ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 16, 2011

ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

ಸಂಜೀವ್ ಭಟ್, ಐಪಿಎಸ್, ಗುಜರಾತ್!

ಒಬ್ಬ ಐಪಿಎಸ್ ಅಧಿಕಾರಿಯಾಗಿರಲು ನಾಲಾಯಕ್ಕು ಎಂದು ಗುಜರಾತ್ ಸರ್ಕಾರ ಈತನನ್ನು ಮೊನ್ನೆ ಮಂಗಳವಾರ ಅಮಾನತು ಮಾಡಿದೆ. ಅಖಿಲ ಭಾರತ ಸೇವಾ ನಿಯಮದ 3(1) ಕಲಂ ಅನ್ನು ಮುಂದಿಟ್ಟುಕೊಂಡು ಅಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ದೂಷಣೆ ಆರಂಭವಾಗಿದೆ. ಹೀಗೆ ಸಂಜೀವ್ ಭಟ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರನ್ನು ಹುತಾತ್ಮರನ್ನಾಗಿ ಮಾಡುವ ಕೆಲಸ ಬಹಳ ಭರದಿಂದ ಸಾಗಿದೆ. ಅಂದಹಾಗೆ ಸಂಜೀವ್ ಭಟ್ ಯಾರೆಂದು ಗೊತ್ತಾಯಿತಲ್ಲವೆ? ನಮ್ಮ ಸೆಕ್ಯುಲರ್ ಬ್ರಿಗೇಡ್್ನ ಈ ಹೊಸ ಹೀರೋನ ನಿಜರೂಪವನ್ನು ತಿಳಿದುಕೊಳ್ಳುವ ಮೊದಲು ಈತ ಎಂತಹ ಘನ ಕಾರ್ಯ ಮಾಡಿದ್ದ, ಎಂತಹ ಸತ್ಯಸಂಧ ಎಂಬುದನ್ನು ಸ್ವಲ್ಪ ಕೇಳುತ್ತೀರಾ?

’2002, ಫೆಬ್ರವರಿ 27ರಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹಿಂದುಗಳು ತಮ್ಮ ಕೋಪವನ್ನು ಹೊರಹಾಕಲು, ಪ್ರತೀಕಾರ ತೆಗೆದುಕೊಳ್ಳಲು ಅಡ್ಡಿಪಡಿಸಬಾರದು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಸೂಚನೆ ನೀಡಿದ್ದರು. ಆ ಸಭೆಯಲ್ಲಿ ನಾನೂ ಪಾಲ್ಗೊಂಡಿದ್ದೆ’ ಎಂಬ ಅಫಿಡವಿಟ್ ಒಂದನ್ನು 2011, ಏಪ್ರಿಲ್ 14ರಂದು ಸುಪ್ರೀಂ ಕೋರ್ಟ್್ಗೆ ಸಲ್ಲಿಸಿಬಿಟ್ಟರು. ಮೊದಲೇ ಮೋದಿಯನ್ನು ಹಣಿಯಲು ಕಾದುಕುಳಿತುಕೊಂಡಿದ್ದ ಮಾಧ್ಯಮಗಳ ಒಂದು ವರ್ಗ ಹಾಗೂ ತೀಸ್ತಾ ಸೆತಲ್ವಾಡ್, ಶಬ್ಮಮ್ ಹಶ್ಮಿಯಂಥವರಿಗೆ ಇದಕ್ಕಿಂತ ಯಾವ ಸಿಹಿ ಸುದ್ದಿ ಸಿಗಲು ಸಾಧ್ಯ?

1. Senior Gujarat IPS officer implicates Narendra Modi in 2002 Godhra riots!

2. Sanjeev Bhatt to make startling revelations against Modi before Nanavati Commission!

ಆತನ ಪ್ರತಿಪಾದನೆಯಲ್ಲಿ ಎಷ್ಟರಮಟ್ಟಿನ ಸತ್ಯ ಅಡಗಿದೆ ಎಂಬುದನ್ನು ಪರಾಮರ್ಶಿಸುವ ಗೋಜಿಗೂ ಹೋಗದೆ, ಇಂತಹ ರೋಚಕ ಶೀರ್ಷಿಕೆಗಳನ್ನು ಕೊಟ್ಟು ಸಂಭ್ರಮಾಚರಣೆಯನ್ನೂ ಮಾಡಿದರು.

ಆದರೆ…

1988ರ ಬ್ಯಾಚಿನ ಐಪಿಎಸ್ ಅಧಿಕಾರಿಯಾದ, ಕೇವಲ 12 ವರ್ಷ ಅನುಭವ ಹೊಂದಿದ್ದ ಈ ಕಿರಿಯ ವ್ಯಕ್ತಿ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾದರೂ ಹೇಗೆ? ಆತನ ಪ್ರತಿಪಾದನೆ ನಿಜಕ್ಕೂ ವಾಸ್ತವಕ್ಕೆ ಹತ್ತಿರವಾಗಿತ್ತೆ? ಅಥವಾ ವಾಸ್ತವದಲ್ಲಿ ಆತ ಆ ಸಭೆಯಲ್ಲಿ ಪಾಲ್ಗೊಂಡಿದ್ದರೆ? ಆ ಸಭೆಯಲ್ಲಿ ನಿಜಕ್ಕೂ ಪಾಲ್ಗೊಂಡಿದ್ದವರಾರು? ಈ ವಿಷಯದಲ್ಲಿ ಮಾಧ್ಯಮಗಳಿಗೆ ಈಗಾಗಲೇ ಸೋರಿಕೆಯಾಗಿರುವ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡದ (SIT) ವರದಿಯೇ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಹೌದು, 2002, ಫೆಬ್ರವರಿ 27ರಂದು ಅಹ್ಮದಾಬಾದ್್ನಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ನಡೆದಿದ್ದು ನಿಜ. 2010, ಮಾರ್ಚ್ 25ರಂದು SITಮುಂದೆ ಹಾಜರಾಗಿದ್ದ ನರೇಂದ್ರ ಮೋದಿ ಇಂಥದ್ದೊಂದು ಸಭೆ ಕರೆದಿದ್ದನ್ನು, ಅದು ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಆ ಸಭೆ ಅರ್ಧ ಗಂಟೆ ನಡೆಯಿತು. ಅದರಲ್ಲಿ 8 ಜನ ಪಾಲ್ಗೊಂಡಿದ್ದರು.

1. ಮುಖ್ಯಮಂತ್ರಿ

2. ಮುಖ್ಯ ಕಾರ್ಯದರ್ಶಿ

3. ಹೆಚ್ಚುವರಿ ಕಾರ್ಯದರ್ಶಿ

4. ಪೊಲೀಸ್ ಮಹಾನಿರ್ದೇಶಕ

5. ಅಹಮದಾಬಾದ್ ಪೊಲೀಸ್ ಕಮಿಷನರ್

6. ಗೃಹ ಕಾರ್ಯದರ್ಶಿ

7. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹಾಗೂ

8. ಕಾರ್ಯದರ್ಶಿ

ಈ ಮೇಲಿನ ಯಾವ ಹುದ್ದೆಗಳನ್ನೂ ಹೊಂದಿರದ ಹಾಗೂ ಆ ಸಮಯದಲ್ಲಿ ಗುಪ್ತಚರ ದಳದ ಸಾಮಾನ್ಯ ಡಿಸಿಪಿಯಾಗಿದ್ದ ಸಂಜೀವ್ ಭಟ್ ಹೇಗೆತಾನೇ ಆ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿರಲು ಸಾಧ್ಯ? ಈ ಮಧ್ಯೆ, ಅಂದು ಗುಪ್ತಚರ ದಳದ ಮುಖ್ಯಸ್ಥರು ರಜೆಯಲ್ಲಿದ್ದರು, ಹಾಗಾಗಿ ನಿಮ್ಮ ಇಲಾಖೆಯಿಂದ ಯಾರಾದರೂ ಒಬ್ಬರು ಬರಬೇಕೆಂದು ಡಿಜಿಪಿ ಸೂಚನೆ ನೀಡಿದ ಕಾರಣ ನಾನು ಹೋಗಿದ್ದೆ ಎಂದು ಸಂಜೀವ್ ಭಟ್ ಪ್ರತಿಪಾದಿಸಿದರು. ನಾನು ಹಾಗೆಂದು ಹೇಳಿಯೇ ಇರಲಿಲ್ಲ, ಸಂಜೀವ್ ಭಟ್ ಸಭೆಯಲ್ಲಿ ಇರಲೂ ಇಲ್ಲ ಎಂದು ಆಗಿನ ಡಿಜಿಪಿ ಕೆ. ಚಕ್ರವರ್ತಿಯವರೇ ಅಲ್ಲಗಳೆದರು.

ಇದನ್ನೆಲ್ಲ ಪರಿಗಣಿಸಿದ SIT, ‘ಕಾನೂನು ಮತ್ತು ಸುವ್ಯವಸ್ಥೆ ನೆಲೆಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸಭೆ ಕರೆದಿದ್ದಿದ್ದು ನಿಜ. ಆದರೆ ಪ್ರತೀಕಾರ ತೆಗೆದುಕೊಳ್ಳಲು ಹಿಂದುಗಳಿಗೆ ಅವಕಾಶವೀಯಬೇಕು ಎಂದು ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸೂಚನೆ ಕೊಟ್ಟಿದ್ದರು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಸಂಜೀವ್ ಭಟ್ ಸಭೆಯಲ್ಲಿ ಹಾಜರಿದ್ದರು ಎಂಬುದನ್ನು ಎಂಟು ಜನರಲ್ಲಿ ಯಾವೊಬ್ಬರು ಖಾತ್ರಿಪಡಿಸಿಲ್ಲ’ ಎಂದು ಷರಾ ಬರೆಯಿತು. ಮತ್ತೂ ಮುಂದುವರಿದು, ‘ಸಂಜೀವ್ ಭಟ್ ಅವರೊಬ್ಬ ವಿಶ್ವಾಸಾರ್ಹ ಸಾಕ್ಷಿಯಲ್ಲ. ಅಂದು ಪಾಲ್ಗೊಂಡಿದ್ದ ಎಲ್ಲ ಅಧಿಕಾರಿಗಳೂ ಆತನ ಉಪಸ್ಥಿತಿಯನ್ನು ನಿರಾಕರಿಸಿದ್ದಾರೆ’ ಎಂದಿತು. ಈತ ಎಂತಹ ವಂಚಕನೆಂದರೆ ಈತನ ಕಪೋಲ ಕಲ್ಪಿತ ಕಥೆಯ ಸಂಬಂಧ ಸತತ ಪ್ರಶ್ನೆಗೆ ಗುರಿಪಡಿಸಿದ ಖಐಖಿ ವಿರುದ್ಧವೂ ಸುಪ್ರೀಂಕೋರ್ಟ್್ಗೆ ಸಲ್ಲಿಸಿದ ಅಫಿಡವಿಟ್್ನಲ್ಲಿ ಹರಿಹಾಯ್ದರು, ಅದರ ಮೇಲೆ ತನಗೆ ವಿಶ್ವಾಸವಿಲ್ಲ ಎಂದರು. ನಾನು ಆ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂಬ ಬಗ್ಗೆ ಸಂಶಯವಿದ್ದರೆ ನನ್ನ ಕಾರುಚಾಲಕನನ್ನು ಕೇಳಿ ಎಂದು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳಿದರು.

ಹೀಗೆ ಆತನ ಸುಳ್ಳುಗಳು ನಗ್ನಗೊಳ್ಳುವ ಕಾಲ ಹತ್ತಿರಕ್ಕೆ ಬರುತ್ತಿದ್ದಂತೆಯೇ ಮಾಧ್ಯಮ ಸ್ನೇಹಿತರು ಕಾರ್ಯಪ್ರವೃತ್ತರಾದರು!

ಪದ್ಮಶ್ರೀ ರಾಜ್್ದೀಪ್ ಸರ್್ದೇಸಾಯಿ ಅವರು ಗುಜರಾತ್್ನಲ್ಲಿ ತಮ್ಮ ಸಿಎನ್್ಎನ್-ಐಬಿಎನ್ ಚಾನೆಲ್್ನ ಇಬ್ಬರು ಪ್ರತಿನಿಧಿಗಳನ್ನಿಟ್ಟಿದ್ದಾರೆ-ಆಶೋಕ್ ಬಾಗ್ರಿಯಾ ಮತ್ತು ಮೇಘದೂತ್ ಶರೋನ್. ಇಡೀ ವಿಶ್ವವೇ ಬೆಚ್ಚಿ ಬೆರಗಾಗುತ್ತಿರುವ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯಾಗಲಿ, ಉತ್ತಮ ಆಡಳಿತ ನಿರ್ವಹಣೆಗಾಗಿ ವಿಶ್ವಸಂಸ್ಥೆ ಮೋದಿಗೆ ನೀಡಿದ ಸರ್ಟಿಫಿಕೆಟ್ ಬಗ್ಗೆಯಾಗಲಿ ಇವರಿಬ್ಬರು ವರದಿ ಮಾಡಿದ್ದನ್ನು, ನರೇಂದ್ರ ಮೋದಿಯವರನ್ನು ಹಳಿಯುವುದು ಬಿಟ್ಟು ಸಕಾರಾತ್ಮಕ ಚಿತ್ರಣವನ್ನು ಮುಂದಿಟ್ಟಿದ್ದನ್ನು ನೀವು ಎಂದಾದರೂ ನೋಡಿದ್ದೀರಾ? ಸಂಜೀವ್ ಭಟ್ ಪ್ರತಿಪಾದನೆಗೆ ಯಾವ ಸಾಕ್ಷ್ಯಗಳೂ ಇಲ್ಲ, ಅವರ ಮಾತುಗಳು ನಂಬಲರ್ಹವಲ್ಲ ಎಂಬ ವರದಿಯನ್ನು SIT, ಸುಪ್ರೀಂಕೋರ್ಟ್್ಗೆ ಸಲ್ಲಿಸಿದಾಗ ಹಳಿಯಲು ಇಳಿದ ಬಾಗ್ರಿಯಾ ಮತ್ತು ಶರೋನ್, ‘SIT disregards Bhatt’s statement against Modi ಎಂದು ವರದಿ ಮಾಡಿದರು! ಇದರ ಅರ್ಥವೇನು? ಇವರು ಯಾವ ಉದ್ದೇಶ, ಗುರಿಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಇದರಿಂದ ಅರ್ಥವಾಗುವುದಿಲ್ಲವೆ?

ಅಂದಮಾತ್ರಕ್ಕೆ ಚಾನೆಲ್್ಗಳ ಚಾಲಾಕಿತನ, ಸಂಜೀವ್ ಭಟ್್ರಂಥ ಝಈ್ಝಟ್ಞಿ ್ಝಟಿ ಝಿಜ ಆ್ಠಟ್ಟ್ಠ’ ಬಗ್ಗೆ ನರೇಂದ್ರ ಮೋದಿಯವರಿಗೆ ಅರಿವಿರಲಿಲ್ಲ ಎಂದುಕೊಂಡಿರಾ?

ಮೊನ್ನೆ ಜುಲೈ 27ರಂದು ನಿಜವಾದ “Startling revelations‘ ಹೊರಬಿದ್ದಿದೆ. ಕಳೆದ 5 ವರ್ಷಗಳಿಂದಲೂ ನರೇಂದ್ರ ಮೋದಿಯವರು ಆತನ ಈ-ಮೇಲ್, ಫೋನ್ ಕಾಲ್್ಗಳ ಮೇಲೆ ನಿಗಾ ಇಡಿಸಿದ್ದರು! ಈ ಸಂಜೀವ್ ಭಟ್ ಗುಜರಾತ್ ಹಿಂಸಾಚಾರದ ವೇಳೆ ಹಿಂದು ಕೋಮುವಾದಿಗಳು ಕೌಸರ್್ಬಿ ಎಂಬ ಗರ್ಭಿಣಿಯ ಹೊಟ್ಟೆ ಬಗೆದು, ಭ್ರೂಣವನ್ನು ತ್ರಿಶೂಲದ ತುದಿಯಿಂದ ಮೇಲೆತ್ತಿ ಗಹಗಹಿಸಿ ನಕ್ಕಿದ್ದರು ಎಂಬ ಕಥೆ ಸೃಷ್ಟಿಸಿ ಸಿಕ್ಕಿಹಾಕಿಕೊಂಡಿರುವ ತೀಸ್ತಾ ಸೆತಲ್ವಾಡ್, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೋದ್ವಾದಿಯಾ, ಪ್ರತಿಪಕ್ಷ ನಾಯಕ ಶಕ್ತಿ ಸಿಂಗ್ ಗೋಹಿತ್ ಜತೆ ಸತತ ಸಂಪರ್ಕದಲ್ಲಿ ಇದ್ದರು ಎಂಬುದು ಬೆಳಕಿಗೆ ಬಂದಿದೆ. ಆತ ಈ ಎಲ್ಲ ವ್ಯಕ್ತಿಗಳ ಜತೆ ಯಾವ ಇ-ಮೇಲ್್ಗಳ ಮೂಲಕ ಸಂಪರ್ಕವಿಟ್ಟುಕೊಂಡಿದ್ದಾರೋ ಆ ಇ-ಮೇಲ್್ಗಳು ಖಐಖಿ ಗೆ ದೊರೆತಿವೆ! ನರೇಂದ್ರ ಮೋದಿಯವರ ದೂಷಣೆಯನ್ನೇ ಕಾಯಕ ಮಾಡಿಕೊಂಡಿರುವ ‘ದಿ ಹಿಂದು’ ಪತ್ರಿಕೆಯ ಸಂಪಾದಕರಾಗಿದ್ದ ಎನ್.ರಾಮ್ ಜೊತೆಯೂ ಸಂಜೀವ್ ಭಟ್ ಇ-ಮೇಲ್ ಸಂಪರ್ಕ ಇಟ್ಟುಕೊಂಡಿದ್ದನ್ನು ರಾಮ್ ದಾಯಾದಿ ಎನ್. ಮುರಳಿಯವರೇ ಹೊರಹಾಕಿದ್ದಾರೆ. ಇತ್ತೀಚೆಗೆ ಹಿಂದು ಪತ್ರಿಕೆಯ ಉದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದಲ್ಲಿ ಸಂಜೀವ್ ಭಟ್ ಇ-ಮೇಲ್್ನಲ್ಲಿದ್ದ ಸಂದೇಶ/ಸೂಚನೆಯನ್ನು ಎನ್. ಮುರಳಿ ಹೀಗೆ ಉಲ್ಲೇಖಿಸುತ್ತಾರೆ- Here is the note, I would like you to go through it that you understand the issues before you talk to the person concerned, goes the email. We all know who the person concerned that Ram was supposed to talk to is”that Ram was supposed to talk to is”.
person concerned
ಯಾರು? ಸೋನಿಯಾ ಗಾಂಧಿಯವರೋ ಅಥವಾ ಅವರ ಆಪ್ತ ಅಹಮದ್ ಪಟೇಲರೋ?!

ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಸಂಜೀವ್ ಭಟ್ ವರ್ತಿಸುತ್ತಿದ್ದುದು ಬಹಿರಂಗವಾಗಿದೆ. ಅಷ್ಟೇ ಅಲ್ಲ, 2002, ಫೆಬ್ರವರಿ 27ರಂದು ನಡೆದ ಸಭೆಯಲ್ಲಿ ತಾನು ಪಾಲ್ಗೊಂಡಿದ್ದೆ ಎಂದು ಸಾಬೀತುಪಡಿಸುವುದಕ್ಕೆ ಬೇಕಾದ ಸಾಕ್ಷ್ಯ ಸೃಷ್ಟಿಸಲು ಸಹಾಯ ಮಾಡು ಎಂದು ಮತ್ತೊಬ್ಬ ಮೋದಿ ವಿರೋಧಿ ಐಪಿಎಸ್ ಅಧಿಕಾರಿ ರಾಹುಲ್ ಶರ್ಮನಿಗೆ ಮಾಡಿದ ಇ-ಮೇಲ್್ಗಳೂ ಸಿಕ್ಕಿವೆ. ತನಗೆ ವೈ ಕೆಟಗರಿ ಭದ್ರತೆ ಒದಗಿಸುವಂತೆ ಲಾಬಿ ಮಾಡಿ ಎಂದು ಮೋದಿ ದೂಷಣೆಯಲ್ಲಿ ಪರಿಣತರಾದ ಶಬ್ಮಮ್ ಹಶ್ಮಿ ಹಾಗೂ ಸೆಡ್ರಿಕ್ ಪ್ರಕಾಶ್್ಗೆ ಮನವಿ ಮಾಡಿಕೊಂಡಿರುವ, 2011 ಮೇ 9ರಂದು ಮಾಡಿದ ಇ-ಮೇಲ್್ನಲ್ಲಿ ನನ್ನ ಪರ ಸಹಿಸಂಗ್ರಹಣೆ ಮಾಡಿ ಎಂದು ಒತ್ತಾಯಿಸಿರುವ ಅಂಶಗಳು ಗೊತ್ತಾಗಿವೆ. ಅಷ್ಟೇ ಅಲ್ಲ, ಏಪ್ರಿಲ್ 14ರಂದು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಿದ ಅಫಿಡವಿಟ್್ಗೂ ಪೂರ್ವದಲ್ಲಿ ತೀಸ್ತಾ ಸೆತಲ್ವಾಡ್, ಅರ್ಜುನ್ ಮೋದ್ವಾದಿಯಾ ಹಾಗೂ ಶಕ್ತಿ ಸಿಂಗ್ ಗೋಹಿತ್ ಜೊತೆ ಸತತ ಸಂಪರ್ಕದಲ್ಲಿದ್ದಲ್ಲದೆ, ಗೋಹಿತ್್ರಿಂದ ಬ್ಲ್ಯಾಕ್್ಬೆರಿ ಮೊಬೈಲ್ ಪಡೆದುಕೊಂಡಿರುವುದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಹೀಗೆ ಬಣ್ಣ ಬಯಲಾಗಿದ್ದೇ ತಡ, ಜುಲೈ 28ರಂದು ದಿಲ್ಲಿಯಲ್ಲಿರುವ ಆರ್ಥಿಕ ಅಪರಾಧಗಳ ದಳದ (EOW) ಮುಂದೆ ಅಲವತ್ತುಕೊಂಡ ಭಟ್, ತನ್ನ ಇ-ಮೇಲ್್ಗಳನ್ನು ಹ್ಯಾಕ್ ಮಾಡಲಾಗಿದ್ದು, ತನಿಖೆ ನಡೆಸಿ ಎಂದು ಗೋಗರೆದಿದ್ದಾರೆ. ಒಂದು ವೇಳೆ, ಈತ ಸತ್ಯಸಂಧನಾಗಿದ್ದರೆ ಬೊಬ್ಬೆ ಹಾಕುವ ಅಗತ್ಯವೇನಿತ್ತು? ಈ-ಮೇಲ್್ಗಳಲ್ಲಿ ವಿನಿಮಯ ಮಾಡಿಕೊಂಡಿದ್ದು ಸತ್ಯಸಂಗತಿಯಾಗಿದ್ದರೆ ಹೆದರುವ ಅವಶ್ಯಕತೆ ಎಲ್ಲಿಂದ ಬರುತ್ತಿತ್ತು?

ಇಂತಹ ಸುಳ್ಳುಗಾರ ಅದ್ಯಾವ ಕಾರಣಕ್ಕಾಗಿ ಕೆಲ ಮಾಧ್ಯಮಗಳ ಕಣ್ಣಿಗೆ ಹೀರೊನಂತೆ ಕಾಣುತ್ತಾರೆ?

ಪತ್ರಿಕೋದ್ಯಮದಲ್ಲಿ ಎಷ್ಟೋ ಅರ್ಹರಿದ್ದರೂ ಅವರನ್ನೆಲ್ಲ ಬಿಟ್ಟು ಎನ್್ಡಿಟಿವಿಯ ಬರ್ಖಾ ದತ್, ಐಬಿಎನ್್ನ ರಾಜ್್ದೀಪ್ ಸರ್್ದೇಸಾಯಿಯವರಿಗೆ, ಸುಳ್ಳುಗಾತಿ ತೀಸ್ತಾ ಸೆತಲ್ವಾಡ್್ಗೆ ಯಾವ ಕಾರಣಕ್ಕಾಗಿ ಪದ್ಮಶ್ರೀ ಕೊಡಲಾಗಿದೆ ಅಂದುಕೊಂಡಿರಿ? ನರೇಂದ್ರ ಮೋದಿಯವರ ಚಾರಿತ್ರ್ಯವಧೆ ಮಾಡಿದ, ಅವರನ್ನು ಸತತವಾಗಿ ನಕಾರಾತ್ಮಕವಾಗಿ ಚಿತ್ರಿಸಿದ ಸೇವೆಗಾಗಿಯೇ ಇರಬಹುದಲ್ಲವೆ? ಮೋದಿಯವರನ್ನು Mass murderer‘ಎಂದು ಬಹಳ ವೀರಾವೇಶದಿಂದ ಜರಿದಿದ್ದ ‘ಹಿಂದುಸ್ಥಾನ್ ಟೈಮ್ಸ್್’ ಪತ್ರಿಕೆಯ ಮಾಜಿ ಸಂಪಾದಕ ವೀರ್ ಸಾಂಘ್ವಿಗೂ ಅದೇ ಸೇವೆಗಾಗಿ ಪುರಸ್ಕಾರ ದೊರೆತಿತ್ತು. ಸರ್ಕಾರೇತರ ಸಂಘಟನೆ ಕಟ್ಟಿಕೊಂಡು ಮೋದಿ ದೂಷಣೆಯನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಶಬ್ಮಮ್ ಹಸ್ಮಿ, ಜಾನ್ ದಯಾಳ್, ಸೆಡ್ರಿಕ್ ಪ್ರಕಾಶ್, ಶ್ರೀನಿವಾಸನ್ ಜೈನ್ ಈಗಾಗಲೇ ಪದ್ಮಶ್ರೀಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ರಾಹುಲ್ ಶರ್ಮಾ, ಸಂಜೀವ್ ಭಟ್ ಈ ಸಾಲಿಗೆ ಹೊಸ ಸೇರ್ಪಡೆ ಅಷ್ಟೇ. 2012ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ಇದೆ, 2014ರಲ್ಲಿ ಸಂಸತ್ ಚುನಾವಣೆ ಘೋಷಣೆಯಾಗಲಿದೆ. ಈ ಸಂದರ್ಭದಲ್ಲಿ ಮೋದಿಯವರ ವಿರುದ್ಧದ ದಾಳಿಗಳು ಇನ್ನೂ ಹೆಚ್ಚಾಗಲಿವೆ, ಕಾದು ನೋಡಿ. ಈ ಮಾಧ್ಯಮಗಳು ಯಾವ ರೀತಿ ಸುಳ್ಳು ಹರಡುತ್ತವೆ, ದುರುದ್ದೇಶ ಪೂರಿತವಾಗಿ ವರ್ತಿಸುತ್ತವೆ ಎಂಬುದಕ್ಕೆ ಪ್ರಸ್ತುತ “ದಿ ನ್ಯೂ ಇಂಡಿಯನ್ ಎಕ್ಸ್್ಪ್ರೆಸ್್” ಪತ್ರಿಕೆಯ ಮುಖಪುಟದಲ್ಲಿ ಎಸ್. ಗುರುಮೂರ್ತಿಯವರು ಸೊಹ್ರಾಬುದ್ದೀನ್ ನಕಲಿ ಎನ್್ಕೌಂಟರ್್ಗೆ ಸಂಬಂಧಿಸಿದಂತೆ ಬರೆಯುತ್ತಿರುವ ಲೇಖನಗಳು ನಿತ್ಯವೂ ಕನ್ನಡಿ ಹಿಡಿಯುತ್ತಿರುವುದನ್ನು ನೀವು ಓದಬಹುದು.

ಕೊನೆಗೂ ಕಾಡುವ ಪ್ರಶ್ನೆ ಏನೆಂದರೆ- ಸತ್ಯ, ಪ್ರಾಮಾಣಿಕತೆಯನ್ನೇ Butt of a joke ಆಗಿಸುತ್ತಿರುವ ಈ ಸಂಜೀವ್ Bhat ಮತ್ತು ಮಾಧ್ಯಮಗಳ ಲಜ್ಜೆಗೇಡಿತನಕ್ಕೆ ಏನನ್ನಬೇಕು?

ಕೃಪೆ: ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ