ನನ್ನ ಬ್ಲಾಗ್ ಪಟ್ಟಿ

ಗುರುವಾರ, ಡಿಸೆಂಬರ್ 22, 2011

ದೇಶ ನಡೆಸುವುದು ಕಂಪನಿ ನಡೆಸಿದಂತಲ್ಲ! - ವಿಶ್ವೇಶ್ವರಭಟ್

ಭಾರತೀಯ ರಾಜಕೀಯದ ಬಗ್ಗೆ ಪದ್ಮಶ್ರೀ ಪುರಸ್ಕೃತ ಏಕೈಕ ವಿದೇಶಿ ಪತ್ರಕರ್ತ ಮಾರ್ಕ್ ಟುಲಿ ಬರೆದಂಥ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಸ್ವಾತಂತ್ರ್ಯಾನಂತರದ ಭಾರತೀಯ ರಾಜಯಕೀಯದಲ್ಲಿನ ವಿದ್ಯಮಾನಗಳನ್ನು ಅವರು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ. ಅದರಲ್ಲಿ ನನ್ನನ್ನು ಆಕರ್ಷಿಸಿದಂಥ ಕೆಲವೊಂದು ವಿಚಾರಗಳನ್ನು ಇಲ್ಲಿ ದಾಖಲಿಸಿದ್ದೇನೆ.
ಇಲ್ಲಿಂದ ಮುಂದಕ್ಕೆ ಮಾರ್ಕ್ ಟುಲಿ:
ಕಾಂಗ್ರೆಸ್ ಪಕ್ಷ ಪದ್ಮಶ್ರೀ ಪುರಸ್ಕಾರ ಕೊಟ್ಟಾಗ ನನಗೆ ಅತೀವ ಆಶ್ಚರ್ಯವಾಗಿತ್ತು. ಈ ಪ್ರಶಸ್ತಿಗೆ ಭಾಜನನಾದ ಏಕೈಕ ವಿದೇಶಿ ಪತ್ರಕರ್ತ ನಾನು. ಭಾರತದಲ್ಲಿ 40 ವರ್ಷಗಳ ಕಾಲ ನಾನು ನಡೆಸಿದಂಥ ರಾಜಕೀಯ ವರದಿಗಾರಿಕೆಯಲ್ಲಿ ಸದಾ ನೆಹರು ವಂಶಪಾರಂಪರ್ಯ ಆಡಳಿತವನ್ನು ಟೀಕಿಸುವವನಾಗಿದ್ದೆ. ಕೆಲವೊಂದಷ್ಟು ಜನ ಇತ್ತೀಚೆಗೆ ನನ್ನನ್ನು”ತಾನು ಒಲ್ಲದ ನಾಡಿನಲ್ಲಿ ತನ್ನ ವೃದ್ಧಾಪ್ಯವನ್ನು ಕಳೆಯಲು ಬಯಸಿದಂಥ ಕಟು ಬ್ರಿಟಿಷ್ ಪತ್ರಕರ್ತ’ ಎಂದು ಜರೆದಿದ್ದರು.
ಇದು ಆರಂಭವಾದದ್ದು”ಆಪರೇಶನ್ ಬ್ಲೂ ಸ್ಟಾರ್್’ನೊಂದಿಗೆ. ಇಂದಿರಾ ಅವರನ್ನು ಟೀಕಿಸಿದಂಥ ಕೆಲವೇ ಕೆಲವು ವಿದೇಶಿ ಪತ್ರಕರ್ತರಲ್ಲಿ ನಾನೂ ಒಬ್ಬನಾಗಿದ್ದೆ.”ಸ್ವರ್ಣ ಮಂದಿರದ ಮೇಲಿನ ದಾಳಿ, ನಂತರದ ಸೇನಾ ಕಾರ್ಯಾಚರಣೆಯಲ್ಲಿ ನಡೆದಂಥ ಅಮಾನವೀಯ ಕೃತ್ಯಗಳು ಸಿಖ್ ಸಮುದಾಯದಲ್ಲಿ ದ್ವೇಷದ ದಳ್ಳುರಿಯನ್ನೇ ಹುಟ್ಟು ಹಾಕಿದವು. ಅದರ ಪ್ರಮಾಣ ಈಗಲೂ ಇದೆ’ ಎಂಬುದಾಗಿ ನಾನು ಅಂದಿನಿಂದ ಇಂದಿನವರೆಗೂ ಹಲವಾರು ಬಾರಿ ಹೇಳಿದ್ದೇನೆ.
ಎಲ್ಲರಿಗೂ ಗೊತ್ತಿರುವಂತೆ ಇಂದಿರಾ ಗಾಂಧಿ ತಾನು ದೇಶದ ಮೇಲೆ ಹೇರಿದಂಥ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನನ್ನು ಜೈಲಿಗೆ ಕಳುಹಿಸುವ ಮತ್ತು ನಂತರ ಕೆಲವು ಕಾಲದವರೆಗೆ ನನ್ನನ್ನು ಭಾರತದಿಂದಲೇ ಹೊರಗೋಡಿಸುವ ಮೂಲಕ ನನ್ನ ಕೀರ್ತಿ ಹೆಚ್ಚುವುದಕ್ಕೆ ನೆರವಾದರು! ಆದರೆ ಇದರ ಪರಿಣಾಮವಾಗಿ ನಂತರದ ದಿನಗಳಲ್ಲಿ ಸಂಪೂರ್ಣ ಭಾರತವೇ ನನ್ನ ರೇಡಿಯೋ ಬ್ರಾಡ್್ಕಾಸ್ಟ್್ಗಳಿಗೆ ಕಿವಿಯಾಯಿತು.”ವಾಯ್ಸ್ ಆಫ್ ಇಂಡಿಯಾ’ವನ್ನು ಕೇಳುತ್ತಿದ್ದ ಅವರು ಇದನ್ನು ಘಟನಾವಳಿಗಳ ನಿಖರವಾದ ಪ್ರಸಾರ ಎಂದು ಭಾವಿಸುತ್ತಿದ್ದರು.
ರಾಜೀವ್ ಗಾಂಧಿ ಅವರು ಅಧಿಕಾರಕ್ಕೆ ಬಂದಾಗ, ಅವರು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಪ್ರಾಮಾಣಿಕವಾದಂಥ ಪ್ರಯತ್ನ ಮಾಡುತ್ತಾರೆ ಎಂದೇ ಭಾವಿಸಿದ್ದೆ. ಆದರೆ ಅವರು ಶೀಘ್ರದಲ್ಲಿಯೇ ತಮ್ಮ ವಂಶವಾಹಿಯ ಹಾದಿ ಹಿಡಿದರು! ಶ್ರೀಲಂಕಾದಲ್ಲಿನ ಅವರ ಮೂರ್ಖ ಸಾಹಸಕ್ಕಾಗಿ ನಾನು ಅವರನ್ನು ಕಟುವಾಗಿ ಟೀಕಿಸಿದ್ದೆ. ಆದಾಗ್ಯೂ ಸಹ ತಮಿಳ್ ಟೈಗರ್ ಧನುವಿನಿಂದ ಅವರು ಹತ್ಯೆಯಾದಾಗ ಮೌನವಾಗಿ ಅವರ ಕ್ಷಮೆ ಯಾಚಿಸಿದ್ದೆ. ಕಾಶ್ಮೀರಿ ಮುಸ್ಲಿಮರ ವಿಚಾರದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಂಥ ಅವರ ಸರ್ಕಾರ ಮತ್ತು ಕಾಂಗ್ರೆಸ್ಸಿಗರ ವಿರುದ್ಧ ನಿಷ್ಕರುಣೆಯಿಂದ ಹೋರಾಡಿದ್ದೆ. ನನ್ನನ್ನು ಸಿಕ್ಕಿಸಿ ಹಾಕಬೇಕೆಂದು ಕಾಂಗ್ರೆಸ್ ಸರ್ಕಾರಗಳು ಬಹಳಷ್ಟು ಪ್ರಯತ್ನಿಸಿದ್ದವು. ಕಾಶ್ಮೀರದಲ್ಲಿನ ನನ್ನ ಸ್ಟ್ರಿಂಜರ್್ನನ್ನು ಕೂಡಾ ಸೆರೆಗೆ ತಳ್ಳಿದ್ದವು. ಆ ಕಾಲದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿದ್ದಂಥ ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಕಿಸ್ತಾನ ಶಾಮೀಲಾಗಿದೆ ಎಂಬುದಕ್ಕೆ ಭಾರತ ಸರ್ಕಾರದ ಬಳಿ ಯಾವುದೇ ಪುರಾವೆ ಇಲ್ಲ ಎಂಬುದನ್ನು ಮೊದಲು ಬೊಟ್ಟು ಮಾಡಿ ತೋರಿಸಿದ್ದು ನಾನು. ಈ ಬಗ್ಗೆ ನನಗೆ ಹೆಮ್ಮೆಯಿದೆ. ಇದಾದ ನಂತರ ನಾನು”ಪಾಕಿಸ್ತಾನ ಉಗ್ರವಾದವನ್ನು ಪ್ರಸರಿಸುತ್ತಿದೆ ಎಂದು ಭಾರತ ಆರೋಪಿಸುತ್ತಿದೆ’,”ಭಾರತ ನಿಯಂತ್ರಿತ ಕಾಶ್ಮೀರದಲ್ಲಿ ಚುನಾವಣೆ’ ಎಂದೆಲ್ಲ ಬೊಟ್ಟು ಮಾಡುವುದಕ್ಕೆ ಶುರು ಮಾಡಿದೆ.
ನಾನು ತಕ್ಕ ಮಟ್ಟಿಗೆ ಪ್ರಖ್ಯಾತಿ ಪಡೆದಿದ್ದ ಕಾರಣ ಇತರ ವಿದೇಶಿ ಪತ್ರಕರ್ತರು ಸಹ ನನ್ನನ್ನೇ ಅನುಕರಣೆ ಮಾಡುವುದಕ್ಕೆ ಶುರು ಮಾಡಿದರು. ಅವರೆಲ್ಲ ಕಾಶ್ಮೀರದಲ್ಲಿನ ಮುಸ್ಲಿಮರ ದುರ್ಗತಿಯ ಬಗ್ಗೆ ಮಾತಾಡುತ್ತಿದ್ದರೇ ಹೊರತು 4 ಲಕ್ಷ ಹಿಂದುಗಳ ಬಗ್ಗೆಯಲ್ಲ. ಈ ಹಿಂದುಗಳು ಉಗ್ರವಾದದ ಭೀತಿಯಿಂದಾಗಿ ತಮ್ಮ ತಾಯ್ನೆಲವನ್ನೇ ಬಿಟ್ಟು ಹೋಗಬೇಕಾಯಿತು.
ರಾಜೀವ್ ಬದುಕಿದ್ದಾಗ ನಾನು ಸೋನಿಯಾ ಗಾಂಧಿಯನ್ನು ಅಷ್ಟಾಗಿ ಗಮನಿಸಲಿಲ್ಲ. ಆದರೆ ರಾಜೀವ್ ಮರಣಾನಂತರ ಸೋನಿಯಾ ಕಾಂಗ್ರೆಸ್್ನಲ್ಲಿ ತಮ್ಮ ಅಧಿಕಾರ ಚಲಾಯಿಸುವುದಕ್ಕೆ ಶುರು ಮಾಡಿದರು. ಈ ಕಾರಣದಿಂದಾಗಿಯೇ ನಾನು”ಭಾರತೀಯ ಕಾಂಗ್ರೆಸ್ ಒಂದೇ ಕುಟುಂಬದ ಮೇಲೆ ಅವಲಂಬಿತವಾಗಿರುವುದು ದುರದೃಷ್ಟಕರ. ಸಂಪೂರ್ಣ ಪಕ್ಷವೇ ಒಬ್ಬ ವ್ಯಕ್ತಿಗೆ ತಲೆಬಾಗುವುದು ಒಪ್ಪತಕ್ಕದ್ದಲ್ಲ. ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಸೋನಿಯಾಗಿರುವ ಅರ್ಹತೆ ಏನು ಎಂದು ಪ್ರಶ್ನಿಸಬೇಕಾಗಿತ್ತು. ದೇಶವನ್ನು ನಡೆಸುವುದೆಂದರೆ ಒಂದು ಕಂಪನಿ ನಡೆಸಿದಷ್ಟು ಸುಲಭವಲ್ಲ’ ಎಂದು ಹೇಳಿದ್ದೆ. ಈ ಬಗ್ಗೆ ಸೋನಿಯಾ ಅಸಂತುಷ್ಟರಾಗಿದ್ದರು.
ನಂತರ ಅಬ್ದುಲ್ ಕಲಾಂ ಅವರ ಕಿವಿಮಾತಿನಿಂದಾಗಿ ಸೋನಿಯಾ ಪ್ರಧಾನಿ ಆಸೆಯನ್ನು ಬಿಟ್ಟರು. ಆಗ ನಾನು”ನಾಯಕರೇ ಇಲ್ಲದ ಮತ್ತು ಮರಣಾವಸ್ಥೆಯಲ್ಲಿರುವ ಕಾಂಗ್ರೆಸ್ ಇಟಲಿಯನ್ ಮೂಲದ ರೋಮನ್ ಕ್ಯಾಥೊಲಿಕ್ ಮಹಿಳೆ ಸೋನಿಯಾ ಗಾಂಧಿಯನ್ನು ನೆಚ್ಚಿಕೊಂಡಿದೆ’ ಎಂದು ಪ್ರಸಾರ ಮಾಡಿದ್ದೆ. ಈಗಲೂ ಸಹ ನಾನು ನಿಭೀರ್ತಿಯಿಂದ ಹೇಳಬಲ್ಲೆ- ಮುಂದೊಮ್ಮೆ ಇತಿಹಾಸ ಬರೆಯುವಾಗ ಕಾಂಗ್ರೆಸ್ ಮತ್ತು ಭಾರತಕ್ಕೆ ಸೋನಿಯಾ ನಾಯಕತ್ವ ಇದ್ದಂಥ ಕಾಲ ಸಂಪೂರ್ಣ ಅಂಧಕಾರದಿಂದ ಕೂಡಿರುವಂತೆ, ಭ್ರಷ್ಟಾಚಾರವೇ ತುಂಬಿರುವಂತೆ, ಪ್ರಜಾಪ್ರಭುತ್ವ ಸರ್ವಾಧಿಕಾರವಾಗಿ ಬದಲಾದಂತೆ ಕಾಣುತ್ತದೆ.
ಭಾರತೀಯ ಹಿಂದುಗಳು ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ ಎಂಬ ವಿಚಾರ ನನ್ನನ್ನು ಹಲವು ಬಾರಿ ದಂಗುಬಡಿಸಿತ್ತು. ನಾನು ದೃಢವಾಗಿ ಹೇಳಬಲ್ಲೆ-”ಭಾರತ ಹೆಮ್ಮೆಯಿಂದ ನಮ್ಮದು ಹಿಂದು ಮೂಲವುಳ್ಳ ನಾಗರಿಕತೆ ಎಂದು ಹೇಳಿಕೊಳ್ಳುವಂತಾಗಬೇಕು’!
ಹಿಂದು ಧರ್ಮ ಅತ್ಯಂತ ಶ್ರೇಷ್ಠವಾದದ್ದು. ಯಾಕೆಂದರೆ ಯಾವುದೇ ರೀತಿಯ ಬದಲಾವಣೆಗಾದರೂ ಇದು ಒಗ್ಗಿಕೊಳ್ಳಬಲ್ಲುದು. ಹಾಗಿದ್ದೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲುದು. ಹೀಗಾಗಿ ಹಿಂದೂ ಧರ್ಮ ಈ ಸಹಸ್ರಮಾನದ ಧರ್ಮ ಎಂಬುದು ನನ್ನ ಭಾವನೆ.
ಕೃಪೆ : ವಿಶ್ವೇಶ್ವರಭಟ್ (ವಿಭಟ್)
**********************************************************************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ