ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಫೆಬ್ರವರಿ 14, 2012

ಎನ್್ಡಿಎಗೆ ಎನ್್ಡಿಎಂ ಅನಿವಾರ್ಯವಲ್ಲವೇ?

ಅಂಥದ್ದೊಂದು ಅನನ್ಯ ಸ್ನೇಹವನ್ನು ನಮ್ಮ ಭಾರತೀಯ ರಾಜಕಾರಣದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಒಮ್ಮೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್್ಕೃಷ್ಣ ಆಡ್ವಾಣಿಯವರ 50 ವರ್ಷಗಳ ಸುದೀರ್ಘ ಸಂಬಂಧದಲ್ಲೂ ಬಿರುಕುಗಳಿವೆ ಎಂಬಂತೆ ಗೋಚರಿಸಿದ್ದುಂಟು. ಆದರೆ, ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಿತಾ ಹಾಗೂ ಶಶಿಕಲಾ ಹೇಗಿದ್ದರೆಂದರೆ ಕಲಿಯುಗದ ರಾಮ-ಲಕ್ಷ್ಮಣರಂತೆ. ಒಡಹುಟ್ಟಿದವರ ನಡುವೆಯೂ ಆ ಪರಿಯ ಸ್ನೇಹ-ವಿಶ್ವಾಸವಿರಲು ಸಾಧ್ಯವಿಲ್ಲ ಎಂಬಂತಿತ್ತು. ಒಟ್ಟಿನಲ್ಲಿ ಆ ಸ್ನೇಹಕ್ಕೆ ಸಾಟಿಯೇ ಇಲ್ಲವಾಗಿತ್ತು. ತನಗೆ ವಿವಾಹವಾಗದಿದ್ದರೇನಂತೆ, ಮಕ್ಕಳಿಲ್ಲದಿದ್ದರೇನಂತೆ ಶಶಿಕಲಾಳ ಮಗ ಸುಧಾಕರನನ್ನೇ ತನ್ನ ಮಗನೆಂದು ಭಾವಿಸಿ ಅದ್ಧೂರಿಯಾಗಿ ವಿವಾಹ ಮಾಡಿ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದರು ಜಯಲಲಿತಾ. ಎರಡನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾದಾಗ, ಏನಾದರೂ ಸಂದೇಶ ತಲುಪಿಸುವುದಿದ್ದರೆ, ಏನಾದರೂ ಕೆಲಸವಾಗ ಬೇಕಿದ್ದರೆ ನನ್ನನ್ನೇ ಸಂಪರ್ಕಿಸಲು ಯತ್ನಿಸಬೇಡಿ, ನೇರವಾಗಿ ಶಶಿಕಲಾ ಬಳಿಗೆ ಹೋಗಿ ಎಂದು ಪಕ್ಷದ ಕಾರ್ಯಕರ್ತರು, ಸಚಿವರಿಗೆ ಜಯಲಲಿತಾ ಸೂಚಿಸಿದ್ದರು. ಆದರೆ, ಇಂಥದ್ದೊಂದು ವಿಶ್ವಾಸಕ್ಕೆ ಪ್ರತಿಯಾಗಿ ಬಹುದೊಡ್ಡ ದೋಖಾಕ್ಕೊಂದು ಭೂಮಿಕೆ ಸಿದ್ಧವಾಗುತ್ತಿದೆ, ಜಯಲಲಿತಾರನ್ನೇ ಮುಗಿಸಿ ಆಕೆಯ ಕುರ್ಚಿಯನ್ನು ಆಕ್ರಮಿಸಲು ಶಶಿಕಲಾ ತಯಾರಿ ನಡೆಸುತ್ತಿದ್ದಾಳೆ ಎಂದು ಜಯಲಲಿತಾಗೆ ಗೊತ್ತಾಗಿದ್ದಾದರೂ ಹೇಗೆ? ನಿಮ್ಮ ಬಗಲಲ್ಲೇ ಕೆಂಡವಿದೆ, ಅದನ್ನು ಸೆರಗಲ್ಲಿ ಕಟ್ಟಿಕೊಂಡು ಕರುಣಾನಿಧಿಯವರಲ್ಲಿ ಶತ್ರುವನ್ನು ಹುಡುಕುವುದರಲ್ಲಿ ಅರ್ಥವಿಲ್ಲ ಎಂಬ ವಾಸ್ತವ ಜಯಲಲಿತಾಗೆ ಅರಿವಾಗಿದ್ದಾದರೂ ಯಾರಿಂದ?
ನರೇಂದ್ರ ದಾಮೋದರದಾಸ್ ಮೋದಿ!!
ನಲವತ್ತು ವರ್ಷಗಳ ಸ್ನೇಹಿತೆ ಶಶಿಕಲಾಳನ್ನು ಕುಮಾರಿ ಜಯಲಲಿತಾ ಏಕಾಏಕಿ ಮನೆಯಿಂದ ಹೊರಹಾಕಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ರೂಪದಂತಿದೆ ‘ತೆಹೆಲ್ಕಾ’ ವಾರಪತ್ರಿಕೆಯ ಕಳೆದ ವಾರದ ಸಂಚಿಕೆ. ಬಹುಶಃ ನರೇಂದ್ರ ಮೋದಿಯವರಲ್ಲದೆ ಬೇರೆ ಯಾರಾದರೂ ಶಶಿಕಲಾಳ ಬಗ್ಗೆ ಚಕಾರವೆತ್ತಿದ್ದರೆ ಜಯಲಲಿತಾ ಬಹುಶಃ ಹೇಳಿದವರಿಗೇ ಕಪಾಳಮೋಕ್ಷ ಮಾಡುತ್ತಿದ್ದರೇನೋ! ಆದರೆ ಆಕೆಗೆ “tip-off” ಮಾಡಿದವರು ಮೋದಿ!! ಶಶಿಕಲಾ ಹಾಗೂ ಆಕೆಯ ‘ಮನ್ನಾರ್್ಗುಡಿ ಮಾಫಿಯಾ’ ಸುಲಿಗೆ, ಹಫ್ತಾ ವಸೂಲಿಯಲ್ಲಿ ತೊಡಗಿದೆ ಎಂದು ಮೊದಲಿಗೆ ಜಯಲಲಿತಾರನ್ನು ಎಚ್ಚರಿಸಿದ್ದೇ ಅವರು. ಹಾಗಂತ ಸುಖಾಸುಮ್ಮನೆ ಅವರು ಇಂಥದ್ದೊಂದು ಅನುಮಾನವನ್ನು ಜಯಲಲಿತಾ ಕಿವಿಗೆ ಹಾಕಲಿಲ್ಲ. ಅದಕ್ಕೆ ಸೂಕ್ತ ಕಾರಣ, ನಿದರ್ಶನವನ್ನೂ ಕೊಟ್ಟರು. ಇತ್ತೀಚೆಗೆ ಉದ್ಯಮಿಗಳು ತಮಿಳುನಾಡನ್ನು ಅವಾಯ್ಡ್ ಮಾಡುತ್ತಿರುವುದಕ್ಕೆ, ನಿಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂದೇಟುಹಾಕುತ್ತಿರುವುದಕ್ಕೆ ಕಾರಣವೇನೆಂದು ಅಂದುಕೊಂಡಿರಿ? ದೊಡ್ಡದೊಂದು ಯೋಜನೆಯೊಂದಿಗೆ ತಮಿಳುನಾಡಿಗೆ ಆಗಮಿಸಿದ್ದ ಎನ್್ಆರ್್ಐ, ಅನಿವಾಸಿ ಭಾರತೀಯ ಹೂಡಿಕೆದಾರನೊಬ್ಬ ಕೊನೆಗೆ ಆ ಯೋಜನೆಯನ್ನೇ ಗುಜರಾತ್್ಗೆ ವರ್ಗಾಯಿಸಿಬಿಟ್ಟ.
ಏಕೆಂದರೆ ಶಶಿಕಲಾಳ ಮನ್ನಾರ್್ಗುಡಿ ಮಾಫಿಯಾ ಯೋಜನೆಯ ಒಟ್ಟು ಮೊತ್ತದಲ್ಲಿ 15 ಪರ್ಸೆಂಟ್ ಅನ್ನು ತನಗೆ ನೇರವಾಗಿ ಕೊಡಬೇಕೆಂದಿತು!
ಹಾಗಾಗಿ ಆಕೆ ಮತ್ತು ಆಕೆಯ ಚಟುವವಟಿಕೆಯ ಮೇಲೆ ಒಂದು ಕಣ್ಣಿಡಿ ಎಂದು ಮೋದಿ ಕಿವಿಮಾತು ಹೇಳಿದರು. ಆದಕ್ಕೆ ಓಗೊಟ್ಟ ಜಯಲಲಿತಾ, ಶಶಿಕಲಾಳ ಚಟುವಟಿಕೆಗಳ ಬೆನ್ನತ್ತಿ ಹೋದಾಗ ದೊಡ್ಡದೊಂದು ಪಿತೂರಿಯೇ ಅನಾವರಣಗೊಳ್ಳುತ್ತಾ ಹೋಯಿತು. ಯೋಜನೆಗಳು ಮಾತ್ರವಲ್ಲ, ಸ್ಥಳೀಯ ಉದ್ಯಮಿಗಳು, ವರ್ಗಾವಣೆ, ಅಧಿಕಾರಿವರ್ಗ ಎಲ್ಲರಿಂದಲೂ ಸುಲಿಗೆ ಮಾಡುತ್ತಿದ್ದ ಮನ್ನಾರ್್ಗುಡಿ ಮಾಫಿಯಾ 5 ಸಾವಿರ ಕೋಟಿಯ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡಿದ್ದು ತಿಳಿಯಿತು. ಅಷ್ಟೇ ಅಲ್ಲ, ಜಯಲಲಿತಾರಿಗೆ ನೀಡುತ್ತಿದ್ದ ಔಷಧದಲ್ಲೂ ವಿಷಬೆರೆಸಿ ಆಕೆಯನ್ನೇ ಮುಗಿಸಿ ತಾನು ಮುಖ್ಯಮಂತ್ರಿ ಕುರ್ಚಿಯನ್ನು ಆಕ್ರಮಿಸಲು ಶಶಿಕಲಾ ನಡೆಸುತ್ತಿದ್ದ ಹುನ್ನಾರವೂ ಬೆಳಕಿಗೆ ಬಂತು. ಹಾಗಾಗಿ ಶಶಿಕಲಾಳನ್ನು ಮನೆಯಿಂದ ಎತ್ತಿ ಹೊರಗೆಎಸೆದಿದ್ದಾರೆ, ಆಕೆಯನ್ನು ಯಾವ ಕ್ಷಣದಲ್ಲಿ ಬಂಧಿಸಲೂಬಹುದು.
ಇದೇನೇ ಇರಲಿ, ಅಂದು ನರೇಂದ್ರ ಮೋದಿಯವರು ಸುಮ್ಮನೆ ಕುಳಿತುಕೊಳ್ಳಬಹುದಿತ್ತು. ತಮಿಳುನಾಡಿಗೆ ಆದ ನಷ್ಟ ಗುಜರಾತ್್ಗೆ ಆಗುವ ಲಾಭ ಎಂದು ಭಾವಿಸಬಹುದಿತ್ತು. ಯಾವುದೇ ರಾಜ್ಯಗಳಾಗಲಿ ತಮಗೆ ಹೂಡಿಕೆ ಹರಿದುಬರಬೇಕು ಎಂದು ಯೋಚಿಸುತ್ತವೆಯೇ ಹೊರತು, ಅದರಿಂದ ಯಾರಿಗೆ ನಷ್ಟವಾಗುತ್ತಿದೆ ಎಂಬುದು ಅವುಗಳಿಗೆ ಮುಖ್ಯವಲ್ಲ. ಅದಕ್ಕೂ ಮಿಗಿಲಾಗಿ, ಅತಿಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ತಾನು ದೇಶದಲ್ಲಿಯೇ ನಂಬರ್-1 ಮುಖ್ಯಮಂತ್ರಿ ಎನಿಸಿಕೊಳ್ಳಬೇಕು, ಆ ಮೂಲಕ ರಾಷ್ಟ್ರಮಟ್ಟದಲ್ಲಿ ದೊಡ್ಡ ಪಾತ್ರ ವಹಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಪ್ರತಿಯೊಬ್ಬ ಮುಖ್ಯಮಂತ್ರಿಯಲ್ಲೂ ಕಾಣಬಹುದು. ಇವತ್ತು ಪ್ರಾದೇಶಿಕತೆಗಳು, ಭಾಷಾ ಭೇದಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದಕ್ಕೆ ಮಹಾರಾಷ್ಟ್ರದ ರಾಜ್ ಠಾಕ್ರೆ ಸಂದರ್ಶನವೊಂದರಲ್ಲಿ ಕಾರಣವೊಂದನ್ನು ನೀಡಿದ್ದರು. ತಮಿಳುನಾಡು ಮೂಲದ, ಆದರೆ ಪುಣೆಯಲ್ಲಿ ಅಧಿಕಾರಶಾಹಿಯಾಗಿದ್ದ ಐಎಎಸ್ ಅಧಿಕಾರಿಯೊಬ್ಬರು ಪುಣೆಯಲ್ಲಿ ಸ್ಥಾಪನೆಯಾಗಬೇಕಿದ್ದ ಬೆನ್ಝ್ ಕಾರು ಘಟಕವನ್ನು ಹೇಗೆ ದಾರಿತಪ್ಪಿಸಿ ಚೆನ್ನೈಗೆ ವರ್ಗಾವಣೆ ಮಾಡಿದರು ಎಂದು ಅದರಲ್ಲಿ ವಿವರಿಸಿದ್ದರು. ಒಬ್ಬ ಅಧಿಕಾರಿಯಲ್ಲೇ ಈ ರೀತಿಯ ಸ್ವಾರ್ಥಪರ ಧೋರಣೆಯನ್ನ ಕಾಣಬಹುದು. ಹಾಗಿದ್ದರೂ ನರೇಂದ್ರ ಮೋದಿಯವರು ಮಾತ್ರ ಇದಕ್ಕೆಲ್ಲ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಎಲ್ಲ ರಾಜ್ಯಗಳೂ ಪ್ರಗತಿ ಕಾಣಬೇಕು. ಭ್ರಷ್ಟಾಚಾರ ಯಾವುದೇ ರಾಜ್ಯದಲ್ಲಿರಲಿ ಅದರ ಮೂಲೋತ್ಪಾಟನೆಯಾಗಬೇಕು ಎಂದು ಅವರು ಚಿಂತಿಸುವ ಕಾರಣಕ್ಕೇ ತಮಿಳುನಾಡಿಗೆ ಮಾರಕವಾಗುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಜಯಲಲಿತಾರನ್ನು ಎಚ್ಚರಿಸಿದರು. ಇದು ಒಬ್ಬ ರಾಷ್ಟ್ರೀಯ ನಾಯಕನಲ್ಲಿ ಮಾತ್ರ ಕಾಣಬಹುದಾದ ಲಕ್ಷಣ.
ಈ ಘಟನೆಯ ಬೆನ್ನಲ್ಲೇ ಮತ್ತೊಂದು ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ಇಂಡಿಯಾ ಟುಡೆ’ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆ ಹೊರಬಿದ್ದಿದೆ. ಮೊಟ್ಟಮೊದಲ ಬಾರಿಗೆ ನರೇಂದ್ರ ಮೋದಿ ಮುಂದಿನ ಪ್ರಧಾನಿ ರೇಸ್್ನಲ್ಲಿ ಮುನ್ನಡೆ ಪಡೆದಿದ್ದಾರೆ! ಕಾಂಗ್ರೆಸ್್ನ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬೇಕೆಂದು ಶೇ. 17ರಷ್ಟು ಜನರು ತಮ್ಮ ಇಂಗಿತ ವ್ಯಕ್ತಪಡಿಸಿದ್ದರೆ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂದು 24 ಪರ್ಸೆಂಟ್ ಜನರು ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ದೇಶದ ನಂಬರ್-1 ಮುಖ್ಯಮಂತ್ರಿ ಪಟ್ಟವನ್ನೂ ಮೋದಿಯವರೇ ಉಳಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ 2008ರಲ್ಲಿ ನಡೆದಿದ್ದ ಘಟನೆ ನೆನಪಾಗುತ್ತಿದೆ. ಹದಿನೈದು ಪರ್ಸೆಂಟ್ ಕೇಳಿದ ಮನ್ನಾರ್್ಗುಡಿಯಂತಹ ಮಾಫಿಯಾ ಬರೀ ತಮಿಳುನಾಡಿಗಷ್ಟೇ ಸೀಮಿತವಾಗಿಲ್ಲ, ನರೇಂದ್ರ ಮೋದಿಯವರ ಪಕ್ಷದ್ದೇ ಸರ್ಕಾರವಿರುವ ಕರ್ನಾಟಕದ ಬಿಜೆಪಿ ಮಂತ್ರಿವರ್ಯರೂ ಈ ಪರ್ಸೆಂಟ್ ವ್ಯವಹಾರದಲ್ಲಿ ಯಾರಿಗೂ ಕಡಿಮೆಯಿಲ್ಲ! ನ್ಯಾನೋ ಕಾರು ಘಟಕ ಪಶ್ಚಿಮ ಬಂಗಾಳದಿಂದ ಎತ್ತಂಗಡಿಯಾದ ಘಟನೆಯನ್ನು ನೆನಪಿಸಿಕೊಳ್ಳಿ. ಮಮತಾ ಕ್ಯಾತೆಯಿಂದ ಬಂಗಾಳದಿಂದ ಹೊರಹೋಗಲು ಸಿದ್ಧವಾದ ನ್ಯಾನೋ ಯೋಜನೆ ಕೊನೆಗೆ ಕರ್ನಾಟಕ್ಕೆ ಲಾಭವಾಗುವ ಎಲ್ಲ ಸೂಚನೆಗಳೂ ಗೋಚರಿಸಲಾರಂಭಿಸಿದವು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ಪ್ರಾರಂಭದ ದಿನಗಳವು. ಟಾಟಾ ಕಂಪನಿಯ ನಿಯೋಗ ನಮ್ಮ ಹುಬ್ಬಳ್ಳಿ-ಧಾರವಾಡ ಸಮೀಪದಲ್ಲಿ ಸ್ಥಳಪರೀಕ್ಷೆಯನ್ನೂ ನಡೆಸಿತು. ಇನ್ನೇನು ಆ ನ್ಯಾನೋ ಕರ್ನಾಟಕಕ್ಕೆ ಆಗಮಿಸುವುದು ಖಚಿತ ಎಂಬ ಭಾವನೆ ಸೃಷ್ಟಿಯಾಯಿತು. ಆಶ್ಚರ್ಯವೆಂದರೆ ಮರುಕ್ಷಣವೇ ಗುಜರಾತ್್ಗೆ ವರ್ಗಾವಣೆ ಮಾಡುತ್ತಿರುವುದಾಗಿ ಟಾಟಾ ಘೋಷಣೆ ಮಾಡಿಬಿಟ್ಟಿತು ಅದಕ್ಕೆ ಕಾರಣವೇನು ಗೊತ್ತಾ? ಅದೇ ಪರ್ಸೆಂಟೇಜ್ ಲೆಕ್ಕ!! ನ್ಯಾನೋ ಕೈತಪ್ಪಿದ್ದೇಕೆ ಎಂಬ ಪ್ರಶ್ನೆಗೆ ದೊರೆತ ಉತ್ತರವೇನು ಗೊತ್ತೆ? ‘ಆ ಮೋದಿಗೇನು ಹೆಂಡತಿ ಮಕ್ಕಳಿಲ್ಲ, ಅವನಿಗೇಕೆ ಬೇಕ್ರಿ ದುಡ್ಡು, ಅದಕ್ಕೇ ಪುಕ್ಕಟೆ ಕೊಟ್ಟಿದ್ದಾನೆ’ ಎಂದು ನಮ್ಮ ಕೈಗಾರಿಕಾ ಸಚಿವರು ತಮ್ಮ ಖಾಸಗಿ ಮಾತುಕತೆ ವೇಳೆ ಹೇಳುತ್ತಾರೆ!!
ಇಂತಹ ಕ್ಷುಲ್ಲಕ ಮಾತನಾಡುವ ಸ್ವಾರ್ಥ ರಾಜಕಾರಣಿಗಳೇ ತುಂಬಿರುವ ಸಂದರ್ಭದಲ್ಲಿ ಈ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ನಿಸ್ವಾರ್ಥ ರಾಜಕಾರಣಿ ಮೋದಿಯವರಲ್ಲದೆ ಬೇರಾರಿದ್ದಾರೆ?
ಹಾಗಾಗಿಯೇ “Role Model for a Nation on the March” ಎಂಬ ಶೀರ್ಷಿಕೆಯಡಿ ಆಸ್ಟ್ರೇಲಿಯಾದ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್್’ ನರೇಂದ್ರ ಮೋದಿಯವರ ಬಗ್ಗೆ ಬರೆದಿದೆ. ಜೊತೆಗೆ ಅವರ ಸಾಧನೆಗಳ ಬಗ್ಗೆ ಅದೇ ಸಾಕಷ್ಟು ಬೆಳಕು ಚೆಲ್ಲಿದೆ.
ವಿಳಂಬ, ಸ್ಥಳಕ್ಕಾಗಿ ಪರವಾನಗಿ ಸಿಗುವುದಕ್ಕಿರುವ ಕಷ್ಟ, ವಿದ್ಯುತ್ ಖೋತಾ, ಭ್ರಷ್ಟಾಚಾರ ಮುಂತಾದ ಕಾರಣಗಳಿಂದ ಭಾರತದ ಇತರ ರಾಜ್ಯಗಳು ಕಳೆದುಕೊಳ್ಳುತ್ತಿರುವ ಉಕ್ಕಿನ ಘಟಕ, ಪೆಟ್ರೋಲಿಯಂ ಕಾರ್ಖಾನೆಗಳನ್ನೆಲ್ಲ ತನ್ನನೆಲಕ್ಕೆ ಸೆಳೆದುಕೊಳ್ಳುವಲ್ಲಿ ಗುಜರಾತ್ ಯಶಸ್ವಿಯಾಗಿದೆ. ಬೇರೆ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಸಾಮಾನ್ಯ ಎಂಬಂತಾಗಿಬಿಟ್ಟಿದ್ದರೆ ಗುಜರಾತ್್ನಲ್ಲಿ ಮಾತ್ರ ಹೆಚ್ಚುವರಿ ವಿದ್ಯುತ್ ಉಳಿದು, ಅದನ್ನು ಬಳಸಿಕೊಳ್ಳುವುದಕ್ಕೆ ಕೈಗಾರಿಕೆಗಳನ್ನು ತರುವುದು ಹೇಗೆ ಎಂದು ಅದು ಯೋಚಿಸುತ್ತದೆ.
ಸಾಮಾಜಿಕವಾಗಿ ಕೆಳಸ್ಥರದ ಗಾಣಿಗರ ಸಮುದಾಯದಲ್ಲಿ ಜನಿಸಿದ ಮೋದಿ, ಶಿಕ್ಷಣ ಪೂರೈಸುವುದಕ್ಕೆ ಶಾಲೆಯ ಬಿಡುವಿನ ವೇಳೆ ಚಹಾ ಅಂಗಡಿ ಹಾಕಿಕೊಂಡು ದುಡಿಮೆ ಮಾಡುತ್ತಿದ್ದರು. ಮುಖ್ಯಮಂತ್ರಿಯಾಗಿ ವಾರಕ್ಕೆ ಏಳು ದಿನವೂ ಕೆಲಸ ಮಾಡುವ ಪತ್ರಿಕೆಗಳನ್ನು ಓದುವುದರೊಂದಿಗೆ ದಿನ ಪ್ರಾರಂಭಿಸುತ್ತಾರೆ. ತಾಸುಗಳ ಕಾಲ ಯೋಗಾಭ್ಯಾಸ. ಮತ್ತೆ ಬ್ಲಾಗ್ ಹಾಗೂ ಟ್ವಿಟ್ಟರ್್ಗಳಂಥ ಸಾಮಾಜಿಕ ತಾಣಗಳ ಮೂಲಕವೂ ಅಪ್್ಡೇಟ್ ಆಗುತ್ತಾರೆ. ಅವರ ಸ್ನೇಹಿತರು ಹೇಳುವ ಪ್ರಕಾರ ಮದುವೆಯಾಗದ ಮೋದಿಯವರಿಗೆ ಕೆಲಸವೇ ಜೀವನ. ಅವರಿಗೆ ಇರುವ ವ್ಯಾಮೋಹವೆಂದರೆ ಅದು ಬಟ್ಟೆಗಳ ಮೇಲೆ ಮಾತ್ರ. ಕುರ್ತಾವನ್ನು ಇಷ್ಟಪಡುವ ಅವರು ಬಹಳ ಶಿಸ್ತುಬದ್ಧವಾಗಿ ಡ್ರೆಸ್ ಮಾಡುವುದಕ್ಕೆ ಇಷ್ಟಪಡುತ್ತಾರೆ.
ಮೂಲಸೌಕರ್ಯದ ವಿಷಯದಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ದೇಶಕ್ಕೇ ಮಾದರಿ ಒದಗಿಸಿರುವುವವರು ಮೋದಿ. ಸಾರಿಗೆ, ವಿದ್ಯುತ್, ನೀರು ಎಲ್ಲ ವಿಭಾಗಗಳಲ್ಲಿ ಅವರು ಹೊಸ ಮಾದರಿಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ. ಅಲ್ಲಿ 2200 ಕಿ.ಮೀ. ವ್ಯಾಪ್ತಿಯ ಗ್ಯಾಸ್ ಗ್ರಿಡ್ ಇದೆ. 18 ಸಾವಿರ ಹಳ್ಳಿಗಳಿಗೆ ಬ್ರಾಡ್್ಬ್ಯಾಂಡ್ ಸೌಲಭ್ಯ ಒದಗಿಸಿರುವ ಗುಜರಾತ್ ಜಗತ್ತಿನ ಎರಡನೇ ಅತಿದೊಡ್ಡ ಆಪ್ಟಿಕಲ್ ಫೈಬರ್ ನೆಟ್್ವರ್ಕ್ ಜಾಲವಾಗಿದೆ. ವಿದ್ಯುತ್ ವಲಯವನ್ನು ಖಾಸಗಿಗೆ ವಹಿಸುತ್ತೇನೆ ಎಂದು ಹೆದರಿಸಿ ಅಲ್ಲಿನ ನೌಕರರನ್ನು ಸರಿದಾರಿಗೆ ತಂದು ವಿದ್ಯುತ್ ಕಳ್ಳತನ, ಪೋಲು ಮುಂತಾದವುಗಳನ್ನು ತಪ್ಪಿಸಿ 2500 ಕೋಟಿ ರುಪಾಯಿಗಳ ಕೊರತೆಯನ್ನು ನೀಗಿಸಿದರು.
ಆದರೆ ತಾವು ಇತರ ಪಕ್ಷಗಳಂತೆ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇನೆ ಎಂದು ಭರವಸೆ ನೀಡಿ ಗಿಮಿಕ್ ಮಾಡುವುದಿಲ್ಲ. ತಮ್ಮ ಸಿಎಂ ಪಟ್ಟ ತಪ್ಪಿದರೂ ಬೇಜಾರಿಲ್ಲ ಎಂಬುದು ಮೋದಿ ಧೃಡ ನಿಲುವು. ಹೆಚ್ಚಿನ ಮುಖ್ಯಮಂತ್ರಿಗಳು ಆಹಾರ ಸಬ್ಸಿಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಹಣ ನೀಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಾರೆ. ಆದರೆ ಮೋದಿ ಟೆಲಿ ಮೆಡಿಸಿನ್ ಹಾಗೂ ದೂರಸಂಪರ್ಕ ಶಿಕ್ಷಣ ಮತ್ತು ಕೃಷಿ ಸುಧಾರಣೆಗೆ ಅನುಕೂಲವಾಗುವಂತೆ ತಮಗೇ ಮೀಸಲಾದ ಉಪಗ್ರಹ ನೀಡಿ ಎಂದು ಪ್ರಧಾನಿ ಮನಮೋಹನರನ್ನು ಕೇಳಿಕೊಂಡಿದ್ದರು. ತಿಂಗಳ ಹಿಂದಷ್ಟೇ ವೈಡ್್ಬ್ಯಾಂಡ್ ಉಪಗ್ರಹ ಸಹಕಾರವನ್ನು ಒದಗಿಸುವುದಾಗಿ ಮನಮೋಹನ್ ಪ್ರತಿಕ್ರಿಯಿಸಿದ್ದಾರೆ.
ಹಾಳು ಬಿದ್ದುಕೊಂಡಿದ್ದ 1600 ಕಿ.ಮೀಗಳ ತೀರ ಪ್ರದೇಶವನ್ನು ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿ ಈಗ ಭಾರತದ ಶೇ. 80ರಷ್ಟು ಖಾಸಗಿ ಹಡಗುಗಳೆಲ್ಲ ಆ ತೀರವನ್ನೇ ವಹಿವಾಟಿನ ಕೇಂದ್ರವಾಗಿರಿಸಿಕೊಳ್ಳುವಂತಾಗಿದೆ. ಭ್ರಷ್ಟಾಚಾರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಎಲ್ಲ ಹರಾಜುಗಳನ್ನೂ ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕ ಸೇವೆಗೆ ಪ್ರವೇಶಿಸುವವರೆಲ್ಲ ಅಂತರ್ಜಾಲದಲ್ಲಿ ಪರೀಕ್ಷೆ ಎದುರಿಸುವುದು ಕಡ್ಡಾಯ. ವಾರ್ಷಿಕ ಸಭೆಯಲ್ಲೇ ಶಿಕ್ಷಕರ ವರ್ಗಾವಣೆ ನಿರ್ಧಾರವಾಗುವ ಪದ್ಧತಿ ತಂದು ಈ ಹಿಂದೆ ವರ್ಗಾವಣೆಗಾಗಿ 2-3 ಲಕ್ಷದವರೆಗೆ ಲಂಚ ನೀಡುತ್ತಿದ್ದ ಪರಿಸ್ಥಿತಿ ಇಲ್ಲವಾಗಿದೆ.
ಹೀಗೆ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್್’ ನರೇಂದ್ರ ಮೋದಿ ಸಾಧನೆಯನ್ನು ಬಿಚ್ಚಿಟ್ಟಿದೆ.    ಇವತ್ತು ಮಾಧ್ಯಮಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಎತ್ತಿಕಟ್ಟಿ ಮೋದಿಯವರನ್ನು ತುಳಿಯಲು ಯತ್ನಿಸುತ್ತಿರಬಹುದು. ಆದರೆ ಪ್ರಾಮಾಣಿಕತೆ ಹಾಗೂ ಪ್ರಾಮಾಣಿಕ ಕಾಳಜಿ ವಿಷಯದಲ್ಲಿ ಮಾತ್ರ ಮೋದಿ-ನಿತೀಶ್ ಸರಿಸಮಾನರೇ ಹೊರತು ಅಭಿವೃದ್ಧಿ ಕಾರ್ಯ ಹಾಗೂ ಭವಿಷ್ಯದ ಚಿಂತನೆಯಲ್ಲಿ ಮೋದಿಯವರನ್ನು ಸರಿಗಟ್ಟಲು ನಿತೀಶ್್ಗೆ ಸಾಧ್ಯವಿಲ್ಲ. ಇವತ್ತು ಬಿಹಾರದಲ್ಲಿ ಏನೇ ಮಾಡಿದರೂ ಅಭಿವೃದ್ಧಿಯೇ, ಅಲ್ಲಿ ಕೆಡಿಸುವುದಕ್ಕೆ ಲಾಲು ಏನನ್ನು ತಾನೇ ಉಳಿಸಿದ್ದಾರೆ? ಹಾಗಾಗಿ ಬಿಹಾರದಲ್ಲಿ ಸ್ವಲ್ಪ ಬದಲಾವಣೆ ತಂದರೂ ಅದು ಎದ್ದು ಕಾಣುವ ಬದಲಾವಣೆ ಎನಿಸಿ ಬಿಡುತ್ತದೆ. ಆದರೆ ಗುಜರಾತ್್ನಂಥ ಪ್ರಗತಿಪರ ರಾಜ್ಯದಲ್ಲಿ ಎದ್ದುಕಾಣುವ ಬದಲಾವಣೆ ತರುವುದು ತ್ರಾಸ. ಹಾಗಿದ್ದರೂ ಇಡೀ ಜಗತ್ತೇ ಆರ್ಥಿಕ ಹಿನ್ನೆಡೆಯ ಸುಳಿಯಲ್ಲಿ ಸಿಲುಕಿರುವಾಗ ಮೋದಿಯವರು ಮಾತ್ರ ಕಳೆದ 9 ವರ್ಷಗಳಿಂದ ಶೇ.10.5ರಷ್ಟು ಆರ್ಥಿಕ ಅಭಿವೃದ್ಧಿ ದರ ಸಾಧಿಸಿ ಚೀನಾ ಸಾಧನೆಯನ್ನು ಸರಿಗಟ್ಟುತ್ತಿದ್ದಾರೆ.
ಇವತ್ತು ಚೀನಾ ನಮ್ಮ ಕೇಂದ್ರ ಸರ್ಕಾರಕ್ಕೆ ಒಂದೆಡೆ ಸವಾಲೆಸೆಯುತ್ತಿದ್ದರೂ ಗುಜರಾತ್ ಮುಖ್ಯಮಂತ್ರಿಗೆ ಮಾತ್ರ ಮುಕ್ತ ಆಹ್ವಾನ ನೀಡಿ ಗೌರವ ಸೂಚಿಸುತ್ತಿದೆ. ಈ ಮಾಧ್ಯಮಗಳು ಎಷ್ಟೇ ಬೊಬ್ಬೆ ಹಾಕಲಿ, ಪಾಕಿಸ್ತಾನದ ಉದ್ಯಮವಲಯ ಕೂಡ ಮೋದಿಯವರ ಯಶೋಗಾಥೆಯನ್ನು ಕೇಳಲು ಆಹ್ವಾನ ನೀಡಿದೆ. ಇವತ್ತು ಅನ್ಯ ರಾಷ್ಟ್ರಗಳು ಭಾರತದ ಯಾವ ಮುಖ್ಯಮಂತ್ರಿಯ ಬಗ್ಗೆಯಾದರೂ ಮಾತನಾಡುತ್ತಿದ್ದರೆ ಅದು ಮೋದಿ ಹಾಗೂ ಮೋದಿಯವರ ಬಗ್ಗೆ ಮಾತ್ರ. ನಿತೀಶ್ ಅಥವಾ ಇತರರ ಬಗ್ಗೆಯಲ್ಲ. ಅದು ಮೋದಿಯವರ ಸಾಮರ್ಥ್ಯ ಹಾಗೂ ಸ್ಥಾನಮಾನವನ್ನು ಸೂಚಿಸುತ್ತದೆ. ಹಾಗಾಗಿ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಎನ್್ಡಿಎಗೆ ಎನ್್ಡಿಎಂ (ನರೇಂದ್ರ ದಾಮೋದರದಾಸ್್ಮೋದಿ) ಖಂಡಿತ ಅನಿವಾರ್ಯ. ಹಾಗನಿಸುವುದಿಲ್ಲವೆ?
 - ಕೃಪೆ  ಪ್ರತಾಪ್ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ