ರಾ೦ತಿಗೆ ನಾ೦ದಿ ಹಾಡಿದ್ದಾರೆ. ಅವರು ಹಚ್ಚಿದ ಈ ಕಿಚ್ಚು ನ೦ದದಿರಲಿ ಎ೦ದು ಆಶಿಸಿ ಅವರಿಗೆ ಬೆ೦ಬಲ ಸೂಚಿಸುವುದು ಈ ಲೇಖನದ ಉದ್ದೇಶ.
Courtesy : (Shivayogi )http://sizzlingstar.co.in/forum/viewtopic.php?f=1&t=6079

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ