ನನ್ನ ಬ್ಲಾಗ್ ಪಟ್ಟಿ

ಗುರುವಾರ, ಅಕ್ಟೋಬರ್ 4, 2012

ಭಾರತವನ್ನೇ ವಿದೇಶಿ ಕಂಪನಿಗಳ ನಿಯಂತ್ರಣಕ್ಕೆ ಕೊಡುವುದು “ಚಿಲ್ಲರೆ” ವಿಷಯವೇ?


1. ವಾಲ್್ಮಾರ್ಟ್
2. ಕ್ಯಾರ್್ಫೋರ್
3. ಮೆಟ್ರೋ
4. ಟೆಸ್ಕೋ
5. ಲಿಡ್ಲ್್ಸ್ಟಿಫುಂಗ್ ಆ್ಯಂಡ್ ಕಂಪನಿ
6. ದಿ ಕ್ರೋಗರ್ ಕಂಪನಿ
7. ಕಾಸ್ಟ್್ಕೋ
8. ಆಲ್್ಡಿ (Albrecht Discout)
9. ಹೋಮ್ ಡಿಪೋ
10. ಟಾರ್ಗೆಟ್ ಕಾರ್ಪೊರೇಷನ್

ಅಮೆರಿಕ, ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್್ಗಳ ಈ ಕಂಪನಿಗಳು ಕಾಲಿಟ್ಟರೆ ಭಾರತದ ಗ್ರಾಹಕ ಉದ್ಧಾರವಾಗಿಬಿಡುತ್ತಾನೆ, ವಿದೇಶಿ ನೇರ ಬಂಡವಾಳ ಹೂಡಿಕೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತದೆ, ಮಿಲಿಯಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಉದ್ಯೋಗದ ಗುಣಮಟ್ಟದಲ್ಲೂ ಸುಧಾರಣೆಯಾಗುತ್ತದೆ, ಗ್ರಾಹಕರಿಗೆ ಅಗಾಧ ಆಯ್ಕೆಗಳು ಲಭ್ಯವಾಗುತ್ತವೆ, ಬೆಲೆಯಲ್ಲಿ ಕಡಿತವುಂಟಾಗುತ್ತದೆ, ಸಣ್ಣಪುಟ್ಟ ಉದ್ಯಮಿಗಳಿಗೂ ವ್ಯಾಪಾರ ಗುತ್ತಿಗೆಗಳು ದೊರೆಯುತ್ತವೆ, ಕಾರ್ಯಕ್ಷಮತೆಯಲ್ಲೂ ಸುಧಾರಣೆಯಾಗುತ್ತದೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ತೀವ್ರ ಪ್ರಗತಿಯುಂಟಾಗುತ್ತದೆ, ಚಿಲ್ಲರೆ ಬಿಕರಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಜಾರಿಯಾಗುತ್ತದೆ, ಸರಕು ಸಾಗಣೆ, ಶೈತ್ಯಾಗಾರ ಕ್ಷೇತ್ರದಲ್ಲಿ ಬದಲಾವಣೆ ಕಂಡುಬರುತ್ತದೆ.
ಕಳೆದ ವಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ. 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್್ಡಿಐ) ಕೇಂದ್ರ ಸಂಪುಟ ಅಸ್ತು ನೀಡಿದ ಮೇಲೆ ಈ ರೀತಿಯ ಮಾತುಗಳು ಕೇಳಿಬರುತ್ತಿವೆ. ಒಬ್ಬ ರೈತನಿಗೆ ತನ್ನ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಹಾಗೂ ದಲ್ಲಾಳಿಗಳ ತಲೆನೋವಿಲ್ಲದೆ ಸೂಕ್ತ ಬೆಲೆ ಸಿಗುವುದಾದರೆ ಏಕೆ ಬೇಡವೆನ್ನಬೇಕು? ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆಂದರೆ ಒಳ್ಳೆಯ ಬೆಳವಣಿಗೆಯೇ ಅಲ್ಲವೇ? ಅಮೆರಿಕದಲ್ಲಿವೆ, ಯೂರೋಪ್್ನಾದ್ಯಂತ ಇವೆ, ಅಲ್ಲೇನು ರೈತರಿಲ್ಲವಾ? ಅವರೆಲ್ಲ ಹಾಳಾಗಿ ಹೋಗಿದ್ದಾರೇನು ಎಂಬ ವಾದವನ್ನೂ ಮುಂದಿಡಲಾಗುತ್ತಿದೆ. ಹಾಗಾದರೆ ಇದೆಲ್ಲಾ ನಿಜವಾ? ಇವರ ಮಾತುಗಳ ಮೇಲೆ ನಿಜಕ್ಕೂ ವಿಶ್ವಾಸವಿಡಬಹುದಾ? ಒಂದು ವೇಳೆ ವಾಲ್ ಮಾರ್ಟ್, ಟೆಸ್ಕೋ, ಕ್ಯಾರ್್ಫೋರ್್ನಂತಹ ಸೂಪರ್, ಹೈಪರ್ ಮಾರ್ಕೆಟ್್ಗಳು ಬಂದರೆ ರೈತರಿಗೆ ಯೋಗ್ಯ ಬೆಲೆ, ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕು ಸಿಗುತ್ತವಾ? ಈ ವಿಷಯ ಅಷ್ಟು ಸುಲಭಕ್ಕೆ ಅರ್ಥವಾಗುವಂಥದ್ದೆ? ಇವುಗಳು ಬರುವುದರಿಂದ ಯಾವ ಅಪಾಯಗಳೂ ಇಲ್ಲವೆ? ದೈತ್ಯ ವಿದೇಶಿ ಕಂಪನಿಗಳು ಚಿಲ್ಲರೆ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಟ್ಟರೆ ದೇಶಾದ್ಯಂತ ಇರುವ ಸಾಮಾನ್ಯ ವ್ಯಾಪಾರಿಗಳ ಗತಿಯೇನು? 15 ರಾಷ್ಟ್ರಗಳಲ್ಲಿ 6,500 ಸ್ಟೋರ್್ಗಳನ್ನು ಹೊಂದಿರುವ ವಾಲ್-ಮಾರ್ಟ್ ಭಾರತೀಯ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಹಾಳುಗೆಡವದೇ ಇದ್ದೀತೆ?
ಕೃಷಿ ಕ್ಷೇತ್ರವನ್ನು ಬಿಟ್ಟರೆ ದೇಶದ ಅತಿದೊಡ್ಡ ಉದ್ಯೋಗದಾತರೆಂದರೆ ಚಿಲ್ಲರೆ ಮಾರಾಟ ಕ್ಷೇತ್ರ. Euromonitor длVкр Pricewaterhouse ಪ್ರಕಾರ ಭಾರತದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಜತೆಗೆ ಗೂಡಂಗಡಿ ಹೊತ್ತು ಮಾರುವವರು, ನೂಕುವ ಗಾಡಿಗಳ ಸಂಖ್ಯೆಯೂ ಸೇರಿದರೆ 3 ಕೋಟಿ ಮಾರಾಟಗಾರರಿದ್ದಾರೆ. ನಮ್ಮಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರವೆಂದರೆ ಇವರೆಲ್ಲರೂ ಸೇರುತ್ತಾರೆ. ದೇಶದ ಕಾರ್ಮಿಕ ವರ್ಗದಲ್ಲಿ ಶೇ.10ರಷ್ಟು ಪ್ರಮಾಣ ಈ ಕ್ಷೇತ್ರದ್ದಾಗಿದೆ. ಆದರೆ ವಾರ್ಷಿಕ 250 ಶತಕೋಟಿ ಡಾಲರ್ ವಹಿವಾಟು ನಡೆಸುವ ಈ ಕ್ಷೇತ್ರದ ಮೇಲೆ ದೈತ್ಯ ಕಂಪನಿಗಳು ಕಣ್ಣುಹಾಕಿವೆ. ಒಂದು ವೇಳೆ ಚಿಲ್ಲರೆ ವ್ಯಾಪಾರದಲ್ಲಿನ ಶೇ. 30ರಷ್ಟು ವಹಿವಾಟು ದೈತ್ಯ ಕಂಪನಿಗಳ ಪಾಲಾದರೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಚೀನಾ ಹಾಗೂ ಇತರ ರಾಷ್ಟ್ರಗಳಿಂದ ಹರಿದುಬರಲಿರುವ ಅಗ್ಗದ ಸರಕು-ಸಾಮಾನುಗಳು ನಮ್ಮ ಉತ್ಪಾದನಾ ಕ್ಷೇತ್ರಕ್ಕೆ ಮಾರಕ ಹೊಡೆತ ನೀಡುವ ಬಗ್ಗೆಯೂ ಅನುಮಾನ ಬೇಡ. ಈಗಾಗಲೇ ಮಹಾರಾಷ್ಟ್ರ, ಕರ್ನಾಟಕ ಮತ್ತಿತರ ಕಡೆಗಳಲ್ಲಿ ಸ್ಥಾಪನೆಯಾಗಿರುವ ಜರ್ಮನಿಯ ಮೆಟ್ರೊ ಹಾಗೂ ದಕ್ಷಿಣ ಆಫ್ರಿಕಾದ ಶಾಪ್್ರೈಟ್ ಚೆಕರ್್ನಂತಹ ಕಂಪನಿಗಳು ಎಂತಹ ಅನಾಹುತ ಮಾಡಬಲ್ಲವು ಮತ್ತು ಒಳನುಸುಳಿದ ನಂತರ ಯಾವ ರೀತಿ ಕಾನೂನನ್ನು ಧಿಕ್ಕರಿಸಿ ವಂಚನೆಯಲ್ಲಿ ತೊಡಗಬಲ್ಲವು ಎಂಬುದೂ ಸಾಬೀತಾಗಿದೆ. ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ಒಂಬತ್ತು ತಿಂಗಳುಗಳಲ್ಲಿ 2.5 ‘Loyalty Card’ಗಳನ್ನು ವಿತರಿಸಿದ ಮೆಟ್ರೊ ವ್ಯಾಪಾರಿಗಳಿಗೆ ಮಾತ್ರ ಸಗಟು ವ್ಯಾಪಾರ ಮಾಡಬೇಕೆಂಬ ನಿಯಮವನ್ನು ಉಲ್ಲಂಘಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾರಂಭಿಸಿದೆ. ಲಾಯಲ್ಟಿ ಕಾರ್ಡ್್ಗಳೆಂದರೆ ಇಂತಿಷ್ಟು ಖರೀದಿ ಮಾಡಿದರೆ ಇಷ್ಟು ಬೋನಸ್ ಪಾಯಿಂಟ್ ಸಿಗುತ್ತದೆ. ಒಬ್ಬನೇ ವ್ಯಾಪಾರಿಯು ಖರೀದಿ ಮಾಡಿದಲ್ಲಿ ಕಾರ್ಡ್ ತೋರಿಸಿ ಇಷ್ಟು ಪರ್ಸೆಂಟ್ ರಿಯಾಯಿತಿ ಪಡೆಯಬಹುದು. ಹೀಗೆ ವೈದ್ಯರು, ವಕೀಲರು, ಸಾಫ್ಟ್್ವೇರ್ ಕ್ಷೇತ್ರದ ಉದ್ಯೋಗಿಗಳು, ವಾಸ್ತುಶಿಲ್ಪಿಗಳು, ಚಾರ್ಟರ್ಡ್ ಅಕೌಂಟೆಂಟ್ಸ್ ಮುಂತಾದ ವ್ಯಾಪಾರಿಗಳಲ್ಲದ ವ್ಯಕ್ತಿಗಳಿಗೂ ಲಾಯಲ್ಟಿ ಕಾರ್ಡ್ ನೀಡಲಾಗಿದೆ. ಇದರಿಂದ ಜನರಿಗೆ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆ ಎಂದು ಯೋಚಿಸುವ ಬದಲು ಮುಂದಾಗುವ ಅನಾಹುತವನ್ನು ಊಹಿಸಿ ಯಾವುದೋ ವಿದೇಶಿ ಕಂಪನಿ ನಮ್ಮ ಸಂಪನ್ಮೂಲವನ್ನು ದೋಚುವ ಜತೆಗೆ ಪಕ್ಕದ ಮನೆಯ ವ್ಯಾಪಾರಿಯನ್ನು ಬೀದಿಪಾಲು ಮಾಡುತ್ತದೆ. ಆ ಬೀದಿಪಾಲಾಗುವ ಕುಟುಂಬ ನಿಮ್ಮದೋ, ನಿಮ್ಮ ನೆಂಟರಿಷ್ಟರಲ್ಲೋ ಆದರೆ ಎಂದು ಯೋಚಿಸಿದಾಗ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಮೆಟ್ರೊದಂತಹ ಕಂಪನಿಗಳಿಂದಾಗುವ ಪ್ರತಿಕೂಲ ಪರಿಣಾಮಗಳು ಕಣ್ಣಿಗೆ ಕಾಣದಿರಬಹುದು. ಆದರೆ ಅನುಭವಕ್ಕೆ ಬಂದೇ ಬರುತ್ತದೆ.
ಹಾಗಾಗಿಯೇ ವಾಲ್-ಮಾರ್ಟ್, ಟೆಸ್ಕೊ, ಕೇರ್್ಫೋರ್, ಮೆಟ್ರೊ ಮುಂತಾದ ವಿದೇಶಿ ಹಾಗೂ ರಿಲಯನ್ಸ್, ಟಾಟಾ, ಪ್ಯಾಂಟಲೂನ್, ಬಿಗ್್ಬಝಾರ್್ನಂತಹ ಭಾರತೀಯ ಕಂಪನಿಗಳ ಬಗ್ಗೆ ಆತಂಕಪಡಬೇಕಾಗಿದೆ. ಜತೆಗೆ ಈ ಕಂಪನಿಗಳು ರಾಜ್ಯದ ಎಪಿಎಂಸಿಯಂತಹ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆಯೂ ಇದೆ. ರೈತರಿಂದ ನೇರವಾಗಿ ಖರೀದಿ ಮಾಡಲು ಮುಂದಾಗುವ ಕಂಪನಿಗಳು, ಕೊನೆಗೆ ತನಗೇ ಮಾರಾಟ ಮಾಡಬೇಕು ಅನ್ನುತ್ತವೆ. ನಂತರ ತಾನು ನಿಯಮಿತವಾಗಿ ಖರೀದಿ ಮಾಡುವುದರಿಂದ ಇಷ್ಟೇ ಬೆಲೆಗೆ ಕೊಡು ಎಂದು ರೈತರನ್ನು ಒತ್ತಾಯಿಸುತ್ತದೆ. ಹೀಗೆ ಕಂಪನಿಗಳ ಮನೊಪೊಲಿ ಪ್ರಾರಂಭವಾಗುತ್ತದೆ. ಸ್ಥಳೀಯ ರೈತರು ತಿರುಗಿಬಿದ್ದರೆ ವಿದೇಶಿ ಉತ್ಪನ್ನಗಳನ್ನು ತಂದು ಸುರಿಯುವ ಮೂಲಕ ರೈತರಿಗೆ ಕೊಡಲಿಪೆಟ್ಟು ನೀಡುತ್ತದೆ. ಇಷ್ಟಕ್ಕೂ ವಾಲ್್ಮಾರ್ಟ್ ಮಾರಾಟ ಮಾಡುವ 30 ಪರ್ಸೆಂಟ್ ಸರಕುಗಳು ಚೀನಾದ ಉತ್ಪನ್ನಗಳಾಗಿವೆ. ಮಿಗಿಲಾಗಿ ಅಂತಾರಾಷ್ಟ್ರೀಯ ಕಂಪನಿಗಳು Predatory Pricing ಮೂಲಕ ಚಿಲ್ಲರೆ ವ್ಯಾಪಾರಿಗಳನ್ನು ಕತ್ತುಹಿಸುಕಿ ಸಾಯಿಸುವುದಂತೂ ನಿಶ್ಚಿತ. ಅಂದರೆ ಹೆಚ್ಚು ದೊಡ್ಡ ಅಂಗಡಿಗಳನ್ನು ಸ್ಥಾಪಿಸಿ, ಭಾರೀ ರಿಯಾಯಿತಿ ಕೊಡುತ್ತವೆ. ಒಂದು ಖರೀದಿ ಮಾಡಿದರೆ ಇನ್ನೊಂದು ಉಚಿತ ಎನ್ನುತ್ತವೆ. ಆಗ ಚಿಲ್ಲರೆ ವ್ಯಾಪಾರಿಗಳ ಗತಿಯೇನು?
‘ಬುಲ್ಡೋಜರ್ ಸಂಸ್ಕೃತಿ’ ಅನ್ನೋದು ಇದನ್ನೇ.
ನೂರು ಜನ ಮಾಡುವ ಕೆಲಸವನ್ನು ಒಂದೇ ಬುಲ್ಡೋಜರ್ ಮಾಡುತ್ತದೆ ಅಂತ ನಾವು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡಬಹುದು. ಇತ್ತ ಲಕ್ಷಾಂತರ ರೂ. ಬಂಡವಾಳ ಹಾಕಿ ಬುಲ್ಡೋಜರ್ ಖರೀದಿ ಮಾಡಿದ ಮಾಲೀಕನ ಕಿಸೆ ಕೂಡ ತುಂಬುತ್ತದೆ. ಆದರೆ ಆ ಬುಲ್ಡೋಜರ್್ನಿಂದ ನೂರು ಕುಟುಂಬಗಳ ರೊಟ್ಟಿಗೇ ಕುತ್ತು ಬರುತ್ತದೆ. ಬುಲ್ಡೋಜರ್ ಕೂಲಿ ಕಾರ್ಮಿಕರನ್ನು ನಾಯಿಪಾಡು ಮಾಡಿದರೆ, ವಾಲ್-ಮಾರ್ಟ್್ನಂಥ ಕಂಪನಿಗಳು ಆಗೇ ದುಕಾನ್, ಪೀಛೆ ಮಕಾನ್ (ಮುಂದೆ ಅಂಗಡಿ, ಹಿಂದೆ ಮನೆ) ಎಂಬಂತಿರುವ ನಮ್ಮ ಚಿಲ್ಲರೆ ವ್ಯಾಪಾರಿಗಳ ವೃತ್ತಿ ಕಸಿದುಕೊಂಡು ಬೀದಿಗೆ ಹಾಕುತ್ತವಷ್ಟೆ. ಸೂಪರ್, ಹೈಪರ್ ಮಾರ್ಕೆಟ್್ಗಳಲ್ಲಿ ತರಕಾರಿ ತೆಗೆದುಕೊಂಡರೆ ಅದರ ಮಾಲೀಕನೊಬ್ಬನೇ ಉದ್ಧಾರವಾಗುತ್ತಾನೆ. ಸಂಪನ್ಮೂಲ ಕೆಲವೇ ವ್ಯಕ್ತಿಗಳ ಬಳಿ ಕ್ರೋಡೀಕರಣವಾಗುತ್ತದೆ. ಆದರೆ ಸಾಮಾನ್ಯ ತರಕಾರಿ ಅಂಗಡಿಯಲ್ಲಿ ಖರೀದಿ ಮಾಡಿದರೆ ಲಕ್ಷಾಂತರ ಕುಟುಂಬಗಳು ಉಸಿರಾಡುತ್ತವೆ.
ಅಭಿವೃದ್ಧಿ ಅಂದರೆ ಅಂಬಾನಿ, ಮಿತ್ತಲ್, ಬಿರ್ಲಾ, ಟಾಟಾ, ಕಿಶೋರ್ ಬಿಯಾನಿಗಳಂಥವರ ಸಂಖ್ಯೆಯನ್ನು ಹೆಚ್ಚು ಮಾಡುವುದೂ ಅಲ್ಲ. ವಾಲ್-ಮಾರ್ಟ್, ಮೆಟ್ರೊ, ಕೇರ್್ಪೋರ್್ನಂತಹ ಗಿಡುಗಗಳನ್ನು ಬೆಳೆಸುವುದೂ ಅಲ್ಲ ಏಕೆ? ಹೇರ್್ಪಿನ್, ಕ್ಲಿಪ್ ಮಾರುವವರಿಂದ ಟೈಲರ್, ಕಿರಾಣಿ ಅಂಗಡಿ ಮಾಲೀಕರವರೆಗೆ ಎಲ್ಲರಿಗೂ ಬದುಕುವ ಹಕ್ಕಿದೆ. ಇಂದು ವಿದ್ಯೆಯ ಬಲದಿಂದಾಗಿ ಭಾರತೀಯ ಮಧ್ಯಮವರ್ಗ ಅಮೋಘ ಏಳಿಗೆ ಕಾಣುತ್ತಿದ್ದು ಅದರ ಲಾಭ ಇಂತಹ ಸಾಮಾನ್ಯ ಜನರಿಗೂ ದಕ್ಕಬೇಕು. ಆದರೆ ಎಲ್ಲವನ್ನೂ ಬಾಚಿಕೊಳ್ಳಲು retail sectorಗೂ ಕಾಲಿಡುತ್ತಿರುವ ಉದ್ಯಮಿಗಳಿಂದಾಗಿ ಅರ್ಬನ್ ನಕ್ಸಲಿಸಮ್ ಆರಂಭವಾದರೂ ಆಶ್ಚರ್ಯವಿಲ್ಲ. ಅಷ್ಟಕ್ಕೂ ನಿಮ್ಮ ಮನೆಯ ಹತ್ತಿರದ Friendly ವ್ಯಾಪಾರಿಗೆ ಅಂಗಡಿ ಅನ್ನೋದು ಕೋಟಿ ಕೋಟಿ ಕಮಾಯಿ ಮಾಡುವ ದಂಧೆಯಲ್ಲ, ಹೊಟ್ಟೆಪಾಡಿನ ಮಾರ್ಗ.
ಇಷ್ಟಾಗಿಯೂ ಸರ್ಕಾರವೇಕೆ ಚಿಲ್ಲರೆ ಮಾರಾಟ ಕ್ಷೇತ್ರದ ಮೇಲೆ ವಿದೇಶಿ ಕಂಪನಿಗಳು ಏಕಸ್ವಾಮ್ಯ ಸಾಧಿಸಲು ಅವಕಾಶ ಮಾಡಿಕೊಡುವ ಮೂಲಕ ಆ ಕ್ಷೇತ್ರವನ್ನೇ ನಂಬಿಕೊಂಡಿರುವ 1.9 ಕೋಟಿ ಸಣ್ಣ ವ್ಯಾಪಾರಿಗಳ ಬದುಕನ್ನೇ ಕಿತ್ತುಕೊಳ್ಳಲು ಹೊರಟಿದೆ? ಪ್ರಸ್ತುತ ನನೆಗುದಿಗೆ ಬಿದ್ದಿರುವ 1.85 ಲಕ್ಷ ಕೋಟಿ ಮೌಲ್ಯದ ಕಲ್ಲಿದ್ದಲು ಹಗರಣ, ಥೋರಿಯಂ ಹಗರಣಗಳ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ. 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ನಿರ್ಧಾರ ಕೈಗೊಂಡಿದೆ ಎಂಬುದು ಸ್ಪಷ್ಟ. ಆದರೆ ಇದರಿಂದಾಗುವ ಅಪಾಯವೇನು ಗೊತ್ತೇ? India’s organized retail sector is 15% of our GDP.Add unorganised and it could rise to 20/25% of our GDP. Whoever controlles it controlles India. ಹಾಗಂತ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಬಲವಾದ ಧ್ವನಿಯೆತ್ತಿರುವ ಶೇಖರ್ ಕಪೂರ್ ಟ್ವೀಟ್ ಮಾಡಿದ್ದಾರೆ. ಅವರ ಮಾತಿನ ಅರ್ಥವಿಷ್ಟೆ! ಪ್ರಸ್ತುತ ಸಂಘಟಿತ ಚಿಲ್ಲರೆ ಮಾರುಕಟ್ಟೆ ವಹಿವಾಟು ದೇಶದ ಒಟ್ಟಾರೆ ಜಿಡಿಪಿಯ ಶೇ. 15ರಷ್ಟಾಗುತ್ತದೆ. ಅದಕ್ಕೆ ಅಸಂಘಟಿತ ಚಿಲ್ಲರೆ ಮಾರುಕಟ್ಟೆ ಕ್ಷೇತ್ರವನ್ನೂ ಸೇರಿಸಿದರೆ ಅದು ನಮ್ಮ ಒಟ್ಟಾರೆ ಜಿಡಿಪಿಯ ಶೇ. 20-25ಕ್ಕೆ ತಲುಪುತ್ತದೆ. ಯಾರು ಈ 25 ಪರ್ಸೆಂಟನ್ನು ನಿಯಂತ್ರಿಸುತ್ತಾರೋ ಅವರು ಭಾರತವನ್ನೇ ನಿಯಂತ್ರಿಸಲಿದ್ದಾರೆ!!
ನಾವು ಆತಂಕಪಡುತ್ತಿರುವುದು ಇಂಥದ್ದೊಂದು ಸಾಧ್ಯಾಸಾಧ್ಯತೆಯ ಬಗ್ಗೆಯೇ. ಒಂದು ವೇಳೆ ಈ ಆತಂಕ ನಿಜವಾಗಿಬಿಟ್ಟರೆ, ನಮ್ಮ ಮಾರುಕಟ್ಟೆಗಳ ಮೂಲಕ ಭಾರತವನ್ನು ವಿದೇಶಿ ಕಂಪನಿಗಳು ನಿಯಂತ್ರಣಕ್ಕೆ ತೆಗೆದುಕೊಂಡರೆ ಗತಿಯೇನು?
ಯೋಚಿಸಿ… 
- ಪ್ರತಾಪ ಸಿಂಹ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ