ನನ್ನ ಬ್ಲಾಗ್ ಪಟ್ಟಿ

ಮಂಗಳವಾರ, ಆಗಸ್ಟ್ 28, 2012

ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು? - ಪ್ರತಾಪ ಸಿಂಹ

ಅದನ್ನು Brain Drain ಅಥವಾ ಪ್ರತಿಭಾ ಪಲಾಯನ ಎಂದು ಕರೆದಿದ್ದೂ ಇದೆ, ಅದರ ವಿರುದ್ಧ ದೊಡ್ಡ ಗುಲ್ಲೆಬ್ಬಿಸಿದ್ದೂ ಇದೆ, ಅದೇ ಈ ದೇಶದ ಹಿಂದುಳಿಯುವಿಕೆಗೆ ಕಾರಣವೆಂದು ಗೂಬೆ ಕೂರಿಸಿದ್ದೂ ಇದೆ. ಆದರೇನಂತೆ 1970, 80, 90ರ ದಶಕದಲ್ಲಿ ಭವ್ಯ ಭವಿಷ್ಯದ ಕನಸು ಕಟ್ಟಿಕೊಂಡು, ಹೊಸ ಉದ್ಯೋಗಾವಕಾಶಗಳನ್ನು ಅರಸಿಕೊಂಡು, ತಮ್ಮ ಪ್ರತಿಭೆಗೆ ಭಾರತದಲ್ಲಿ ಸೂಕ್ತ ವೇದಿಕೆ, ಅವಕಾಶದ ಕೊರತೆಯಿದೆಯೆಂದುಕೊಂಡು, ಮೀಸಲಾತಿ ನೀತಿಯ ಉರುಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಮ್ಮ ಎಂಜಿನಿಯರ್್ಗಳು, ಡಾಕ್ಟರ್್ಗಳು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತವರು ವಿದೇಶಗಳಿಗೆ ಸಾಗಿದರು. ಅಲ್ಲಿ ಯಶಸ್ಸನ್ನೂ ಕಂಡರು, ಅಲ್ಲಿಯೇ ತಳವೂರುವ ಯೋಚನೆಯನ್ನೂ ಮಾಡಿದರು.

ಆದರೂ…
ಏನನ್ನೋ ಕಳೆದುಕೊಂಡ, ಯಾವುದರಿಂದಲೋ ದೂರವಾದ ಖಾಲಿ ಖಾಲಿ ಭಾವ, ಅನಾಥಪ್ರಜ್ಞೆ ಆ ಭಾರತೀಯರನ್ನು ಕಾಡಿದ್ದಿದೆ. ಆಗ ಕೇಳಿಬಂದಿದ್ದೇ ಈ ಮಾತು-You can take the Indian out of India but you can’t take India out of the Indian! ಅಲ್ಲಿನ ನಾಗರೀಕತ್ವ ಪಡೆದು, ಅಲ್ಲಿಯೇ ಶಾಶ್ವತವಾಗಿ ತಳವೂರಿದವರೂ ಇಂದಿಗೂ ಪ್ರತಿವರ್ಷ ರಜೆ ಬಂತೆಂದರೆ ಸಂಸಾರ ಸಮೇತ ಭಾರತಕ್ಕೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ಭಾರತ ಎಂಬುದೇ ಒಂದು Binding force. ಪ್ರಸ್ತುತ ಅಂತರಿಕ್ಷದಲ್ಲಿರುವ ಸುನೀತಾ ವಿಲಿಯಮ್ಸ್ ಮೊನ್ನೆ ಆಗಸ್ಟ್ 15ರಂದು ಆಗಸದಿಂದಲೇ ನಮಗೆಲ್ಲ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಬಾಹ್ಯಾಕಾಶ ನೌಕೆಯೊಳಗೇ ತ್ರಿವರ್ಣ ಧ್ವಜವನ್ನು ಏರಿಸಿ, ‘ನಿಮಗೆಲ್ಲ ತಿಳಿದಿರುವಂತೆ ನಾನು ಅರೆ ಭಾರತೀಯಳು, ನನ್ನ ತಂದೆ ಗುಜರಾತಿ. ಹಾಗಾಗಿ ಭಾರತದ ಸಂಸ್ಕೃತಿ, ಸಂಸ್ಕಾರಗಳು ನನಗೆ ಪರಿಚಿತ. ನಾನೂ ಭಾರತದ ಒಂದು ಭಾಗವೆನ್ನಲು ಹೆಮ್ಮೆಯೆನಿಸುತ್ತಿದೆ’ ಎಂದರು!
ಆದರೆ…
ಆಕೆ ತಾನು ಯಾವ ದೇಶದ ಭಾಗವೆನ್ನಲು ಹೆಮ್ಮೆಯಾಗುತ್ತಿದೆ ಎಂದರೋ ಆ ಭಾರತ ‘ಭಾರತ’ವಾಗಿ ಉಳಿದುಕೊಂಡೀತೆ?! ಇನ್ನು ಕೆಲವೇ ದಶಕಗಳಲ್ಲಿ ಮತ್ತೆ ಭಾಗ ಭಾಗವಾಗಿ ಹೋಗದೇ ಉಳಿದೀತೆ? ಇಷ್ಟಕ್ಕೂ ಭಾರತದಲ್ಲಿ ಇಂದು ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ? ಈ ದೇಶ ಯಾವ ಧರ್ಮಾಂಧರ ಕೂಪಕ್ಕೆ ಬೀಳುತ್ತಿದೆ? ಮುಂದೊಂದು ದಿನ Indianness, Indian ethos ಕಥೆ ಬಿಡಿ, ‘ಒಬ್ಬ ಭಾರತೀಯನನ್ನು ಭಾರತದಿಂದ ಬೇರ್ಪಡಿಸಬಹುದು, ಆದರೆ ಭಾರತವನ್ನು ಭಾರತೀಯನಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂಬ ಮಾತನ್ನೂ ಬಿಡಿ, ಹಿಂದೂ ರಾಷ್ಟ್ರದ ಕನಸನ್ನಂತೂ ಬಿಟ್ಟೇ ಬಿಡಿ, ಈ ದೇಶ ಕನಿಷ್ಠ ಭಾರತವಾಗಿ ಉಳಿದುಕೊಳ್ಳುವುದೇ? ಇಂದು ಭಾರತದ ಅಸ್ತಿತ್ವಕ್ಕೇ ಅಪಾಯ ಎದುರಾಗುತ್ತಿಲ್ಲವೆ? ಯಾರಿಂದ ಆ ಗಂಡಾಂತರ ಸೃಷ್ಟಿಯಾಗುತ್ತಿದೆ? ಇಲ್ಲಿ ಯಾರನ್ನು ದೂರಬೇಕು?
ನಿಮಗೆ ಮೀರ್ ಜಾಫರ್, ಮೀರ್ ಸಾದಿಕ್ ಖಂಡಿತ ಗೊತ್ತಿರುತ್ತಾರೆ, ಅಲ್ವಾ? ಮೀರ್ ಸಾದಿಕ್, ಟಿಪ್ಪು ಸುಲ್ತಾನನ ಸಂಪುಟದಲ್ಲಿ ಮಂತ್ರಿಯಾಗಿದ್ದ. ಬ್ರಿಟಿಷರ ಜತೆ ಗೌಪ್ಯವಾಗಿ ಕೈಜೋಡಿಸಿದ ಇವನು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ವೇಳೆ ಸುಂಕ ಸಂಗ್ರಹಿಸುವ ನೆಪದಲ್ಲಿ ಟಿಪ್ಪು ಸೇನೆಯನ್ನು ರಣರಂಗದಿಂದ ಹಿಂದಕ್ಕೆ ಕರೆಯಿಸಿದ. ಆ ಮೂಲಕ ಬ್ರಿಟಿಷ್ ಸೇನೆ ಟಿಪ್ಪುವಿನ ಸಾಮ್ರಾಜ್ಯದೊಳಕ್ಕೆ ಲಗ್ಗೆ ಹಾಕಲು, ಟಿಪ್ಪು ಸೋಲಲು, ಮೈಸೂರು ಸಾಮ್ರಾಜ್ಯ ಬ್ರಿಟಿಷರ ವಶವಾಗಲು ಕಾರಣನಾದ. ಇವನೊಬ್ಬ Betrayer. ಇನ್ನು ಪ್ಲಾಸಿ ಕದನದ ವೇಳೆ ಸಿರಾಜುದ್ದೀನ್ ದೌಲ್್ಗೆ ದ್ರೋಹ ಮಾಡಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಅಡಿಗಲ್ಲು ಇಡಲು ಕಾರಣನಾದ ಮೀರ್ ಜಾಫರ್ ಒಬ್ಬ Traitor. ಅಂದು ಅಂಗ್ಲರ ಆಮಿಷಕ್ಕೊಳಗಾಗಿ ಮುಸಲ್ಮಾನರು ಮುಸಲ್ಮಾನ ದೊರೆಗಳಿಗೇ ಮೋಸವೆಸಗಿದ ಕಾರಣ ಮುಸ್ಲಿಂ ಚಕ್ರಾಧಿಪತ್ಯ ಪತನವಾಗಿ ಬ್ರಿಟಿಷರು ಚುಕ್ಕಾಣಿ ಹಿಡಿದರು. ಆದರೆ ಇಂದು ನಮ್ಮ ನಡುವೆಯೇ ಇರುವ ಅಂತಹ Betrayer, Traitorಗಳಾರು? ವೋಟಿನ ಆಸೆಗಾಗಿ ಭಾರತ ಮತ್ತೆ ವಿಘಟನೆಯಾಗುವಂಥ ಅಪಾಯಕ್ಕೆ ತಳ್ಳುತ್ತಿರುವವರಾರು? ಅಸ್ಸಾಂ ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಬದ್ರುದ್ದೀನ್ ಅಜ್ಮಲ್, ಸಂಸತ್ತಿನಲ್ಲಿ ದೇಶದ್ರೋಹಿ ಭಾಷಣ ಮಾಡಿದ ಅಸಾದುದ್ದೀನ್್ರಂಥ ವಿಚ್ಛಿದ್ರಕಾರಕ, ವಿಘಟನಾತ್ಮಕ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವ, ಬೆಳೆಸುತ್ತಿರುವ, ಅವರ ಜತೆ ಕೈಜೋಡಿಸುತ್ತಿರುವ ಮೋಸಗಾರರು, ದ್ರೋಹಿಗಳು ಯಾರು ಗೊತ್ತಾ?
ಆಗಸ್ಟ್ 21, ಆಝಾದ್ ಮೈದಾನ, ಮುಂಬೈ
ಆಗಸ್ಟ್ 11ರಂದು ಅಝಾದ್ ಮೈದಾನದಲ್ಲಿ ಮುಸಲ್ಮಾನರು ನಡೆಸಿದ ಗಲಭೆಯನ್ನು ಪ್ರತಿಭಟಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS)ಮುಖ್ಯಸ್ಥ ರಾಜ್ ಠಾಕ್ರೆ ಅದೇ ಸ್ಥಳದಲ್ಲಿ 21ರಂದು ರ್ಯಾಲಿ ನಡೆಸಿದರು. ಜನ ಸಮ್ಮೋಹನಕ್ಕೊಳಗಾಗುವಂಥ ಭಾಷಣ ಮಾಡಿದ ಅವರು, ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಗಲಭೆಕೋರರು ನಡೆಸಿದ ದೌರ್ಜನ್ಯವನ್ನು ಟೀಕಿಸಿದರು. ಅದರಲ್ಲೂ ಗಾಯಗೊಂಡಿರುವ 58 ಪೊಲೀಸರ, ಹಲ್ಲೆಗೊಳಗಾಗಿರುವ ಮೂವರು ಮಹಿಳಾ ಕಾನ್ಸ್್ಟೇಬಲ್್ಗಳ ಪರ ಧ್ವನಿಯೆತ್ತಿದರು, ಗಲಭೆಕೋರರಿಗೆ ಎಚ್ಚರಿಕೆ ನೀಡಿದರು. ಇದನ್ನೆಲ್ಲ ಆಲಿಸುತ್ತಿದ್ದ ಕಾನ್ಸ್್ಟೇಬಲ್ ಪ್ರಮೋದ್ ತಾವ್ಡೆ, 20 ನಿಮಿಷಗಳ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯೇರಿ ರಾಜ್ ಠಾಕ್ರೆಗೆ ಹಳದಿ ಗುಲಾಬಿ ಹೂ ನೀಡಿ ಅಭಿನಂದಿಸಿದರು. ಇಡೀ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ ಠಾಕ್ರೆಗೆ ವೃತ್ತಿ ನಿಯಮ ಉಲ್ಲಂಘಿಸಿ ಸೆಲ್ಯೂಟ್ ಮಾಡಿ ಕೆಳಗಿಳಿದರು.
ಏಕೆ ಗೊತ್ತಾ?
ಆಗಸ್ಟ್ 11ರಂದು ಗಲಭೆ ನಡೆದಾಗಲೂ ಪ್ರಮೋದ್ ತಾವ್ಡೆ ಆಝಾದ್ ಮೈದಾನದ ಬಳಿ ಭದ್ರತಾ ಜವಾಬ್ದಾರಿಯಲ್ಲಿದ್ದರು. ಗಲಭೆಕೋರರ ಆಕ್ರಮಣದ ಹೊರತಾಗಿಯೂ ಜೀವದ ಹಂಗುತೊರೆದು ಕರ್ತವ್ಯ ಪಾಲಿಸಿದರು. ಅಷ್ಟೇ ಅಲ್ಲ, ಇಬ್ಬರು ದೇಶದ್ರೋಹಿಗಳನ್ನು ಹಿಡಿದು ತಂದರು. ಅದನ್ನು ಮುಂಬೈ ಪೊಲೀಸ್ ಕಮೀಷನರ್ ಅರೂಪ್ ಪಟ್ನಾಯಕ್ ಮುಂದೆ ಹೇಳಿದಾಗ ಅವರೇನೆಂದರು ಗೊತ್ತೆ? ಸುಭಾಶ್ಚಂದ್ರ ಬೋಸ್್ರಂಥ ಕನ್ನಡಕ ಹಾಕಿದ್ದ ತಾವ್ಡೆಯನ್ನು ‘ನೇತಾಜಿ ಸುಭಾಶ್ಚಂದ್ರ ಬೋಸ್್ನಂತೆ ಕಾಣುತ್ತೀಯಾ ಅಂತ ಬಹಳ ಶಾಣ್ಯಾನಂತೆ ವರ್ತಿಸಬೇಡ’ ಎಂದು ಗೇಲಿ ಮಾಡಿದರು! ಅಷ್ಟು ಮಾತ್ರವಲ್ಲ, ಗಲಭೆಕೋರರನ್ನು ಹಿಡಿದ ಡಿಸಿಪಿಯೊಬ್ಬರನ್ನು ಸಾರ್ವಜನಿಕವಾಗಿ ‘ಬ್ಯಾಸ್ಟರ್ಡ್್’ ಎಂದು ಹೀನಾತಿಹೀನ ಶಬ್ದದಲ್ಲಿ ನಿಂದಿಸಿದ್ದಲ್ಲದೆ ಬಂಧಿತರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ ಈ ಮಹಾನುಭಾವ ಪಟ್ನಾಯಕ್. ಇದಕ್ಕಿಂತ ಆಘಾತಕಾರಿ ಮಾತುಂಟೆ? ಅಮರ್ ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದ, ದ್ವಂಸ ಮಾಡಿದ ಗಲಭೆಕೋರರಲ್ಲಿ ಇಬ್ಬರು ದೇಶದ್ರೋಹಿಗಳನ್ನು ಹಿಡಿದು ತಂದವನಿಗೆ ಮೆಚ್ಚುಗೆಯ ಮಾತನಾಡಿ ಪ್ರೋತ್ಸಾಹಿಸುವ ಬದಲು ಅವಮಾನ ಮಾಡುತ್ತಾರಲ್ಲಾ ಇವರು ನಿಜವಾದ ದೇಶದ್ರೋಹಿಗಳಲ್ಲವೆ? ಇಂಥವರು ಪೊಲೀಸ್ ಇಲಾಖೆಯ ಚುಕ್ಕಾಣಿ ಹಿಡಿದರೆ ಇಲಾಖೆಯ ಆತ್ಮಸ್ಥೈರ್ಯ ಎಲ್ಲಿಗೆ ಇಳಿದೀತು? ಅಜ್ಮಲ್, ಓವೈಸಿಗಳಿಗಿಂತ ಆರ್.ಆರ್. ಪಾಟೀಲ್್ರಂತಹ ಗೃಹ ಸಚಿವ, ಅವರ ನಿಯಂತ್ರಣದಲ್ಲಿರುವ ಅರೂಪ್ ಪಟ್ನಾಯಕ್್ರಂಥ ಹಿಂದೂಗಳೇ ಗಂಡಾಂತರಕಾರಿಯಲ್ಲವೆ? ಒಂದೆಡೆ ಸಂಸದ ರಾಜೀವ್ ಚಂದ್ರಶೇಖರ್ ಅಮರ್ ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನು ಗುರುತುಹಚ್ಚಿಕೊಟ್ಟವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೊಲೀಸರು ಬಂಧಿಸಿದವರನ್ನೂ ಬಿಡುಗಡೆ ಮಾಡಿದ್ದಾರೆ! ಈಗ ಹೇಳಿ, ನಿಜವಾದ ದೇಶದ್ರೋಹಿಗಳು, ದೇಶದ್ರೋಹಿಗಳನ್ನು ಪೋಷಿಸುತ್ತಿರುವವರು ಯಾರು? ಮತಬ್ಯಾಂಕ್ ರಾಜಕಾರಣ ಮಾಡುವ ಇವರು ಹಿಂದು ಮೀರ್ ಸಾದಿಕ್, ಮೀರ್ ಜಾಫರ್್ಗಳಲ್ಲದೇ ಮತ್ತೇನು?
ಇನ್ನು ಅಸಾದುದ್ದೀನ್ ಓವೈಸಿ!
ಒಂದು ವೇಳೆ ಬಾಂಗ್ಲಾ ಮುಸ್ಲಿಮರನ್ನು ವಾಪಸ್ ಕಳುಹಿಸಿದರೆ ಮುಸಲ್ಮಾನ ಯುವಕರ ಮೂಲಭೂತೀಕರಣಕ್ಕೆ ಸಿದ್ಧರಾಗಿ ಎಂದು ಆತ ಆಗಸ್ಟ್ 8ರಂದು ಸಂಸತ್ತಿನಲ್ಲಿ ಇಡೀ ದೇಶಕ್ಕೇ ಧಮಕಿ ಹಾಕುತ್ತಿದ್ದರೆ, ದೇಶದ್ರೋಹಿ ಮಾತುಗಳನ್ನಾಡುತ್ತಿದ್ದರೆ ಹಿಂದು ಸಂಸದರು ಏಕೆ ತುಟಿ ಬಿಚ್ಚದೆ ಕುಳಿತು ಕೊಂಡಿದ್ದರು? ಇಂತಹ ವ್ಯಕ್ತಿಯ ಬೆಂಬಲ ಪಡೆದು ಆಂಧ್ರದಲ್ಲಿ ಹಾಗೂ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್್ಗೆ ನಾಚಿಕೆಯಾಗುವುದಿಲ್ಲವೆ? ಈ ಅಸಾದುದ್ದೀನ್ ಹಾಗೂ ಆತನ ಅಖಿಲ ಭಾರತ ಮಜ್ಲೀಸ್ ಇತ್ತೆಹುದಾಲ್ ಮುಸ್ಲಿಮೀನ್ (AIMIM) ಪಕ್ಷದ ಹಿನ್ನೆಲೆ ಕಾಂಗ್ರೆಸ್್ಗೆ ಗೊತ್ತಿಲ್ಲವೇನು? 1947ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಈ ಪಕ್ಷ ಮಜ್ಲೀಸ್ ಇತ್ತೆಹುದಾಲ್ ಮುಸ್ಲಿಮೀನ್ (MIM)ಆಗಿತ್ತು. ಹೈದರಾಬಾದ್ ನಿಜಾಮ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದಾಗ ಆತನನ್ನು ಬಗ್ಗು ಬಡಿಯಲು ಸರ್ದಾರ್ ಪಟೇಲ್ ಸೇನೆಯನ್ನು ಕಳುಹಿಸಿದರು. ಅಂದು ಇಂಡಿಯನ್ ಆರ್ಮಿ ವಿರುದ್ಧ ಹೋರಾಡಲು ‘ರಝಾಕರ್ ಆರ್ಮಿ’ಯನ್ನು ಕಟ್ಟಿದ್ದೇ ಈ MIM! ಕೊನೆಗೂ ನಿಜಾಮ ಸೋತು ಹೈದರಾಬಾದ್ ಭಾರತದೊಂದಿಗೆ ವಿಲೀನವಾಯಿತು. ಅದರ ಬೆನ್ನಲ್ಲೇ MIM ಮೇಲೆ ನಿಷೇಧ ಹೇರಲಾಯಿತು. 1957ರ ನಂತರ ಅದೇ MIM ಭಾರತಕ್ಕೆ ತನ್ನ ಬದ್ಧತೆ ವ್ಯಕ್ತಪಡಿಸುವ ಸೋಗಿನಲ್ಲಿ ‘ಆಲ್ ಇಂಡಿಯಾ’ ಸೇರಿಸಿಕೊಂಡು AIMIM ಆಯಿತು. ಅಸಾದುದ್ದೀನನ ಅಜ್ಜ ಮೌಲಾನ ಅಬ್ದುಲ್ ವಹಿದ್ ಓವೈಸಿ AIMIM ನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಹೈದರಾಬಾದಿ ಮುಸ್ಲಿಮರನ್ನು ಮತಬ್ಯಾಂಕ್ ಮಾಡಿಕೊಂಡರು. ನಂತರ ಅಸಾದುದ್ದೀನನ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಹಿಡಿತಕ್ಕೆ ಬಂತು. ಈಗ ಅಸಾದುದ್ದೀನ್ ಹಾಗೂ ಆತನ ತಮ್ಮ ಅಕ್ಬರುದ್ದೀನ್ ಅದರ ಚುಕ್ಕಾಣಿ ಹಿಡಿದ್ದಾರೆ ಎಂಬುದನ್ನು ಬ್ಲಾಗರ್ ಪಿಯುಶ್ ‘ಥಿಂಕರ್ಸ್್ಪ್ಯಾಡ್್’ನಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಹೀಗೆ ಹುಟ್ಟಿನ ಮೂಲದಲ್ಲೇ ದೇಶದ್ರೋಹ ಇಟ್ಟುಕೊಂಡಿರುವ ಓವೈಸಿಗಳಿಂದ ದ್ರೋಹವಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಇದೆಲ್ಲಾ ಗೊತ್ತಿದ್ದೂ ಅಸಾದುದ್ದೀನನನ್ನು ಭದ್ರತಾ ಖಾತೆ ಮೇಲಿನ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯನನ್ನಾಗಿ ಮಾಡಿದ್ದಾರಲ್ಲಾ ಈ ಕಾಂಗ್ರೆಸ್ಸಿಗರು ಇದಕ್ಕೇನನ್ನುತ್ತೀರಿ? ಯುಪಿಎ ಸರ್ಕಾರವನ್ನು ಅಕ್ರಮ ಶಿಶು ಎಂದು ಆಡ್ವಾಣಿ ಕರೆದಾಗ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ ಕಾಂಗ್ರೆಸ್ಸಿಗರು ಹಾಗೂ ದೇಶಪ್ರೇಮವನ್ನು ಗುತ್ತಿಗೆ ಪಡೆದಿರುವ ಬಿಜೆಪಿಯವರು ಅಸಾದುದ್ದೀನ್ ಓವೈಸಿ ಸಂಸತ್ತಿನೊಳಗೆ ದೇಶದ್ರೋಹಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸುವಂತೆ ಏಕೆ ಒತ್ತಾಯಿಸಲಿಲ್ಲ?
ನಮ್ಮ ನಾಯಕರ Moral cowardiceಗೆ ಏನನ್ನಬೇಕು?
My own experience but confirms the opinion that the Musalman as a rule is a bully, and the Hindu as rule is a coward ಎಂದಿದ್ದರು ಮಹಾತ್ಮ ಗಾಂಧೀಜಿ!! ಹಿಂದುಗಳ ಹೇಡಿತನಕ್ಕೆ ಮುಸಲ್ಮಾನರನ್ನು ದೂರಿ ಫಲವೇನು? ಅಸಾದುದ್ದೀನ್, ಅಜ್ಮಲ್್ನಂತವರನ್ನು ಬೆಳೆಯಲು ಬಿಟ್ಟಿರುವವರಾರು? 2010ರಲ್ಲಿ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟಾಗ ಅಸಾದುದ್ದೀನನ ತಮ್ಮ ಅಕ್ಬರುದ್ದೀನ್ ‘ರಾಮನಿಗೆ ಜನ್ಮ ನೀಡುವ ಮೊದಲು ಕೌಸಲ್ಯೆ ಎಲ್ಲೆಲ್ಲಿ ಮಲಗಿ ಬಂದಿದ್ದಳು?’ ಎಂದು ಮುಸ್ಲಿಮರನ್ನುದ್ದೇಶಿಸಿ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿದ್ದ. ಇದೇ ಮಾತನ್ನು ಹಿಂದುವೊಬ್ಬ ಅವರ ಧರ್ಮದ ಪೂಜನೀಯರ ಬಗ್ಗೆ ಹೇಳಿದ್ದರೆ ಮುಸಲ್ಮಾನರು ಜೀವಸಹಿತ ಬಿಡುತ್ತಿದ್ದರೆ? ರಾಮಸೇತು ನಾಶದ ವಿವಾದವೆದ್ದಾಗ ‘ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಿಂದ ಡಿಗ್ರಿ ಪಡೆದಿದ್ದ? ಎಂದು ಕರುಣಾನಿಧಿ ಕೇಳಿದಾಗಲೂ ಹಿಂದುಗಳು ಸಿಡಿದೇಳಲಿಲ್ಲ. ಕನಿಷ್ಠ ಜಕಣಾಚಾರಿ ಯಾವ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಕಲಿತಿದ್ದ ಎಂದು ಕೇಳುವ ಧೈರ್ಯವನ್ನೂ ತೋರಲಿಲ್ಲ. ಭಯೋತ್ಪಾದನೆಗಿಂತ ಹಿಂದು ಮೂಲಭೂತವಾದವೇ ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ ಅಮೆರಿಕನ್ನರಿಗೆ ಹೇಳಿರುವುದು ವಿಕಿಲೀಕ್ಸ್್ನಿಂದ ಹೊರಬಿದ್ದಾಗಲೂ ಹಿಂದುಗಳು ನಿದ್ರೆಯಿಂದೇಳಲಿಲ್ಲ. ಮಾನವತಾವಾದಿ ಗಾಂಧೀಜಿಯವರೇ, ಈ ಜಗತ್ತಿನಲ್ಲಿ ದುರ್ಬಲರಿಗೆ ಜಾಗವಿಲ್ಲ, The world has no place for the weakಎಂದಿದ್ದರು! ಅಂತಹ ಗ್ರೀಕ್ ನಾಗರಿಕತೆಯೇ ಉಳಿಯಲಿಲ್ಲ, ಇತಿಹಾಸ ಪ್ರಸಿದ್ಧ ರೋಮನ್ ಸಾಮ್ರಾಜ್ಯವೂ ಉಳಿಯಲಿಲ್ಲ. ಇನ್ನು ಭಾರತದ ಕಥೆ ಭಿನ್ನವಾದೀತೆ? ಹೀಗೆಯೇ ಕುಳಿತರೆ, Gone to the dogs ಅಂತಾರಲ್ಲ ಹಾಗೆ, ಈ ದೇಶ, ಧರ್ಮ ನಾಯಿ, ನರಿ ಪಾಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ, ಅಲ್ವಾ?!
 - ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ