ನನ್ನ ಬ್ಲಾಗ್ ಪಟ್ಟಿ

ಶನಿವಾರ, ಜುಲೈ 31, 2010

ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ಜಿಹಾದ್’!!

ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ!

“ಲವ್ ಜಿಹಾದ್” ಅಥವಾ “ರೋಮಿಯೋ ಜಿಹಾದ್” ಎಂಬ ಕಾರ್ಯಸೂಚಿ ನಿಜಕ್ಕೂ ನಡೆ ಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? “ಲವ್ ಜಿಹಾದ್”ಗೂ ನಕಲಿ ನೋಟು, ಮಾದಕವಸ್ತು ಕಳ್ಳಸಾಗಣೆ ಜಾಲ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೂ ಸಂಬಂಧ, ಸಂಪರ್ಕ ಇದೆಯೇ?

ಹಾಗಂತ ಕೇರಳ ಹೈಕೋರ್ಟ್ ಪ್ರಶ್ನಿಸಿದೆ!

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2009, ಸೆಪ್ಟೆಂಬರ್ 30ರಂದು ನಿರ್ದೇಶನ ನೀಡಿರುವ ಕೇರಳ ಹೈಕೋರ್ಟ್, ಕೂಲಂಕಷ ತನಿಖೆ ನಡೆಸಿ, ಈ ಮೇಲಿನ ಆಯಾಮಗಳ ಬಗ್ಗೆ ದೃಷ್ಟಿಹಾಯಿಸಿ ಮೂರು ವಾರಗಳೊಳಗೆ ತನಗೆ ವರದಿಯೊಪ್ಪಿಸ ಬೇಕೆಂದು ಆದೇಶ ನೀಡಿದೆ.
ಅದಕ್ಕೂ ಕಾರಣವಿದೆ.

ಕೇರಳದ ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಅವರ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಪತ್ತೆ ಮಾಡಲಾಗಲಿಲ್ಲ. ಕೊನೆಗೆ ಹೈಕೋರ್ಟ್‌ನ ಕದತಟ್ಟಿದ ಅವರು ‘ಹೇಬಿಯಸ್ ಕಾರ್ಪಸ್’(ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ) ಮೊಕದ್ದಮೆ ಹಾಕಿದರು. ಅನಿವಾರ್ಯತೆಗೆ ಸಿಲುಕಿದ ಪೊಲೀಸರು ಕಾರ್ಯಪ್ರವೃತ್ತರಾಗಲೇಬೇಕಾಯಿತು. ಇಬ್ಬರನ್ನೂ ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಸತ್ಯ ತೆರೆದು ಕೊಳ್ಳುತ್ತಾ ಹೋಯಿತು. ಈ ಹಿಂದೆಲ್ಲ ವರ್ಷದ ಕೆಲವು ನಿರ್ದಿಷ್ಟ ದಿನಗಳಂದು ಇಂಟರ್‌ನೆಟ್ ಮೂಲಕ ಕಂಪ್ಯೂಟರ್‌ಗಳಿಗೆ ಬಗ್(ವೈರಸ್)ಗಳನ್ನು ಹರಿಬಿಡುತ್ತಿದ್ದುದನ್ನು ನೀವು ಕೇಳಿರಬಹುದು ಅಥವಾ ನಿಮಗೂ ಅನುಭವಕ್ಕೆ ಬಂದಿರಬಹುದು. ಜನವರಿ 1, ಫೆಬ್ರವರಿ 14 ಹೀಗೆ ಕೆಲವು ದಿನಗಳಂದು ಇಂಟರ್‌ನೆಟ್ ಕನೆಕ್ಟ್ ಮಾಡಿಕೊಳ್ಳಲು ಜನ ಹೆದರುತ್ತಿದ್ದರು, ಆ ದಿನಗಳಂದು ಇಂಟರ್‌ನೆಟ್ ಮುಟ್ಟಬೇಡಿ ಎಂದು ಮೊದಲೇ ಸಂದೇಶಗಳನ್ನು ರವಾನಿಸುವುದನ್ನು ಕಾಣಬಹುದಿತ್ತು. ಫೆಬ್ರವರಿ 14ರಂದು ‘ಲವ್ ಬಗ್’ ಬಂದೇ ಬರುತ್ತದೆ, ನಿಮ್ಮ ಕಂಪ್ಯೂಟರ್ ಅನ್ನು ಹಾಳುಮಾಡಿಯೇ ಮಾಡುತ್ತದೆ ಎಂಬ ನಂಬಿಕೆಯಿತ್ತು. ಪ್ರಸ್ತುತ ಕೇರಳದಲ್ಲಿ “ರೋಮಿಯೋ ಜಿಹಾದ್”, “ಲವ್ ಜಿಹಾದ್” ಎಂಬ ವೈರಸ್‌ಗಳು ಓಡಾಡುತ್ತಿವೆ! ಈ ವೈರಸ್‌ಗಳ ವೈಶಿಷ್ಟ್ಯವೇನೆಂದರೆ ಅವು ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡುವುದಿಲ್ಲ, ಅಮಾಯಕ ಹಿಂದೂ ಮತ್ತು ಕ್ರೈಸ್ತ ಯುವತಿಯರ ಮನಸ್ಸಿನ ಮೇಲೆ “ಪ್ರೀತಿ”ಯ ಹೆಸರಿನಲ್ಲಿ ದಾಳಿ ಮಾಡುತ್ತಿವೆ! ಮಲೆಯಾಳಿ ಮುಸ್ಲಿಮರಲ್ಲಿನ ಒಂದು ವರ್ಗ ತಮ್ಮ ಸಮುದಾಯದ ಸುಂದರ ಯುವಕರನ್ನು ಛೂ ಬಿಟ್ಟಿದೆ. ಆ ಯುವಕರು ಮಾಡಲು ಉದ್ಯೋಗವಿಲ್ಲದ್ದರೂ, ಸರಿಯಾಗಿ ನಾಲ್ಕು ಅಕ್ಷರ ಕಲಿಯದಿದ್ದರೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಅಡ್ಡಾಡುತ್ತಿರುತ್ತಾರೆ. ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಕ ಅವರ ಹಿಂದೂ-ಕ್ರೈಸ್ತ ಸ್ನೇಹಿತೆಯರ ಪರಿಚಯ ಮಾಡಿಕೊಳ್ಳುತ್ತಾರೆ, ಚೆನ್ನಾಗಿ ಹಣ ಖರ್ಚು ಮಾಡುತ್ತಾರೆ, ನಿಧಾನವಾಗಿ ಪ್ರೀತಿಯ ಗಾಳ ಹಾಕುತ್ತಾರೆ. ಬಲೆಗೆ ಬಿದ್ದ ಮೇಲೆ ವಿವಾಹದ ನೆಪದಲ್ಲಿ ಇಸ್ಲಾಂಗೆ ಮತಾಂತರ ಮಾಡುತ್ತಾರೆ, ತದನಂತರ ಧರ್ಮಾಂಧತೆಯನ್ನು ತಲೆಗೆ ತುಂಬಿ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹುನ್ನಾರ ರೂಪಿಸಿದ್ದಾರೆ!

ಸಿರಾಜುದ್ದೀನ್ ಹಾಗೂ ಶೇನ್‌ಶಾ ಮಾಡಿದ್ದೂ ಅದನ್ನೇ.

ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಅನ್ಯಧರ್ಮೀಯ ವಿದ್ಯಾರ್ಥಿನಿಯರ ಜತೆ ಮೊದಲು ಸ್ನೇಹದ ನಾಟಕವಾಡಿ ದರು. ಕ್ರಮೇಣ ಪ್ರೀತಿಯನ್ನು ತಲೆಗೆ ತುಂಬಿದರು. ಅವರಿ ಬ್ಬರೂ ಒಂದು ದಿನ ಸಿರಾಜುದ್ದೀನ್ ಹಾಗೂ ಶೇನ್ ಶಾ ಜತೆ ಪಲಾಯನ ಮಾಡಿದರು. ಒಬ್ಬಳನ್ನು ವಿವಾಹ ಮಾಡಿಕೊಂಡು ಇಚ್ಛೆಗೆ ವಿರುದ್ಧವಾಗಿ ಇಸ್ಲಾಂಗೆ ಮತಾಂತರ ಮಾಡಲಾಯಿತು. ಆತನ ಸ್ನೇಹಿತನೊಬ್ಬನನ್ನು ವಿವಾಹವಾಗುವಂತೆ ಹಾಗೂ ಇಸ್ಲಾಂಗೆ ಮತಾಂತರಗೊಳ್ಳುವಂತೆ ಇನ್ನೊಬ್ಬಳ ಮೇಲೆ ಒತ್ತಡ ಹೇರಲಾಯಿತು. ಹೈಕೋರ್ಟ್ ಮುಂದೆ ಹಾಜರುಪಡಿಸಿದಾಗ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಗೋಳಿನ ಕಥೆಯನ್ನು ತೋಡಿಕೊಂಡಿದ್ದಾರೆ. ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಬಲವಂತಪಡಿಸಿದ್ದನ್ನು ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ. ನಮ್ಮನ್ನು ಅಪಹರಿಸಿ ಮಲಪ್ಪುರಂಗೆ ಕರೆದೊಯ್ದು ಮತಾಂತರ ಮಾಡಲು ಪ್ರಯತ್ನಿಸಲಾಯಿತು ಎಂದು ಹೇಳಿದ್ದಾರೆ. ದಕ್ಷಿಣ ಭಾರತ, ಅದರಲ್ಲೂ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಕ್ರಿಯಾಶೀಲವಾಗಿರುವ ಮಲೆಯಾಳಿ ಮುಸ್ಲಿಮರ(ಬ್ಯಾರಿ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಎಂಬ ಸಂಘಟನೆಯ ಮಹಿಳಾ ವಿಭಾಗದ ಸಂಘಟಕನೊಬ್ಬ ಮತಾಂತರ ಮಾಡಲು ಪ್ರಯತ್ನಿಸಿದ ಎಂದು ದೂರಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ‘ಕ್ಯಾಂಪಸ್ ಫ್ರಂಟ್’ ಎಂಬ ವಿದ್ಯಾರ್ಥಿ ಸಂಘಟನೆ ಇಂತಹ ಕೆಲಸದಲ್ಲಿ ತೊಡಗಿದೆ ಎಂಬ ಬಲವಾದ ಅನುಮಾನಗಳು ಕಾಡಲಾರಂಭಿಸಿವೆ. ಇದು ಕೇವಲ ಒಂದು ಘಟನೆಯಲ್ಲ. ಕಳೆದ ಮೂರು ವರ್ಷಗಳಲ್ಲಿ ಇಂತಹ ಸಾವಿರಾರು ಘಟನೆಗಳು ಕೇರಳದಲ್ಲಿ ನಡೆದಿವೆ!! ಪೊಲೀಸ್ ದೂರು ಪ್ರಕರಣಗಳ ಪಟ್ಟಿಯನ್ನು ತರಿಸಿಕೊಂಡು ನ್ಯಾಯಾಲಯ ಪರಾಮರ್ಶೆ ನಡೆಸಿದೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡೇ, ತನಿಖೆ ನಡೆಸಿ ವರದಿಯೊಪ್ಪಿಸುವಂತೆ ಕೇರಳ ಹೈಕೋರ್ಟ್ ಪೊಲೀಸ್ ಮಹಾನಿರ್ದೇಶಕರಿಗೆ ಮೂರು ವಾರಗಳ ಗಡುವು ನೀಡಿದೆ. ಜತೆಗೆ ಮೂಲತಃ ಕೊಚ್ಚಿ ಮತ್ತು ತಿರುವನಂತಪುರಂನವರಾದ ಆ ವಿದ್ಯಾರ್ಥಿನಿಯರು ಪೋಷಕರ ಜತೆ ಮನೆಗೆ ತೆರೆಳಲು ಅನುಮತಿ ನೀಡಿದೆ. “ಸಂವಿಧಾನದ ೨೫ನೇ ವಿಧಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಅಂದಮಾತ್ರಕ್ಕೆ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವಂತೆ ಇನ್ನೊಬ್ಬರ ಮೇಲೆ ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ” ಎಂದು ನ್ಯಾಯಾಲಯ ಹೇಳಿದೆ. ಹಲವಾರು ಪ್ರಕರಣಗಳಲ್ಲಿ “ಲವ್ ಜಿಹಾದ್” ನಡೆದಿರುವುದಕ್ಕೆ ಸ್ಪಷ್ಟ ಸಂಕೇತಗಳೂ ಕಾಣುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಹೇಳಿದ್ದಾರೆ.

ಈ ಮಧ್ಯೆ ಆಮಿಷ, ಬಲವಂತದ ಮೂಲಕ ಹುಡುಗಿ ಯರನ್ನು ಪುಸಲಾಯಿಸುವ ಹಾಗೂ ಪ್ರೇಮದ ಖೆಡ್ಡಾದಲ್ಲಿ ಬೀಳಿಸುವ ತಂತ್ರದ ವಿರುದ್ಧ “ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕಾನ್ಫೆರೆನ್ಸ್”(ಅಖಿಲ ಕೇರಳ ಕ್ಯಾಥೋಲಿಕ್ ಬಿಶಪ್ಪರ ಸಂಘಟನೆ) ಮೊನ್ನೆ ಅಕ್ಟೋಬರ್ 13ರಂದು ಪ್ರಚಾರಾಂದೋಲನವೊಂದನ್ನು ಆರಂಭಿಸಿದೆ. “ಲವ್ ಜಿಹಾದಿ”ಗಳ “Holy war of love” ಬಗ್ಗೆ ಹೆಣ್ಣುಹೆತ್ತಿರುವ ಪೋಷಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ. ಅದರಲ್ಲೂ ಕ್ರೈಸ್ತರ ಪತ್ರಿಕೆಯಾದ ‘ಜಾಗ್ರತಾ’ದಲ್ಲಿ ದೊಡ್ಡ ಲೇಖನವನ್ನೇ ಬರೆದು ಸ್ವಧರ್ಮೀಯರನ್ನು ಎಚ್ಚರಿಸಲಾಗಿದೆ. “ಈ ಸಾಮಾಜಿಕ ಪೀಡೆಯ ವಿರುದ್ಧ ನಾವು ವಿಶ್ವಹಿಂದೂ ಪರಿಷತ್(ವಿಎಚ್‌ಪಿ) ಜತೆಗೂ ಕೈಜೋಡಿಸುತ್ತಿದ್ದೇವೆ” ಎಂದು ಕ್ರಿಶ್ಚಿಯನ್ ಅಸೋಸಿಯೇಶನ್ ಫಾರ್ ಸೋಷಿಯಲ್ ಆಕ್ಷನ್(CASA-ಇದು ಹಿಂದೂಗಳ ವಿಎಚ್‌ಪಿ-ಶ್ರೀರಾಮಸೇನೆ, ಬ್ಯಾರಿಗಳ ಕೆಎಫ್‌ಡಿ ಇದ್ದಂತೆ ಕ್ತೈಸ್ತರ ನೈತಿಕ ಪೊಲೀಸ್!) ಪದಾಧಿಕಾರಿ ಕೆ.ಎಸ್. ಸ್ಯಾಮ್ಸನ್ ಹೇಳಿದ್ದಾರೆ! “ಈ ಧೂರ್ತ ತಂತ್ರಕ್ಕೆ ಹಿಂದೂ-ಕ್ರೈಸ್ತ ಎರಡೂ ಧರ್ಮದ ಯುವತಿಯರು ಬಲಿಯಾಗಿದ್ದಾರೆ. ಹಾಗಾಗಿ ನಾವು ಪರಸ್ಪರ ಸಹ ಕರಿಸುತ್ತಿದ್ದೇವೆ. ಯಾವುದೇ ಹಂತದವರೆಗಾದರೂ ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಕೆಲವು ದಿನಗಳ ಹಿಂದೆ ಕ್ರೈಸ್ತ ಬಾಹುಳ್ಯದ ಸ್ಥಳವೊಂದಲ್ಲಿ ಹಿಂದೂ ಶಾಲಾ ವಿದ್ಯಾರ್ಥಿನಿಯೊಬ್ಬಳು ಬಲಿಪಶುವಾಗಿದ್ದಾಳೆ ಎಂದು ತಿಳಿದುಬಂತು. ನಾವು ಕೂಡಲೇ ವಿಎಚ್‌ಪಿಗೆ ತಿಳಿಸಿದೆವು. ಅದೇ ರೀತಿ ವಿಎಚ್‌ಪಿ ಕೂಡ ಹಲವು ಪ್ರಕರಣಗಳಲ್ಲಿ ನಮಗೆ ಸಹಾಯ ಮಾಡಿದೆ” ಎಂದೂ ಹೇಳಿದ್ದಾರೆ. ಇತ್ತ ಆಪತ್ತಿನಲ್ಲಿ ಸಿಕ್ಕಿಹಾಕಿಕೊಂಡವರಿಗೆ, ನೊಂದವರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ವಿಶ್ವಹಿಂದೂ ಪರಿಷತ್ “ಹಿಂದೂ ಹೆಲ್ಪ್‌ಲೈನ್” ಆರಂಭಿಸಿದೆ. ಅದಕ್ಕೆ ಕಳೆದ ಮೂರು ತಿಂಗಳಿನಲ್ಲಿ ಸಹಾಯಯಾಚನೆ ಹಾಗೂ ಬೆದರಿಕೆ ಸೇರಿದಂತೆ 1500 ಕರೆಗಳು ಬಂದಿವೆಯಂತೆ.

ಇಷ್ಟೇ ಅಲ್ಲ…

“ಪ್ರೀತಿ-ಪ್ರೇಮದ ನೆಪದಲ್ಲಿ ಧಾರ್ಮಿಕ ತೀವ್ರವಾದಿಗಳು ನಡೆಸುತ್ತಿರುವ ಲವ್ ಜಿಹಾದ್ ಬಗ್ಗೆ ಕ್ರೈಸ್ತರು ನಿಗಾವಹಿಸ ಬೇಕು. ಲವ್ ಜಿಹಾದ್ ಅಥವಾ ಪವಿತ್ರ ಯುದ್ಧದ ಮೂಲಕ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಮತಾಂತರ ಮಾಡಲಾಗಿದೆ. ಈ ಲವ್ ಜಿಹಾದಿಗಳು ಕಾಲೇಜು ಕ್ಯಾಂಪಸ್‌ಗಳಲ್ಲೇ ಇರುತ್ತಾರೆ. ನಿಧಾನವಾಗಿ ಹುಡುಗಿಯರ ಮನಸೆಳೆದು ನಂತರ ವಿವಾಹದ ಪ್ರಸ್ತಾಪ ವನ್ನಿಡುತ್ತಾರೆ. ಆಕೆ ವಿವಾಹ ಪ್ರಸ್ತಾವವನ್ನು ಒಪ್ಪಿಕೊಂಡ ಕೂಡಲೇ ಮತಾಂತರ ಮಾಡಿಬಿಡುತ್ತಾರೆ. ಆನಂತರ ಆ ಹುಡುಗಿಯರು ಏನಾದರು, ಅವರಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ” ಎಂದು ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್‌ನ ‘ಸಾಮಾಜಿಕ ಸೌಹಾರ್ದ ಹಾಗೂ ನಿಗಾ ಆಯೋಗ’ದ ಕಾರ್ಯದರ್ಶಿ ಫಾದರ್ ಜೋನಿ ಕೊಚ್ಚುಪರಂಬಿಲ್ ಹೇಳಿದ್ದಾರೆ. “ತಂದೆ- ತಾಯಂದಿರು ಪೋಲಿಸರಿಗೆ ದೂರು ಕೊಡುವುದೂ ವಿರಳ. ಏಕೆಂದರೆ ಓಡಿ ಹೋಗುವ ಹೆಣ್ಣುಮಕ್ಕಳು ಸಾಮಾನ್ಯವಾಗಿ 18 ವರ್ಷ ಮೀರಿರುತ್ತಾರೆ. ಅವರ ನಿರ್ಧಾರಕ್ಕೆ ಕಾನೂನಿನಡಿ ಸವಾಲೆಸೆಯುವುದಕ್ಕೂ ಆಗುವುದಿಲ್ಲ. ಬಹಳಷ್ಟು ಸಂದರ್ಭ ದಲ್ಲಿ ಕುಟುಂಬ ಗೌರವಕ್ಕೆ ಅಂಜಿ ಓಡಿಹೋದವಳು ಏನು ಬೇಕಾದರೂ ಆಗಲಿ ಎಂದು ಪೋಷಕರು ಕೈಚೆಲ್ಲಿಬಿಡುತ್ತಾರೆ” ಎಂದು ಪರಿಸ್ಥಿತಿಯನ್ನು ಜೋನಿ ವಿವರಿಸಿದ್ದಾರೆ. ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ಪೋಷಕರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ಎಲ್ಲ ಚರ್ಚ್ ಹಾಗೂ ಚರ್ಚ್ ಪೋಷಿತ ಶಾಲಾ-ಕಾಲೇಜುಗಳಲ್ಲೂ ಈ ಕ್ರೈಸ್ತ ಆಯೋಗ ಮಾರ್ಗ ಸೂಚಿಗಳನ್ನು ವಿತರಿಸಿದೆ.

ಅಲ್ಲ, ಮತಾಂತರದ ಬಗ್ಗೆ ಕ್ಯಾಥೋಲಿಕ್ಕರಿಗೇಕೆ ಭಯ ಅನ್ನುತ್ತೀರಾ?!

ಪಟ್ಟಣಂತಿಟ್ಟ ಕಾಲೇಜಿನಿಂದ ಅಪಹರಣಗೊಂಡಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಹಿಂದೂವಾದರೆ, ಮತ್ತೊಬ್ಬಳು ಇಸಾಯಿ! ಮಲಪ್ಪುರಂ ಜಿಲ್ಲೆಯಲ್ಲಿ “ಲವ್ ಜಿಹಾದ್”ಗೆ ಅತಿಹೆಚ್ಚು ಬಲಿಯಾಗಿರುವವರು, ಮತಾಂತರಕ್ಕೊಳಗಾಗಿರುವವರು ಕ್ರೈಸ್ತ ಯುವತಿಯರೇ!! 2005ರಿಂದೀಚೆಗೆ ಕೇರಳದಲ್ಲಿ ಸುಮಾರು 4,500ಕ್ಕೂ ಹೆಚ್ಚು ಯುವತಿಯರು “ರೋಮಿಯೋ ಜಿಹಾದ್”, “ಲವ್ ಜಿಹಾದ್”ಗೆ ಸಿಲುಕಿ ಮುಸ್ಲಿಮರನ್ನು ಮದುವೆಯಾಗಿ, ಬಲವಂತ ಅಥವಾ ಅನಿವಾರ್ಯವಾಗಿ ಮತಾಂತರಗೊಂಡಿದ್ದಾರೆ. ಅದರಲ್ಲಿ ಹಿಂದೂಗಳಷ್ಟೇ ಗಣನೀಯ ಸಂಖ್ಯೆಯಲ್ಲಿ ಕ್ರೈಸ್ತ ಯುವತಿಯರೂ ಇದ್ದಾರೆ. ಈ ಪಿತೂರಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಈ ಘಟನೆಗಳ ಬಗ್ಗೆ ಬ್ರಿಟನ್‌ನ ಪ್ರತಿಷ್ಠಿತ ‘ಟೆಲಿಗ್ರಾಫ್’ ಪತ್ರಿಕೆ “Handsome Muslim men accused of waging ‘love jihad’ in India” ಎಂಬ ಶೀರ್ಷಿಕೆಯಡಿ ದೊಡ್ಡ ಸುದ್ದಿ ಪ್ರಕಟಿಸಿದೆ.

ಅಷ್ಟೆಲ್ಲಾ ದೂರ ಏಕೆ ಹೋಗಬೇಕು?

ಎಲ್ಲೋ ದೂರದ ಕೇರಳ, ಗಡಿಯ ದಕ್ಷಿಣ ಕನ್ನಡದಲ್ಲಿ ಇಂತಹ ಘಟನೆಗಳಾಗುತ್ತಿವೆ ಎಂದುಕೊಳ್ಳಬೇಡಿ. ನಮ್ಮ ಚಾಮರಾಜನಗರ ಜಿಲ್ಲೆಯಲ್ಲೇ ಒಬ್ಬ ಹುಡುಗಿ ಕೂಡ “ಲವ್ ಜಿಹಾದ್”ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಚಾಮರಾಜನಗರದ ಕುವೆಂಪು ನಗರದ ಸೆಲ್ವರಾಜ್ ಎಂಬವರ ಮಗಳು ಕಳೆದ ಆಗಸ್ಟ್ 8ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದಳು. ಈ ಬಗ್ಗೆ ಅವರು ಪೋಲಿಸರಿಗೆ ದೂರನ್ನೂ ನೀಡಿದರು. ಆಗಸ್ಟ್ 15ರಂದು ಅಸ್ಗರ್ ಎಂಬಾತ ಕರೆ ಮಾಡಿದ. ನಿಮ್ಮ ಮಗಳನ್ನು ಮದುವೆಯಾಗುತ್ತಿದ್ದೇನೆಂದು ಹೇಳಿದ. ಆನಂತರ ಕೆ.ಪಿ. ಪರಿತ್ ಕುಟ್ಟಿ ಎಂಬಾತನಿಂದ ಕರೆ ಬಂತು. ನಿಮ್ಮ ಮಗಳು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ, ಆಕೆಯ ಜತೆ ಇನ್ನು ಮುಂದೆ ನೀವು ಯಾವ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ, ಮಾತನಾಡುವಂತಿಲ್ಲ ಎಂದು ತಾಕೀತು ಹಾಕಿದ. ಆದರೆ ಹೆತ್ತಜೀವ ಕೇಳಬೇಕಲ್ಲ… ಸೆಲ್ವರಾಜ್ ಅವರು ಮಗಳನ್ನು ಹುಡುಕುತ್ತ ಪೋಲಿಸರ ಜತೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರತ್ತುಪಟ್ಟಿಗೆ ಹೋದರು.

“ಪೊಲೀಸರ ಜತೆ ನಾನು ಹೊರಟ ಕೂಡಲೇ ಐದಾರು ತಂಡಗಳು ನಮ್ಮನ್ನು ಹಿಂಬಾಲಿಸತೊಡಗಿದವು. ಆ ಮೂಲಕ ಬೆದರಿಸಲು ಆರಂಭಿಸಿದರು. ಪೊಲೀಸರನ್ನೂ ಲೆಕ್ಕಿಸಲಿಲ್ಲ. ಹೇಗೋ ಮಾಡಿ ಮಗಳನ್ನು ಭೇಟಿ ಮಾಡಿದೆ. ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ಕೊಟ್ಟರು. ನನಗೆ ದನದ ಮಾಂಸ ತಿನ್ನು ಎಂದು ಒತ್ತಾಯಿಸುತ್ತಾರೆ. ಹೇಗೆ ತಿನ್ನಲಿ? ಎಂದು ನೋವು ತೋಡಿಕೊಂಡಳು. ನಾನು ತಪ್ಪು ಮಾಡಿದೆ ಎಂದು ರೋಧಿಸಿದಳು” ಎನ್ನುತ್ತಾರೆ ಸೆಲ್ವರಾಜ್. ಈ ಬಗ್ಗೆ ಕನ್ನಡದ ಜನಪ್ರಿಯ ಚಾನೆಲ್‌ಗಳಾದ “ಟಿವಿ9″ ಮತ್ತು “ಈಟಿವಿ”ಗಳು ವಿಶೇಷ ವರದಿ ಪ್ರಸಾರ ಮಾಡಿದ್ದನ್ನು ನೀವು ನೋಡಿರಬಹುದು.

ಮಗಳನ್ನು ವಾಪಸ್ ಕರೆದುಕೊಂಡು ಬರುವುದು ಬಿಡಿ, ಹೆಚ್ಚು ಹೊತ್ತು ಮಾತನಾಡುವುದಕ್ಕೂ ಅವಕಾಶ ನೀಡದೇ ಸೆಲ್ವರಾಜ್‌ರನ್ನು ಬೆದರಿಸಿ ಕಳುಹಿಸಲಾಗಿದೆ. ದಾರಿಕಾಣದೇ ಅವರು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನ ಮೊರೆಹೋಗಿದ್ದಾರೆ. ಈ ಬಗ್ಗೆ ಸೂಕ್ತ ದೂರು ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಇದೊಂದೇ ಅಲ್ಲ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಜರುಗಿರುವ ಇಂತಹ ಮೂರ್ನಾಲ್ಕು ಪ್ರಕರಣಗಳು ಕರ್ನಾಟಕ ಹೈಕೋರ್ಟ್ ಮೊರೆಹೋಗಲು ಮುಂದಾಗಿವೆ.

ಮುಂದಿನ ಗುರಿ ಮಡಿಕೇರಿ, ಬೆಳಗಾವಿ, ರಾಯಚೂರು. ಇತ್ತೀಚಿನ ದಿನಗಳಲ್ಲಿ ರಿಯಾಝ್ ಭಟ್ಕಳನಿಂದ ಹಿಡಿದು ದೇಶಬಾಹಿರ ಚಟುವಟಿಕೆಗಳಲ್ಲಿ ಹೆಚ್ಚುಹೆಚ್ಚಾಗಿ ತೊಡಗುತ್ತಿರುವ ವರೆಲ್ಲ ಕರಾವಳಿ ಭಾಗದವರೇ ಎಂಬ ಅಪಾಯಕಾರಿ ಅಂಶ ಬೆಳಕಿಗೆ ಬರುತ್ತಿದೆ. ಈಗ ಅವರು ‘ಲವ್ ಜಿಹಾದ್’ ಎಂಬ ಹೊಸ ಜಾಡು ಹಿಡಿದಿದ್ದಾರೆ ಅಷ್ಟೇ. ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 56.2, ಕ್ರೈಸ್ತರು ಶೇ. 19 ಇದ್ದರೆ ಮುಸ್ಲಿಮರು 24.7 ಪರ್ಸೆಂಟ್ ಇದ್ದಾರೆ. ಧಾರ್ಮಿಕ ವೈವಿಧ್ಯತೆಗೆ ಇದೊಂದು ಮಾದರಿ ರಾಜ್ಯವಾಗಿದ್ದರೂ ಮುಸ್ಲಿಮರು ಯಾವ ಯಾವ ಸ್ಥಳಗಳಲ್ಲಿ ಬಹುಸಂಖ್ಯಾತರಾಗುತ್ತಿದ್ದರೋ ಆ ಸ್ಥಳಗಳಲ್ಲಿನ ಅನ್ಯಧರ್ಮೀಯರಲ್ಲಿ ಭಯ-ಭೀತಿಗಳು ಸೃಷ್ಟಿಯಾಗಿ ಮನೆ-ಮಠ, ಆಸ್ತಿ-ಪಾಸ್ತಿ ಮಾರಿಕೊಂಡು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದಾರೆ. ಆ ಭೂಮಿ ಮುಸ್ಲಿಮರ ಪಾಲಾಗುತ್ತಿದೆ! ಮಲಪ್ಪುರಂನಲ್ಲಿ ಆಗುತ್ತಿರುವುದೂ ಇದೇ ಹಾಗೂ ದೇಶದ ಇತರ ಸ್ಥಳಗಳಲ್ಲೂ ಇಂತಹದ್ದೇ ಪರಿಸ್ಥಿತಿಯನ್ನು ಕಾಣಬಹುದು. ಅಣಕವೆಂದರೆ ಜಾತ್ಯತೀತತೆಯ ಬಗ್ಗೆ ಬೋಧನೆ ಕೊಡುವ ಮಹಾ ಮೇಧಾವಿಗಳು ವಾಸಿಸುವುದು ಮಾತ್ರ ಹಿಂದೂ ಪ್ರಾಬಲ್ಯದ ಬಡಾವಣೆಗಳಲ್ಲೇ!

ಇದೇನೇ ಇರಲಿ, ಖಂಡಿತ ಪ್ರೀತಿಸುವುದು ತಪ್ಪಲ್ಲ.

ಪ್ರೀತಿ, ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ. ಆದರೆ ಕೆಲವು ಉದ್ದೇಶ, ಗುರಿಗಳನ್ನಿಟ್ಟುಕೊಂಡು ಮಾಡುವ “ಪ್ರೀತಿ”, ಪಿತೂರಿಯಾಗಿ ಯುವತಿಯರ ಬದುಕನ್ನೇ ಸುಟ್ಟು ಬಿಡುತ್ತದೆ. ಅಷ್ಟಕ್ಕೂ ಕಾಸರಗೋಡು ಹಾಗೂ ಮಲಪ್ಪುರಂ ಜಿಲ್ಲೆಗಳೆರಡರಲ್ಲೇ ತಲಾ 586, 412 ಯುವತಿಯರು “ಲವ್ ಜಿಹಾದ್”ಗೆ ಬಲಿಯಾಗಿದ್ದಾರೆ! ವಿವಾಹ ಭರವಸೆ ನೀಡಿ, ಲೈಂಗಿಕ ಸಂಬಂಧ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಯ್ಲಾಕ್‌ಮೇಲ್ ಮಾಡಿದ ಉಹಾಹರಣೆಗಳೂ ಇವುಗಳಲ್ಲಿವೆ. ಈ ಹಿನ್ನೆಲೆಯಲ್ಲಿ, “ಹೆಣ್ಣುಮಕ್ಕಳ ಗೆಳೆತನ, ಕಂಪ್ಯೂಟರ್, ಮೊಬೈಲ್ ಮೇಲೆ ಹೆತ್ತವರು ಕಣ್ಣಿಡುವಂತೆ” ಸೂಚಿಸಿ ಕ್ಯಾಥೋಲಿಕ್ ಚರ್ಚ್ ಸುತ್ತೋಲೆ ಹೊರಡಿಸಿದೆ.

ಇದರ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳಿ. ಪ್ರೀತಿಸುವ ಮೊದಲು ನೀವು ಎಂತಹ ವ್ಯಕ್ತಿಯನ್ನು ಪ್ರೀತಿಸಲು ಹೊರಟಿದ್ದೀರಿ ಎಂಬ ಬಗ್ಗೆಯೂ ಯೋಚನೆ ಮಾಡಿ. ಅಷ್ಟಕ್ಕೂ ವಿವೇಚನೆಯಿಲ್ಲದ ಪ್ರೀತಿ ನಿಮ್ಮ ಬದುಕಿನ ಜತೆಗೆ ಹೆತ್ತು-ಹೊತ್ತು, ಸಾಕಿ-ಸಲಹಿದ ಅಪ್ಪ-ಅಮ್ಮನನ್ನೂ ಮಾನಸಿಕವಾಗಿ ಹಿಂಸಿಸಿ ಸಾಯಿಸುತ್ತದೆ. “ಲವ್ ಜಿಹಾದ್ ಒಂದು ವ್ಯವಸ್ಥಿತ ಹಾಗೂ ವಿಸ್ತೃತ ಜಾಲವಾಗಿದ್ದು ಅನ್ಯಧರ್ಮೀಯ ಹುಡುಗಿಯರನ್ನು ಪುಸಲಾಯಿಸಿ, ಹೊಟ್ಟೆಬರಿಸಿ, ಹೊರತಳ್ಳುವ ಉದ್ದೇಶವನ್ನೂ ಹೊಂದಿದೆ” ಎಂದು “ಲವ್ ಜಿಹಾದ್” ಬಗ್ಗೆ ನಡೆಯುತ್ತಿರುವ ತನಿಖೆಯ ನೇತೃತ್ವ ವಹಿಸಿರುವ ಪೊಲೀಸ್ ಅಧಿಕಾರಿ ಕೆ.ಎಸ್. ಗೋಪಕುಮಾರ್ ಹೇಳಿದ್ದಾರೆ.

ಹುಡುಗಿಯರೇ ಹುಷಾರ್!

ಕೃಪೆ : ಪ್ರತಾಪ್ ಸಿಂಹ

ಹಾಗಂತ ಹೇಳಿದವನು ಯಾವ ಬಜರಂಗಿಯೂ ಅಲ್ಲ !

ಒಬ್ಬ ಕ್ಯಾಥೋಲಿಕ್ಕನಾಗಿ ನಾನು ಪೂರ್ವಗ್ರಹಪೀಡಿತನಾಗಿದ್ದೆ. ನನ್ನ ಅಂಕಲ್ ಅಂದು ಹಾಗೂ ಇಂದಿಗೂ ಒಬ್ಬ ಮಿಷನರಿ. ಒಂದು ವೇಳೆ ದಕ್ಷಿಣ ಅಮೆರಿಕದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡದೇ ಹೋದರೆ ಅವರು ಅನಂತ ಅನಾಹುತಕ್ಕೆ ಈಡಾಗುತ್ತಾರೆ ಎಂದು ಆತ ಅಲ್ಲಿಗೆ ತೆರಳಿದ. ನಾನು ಕ್ಯಾಥೋಲಿಕ್ ಶಾಲೆಯಲ್ಲಿ ಕಲಿತವನು. ಹಿಂದೂಯಿಸಂ ಎಂದರೆ ಬಹುದೇವತಾರಾಧನೆ, ಮೂರ್ತಿಪೂಜೆ ಮತ್ತು ಮೂಢನಂಬಿಕೆ. ಹಿಂದೂಗಳಿಗೆ ಸ್ವರ್ಗದಲ್ಲಿ ಯಾವುದೇ ಜಾಗವಿಲ್ಲ ಎಂದು ನನಗೆ ಹೇಳಿಕೊಡಲಾಯಿತು. ನನ್ನ ಬಾಲ್ಯದ ಕ್ಯಾಥೋಲಿಸಂ ಅಂದರೆ ಇದಾಗಿತ್ತು, ಇಂದಿಗೂ ಹಿಂದೂಧರ್ಮವನ್ನು ಅವಹೇಳನ ಮಾಡುವ ಅದೇ ಕ್ಯಾಥೋಲಿಸಂ ಅನ್ನು ಕಾಣಬಹುದು.

೧೯೯೪ರಲ್ಲಿ ಪೋಪ್ ಎರಡನೇ ಜಾನ್ ಪಾಲ್ ಅವರು ಹೇಳಿಕೆಯೊಂದನ್ನು ನೀಡಿದರು. “ಬುದ್ಧಿಸಂ, ಹಿಂದೂಯಿಸಂನಂತಹ ಪುರಾತನ ಧರ್ಮಗಳು ಕ್ರೈಸ್ತ ಮತ ಪ್ರತಿಪಾದನೆಗೆ ಎಸೆದಿರುವ ಸವಾಲನ್ನು ಏಷ್ಯಾದ ಕ್ರೈಸ್ತ ಧರ್ಮಭೋದಕರು ನಿಭಾಯಿಸಲಿದ್ದಾರೆ. ಈ ಧರ್ಮಗಳ ಲ್ಲಿರುವ ಸತ್ಯಾಸತ್ಯತೆಗೆ ಗೌರವ ವ್ಯಕ್ತಪಡಿಸುತ್ತಲೇ ದೇವರು ಹಾಗೂ ಮನುಷ್ಯನ ನಡುವಿನ ಏಕೈಕ ಸಂಧಾನಕಾರನೆಂದರೆ ಜೀಸಸ್. ಆತನೊಬ್ಬನೇ ಮಾನವತೆಯ ಉದ್ಧಾರಕ ಎಂಬುದನ್ನು ಚರ್ಚ್ ಮನವರಿಕೆ ಮಾಡಿಕೊಡಬೇಕು”.

ಈ ಹೇಳಿಕೆಯ ಪ್ರಕಾರ ಬುದ್ಧನಾಗಲಿ, ಕೃಷ್ಣನಾಗಲಿ, ರಾಮನಾಗಲಿ ಜೀಸಸ್‌ಗೆ ಸಮನಲ್ಲ ಎಂದಾಯಿತು. ನಮ್ಮ ಧರ್ಮ ಮಾತ್ರ ಶ್ರೇಷ್ಠ ಎಂಬ “Exclusiveness” ಈ ಹೇಳಿಕೆಯಿಂದ ವ್ಯಕ್ತವಾಗುತ್ತದೆ! ಒಂದು ವೇಳೆ ಇಂತಹದ್ದು ನನ್ನ ದೃಢ ನಂಬಿಕೆಯಾಗಿದ್ದರೆ ನೀವು ಬೇರೊಂದು ಧರ್ಮವನ್ನು ಅನುಸರಿಸುತ್ತಿದ್ದರೆ ನಿಮ್ಮ ಬಗ್ಗೆ ನಾನು ಹೇಗೆತಾನೇ ಸಹಿಷ್ಣುತೆ ಹೊಂದಿರಲು ಸಾಧ್ಯ? ನಾನು ನಿಮ್ಮ ನಂಬಿಕೆಯನ್ನು ಗೌರವಿಸುವುದಾದರೂ ಹೇಗೆ? ಈ ರೀತಿಯ ಸಂಕೀರ್ಣ ಮನಸ್ಥಿತಿ ಅನಗತ್ಯ ಘರ್ಷಣೆ, ಒಡಕು, ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಇದ್ದೀತೆ?

ಇಂದು ಮಿಷನರಿ ಕೆಲಸವೆಂಬುದು ದೊಡ್ಡ ಬ್ಯುಸಿನೆಸ್. ಬಹುಶಃ ಜಗತ್ತಿನ ಅತಿದೊಡ್ಡ ವ್ಯಾಪಾರ! ಬರೀ ಕ್ಯಾಥೋಲಿಕ್ ಚರ್ಚ್‌ಗಳಷ್ಟೇ ಅಲ್ಲ, ಹಲವಾರು ಪ್ರೊಟೆಸ್ಟೆಂಟ್ ಸಂಘಟನೆಗಳೂ ಕೂಡ ಅನ್ಯಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಕೋಟ್ಯಂತರ ಡಾಲರ್‌ಗಳನ್ನು ಮೀಸಲಾಗಿಟ್ಟಿವೆ. ಮತ ಪ್ರಚಾರ ಕೆಲಸಕ್ಕಾಗಿ ಲಕ್ಷಾಂತರ ಕಾರ್ಯಕರ್ತರನ್ನು ರೂಪಿಸಿವೆ, ಹಲವಾರು ಯೋಜನೆಗಳನ್ನು ರೂಪಿಸಿವೆ, ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿವೆ. ಇಂತಹ ಬಹುರಾಷ್ಟ್ರೀಯ ಮತಾಂತರ ಬ್ಯುಸಿನೆಸ್ ಇದೆಯಲ್ಲಾ, ಅದು ಬಹುರಾಷ್ಟ್ರೀಯ ಆರ್ಥಿಕ ವಹಿವಾಟಿನಂತಲ್ಲ. ಇಲ್ಲಿ ನ್ಯಾಯವೂ ಇಲ್ಲ, ಒಳತಂತ್ರ ಬಹಿರಂಗವಾಗಿ ಕಾಣುವುದೂ ಇಲ್ಲ. ಮಾತುಕತೆಯೂ ಇಲ್ಲ, ಚರ್ಚೆಗೂ ಜಾಗವಿಲ್ಲ. ಇದು, ಒಂದು ಧರ್ಮ ತಾನೊಂದೇ ಶ್ರೇಷ್ಠವೆಂದು ಇತರ ಎಲ್ಲ ಧರ್ಮಗಳನ್ನೂ ಅವಹೇಳನ ಮಾಡುವುದಾಗಿದೆ, ಇತರ ಧರ್ಮಗಳಿಗೆ ಮಸಿ ಬಳಿಯುವ ಕಾರ್ಯವಾಗಿದೆ. ಇಂತಹ ಮತಾಂತರ ವಹಿವಾಟು ಭಾರತದಲ್ಲಿ ಬಹುವಾಗಿದೆ. ಏಕೆಂದರೆ ಮಿಷನರಿಗಳು ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವತಂತ್ರವಾಗಿ ಮತಾಂತರ ಮಾಡಬಹುದಾದ ವಿಶ್ವದ ಅತಿ ದೊಡ್ಡ ಕ್ರೈಸ್ತೇತರ ರಾಷ್ಟ್ರವೆಂದರೆ ಭಾರತವೊಂದೇ. ಪಾಕಿಸ್ತಾನ, ಬಾಂಗ್ಲಾದೇಶಗಳಂತಹ ಮುಸ್ಲಿಂ ರಾಷ್ಟ್ರಗಳು ಕ್ರೈಸ್ತ ಮಿಷನರಿ ಚಟುವಟಿಕೆಗಳಿಗೆ ಅವಕಾಶವನ್ನೇ ನೀಡುವು ದಿಲ್ಲ. ಸೌದಿ ಅರೇಬಿಯಾದಲ್ಲಿ ಬೈಬಲ್ ಅಥವಾ ಜೀಸಸ್‌ನ ಸಣ್ಣ ಚಿತ್ರವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವೂ ಇಲ್ಲ. ಚೀನಾ ಕೂಡ ಮಿಷನರಿಗೆ ಬಾಗಿಲು ಮುಚ್ಚಿದೆ.

ಇತ್ತೀಚೆಗೆ ಭಾರತದಲ್ಲಿ ಮಿಷನರಿಯೊಬ್ಬರನ್ನು ಕೊಂದಿದ್ದನ್ನು ಎಲ್ಲ ಮಾಧ್ಯಮಗಳೂ ಪ್ರಸಾರ ಮಾಡಿದವು. ಕಾಶ್ಮೀರದಲ್ಲಿ ಹಿಂದೂಗಳು ಕಾಲ ಕಾಲಕ್ಕೆ ಹತ್ಯೆಯಾಗುತ್ತಲೇ ಬಂದಿದ್ದಾರೆ. ಆದರೆ ಹಿಂದೂಗಳ ಹತ್ಯೆ ಪಾಶ್ಚಿಮಾತ್ಯ ಮಾಧ್ಯಮಗಳಿಗೆ ‘ಸುದ್ದಿ’ ಎನಿಸುವುದೇ ಇಲ್ಲ. ಮಿಷನರಿ ಚಟುವಟಿಕೆಗಳು ಎಲ್ಲ ಖಂಡಗಳಲ್ಲೂ ಸಾಮೂಹಿಕ ಹತ್ಯಾಕಾಂಡದ ಇತಿಹಾಸವನ್ನು ಹೊಂದಿವೆ. ದಕ್ಷಿಣ ಅಮೆರಿಕದ ಮೂಲನಿವಾಸಿಗಳ ಮೇಲೆ ಎಸಗಿದ ದೌರ್ಜನ್ಯದ ಸಲುವಾಗಿ ಕ್ರೈಸ್ತರು ಕ್ಷಮೆ ಯಾಚಿಸಿದ್ದಾರೆ. ಆದರೆ ಹಿಂದೂ ಧರ್ಮದ ಮೇಲೆ ಮಾಡಿರುವ ದೌರ್ಜನ್ಯ, ಅವಹೇಳನದ ಸಲುವಾಗಿ ಕ್ರೈಸ್ತರು ಎಂದಾದರೂ ಕ್ಷಮೆ ಕೇಳಿದ್ದಾರೆಯೇ?

ಅಷ್ಟಕ್ಕೂ ಮತಾಂತರವನ್ನೇಕೆ ಮಾಡಬೇಕು?

ಮತಾಂತರಕ್ಕೆ ಪ್ರೇರಣೆ ಏನು? ತಮ್ಮದೊಂದೇ ನಿಜವಾದ ಧರ್ಮ, ಜೀಸಸ್‌ನೊಬ್ಬನೇ ಮಾನವ ಜನಾಂಗದ ರಕ್ಷಕ, ಕ್ರೈಸ್ತರಿಗೆ ಮಾತ್ರ ಮೋಕ್ಷ ಲಭ್ಯವಾಗುತ್ತದೆ, ಕ್ರೈಸ್ತರಿಗೆ ಮಾತ್ರ ಸ್ವರ್ಗದಲ್ಲಿ ಜಾಗ ಹಾಗೂ ಉಳಿದವರು ನರಕಕ್ಕೆ ದೂಡಲ್ಪಡು ತ್ತಾರೆ ಎಂದು ಕ್ರೈಸ್ತರು ನಂಬಿದ್ದಾರೆ. ಇದು ಧಾರ್ಮಿಕ ಅಶಾಂತಿ ಹಾಗೂ ಸಂಘರ್ಷಕ್ಕೆ ನೀಲನಕಾಶೆಯಲ್ಲವೆ? ಯಾರಾದರೂ ನಿಮ್ಮ ಮನೆ ಅಥವಾ ಊರಿಗೆ ಬಂದು ಮತಾಂತರ ಮಾಡಲು ಮುಂದಾದರೆ ಏನಾಗುತ್ತದೆ? ನಿಮ್ಮ ಧರ್ಮ, ಸಂಪ್ರದಾಯ ಬಿಡಿ ಎಂದರೆ ಮತ್ತಿನ್ನೇನಾಗಲು ಸಾಧ್ಯ? ಎಲ್ಲೆಲ್ಲಿ ಮಿಷನರಿ ಚಟುವಟಿಕೆಗಳು ನಡೆಯುತ್ತವೆಯೋ ಅಲ್ಲೆಲ್ಲ ಘರ್ಷಣೆ, ಸಂಘರ್ಷಗಳಾಗುತ್ತವೆ ಅಷ್ಟೇ.

ಪ್ರೊಟೆಸ್ಟೆಂಟರು, ಆಂಗ್ಲಿಕನ್ಸ್ ಮತ್ತು ಲ್ಯುಥೆರನ್ಸ್ ತಮ್ಮ ಮಿಷನರಿ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದಾರೆ. ಆದರೆ ಕ್ಯಾಥೋಲಿಕ್ಕರು ಮಾತ್ರ ಸದ್ದಿಲ್ಲದೆ ಜಗತ್ತಿನಾದ್ಯಂತ ಮತಾಂತರ ಕಾರ್ಯ ನಡೆಸುತ್ತಿದ್ದಾರೆ. ವಸಾಹತುಶಾಹಿ ಕಾಲದಲ್ಲಿ ಮಾಡಿದಂತೆ ಬಲಪ್ರಯೋಗ ಮಾಡುತ್ತಿಲ್ಲ, ಆದರೆ ‘ಗ್ಲೋಬಲ್ ಕನ್‌ವರ್ಶನ್’ ಉದ್ದೇಶವನ್ನು ಮಾತ್ರ ಬಿಟ್ಟಿಲ್ಲ. ಇಂದು ಹಲವಾರು ಕ್ರೈಸ್ತ ಮತಪ್ರತಿಪಾದಕ ಸಂಘಟನೆಗಳು ಹುಟ್ಟಿಕೊಂಡಿವೆ. ವರ್ಲ್ಡ್ ವಿಶನ್, ದಿ ಕ್ರಿಶ್ಚಿಯನ್ ಕೋಯು ಲೀಶನ್, ಜೆನೋವ್ಹಾಸ್ ವಿಟ್ನೆಸ್, ಮಾರ್ಮೋನ್ಸ್, ಬ್ಯಾಪ್ಟಿಸ್ಟ್ ಮುಂತಾದ ಸಂಘಟನೆಗಳು ಭಾರತದಲ್ಲಿರುವ ಹಿಂದೂಗಳನ್ನು ಮತಾಂತರ ಮಾಡುವ ಸಲುವಾಗಿ ಅಮೆರಿಕದಲ್ಲಿ ಚಂದಾ ಎತ್ತುತ್ತಿವೆ. ಕ್ರೈಸ್ತ ಟಿವಿ ಚಾನೆಲ್‌ಗಳಲ್ಲಿ ಅಂತಹ ಮನವಿಗಳನ್ನು ನಿತ್ಯವೂ ಕಾಣಬಹುದು. ಪ್ಯಾಟ್ ರಾಬರ್ಟ್ಸ್‌ನ್ ಎಂಬಾತ “ಹಿಂದೂಯಿಸಂ ಎಂಬುದು ಭೂತಪ್ರೇತಗಳ ಧರ್ಮ” ಎಂದು ಕ್ರೈಸ್ತ ಚಾನೆಲ್‌ನಲ್ಲಿ ಬಹಿರಂಗವಾಗಿ ಹೇಳಿದ್ದಾನೆ. ಪ್ರಾಣಿಗಳ ಶಿರವನ್ನು ಹೊಂದಿರುವ ಹಿಂದೂ ದೇವ, ದೇವತೆಗಳನ್ನು ತೋರಿಸಿ “ಓಹ್, ಈ ಜನರು ಅದೆಷ್ಟು ಹಿಂದುಳಿದಿದ್ದಾರೆ ನೋಡಿ” ಎಂದು ವಿಡಂಬನೆ ಮಾಡುತ್ತಾರೆ, ಭಾರತದಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳತ್ತ ಬೊಟ್ಟು ಮಾಡಿ, “ಈ ಎಲ್ಲ ಸಮಸ್ಯೆಗಳಿಗೆ ಹಿಂದೂಧರ್ಮವೇ ಕಾರಣ. ಇಂತಹ ಭಯಾನಕ ಧರ್ಮದಿಂದ ಜನರನ್ನು ರಕ್ಷಿಸಲು ದೇಣಿಗೆ ನೀಡಿ” ಎಂದು ಕರೆ ನೀಡುತ್ತಾರೆ.

ಮಿಷನರಿಗಳು ಒಡ್ಡಿರುವ ಈ ರೀತಿಯ ಅಪಾಯ ವೆಂಬುದು ಯಾವುದೋ ತಾತನ ಕಾಲದ್ದು ಎಂದು ಹಿಂದೂಗಳು ಉದಾಸೀನ ತೋರಬಾರದು. ಜಗತ್ತಿನಾದ್ಯಂತ ಧಾರ್ಮಿಕ ಸಾಮರಸ್ಯವಿದೆ, ಅನ್ಯಧರ್ಮೀಯರು ಹಿಂದೂ ಯಿಸಂಗೆ ಗೌರವ ಕೊಡುತ್ತಾರೆ ಎಂದು ಹಿಂದೂಗಳು ಭಾವಿಸಿದರೆ ತಪ್ಪಾಗುತ್ತದೆ. ಮಿಷನರಿಗಳೆಂದೂ ತಮ್ಮ ಉದ್ದೇಶ ಬಿಡುವುದಿಲ್ಲ್ಲ. ಒಂದಿಷ್ಟು ಮತಾಂತರಿಗಳು ಹಿಂದೂ ಧರ್ಮದ ಅವಹೇಳನದಂತಹ ಮಾರ್ಗಕ್ಕೆ ಕೈಹಾಕಿದ್ದರೆ, ಮತ್ತೆ ಕೆಲವು ಅಮೆರಿಕದ ಪಠ್ಯಪುಸ್ತಕಗಳು ‘ಹಿಂದೂಯಿಸಂ ಒಂದು ಧರ್ಮವೇ ಅಲ್ಲ, ಅವರಿಗೆ ಒಬ್ಬ ದೇವರಾಗಲಿ, ಒಂದು ಧರ್ಮಗ್ರಂಥವಾಗಲಿ ಇಲ್ಲ” ಎಂದು ಇಂದಿಗೂ ಬೋಧನೆ ಮಾಡುತ್ತಿವೆ.

ಅಷ್ಟೇ ಅಲ್ಲ, ಮತಾಂತರ ಹಾಗೂ ಬಡತನಕ್ಕೂ ತಳುಕು ಹಾಕಲಾಗುತ್ತಿದೆ. ಆದರೆ ಧಾರ್ಮಿಕ ಮತಾಂತರವನ್ನು ಹೊಂದುವ ಮೂಲಕ ಜಗತ್ತಿನ ಯಾವ ದೇಶ ಆರ್ಥಿಕವಾಗಿ ಮೇಲೆ ಬಂದಿದೆ? ಕ್ಯಾಥೋಲಿಕ್ ದೇಶವಾದ ಫಿಲಿಪ್ಪೀನ್ಸ್ ಏಷ್ಯಾದ ಅತ್ಯಂತ ಪುರಾತನ ಕ್ರೈಸ್ತ ರಾಷ್ಟ್ರವಾಗಿದೆ. ಆದರೂ ಅದು ಏಷ್ಯಾದ ಅತ್ಯಂತ ಹಿಂದುಳಿದ ರಾಷ್ಟ್ರಗಳ ಸಾಲಿನಲ್ಲಿ ರುವುದೇಕೆ? ಅತ್ಯಂತ ದೈವಭಕ್ತ ಕ್ಯಾಥೋಲಿಕ್ಕರಿರುವುದು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ. ಅತಿ ಹೆಚ್ಚು ಆರ್ಥಿಕ ಅಸಮಾನತೆ ಇರುವುದೂ ಇದೇ ಭಾಗದಲ್ಲಿ! ಏಕೆ? ಆರ್ಥಿಕ ವಾಗಿ ಅಭಿವೃದ್ಧಿ ಹೊಂದಲು ಅನ್ಯಧರ್ಮಕ್ಕೆ ಮತಾಂತರ ಹೊಂದಿ ಎಂದು ಕ್ಯಾಥೋಲಿಕ್ಕರು ಅಲ್ಲೇಕೆ ಹೇಳುತ್ತಿಲ್ಲ? ಭಾರತದಲ್ಲಾದರೆ ಬಡತನಕ್ಕೆ ಹಿಂದೂ ಧರ್ಮವೇ ಕಾರಣ ಎಂದು ದೂರುವ ಮಿಷನರಿಗಳಿಗೆ, ದಕ್ಷಿಣ ಅಮೆರಿಕದ ಜನರ ಬಡತನಕ್ಕೆ ಕ್ರೈಸ್ತ ಧರ್ಮವೇ ಕಾರಣ ಎಂದು ಏಕೆ ಅನಿಸುವುದಿಲ್ಲ?

ಇನ್ನು ಕ್ರೈಸ್ತರು ಸ್ಥಾಪಿಸಿರುವ ಆಸ್ಪತ್ರೆಗಳು, ಅನಾಥಾಶ್ರಮಗಳು, ಶಾಲೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಇವುಗಳೆಲ್ಲವನ್ನೂ ಬಡವರ ಒಳಿತಿಗಾಗಿ ಪ್ರತಿಫಲದ ನಿರೀಕ್ಷೆ ಗಳಿಲ್ಲದೆ ಮಾಡಿದ್ದರೆ ನಿಜಕ್ಕೂ ಅದ್ಭುತವೆನಿಸುತಿತ್ತು. ಆದರೆ ಆಸ್ಪತ್ರೆ, ಅನಾಥಾಲಯ, ಶಾಲೆಗಳ ಮೇಲೇಕೆ ದೊಡ್ಡ ದೊಡ್ಡ ಶಿಲುಬೆಗಳು ರಾರಾಜಿಸುತ್ತಿವೆ?! ಕ್ರೈಸ್ತ ಮಿಷನರಿಗಳ ಬಲಾತ್ಕಾರದ ಮತಾಂತರಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ. ಹಾಗಿರುವಾಗ ಇವರಿಗೆ ಧರ್ಮವೆಂಬ ಲೇಬಲ್ ಚೇಂಜ್ ಮಾಡುವ ಉದ್ದೇಶವಿಲ್ಲ ಎಂದು ನಂಬಲು ಹೇಗೆ ಸಾಧ್ಯ? ಇವರಿಗೆ ಸೇವಾ ಉದ್ದೇಶವಿರುವುದೇ ಆಗಿದ್ದರೆ ಆಸ್ಪತ್ರೆ, ಶಾಲೆಗಳಲ್ಲಿ ಮತಪ್ರಚಾರ ಮಾಡುವುದೇಕೆ? ಮಾನವ ಜನಾಂಗ ಯಾವ ಚರ್ಚಿನ ಸ್ವತ್ತೂ ಅಲ್ಲ. ಮಾನವ ಜನಾಂಗವೆಂಬುದು ಯಾರಿಗೋ ಸೇರಿರುವ ಆಸ್ತಿಯೂ ಅಲ್ಲ. ಆತ್ಮವನ್ನು ಯಾರೋ ಬಂದು ರಕ್ಷಣೆ ಮಾಡುವ ಅಗತ್ಯವಿಲ್ಲ. ಅದು ನಮ್ಮ ಪ್ರಕೃತಿಯ ಅನಂತ ಹಾಗೂ ಸನಾತನ ಭಾಗ. ನಮ್ಮೊಳಗಿನ ದೈವತ್ವವನ್ನು ಅರ್ಥಮಾಡಿಕೊಳ್ಳಬೇಕಷ್ಟೆ. ಹಿಂದೂಯಿಸಂ ಎಂಬುದು ಪ್ರತಿಯೊಬ್ಬನಿಗೂ ಹಾಗೂ ಪ್ರತಿಯೊಬ್ಬನ ‘ಸ್ವಧರ್ಮ’ಕ್ಕೂ ಗೌರವವೀಯುವ ತತ್ತ್ವವನ್ನು ಆಧರಿಸಿದೆ. ಹಿಂದೂಯಿಸಂ ಎಂಬುದು ಇತರ ಮತಗಳಂತೆ ಇನ್ನೊಂದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಯೋಗ, ಧ್ಯಾನ, ವೇದ, ವೇದಾಂತದಂತಹ ಶ್ರೀಮಂತ ಸಂಪ್ರದಾಯಗಳು ಯಾವ ಧರ್ಮದಲ್ಲಿವೆ? ದುರದೃಷ್ಟವಶಾತ್, ಹಿಂದೂಧರ್ಮದ ಬಗ್ಗೆ ಎಲ್ಲೆಡೆಯೂ ತಪ್ಪುಗ್ರಹಿಕೆಗಳೇ ತುಂಬಿವೆ. ಇದಕ್ಕೆ ಹಿಂದೂಗಳೇ ಕಾರಣ. ತಮ್ಮ ಧರ್ಮದ ಹಿರಿಮೆಯನ್ನು ಸಾರುವ, ಹುಸಿ ಪ್ರಚಾರಾಂದೋಲನವನ್ನು ಮಟ್ಟಹಾಕುವ ಕೆಲಸವನ್ನು ಅವರೆಂದೂ ಮಾಡುವುದಿಲ್ಲ. ಅಷ್ಟೇಕೆ, ಅವರು ಸ್ವಧರ್ಮದ ಬಗ್ಗೆಯೇ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಹಾಗಾಗಿ ಇತರರಿಗೆ ವಿವರಿಸಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ, ಭಾರತವೇನಾದರೂ ಹಿಂದೂಧರ್ಮವನ್ನು ತ್ಯಜಿಸಿ ಕ್ರೈಸ್ತ ಅಥವಾ ಇಸ್ಲಾಮಿಕ್ ರಾಷ್ಟ್ರವಾದರೆ ಅದೊಂದು ದೊಡ್ಡ ನಷ್ಟವೆನ್ನದೆ ಬೇರೆ ದಾರಿಯಿಲ್ಲ. ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಜಗತ್ತು ಸಾಕಷ್ಟು ನೋಡಿದೆ, ಅನುಭವಿಸಿದೆ. ಪಾಶ್ಚಿಮಾತ್ಯರೇಕೆ ಭಾರತಕ್ಕೆ ಹೋಗುತ್ತಾರೆ? ಭಾರತದ ಆಧ್ಯಾತ್ಮಿಕ eನ, ಆಧ್ಮಾತ್ಮಿಕ ಸಂಪ್ರದಾಯದ ಸಂಪತ್ತಿಗಾಗಿ ಬರುತ್ತಾರೆ. ನಿಜ ಹೇಳಬೇಕೆಂದರೆ ರಫ್ತು ಮಾಡುವಷ್ಟು ಆಧ್ಯಾತ್ಮಿಕ ಸಂಪತ್ತನ್ನು ಭಾರತ ಹೊಂದಿದೆ….

ಇಷ್ಟೆಲ್ಲವನ್ನೂ ಹೇಳಿದ್ದು ಯಾವ ಬಜರಂಗಿಯೂ ಅಲ್ಲ!

ಯಾರೋ ಕೋಮುವಾದಿ ಇರಬೇಕು ಎನ್ನಲು ಆತ ಆರೆಸ್ಸೆಸ್ಸಿಗನೂ ಅಲ್ಲ. ಹಿಂದುತ್ವವಾದಿ ಎಂದು ಕರೆಯಲು ಆತ ವಿಎಚ್‌ಪಿ ನಾಯಕನೂ ಅಲ್ಲ, ಮನುವಾದಿ ಎನ್ನಲು ಬ್ರಾಹ್ಮಣನೂ ಅಲ್ಲ. ಒಬ್ಬ ಕ್ಯಾಥೋಲಿಕ್ ಕ್ರೈಸ್ತನಾಗಿ ಮಿಷನರಿಗಳ ಕುಟುಂಬದಲ್ಲಿ ಹುಟ್ಟಿ, ಮನೆಯಲ್ಲೇ ಮಿಷನರಿಗಳ ನಗ್ನದರ್ಶನ ಮಾಡಿಕೊಂಡಂತಹ ಡಾ. ಡೆವಿಡ್ ಫ್ರಾಲಿ!! ಅಮೆರಿಕದ ಫ್ರಾಲಿ, “Christians Under Siege: A Missionary Ploy” ಎಂಬ ಪುಸ್ತಕದಲ್ಲಿ ಮತಾಂತರಿಗಳನ್ನು ಈ ರೀತಿ ಬೆತ್ತಲು ಮಾಡಿದ್ದಾರೆ. ಅವರು ಹೇಳಿದ ಹಾಗೆ, ಈ ಮಿಷನರಿಗಳು ಎಂತಹ ಚತುರಮತಿಗಳೆಂಬುದಕ್ಕೆ ಮಂಗಳೂರಿನಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. ಯಾವುದಾದರೂ ಫಿಲ್ಮ್‌ಸ್ಟಾರ್ ಅಥವಾ ಸೆಲೆಬ್ರಿಟಿಗಳನ್ನು ಕರೆಸಿದರೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ದೊರೆಯುತ್ತದೆ ಎಂಬುದು ಮಿಷನರಿಗಳಿಗೆ ಚೆನ್ನಾಗಿ ಗೊತ್ತು. ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಹಿಂದೂ ಹೋರಾಟಗಾರರ ಆತ್ಮಸ್ಥೈರ್ಯವನ್ನೇ ಉಡುಗಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಮಹೇಶ್ ಭಟ್ ಅವರನ್ನು ಕರೆಸಿ ಹೇಳಿಕೆ ಕೊಡಿಸಿದರು. ಮುರಿದುಬಿದ್ದ ಶಿಲುಬೆಯನ್ನು ಕಂಡಾಗ ಎಂಥವರಿಗೂ ಬೇಸರವಾಗುತ್ತದೆ. ಆದರೆ ಅಂತಹ ದುರದೃಷ್ಟಕರ ಘಟನೆಗೆ ಮೂಲ ಕಾರಣವೇನೆಂಬುದನ್ನು ಮಾತ್ರ ಯಾರೂ ಗಮನಿಸುವುದಿಲ್ಲ. “ಬ್ರಾಹ್ಮಣರಿಗೆಲ್ಲ ಮೂಲಪುರುಷನಾದ ವಸಿಷ್ಠ ಮಹರ್ಷಿ ಶ್ರೀರಾಮನಿಗೆ ಗುರುವೂ ಆಗಿದ್ದಾನೆ. ಈತ ವೇಶ್ಯೆಯಾದ ಊರ್ವಶಿಯ ಮಗ. ಸೂಳೆಯಾದ ಊರ್ವಶಿ ಮಹಾವಿಷ್ಣುವಿಗೆ ಕುಮಾರಿ. ಶ್ರೀಕೃಷ್ಣ ಅತ್ಯಂತ ಪ್ರಕಾಶಮಾನವಾದ ಶಮಂತಕಮಣಿಯನ್ನು ಧರಿಸಲು ಯೋಗ್ಯನಲ್ಲದಿದ್ದರೆ ಆತ ನಿಮ್ಮ ಪಾಪವನ್ನು ಹೇಗೆ ಬಿಡಿಸುವನು?”-ಹೀಗೆ ಅವಹೇಳನ ಮಾಡಿದರೆ ಯಾವ ಸ್ವಾಭಿಮಾನಿ ಹಿಂದೂ ಸುಮ್ಮನಿದ್ದಾನು? ಒಂದು ವೇಳೆ, ತನ್ನ ಜೀವವನ್ನೇ ರಕ್ಷಿಸಿಕೊಳ್ಳಲಾಗದ ಜೀಸಸ್ ಜಗತ್ತನ್ನು ಹೇಗೆ ರಕ್ಷಿಸಿಯಾನು? ಎಂದು ನಾವೂ ಪ್ರಶ್ನಿಸಿದ್ದರೆ ಕ್ರೈಸ್ತರು ಸುಮ್ಮನಿರುತ್ತಿದ್ದರೆ?

ಅದು ಬಜರಂಗ ದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ. ಡ್ಯಾನಿಶ್ ಕಾರ್ಟೂ ನಿಸ್ಟ್ ಬರೆದ ವ್ಯಂಗ್ಯಚಿತ್ರ ಪ್ರಕಟವಾದಾಗ ಮುಸ್ಲಿಮರು, ಡಾ ವಿನ್ಸಿ ಕೋಡ್, ಜೀಸಸ್‌ಕ್ರೈಸ್ಟ್ ಸೂಪರ್‌ಸ್ಟಾರ್ ಚಿತ್ರಗಳು ಬಂದಾಗ ಕ್ರೈಸ್ತರೂ ಕಾನೂನನ್ನು ಕೈಗೆತ್ತಿಕೊಂಡಿದ್ದರು. ಹಾಗಾಗಿ ಕಳೆದ ವಾರ ಕಂಡುಬಂದ ಹಿಂದೂಗಳ ಪ್ರತಿ ರೋಧವನ್ನು ಸಾರಾಸಗಟಾಗಿ ಖಂಡಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆರಳಿಸಿದ್ದು ಮೊದಲ ತಪ್ಪು.

ಇದೇನೇ ಇರಲಿ, ಹಿಂದೂ ಧರ್ಮವನ್ನು ಅವಹೇಳನ ಮಾಡಿದವರಿಗೆ ಈಗ ಬಿಸಿ ಮುಟ್ಟಿಸಿರುವುದು ಸಾಕು. ಚರ್ಚ್ ಒಡೆಯುವ ಕೆಲಸ ಬೇಡ. ಆದರೆ ನಿಮ್ಮ ಊರು, ಕೇರಿ, ಕಾಲೋನಿಗೆ ಯಾರಾದರೂ ಮತಾಂತರ ಮಾಡಲು ಬಂದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಆನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೊಲೀಸರಿಗೊಪ್ಪಿಸಿ. ದಕ್ಷಿಣ ಕೊರಿಯಾ, ಅಂಗೋಲಾ, ಬುರುಂಡಿ, ಕೆಮರೂನ್, ಚಾಡ್, ಝೈರ್, ಕೀನ್ಯಾ, ಫಿಲಿಪ್ಪೀನ್ಸ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಇವ್ಯಾವುದೂ ಮೂಲತಃ ಕ್ರೈಸ್ತ ರಾಷ್ಟ್ರಗಳಾಗಿರಲಿಲ್ಲ. ಇಂದು ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ. ಹಿಂದೂಗಳಿಂದ ಕೂಡಿದ್ದ ನಮ್ಮ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್‌ಗಳು ಈಗಾಗಲೇ ಕ್ರೈಸ್ತ ರಾಜ್ಯಗಳಾಗಿವೆ. ಆಂಧ್ರದ ವಿಜಯ ಭಾಸ್ಕರ ರೆಡ್ಡಿ, ವೈ.ಎಸ್. ರಾಜಶೇಖರ ರೆಡ್ಡಿ ಇವರ ಹೆಸರುಗಳ ಮುಂದೆ ರೆಡ್ಡಿ ಎಂಬ ಹಿಂದೂ ಸರ್‌ನೇಮ್ ಇದ್ದರೂ ಇವರ್‍ಯಾರೂ ಹಿಂದೂಗಳಲ್ಲ, ಮತಾಂತರಗೊಂಡಿರುವ ಕ್ರೈಸ್ತರು. ಒಂದು ವೇಳೆ, ಮತಾಂತರ ಹೀಗೇ ಸಾಗಿದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಇಷ್ಟಾಗಿಯೂ ದೇಶಕ್ಕೆ ಬಾಂಬಿಡುತ್ತಿರುವ ಇಂಡಿಯನ್ ಮುಜಾಹಿದ್ದೀನ್ ಮತ್ತು ಮತಾಂತರದ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸುವ ಬದಲು ಸ್ವಾಭಿಮಾನಿ ಹಿಂದೂ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುತ್ತಿರುವ ವೀರಪ್ಪ ಮೊಯ್ಲಿ, ಖರ್ಗೆ, ಡಿಕೆಶಿ, ದೇವೇಗೌಡ ಇವರು ದೇಶಕ್ಕೆ ಇನ್ನೂ ಬಲುದೊಡ್ಡ ಅಪಾಯವಾಗಿ ಪರಿಣಮಿಸುತ್ತಿದ್ದಾರೆ.

ಹಾಗಿರುವಾಗ ಗೋಕರ್ಣದ ಹಸ್ತಾಂತರ ತಡೆಯಲು ತೊಡೆತಟ್ಟಿಕೊಂಡು ಬೀದಿಗಿಳಿಯಲು ಸಿದ್ಧರಾಗುತ್ತಿರುವ ನಾಡಿನ ಯತಿವರ್ಯರು ಮೊದಲು ಧರ್ಮ ರಕ್ಷಣೆಗಾಗಿ ತೋಳನ್ನೇರಿಸುವುದು ಒಳ್ಳೆಯದು!! ಅಷ್ಟಕ್ಕೂ ಇಂದು ನಾವು ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ನಮ್ಮ ಯಾವ ಮಠಮಾನ್ಯ, ಮಂದಿರಗಳೂ ಉಳಿಯುವುದಿಲ್ಲ. ಈ ಸತ್ಯ ನಾಡಿನ ಎಲ್ಲ ಜಾತಿ ಮಠ, ಮಠಾಧೀಶರಿಗೂ ಆದಷ್ಟು ಬೇಗ ಅರ್ಥವಾದರೆ ಒಳಿತು. ಅವರೂ ಧರ್ಮ ರಕ್ಷಣೆಗೆ ಮುಂದಾಗಬೇಕು.

ಕೃಪೆ : ಪ್ರತಾಪ್ ಸಿಂಹ

ಮುರಿದ ಕೈಯಲ್ಲೇ ಕಾಶ್ಮೀರಕ್ಕಾಗಿ ಕಾದಾಡಿದವನ ನೆನಪೇಕೋ ಕಾಡುತಿದೆ

“ಒಬ್ಬ ಸೈನಿಕನ ಎದೆಗಾರಿಕೆ ಹಾಗೂ ಗಟ್ಟಿತನ ೧೯೪೭ರಲ್ಲಿ ಕಾಶ್ಮೀರದ ಇತಿಹಾಸವನ್ನೇ ಬರೆ ಯಿತು. ಒಂದು ವೇಳೆ, ಆತ ಪ್ರಾಣದ ಹಂಗು ತೊರೆದು ಹೋರಾಡದಿದ್ದರೆ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡದೇ ಹೋಗಿದ್ದಿದ್ದರೆ ಕಾಶ್ಮೀರದ ಇತಿಹಾಸವೇ ಬದಲಾಗುತ್ತಿತ್ತು, ಪಾಕಿಸ್ತಾನದ ಕೈವಶವಾಗುತ್ತಿತ್ತು” .

೨೦೦೬, ಆಗಸ್ಟ್ ೨೨ರಂದು “ಬದ್ಗಾಂ ವಾರ್ ಮೆಮೋರಿ ಯಲ್” ಅನ್ನು ಉದ್ಘಾಟನೆ ಮಾಡಿದ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಭಾವುಕರಾಗಿ ಮಾತನಾಡುತ್ತಿದ್ದರು.

ಈ ಶ್ರೀನಿವಾಸ್ ಕುಮಾರ್ ಸಿನ್ಹಾ ಯಾರೆಂದು ನೆನಪಾಯಿತೆ? ಕಳೆದ ಮೇನಲ್ಲಿ ಅಮರನಾಥ ಶ್ರೈನ್ ಬೋರ್ಡ್‌ಗೆ ೪೦ ಹೆಕ್ಟೇರ್ ಭೂಮಿ ವರ್ಗಾವಣೆ ಮಾಡುವ ಆದೇಶ ಹೊರಡಿಸಿ, ಪದಚ್ಯುತಗೊಂಡ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು. ಅಂದು ಎಸ್.ಕೆ. ಸಿನ್ಹಾ ಶ್ಲಾಘಿಸುತ್ತಿದ್ದ ಸೈನಿಕ ಮತ್ತಾರೂ ಅಲ್ಲ, ಇಪ್ಪತ್ತನಾಲ್ಕು ವರ್ಷಕ್ಕೇ ಮರೆಯಾದ ಮೇಜರ್ ಸೋಮನಾಥ ಶರ್ಮಾ! ಸಿನ್ಹಾ ಮತ್ತು ಶರ್ಮಾ ಹೆಚ್ಚೂಕಡಿಮೆ ಒಂದೇ ವಯಸ್ಸಿನವರು, ಒಂದೇ ಸೇನೆಯಲ್ಲಿ ಹೋರಾಡಿದವರು. ಜತೆಗೆ ಆಪ್ತ ಸ್ನೇಹಿತರೂ ಹೌದು.

ಅದು ಮನೆಯವರಿರಲಿ, ಸ್ನೇಹಿತರಿರಲಿ ಎಲ್ಲರೂ ಆತನನ್ನು ಪ್ರೀತಿಯಿಂದ ಪುಟ್ಟದಾಗಿ ‘ಸೋಮ್’ ಎಂದೇ ಕರೆಯುತ್ತಿದ್ದರು. ಸೋಮನಾಥನಿಗೆ ಅಚ್ಚುಮೆಚ್ಚಿನ ವಿಷಯವೆಂದರೆ ಅಜ್ಜ ಪಂಡಿತ್ ದೌಲತ್ ರಾಮ್ ಅವರು ಹೇಳುತ್ತಿದ್ದ ಭಗವದ್ಗೀತೆಯ ಕಥೆಗಳು. ದ್ವಾಪರದಲ್ಲಿ ಶ್ರೀಕೃಷ್ಣ ರಣರಂಗದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಕಲಿಯುಗದ ಸೋಮನಾಥನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ೧೯೪೭ರಲ್ಲಿ ಬದ್ಗಾಂನಲ್ಲಿ ಹೆಣವಾಗಿ ಬಿದ್ದಿದ್ದ ವಿರೂಪಗೊಂಡ ದೇಹ ಸೋಮನಾಥನದ್ದೇ ಎಂದು ಗುರುತಿಸಲು ಕಾರಣವಾಗಿದ್ದು ಆತನ ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಪುಟಗಳೇ!
೧೯೨೩, ಜನವರಿ ೩೧ರಂದು ಜನಿಸಿದ ಸೋಮನಾಥ ಶರ್ಮಾ ಅವರದ್ದು ಸೇನಾ ಹಿನ್ನೆಲೆ ಹೊಂದಿದ್ದ ಕುಟುಂಬ. ಅಪ್ಪ ಮೇಜರ್ ಜನರಲ್ ಅಮರ್‌ನಾಥ್ ಶರ್ಮಾ ಮಿಲಿಟರಿಯಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿ ದ್ದವರು. ಒಬ್ಬ ಸಹೋದರ ಲೆಫ್ಟಿನೆಂಟ್ ಜನರಲ್ ಸುರೀಂದರ್‌ನಾಥ್ ಶರ್ಮಾ ಸೇನೆಯಲ್ಲೇ ಮುಖ್ಯ ಎಂಜಿನಿಯರ್ ಆಗಿದ್ದರು. ಇನ್ನೊಬ್ಬ ವಿಶ್ವನಾಥ್ ಶರ್ಮಾ ೧೯೮೮ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾ ದವರು. ಸಹೋದರಿ ಮೇಜರ್ ಕಮಲಾ ತಿವಾರಿ ಸೇನೆಯಲ್ಲೇ ವೈದ್ಯೆಯಾಗಿದ್ದರು. ಆದರೆ ಸೋಮನಾಥನ ಮೇಲೆ ಬಹುವಾಗಿ ಪ್ರಭಾವ ಬೀರಿದ್ದು ಜಪಾನಿ ಸೇನೆಯ ಜತೆ ನಡೆದ ಕಾಳಗದಲ್ಲಿ ಪ್ರಾಣಾರ್ಪಣೆ ಮಾಡಿದ ಚಿಕ್ಕಪ್ಪ ಕ್ಯಾಪ್ಟನ್ ಕೃಷ್ಣದತ್ ವಾಸುದೇವ್. ಚಿಕ್ಕಪ್ಪನಂತೆ ತಾನೂ ರಣರಂಗದಲ್ಲಿ ಹೋರಾಡಬೇಕೆಂಬ ತುಡಿತವನ್ನಿಟ್ಟುಕೊಂಡಿದ್ದ ಸೋಮನಾಥ, ೧೧ನೇ ವರ್ಷಕ್ಕೆ ಅಂದರೆ ೧೯೩೪ರಲ್ಲಿ ರಾಯಲ್ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡ. ಏಳು ವರ್ಷಗಳ ಕಾಲ ಪರಿಶ್ರಮಪಟ್ಟು ಓದಿ ತೇರ್ಗಡೆಯಾದ ಸೋಮನಾಥನನ್ನು ೧೯೪೨, ಫೆಬ್ರವರಿ ೨೨ರಂದು ಬ್ರಿಟಿಷ್ ಸೇನೆಯ ‘ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆ ಮಾಡಲಾಯಿತು. ಅದರ ಬೆನ್ನಲ್ಲೇ ಮೊದಲ ಸತ್ವಪರೀಕ್ಷೆಯೂ ಎದುರಾಯಿತು. ಅದಾಗಲೇ ಎರಡನೇ ಮಹಾಯುದ್ಧ ಆರಂಭವಾಗಿ ಮೂರು ವರ್ಷಗಳಾಗಿದ್ದವು. ಭಾರತವನ್ನಾಳುತ್ತಿದ್ದ ಬ್ರಿಟಿಷ ರನ್ನು ಜಪಾನಿ ಸೇನೆ ನಿದ್ದೆಗೆಡಿಸಿತ್ತು. ಬರ್ಮಾ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿದ್ದ ಜಪಾನಿ ಸೇನೆಯನ್ನು ಅರಕ್ಕಾನ್‌ನಲ್ಲಿ ಎದುರಿಸಲಾಯಿತು. ಆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯನ್ನು ಮುನ್ನಡೆಸು ತ್ತಿದ್ದವರು ನಮ್ಮ ಜನರಲ್ ಕೆ.ಎಸ್. ತಿಮ್ಮಯ್ಯ. ಅಂತಹ ವೀರಸೇನಾನಿಯ ಕೆಳಗೆ ಯುವ ಲೆಫ್ಟಿನೆಂಟ್ ಸೋಮನಾಥ ಶರ್ಮಾ ಮೊದಲ ಯುದ್ಧಪಾಠ ಕಲಿಯಲಾರಂಭಿಸಿದರು. ೧೯೪೫, ಸೆಪ್ಟೆಂಬರ್‌ನಲ್ಲಿ ಜಪಾನ್ ಶರಣಾಗುವುದರೊಂದಿಗೆ ಸೋಮನಾಥ ಶರ್ಮಾ ದೇಶಕ್ಕೆ ವಾಪಸ್ಸಾದರು. ಇದಾಗಿ ಎರಡು ವರ್ಷಗಳಲ್ಲಿ ಭಾರತಕ್ಕೂ ಸ್ವಾತಂತ್ರ್ಯ ಬಂತು. ಅದರ ಬೆನ್ನಲ್ಲೇ ಪಂಜಾಬ್‌ನಲ್ಲಿ ಕೋಮುದಳ್ಳುರಿ ಆರಂಭವಾಯಿತು. ಅದನ್ನು ನಂದಿಸುವ ಕೆಲಸಕ್ಕಾಗಿ ಹೈದರಾಬಾದ್ ರೆಜಿಮೆಂಟನ್ನು ನಿಯೋಜಿಸಲಾಯಿತು. ಹೀಗೆ ಪಂಜಾಬ್‌ಗೆ ತೆರಳಿದ ಸೋಮನಾಥ್ ಶರ್ಮಾ ಕೋಮು ಹಿಂಸಾಚಾರವನ್ನು ನಂದಿಸಿ ದಿಲ್ಲಿಗೆ ವಾಪಸ್ಸಾಗುವ ವೇಳೆಗೆ ಕೈ ಮುರಿದುಕೊಂಡಿದ್ದರು, ಪಟ್ಟಿಕಟ್ಟಿಕೊಂಡು ಓಡುತ್ತಿದ್ದರು. ಗುಣಮುಖರಾಗುವವರೆಗೂ ಯಾವ ಮಿಲಿಟರಿ ಕಾರ್ಯಾ ಚರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ.

ಅದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಆಘಾತವುಂಟಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದವು.

೧೯೪೭, ಅಕ್ಟೋಬರ್ ತಿಂಗಳ ಮೊದಲ ಭಾಗದಲ್ಲಿ ಡೇರಾದ ಕಮೀಷನರ್ ಇಸ್ಮಾಯಿಲ್ ಖಾನ್ ಅವರಿಂದ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂದೇಶವೊಂದು ಬಂತು. ಪಾಕಿಸ್ತಾನ ಕಾಶ್ಮೀರದ ಗಡಿಯತ್ತ ತನ್ನ ಶಸ್ತ್ರಸಜ್ಜಿತ ಪಡೆಯನ್ನು ನಿಯೋಜಿಸುತ್ತಿರುವ ಸುದ್ದಿ ಅದಾಗಿತ್ತು. ಆ ಅಧಿಕಾರಿ ಪಾಕಿಸ್ತಾನದ ದೂರ್ತ ಉದ್ದೇಶದ ಬಗ್ಗೆ ಎಚ್ಚರಿಕೆಯ ಸಂದೇಶವನ್ನೇನೋ ಮುಟ್ಟಿಸಿದ. ಆದರೆ ಕ್ರಮ ಕೈಗೊಳ್ಳಲು ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ. ಒಂದೆಡೆ ಮಹಾರಾಜ ಹರಿಸಿಂಗ್ ಕಾಶ್ಮೀರವನ್ನು ಭಾರತದೊಂದಿಗೇ ವಿಲೀನಗೊಳಿಸಲು ನಿರಾಕರಿಸಿದರೆ, ಪಾಕ್ ವಿರುದ್ಧ ಆಯಾಚಿತವಾಗಿ ಕ್ರಮಕೈಗೊಳ್ಳಲು ಪ್ರಧಾನಿ ನೆಹರು ಒಪ್ಪದಾದರು. ಆದರೆ ಕೇವಲ ಎರಡೇ ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ೧೯೪೭, ಅಕ್ಟೋಬರ್ ೨೨ರಂದು ವೇಷ ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದ್ದ ಮುಜಫರಾಬಾದ್ ಮೇಲೆ ಆಕ್ರಮಣ ಮಾಡಿ, ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದರು. ಉರಿ, ಮಹುರಾಗಳನ್ನೂ ವಶಪಡಿಸಿಕೊಂಡರು. ಕೇವಲ ೫೦ ಮೈಲು ದೂರದಲ್ಲಿದ್ದ ಶ್ರೀನಗರದ ವಿದ್ಯುತ್ ಸಂಪರ್ಕವನ್ನೇ ಕಡಿದು ಕತ್ತಲಲ್ಲಿ ಮುಳುಗಿಸಿದರು. ಹೀಗೆ ನಾಟಕೀಯ ತಿರುವು ಪಡೆದುಕೊಂಡ ಪರಿಸ್ಥಿತಿಯ ಮೇಲೆ ನಿಗಾಯಿಟ್ಟಿದ್ದ ಆಗಿನ ಗೃಹ ಸಚಿವ ಸರ್ದಾರ್ ಪಟೇಲರು ತಮ್ಮ ಆಪ್ತ ಸಹಚರ ವಿ.ಪಿ. ಮೆನನ್ ಅವರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿ ಭಾರತದೊಂದಿಗೆ ವಿಲೀನಗೊಳ್ಳುವ ಪ್ರಸ್ತಾ ವಕ್ಕೆ ಸಹಿಹಾಕಲು ಮಹಾರಾಜ ಹರಿಸಿಂಗ್ ಅವರ ಮನವೊಲಿಸಿದರು. ಅಲ್ಲದೆ ವಿಲೀನ ಪತ್ರಕ್ಕೆ ಸಹಿಯನ್ನೂ ಹಾಕಿಸಿಕೊಂಡರು. ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲು ದಿಲ್ಲಿಯಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಕಚೇರಿಯಲ್ಲಿ ಐತಿಹಾಸಿಕ ಸಭೆ ಏರ್ಪಾಡಾಯಿತು. ಆದರೆ ಅಂತಹ ಗಂಭೀರ ಸನ್ನಿವೇಶದಲ್ಲೂ ‘ವಿಶ್ವಸಂಸ್ಥೆ, ರಷ್ಯಾ, ಆಫ್ರಿಕಾ, ದೇವರು-ದಿಂಡಿರು’ ಅಂತ ನೆಹರು ಹುಂಬತನದಿಂದ ಮಾತನಾಡುತ್ತಿದ್ದರು. ಆದರೆ ತಾಳ್ಮೆ ಕಳೆದುಕೊಂಡ ಸರ್ದಾರ್ ಪಟೇಲ್, “ಜವಾಹರ್, ನಿನಗೆ ಕಾಶ್ಮೀರ ಬೇಕೋ ಅಥವಾ ಕಾಶ್ಮೀರವನ್ನು ಧಾರೆ ಎರೆಯುತ್ತೀಯೋ?” ಎಂದು ಏರು ಧ್ವನಿಯಲ್ಲಿ ಕೇಳಿದರು. ಸರ್ದಾರ್ ಮಾತಿಗೆ ಹೆದರಿದ ನೆಹರು “ಖಂಡಿತ, ನನಗೆ ಕಾಶ್ಮೀರ ಬೇಕು” ಎಂದರು. ಹಾಗಾದರೆ “ಅನುಮತಿ ಕೊಡು” ಎಂದು ಮತ್ತೆ ಗದರಿಸಿದರು. ನೆಹರು ಅನುಮತಿಯೂ ದೊರೆಯಿತು. ಎಲ್ಲವೂ ತ್ವರಿತವಾಗಿ ಸಂಭವಿಸಲಾರಂಭಿಸಿದವು. ಮರುದಿನ ಬೆಳಗ್ಗೆ ದಿಲ್ಲಿಯ ಪಾಲಂ ಏರ್‌ಪೋರ್ಟ್ ನಿಂದ ಶ್ರೀನಗರಕ್ಕೆ ಸೇನೆ ಹಾಗೂ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಹಾಗೆ ಶ್ರೀನಗರಕ್ಕೆ ಆಗಮಿಸಿದ ಯುವ ಸೇನಾಧಿಕಾರಿಯೇ ಮೇಜರ್ ಎಸ್.ಕೆ. ಸಿನ್ಹಾ. “ಭಾರತೀಯ ಸೈನಿಕರ ಮುಖದಲ್ಲಿ ಅಂಥದ್ದೊಂದು ಉತ್ಸಾಹ, ಏನಾದರೂ ಮಾಡಬೇಕೆಂಬ ಛಲವನ್ನು ಹಿಂದೆಂದೂ ಕಂಡಿರಲಿಲ್ಲ. ಭಾರತೀಯರೆಲ್ಲರ ದೃಷ್ಟಿ ನಾವು ತೋರುವ ಶೌರ್ಯದ ಮೇಲೆಯೇ ನೆಟ್ಟಿದೆ ಎಂದು ಸೈನಿಕರಿಗೂ ಗೊತ್ತಿತ್ತು” ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಸಿನ್ಹಾ.

ಶ್ರೀನಗರ ಏರ್‌ಪೋರ್ಟ್‌ನಲ್ಲಿ ಸ್ನೇಹಿತ ಮೇಜರ್ ಸೋಮನಾಥ ಶರ್ಮಾ ಕೈಗೆ ಪಟ್ಟಿಕಟ್ಟಿಕೊಂಡು ನಿಂತಿರುವುದು ಕಂಡಿತು. ಯುದ್ಧಕ್ಕೆ ತೆರಳುವಂತೆ ಹೈದರಾಬಾದ್ ರೆಜಿಮೆಂಟ್‌ಗೆ ಸೂಚಿಸಿದ್ದ ಕಾರಣ ಸಿನ್ಹಾ ಅವರಿಗಿಂತ ಒಂದು ದಿನ ಮೊದಲೇ ಶರ್ಮಾ ಶ್ರೀನಗರಕ್ಕೆ ಆಗಮಿಸಿದ್ದರು. ಆದರೆ ಎಲ್ಲರೂ ಉತ್ಸಾಹಿತರಾಗಿದ್ದರೆ, ಶರ್ಮಾ ಮಾತ್ರ ಹ್ಯಾಪುಮೋರೆ ಹಾಕಿಕೊಂಡಿದ್ದರು. ಕೈ ಮುರಿದುಕೊಂಡಿದ್ದ ಅವರಿಗೆ ಯಾವ ಜವಾಬ್ದಾರಿಯನ್ನೂ ನೀಡಿರಲಿಲ್ಲ. ಆದರೆ ಅವರ ಹೈದರಾಬಾದ್ ರೆಜಿಮೆಂಟನ್ನು ಯುದ್ಧಕ್ಕೆ ನಿಯೋಜಿಸಿದ್ದ ಕಾರಣ ಸೇನಾ ತುಕಡಿಯೊಂದಿಗೆ ಶ್ರೀನಗರಕ್ಕೆ ಬಂದಿದ್ದರು. ಅವರ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ಸಿನ್ಹಾ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯತೆ ಹಾಗೂ ವಿವಿಧ ಸೇನಾ ತುಕಡಿಗಳ ನಡುವಿನ ಸಂಚಾಲನೆಯ ಪ್ರಾಮುಖ್ಯತೆಯ ಬಗ್ಗೆ ಶರ್ಮಾ ಜತೆ ಚರ್ಚಿಸಿದರು. ಆದರೆ ಸೋಮನಾಥ ಶರ್ಮಾ ಮನಸ್ಸು ರಣರಂಗದಲ್ಲಿ ಶತ್ರುವಿಗೆ ಸವಾಲೆಸೆಯಲು ಹಾತೊರೆಯುತ್ತಿತ್ತು. ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ ಸಿನ್ಹಾ ದಿಲ್ಲಿಗೆ ವಾಪಸ್ಸಾದರು. ಆದರೆ ಮುಂದಿನ ೪೮ ಗಂಟೆಗಳಲ್ಲಿ ಹೀರೊವೊಬ್ಬ ಹೊರಹೊಮ್ಮಿ ವೀರ ಮರಣವನ್ನಪ್ಪುತ್ತಾನೆ ಎಂದು ಅವರು ಎಣಿಸಿರಲಿಲ್ಲ.

ಅಂದು ೧೯೪೭, ನವೆಂಬರ್ ೩.

ಪಾಕಿಸ್ತಾನಿ ಸೈನಿಕರು ಶ್ರೀನಗರಕ್ಕೆ ತೀರಾ ಸಮೀಪ ದಲ್ಲಿರುವ ಬದ್ಗಾಂವರೆಗೂ ಆಗಮಿಸಿದರು. ಒಂದು ವೇಳೆ, ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋದಂತೆಯೇ. ಅಷ್ಟಕ್ಕೂ ವಿಮಾನ ನಿಲ್ದಾಣ ಕೈತಪ್ಪಿದರೆ ಕಾದಾಡುತ್ತಿದ್ದ ನಮ್ಮ ಸೇನೆಗೆ ಯುದ್ಧಸಾಮಗ್ರಿಗಳನ್ನು ಪೂರೈಸುವುದಕ್ಕೇ ಕುತ್ತು ಎದುರಾಗುತ್ತಿತ್ತು. ಸೋಲು ಖಚಿತವಾಗುತ್ತಿತ್ತು. ಶ್ರೀನಗರಕ್ಕೆ ಕಾಲಿಡುವವರೆಗೂ ಕೈಕಟ್ಟಿಕೊಂಡು ಕುಳಿತರೆ ಅಪಾಯ ಖಂಡಿತ ಎಂದರಿತ ಸೋಮನಾಥ ಶರ್ಮಾ, ಕೈ ಮುರಿದಿರುವುದನ್ನೂ ಲೆಕ್ಕಿಸದೇ ಸೇನಾ ತುಕಡಿಯನ್ನು ಕೊಂಡೊಯ್ದು ಬದ್ಗಾಂನಲ್ಲೇ ಶತ್ರುವಿಗೆ ಸವಾಲೆಸೆದರು. ಆದರೆ ಬೃಹತ್ ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ನಮ್ಮ ಒಬ್ಬ ಸೈನಿಕನಿಗೆ ಪ್ರತಿಯಾಗಿ ೭ ಜನರಿದ್ದರು! ಆದರೂ ತುರ್ತು ಪಡೆ ಆಗಮಿಸುವವರೆಗೂ ಹೋರಾಡಬೇಕಾಗಿತ್ತು. ಶತ್ರು ಒಂದು ಇಂಚೂ ಮುಂದೆ ಬಾರದಂತೆ ತಡೆಯಬೇಕಿತ್ತು. ಮಧ್ಯಾಹ್ಮ ೨.೩೦ಕ್ಕೆ ಕಾದಾಟ ಆರಂಭವಾಯಿತು. “ಶತ್ರುಗಳು ನಮ್ಮಿಂದ ಕೇವಲ ೫೦ ಯಾರ್ಡ್ ದೂರದಲ್ಲಿದ್ದಾರೆ, ಭಾರೀ ಸಂಖ್ಯೆಯಲ್ಲೂ ಇದ್ದಾರೆ. ಆದರೇನಂತೆ ಕೊನೆಯ ಶತ್ರುವನ್ನು ಕೆಳಗೆ ಕೆಡವುವವರೆಗೂ, ಕಡೆಯ ಸುತ್ತಿನ ಗುಂಡು ಮುಗಿಯುವವರೆಗೂ ಹೋರಾಡುವೆ” ಎಂಬ ವೈರ್‌ಲೆಸ್ ಸಂದೇಶ ಕಳುಹಿಸಿದ ಸೋಮನಾಥ ಶರ್ಮಾ ಮುರಿದ ಕೈಯಲ್ಲೇ ಬಂದೂಕು ಹಿಡಿದು ಶತ್ರುವಿನ ಮೇಲೆ ಮುಗಿಬಿದ್ದರು. ಅದೇ ಅವರ ಕೊನೆಯ ಸಂದೇಶವೂ ಆಗಿತ್ತು! ಕಾದಾಟದಲ್ಲಿ ಹೈದರಾಬಾದ್ ರೆಜಿಮೆಂಟ್‌ನ ಅರ್ಧಕ್ಕರ್ಧ ಸೈನಿಕರು ಹತರಾದರು. ಆದರೇನಂತೆ ೨೦೦ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನೂ ಕೊಂದುಹಾಕಿದ ಭಾರತೀಯ ಯೋಧರು, ಶತ್ರುಗಳು ಮುಂದೆ ಹೆಜ್ಜೆ ಹಾಕಲು ಬಿಡಲಿಲ್ಲ. ಅಷ್ಟರಲ್ಲಿ ಸಾಯಂಕಾಲವಾಯಿತು, ತುರ್ತುಪಡೆಯೂ ಆಗಮಿಸಿತು. ಪಾಕಿಸ್ತಾನವನ್ನು ಮಟ್ಟಹಾಕಲಾಯಿತು.

ಆದರೆ ಶತ್ರುಗಳನ್ನು ತಡೆದು ನಿಲ್ಲಿಸಿದ ಮೇಜರ್ ಸೋಮನಾಥ್ ಶರ್ಮಾ ಹೆಣವಾಗಿದ್ದರು.

ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಯಿತು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹ ಅವರದ್ದೇ ಎಂದು ಸಾರಿ ಹೇಳಿದ್ದು ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಹಾಳೆಗಳು! ಅದುವರೆಗೂ ಯುದ್ಧ ಕಾಲದಲ್ಲಿ ತೋರುವ ಶೌರ್ಯಕ್ಕಾಗಿ ನೀಡುತ್ತಿದ್ದ ಅತಿದೊಡ್ಡ ಗೌರವವೆಂದರೆ ‘ವಿಕ್ಟೋರಿಯಾ ಕ್ರಾಸ್’ ಆಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ದಾಸ್ಯದ ಸಂಕೇತವಾಗಿದ್ದ ವಿಕ್ಟೋರಿಯಾ ಕ್ರಾಸ್ ಬದಲು ‘ಪರಮವೀರ ಚಕ್ರ’ವನ್ನು ರೂಪಿಸಲಾಯಿತು. ಪರಮವೀರ ಚಕ್ರವನ್ನು ವಿನ್ಯಾಸ ಮಾಡಿದ್ದು ಸೇನಾಧಿಕಾರಿ ವಿಕ್ರಮ್ ಕಾನೋಲ್ಕರ್ ಅವರ ಹಂಗರಿ ಮೂಲದ ಪತ್ನಿ ಸಾವಿತ್ರಿ ಕಾನೋಲ್ಕರ್(ಇವಾ ಲಿಂಡಾ). ಕುತೂಹಲದ ಸಂಗತಿಯೆಂದರೆ ಆಕೆ ವಿನ್ಯಾಸ ಮಾಡಿದ ಮೊದಲ ಪರಮವೀರ ಚಕ್ರ ಆಕೆಯ ಹಿರಿಯ ಮಗಳ ಮೈದುನ ಮೇಜರ್ ಸೋಮನಾಥ ಶರ್ಮಾ ಅವರಿಗೇ ನೀಡಲಾಯಿತು. ಮೊದಲ ಪರಮ ವೀರ ಚಕ್ರ ಪುರಸ್ಕೃತ ಸೋಮನಾಥ ಶರ್ಮಾ ಹಾಗೂ ೧೯೯೯ರಲ್ಲಿ ಮರಣೋತ್ತರವಾಗಿ ಪರಮವೀರ ಚಕ್ರ ಪಡೆದ ಕಾರ್ಗಿಲ್ ಕಲಿ ವಿಕ್ರಂ ಬಾತ್ರಾ ಇಬ್ಬರೂ ಒಂದೇ ಊರಿನವರು. ಹಿಮಾಚಲ ಪ್ರದೇಶದ ಪಾಲಂಪುರದವರು.

ಇವತ್ತು ಸೋಮನಾಥ ಶರ್ಮಾ ನಮ್ಮೊಂದಿಗಿಲ್ಲ.

ಮಡಿದು ೬೦ ವರ್ಷಗಳಾದವು. ಅಂದು ಒಬ್ಬ ಆರ್ಮಿ ಮ್ಯಾನ್ ಆಗಿದ್ದ ಅವರು ತೋರಿದ ಶೌರ್ಯದಿಂದಾಗಿ ಶ್ರೀನಗರ ವಿಮಾನ ನಿಲ್ದಾಣ ಶತ್ರುಗಳ ಪಾಲಾಗಿ ಏರ್‌ಫೋರ್ಸ್‌ಗೆ ಹಿನ್ನಡೆಯುಂಟಾಗುವುದು ತಪ್ಪಿತು. ನಾಡಿದ್ದು ಅಕ್ಟೋಬರ್ ೮ರಂದು ‘ಏರ್‌ಫೋರ್ಸ್ ಡೇ’. ಹಾಗಾಗಿ ಶರ್ಮಾ ಅವರನ್ನು ನೆನಪಿಸಿಕೊಳ್ಳಬೇಕೆನಿಸಿತು. “ಒಬ್ಬ ಅಪ್ಪನಾದವನ ಜೀವಮಾನದ ಅತ್ಯಂತ ದುಖಃಕರ ಕ್ಷಣವೆಂದರೆ ಮಗನ ಹೆಣಕ್ಕೆ ಹೆಗಲು ಕೊಡುವ ದಿನ” ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಅಮರ್‌ನಾಥ್ ಶರ್ಮಾ, ಜಿ.ಎಲ್. ಬಾತ್ರಾ ಅವರಂತಹ ತಂದೆಯರು ದೇಶ ರಕ್ಷಣೆಗಾಗಿ ಮಕ್ಕಳನ್ನೇ ಬಲಿಕೊಟ್ಟಿದ್ದಾರೆ. ಇಂತಹ ಮಹಾನ್ ತ್ಯಾಗಿಗಳ ನಡುವೆ “ಔಟ್‌ಲುಕ್ ಮ್ಯಾಗಝಿನ್‌ಗೆ ಮಾರುದ್ದದ ಆರ್ಟಿಕಲ್ ಬರೆದು ಮುಸಲ್ಮಾನರ ಇಚ್ಛೆಯಂತೆ ಕಾಶ್ಮೀರವನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ವಾದಿಸುವ ಅರುಂಧತಿ ರಾಯ್ ಅವರಂತಹ ಕ್ಷುಲ್ಲಕ ಮನಸ್ಸುಗಳೂ ಇವೆ. ಆದರೇನಂತೆ ಕೈಮುರಿದುಕೊಂಡಿದ್ದರೂ ಕಾಶ್ಮೀರವನ್ನು ಬಿಟ್ಟುಕೊಡಲು ಒಪ್ಪದ ಸೋಮನಾಥ ಶರ್ಮಾ ಅವರನ್ನು ನಾವಾದರೂ ನೆನಪಿಸಿಕೊಳ್ಳೋಣ.

ಕೃಪೆ : ಪ್ರತಾಪ್ ಸಿಂಹ

ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನಾ ಬಿಶಪ್?

City of God.

ಜೆರುಸಲೇಂ ಅನ್ನು ಕ್ರೈಸ್ತರು ಕರೆಯುವುದೇ ಹಾಗೆ. ಅವರ ಆರಾಧ್ಯದೈವ ಜೀಸಸ್ ಜನಿಸಿದ್ದು ಜೆರುಸಲೇಂ ಬಳಿಯ ಬೆತ್ಲಹೇಮ್‌ನಲ್ಲಿ. ಬಾಲ್ಯವನ್ನು ಕಳೆದಿದ್ದು ಜೆರುಸಲೇಂನಲ್ಲಿ. ಜೀಸಸ್‌ನನ್ನು ಶಿಲುಬೆಗೆ ಏರಿಸಿದ ಕ್ಯಾಲ್‌ವರಿ ಹಿಲ್ ಇರುವುದೂ ಜೇರುಸಲೇಂನಲ್ಲೇ. ಈ ಎಲ್ಲ ಕಾರಣ ಗಳಿಂದಾಗಿ ಕ್ರೈಸ್ತರಿಗೆ ಜೆರುಸಲೇಂಗಿಂತ ಪವಿತ್ರ ಸ್ಥಳ ಜಗತ್ತಿನಲ್ಲಿ ಬೇರೊಂದಿಲ್ಲ. ಇಂತಹ ಜೇರುಸಲೇಂ 1076ರಲ್ಲಿ ಮುಸ್ಲಿಮರ ವಶವಾಯಿತು.

ಅದು ಮುಸ್ಲಿಮರಿಗೂ ಪವಿತ್ರ ಸ್ಥಳ. ಪ್ರವಾದಿ ಮೊಹಮದ್ ಪೈಗಂಬರ್ ಜೆರುಸಲೇಂಗೆ ಆಗಮಿಸಿದ್ದರು, ಅಲ್ಲಿನ ಬಂಡೆಯೊಂದರ ಮೇಲೆ ಕುಳಿತು ಪ್ರಾರ್ಥಿಸಿದ್ದರು ಎಂಬ ನಂಬಿಕೆ ಮುಸ್ಲಿಮರಲ್ಲೂ ಇದೆ. ಅಲ್ಲೊಂದು ಭವ್ಯ ಮಸೀದಿಯನ್ನೂ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಜೆರುಸಲೇಂ ಅನ್ನು ವಶಪಡಿಸಿಕೊಂಡಿದ್ದು ಸಹಜವಾಗಿಯೇ ಮುಸ್ಲಿಮರಿಗೆ ಹೆಮ್ಮೆಯ ವಿಷಯವಾಯಿತು. ಆದರೆ ಜೆರುಸಲೇಂ ಮುಸ್ಲಿಮರ ವಶವಾದ ನಂತರ ಕ್ರೈಸ್ತರು ತಮ್ಮ ಪವಿತ್ರ ಸ್ಥಳವಾದ ಅಲ್ಲಿಗೆ ಯಾತ್ರೆ ಕೈಗೊಳ್ಳಲು ಭಾರೀ ಅಡಚಣೆಯುಂಟಾಯಿತು. ಇದು ಕ್ರೈಸ್ತರನ್ನು ಕುಪಿತ ಗೊಳಿಸಿತು.

ಆಗಿನ ಪೋಪ್ ಎರಡನೇ ಅರ್ಬನ್ ಸ್ವತಃ ಯುದ್ಧ ಕಹಳೆಯೂದಿದರು. 1095ರಲ್ಲಿ ಫ್ರಾನ್ಸ್‌ನಲ್ಲಿ ಕ್ರೈಸ್ತರನ್ನುದ್ದೇಶಿಸಿ ಭಾಷಣ ಮಾಡಿದ ಪೋಪ್ ಅರ್ಬನ್, “ಮುಸ್ಲಿಮರನ್ನು ಬಡಿದಟ್ಟಿ ಜೆರುಸಲೇಮನ್ನು ಮತ್ತೆ ವಶಪಡಿಸಿಕೊಳ್ಳಬೇಕೆನ್ನುವ ನೈಜ ಕ್ರಿಶ್ಚಿಯನ್ನರಿದ್ದಾರೆ. ಕೆಲವರು ಪಾಪ ಮಾಡಿದ್ದು, ಅವರು ಧರ್ಮಯುದ್ಧಕ್ಕೆ ಮುಂದಾದರೆ ದೇವರು ಅಂತಹವರನ್ನು ಕ್ಷಮಿಸಬಹುದು. ಒಂದು ವೇಳೆ ಹೋರಾಟದಲ್ಲಿ ಮಡಿದರೆ ಅವರು ದೇವರಿಗಾಗಿ ಪ್ರಾಣತ್ಯಾಗ ಮಾಡಿರುವುದರಿಂದ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ತನಗಾಗಿ ಮಡಿದವರ ಎಲ್ಲ ಪಾಪಗಳನ್ನೂ ಭಗವಂತ ಮನ್ನಿಸುತ್ತಾನೆ. ಯಾರೂ ಹಿಂಜರಿಯಬಾರದು. ಎಲ್ಲರೂ ಮುನ್ನಡೆಯಬೇಕು. God wills it!”

ಇಂತಹ ಪೋಪ್ ಕರೆ ಕ್ರೈಸ್ತರನ್ನು ಹುರಿದುಂಬಿಸಿತು. ಹೀಗೆ 1096ರಲ್ಲಿ ಆರಂಭವಾಗಿದ್ದೇ ಮೊದಲ ಧರ್ಮಯುದ್ಧ (ಕ್ರುಸೇಡ್). 1099ರಲ್ಲಿ ಜೇರುಸಲೇಮ್ ಕ್ರೈಸ್ತರ ಪಾಲಾಯಿತು. ಆದರೆ ಕ್ರುಸೇಡ್ ನಿಲ್ಲಲಿಲ್ಲ. ಬರೀ ಜೆರುಸಲೇಂ ಮಾತ್ರವಲ್ಲ, ಪಶ್ಚಿಮ ಏಷ್ಯಾದಿಂದಲೇ ಮುಸ್ಲಿಮರನ್ನು ಹೊರದಬ್ಬಬೇಕೆಂಬ ಉದ್ದೇಶದಿಂದ ಹೋರಾಟ ಮುಂದು ವರಿಯಿತು. ಕಾಲಾಂತರದಲ್ಲಿ ಇಸ್ಲಾಂ ಯುರೋಪ್‌ಗೆ ಹರಡುವುದನ್ನು ತಡೆಯುವುದಕ್ಕೂ ಪ್ರಯತ್ನಿಸಲಾಯಿತು. ಹೀಗಾಗಿ ಸುಮಾರು 200 ವರ್ಷಗಳ ಕಾಲ, ಅಂದರೆ 1096 ರಿಂದ 1270ರವರೆಗೂ 8 ಕ್ರುಸೇಡ್‌ಗಳು ನಡೆ ದವು. ಇಂತಹ ಧರ್ಮಯುದ್ಧಗಳಿಗೆ ಕ್ಯಾಥೋಲಿಕ್ ಕ್ರೈಸ್ತ ಗುರುಗಳೇ ಕರೆ ನೀಡಿದ್ದರು.

‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ನಮ್ಮ ಹಿಂದೂ ಧರ್ಮ ದಲ್ಲಿ ಹೇಳಿರುವುದೂ ಇದನ್ನೇ ಅಲ್ಲವೆ?

ಮುಂದೆ ಹದಿನೈದನೇ ಶತಮಾನದಲ್ಲಿ ಕ್ರೈಸ್ತರು ಹೊಸ ತಕರಾರು ಎತ್ತಿದರು. ಆಧುನಿಕ ಖಗೋಳಶಾಸ್ತ್ರದ ಸಂಸ್ಥಾಪಕ ನಾದ ಪೊಲೆಂಡ್‌ನ ನಿಕೋಲಸ್ ಕೋಪರ್‌ನಿಕಸ್ “On the Revolutions of the Heavenly Bodies” ಎಂಬ ಪುಸ್ತಕದಲ್ಲಿ ಸೌರಮಂಡಲದ ಕೇಂದ್ರ ಸೂರ್ಯನೇ ಹೊರತು ಭೂಮಿಯಲ್ಲ ಎಂದ. ಅದನ್ನು “Heliocentric System” ಎಂದು ಕರೆದ. ಭೂಮಿಯೂ ಮತ್ತೊಂದು ಗ್ರಹ. ಸೂರ್ಯನಿಂದ ಮೂರನೇ ಸ್ಥಾನದಲ್ಲಿದೆ. ಭೂಮಿಯ ಕಕ್ಷೆಯಲ್ಲಿ ಚಂದ್ರನಿದ್ದಾನೆ. ನಕ್ಷತ್ರಗಳು ಬಲು ದೂರ ಇದ್ದು, ಅವು ಸೂರ್ಯನ ಸುತ್ತ ಸುತ್ತುವುದಿಲ್ಲ. ಭೂಮಿವರ್ಷಕ್ಕೊಮ್ಮೆ ಸೂರ್ಯನ ಸುತ್ತ ಸುತ್ತುತ್ತದೆ ಎಂದು ವಾದಿಸಿದ. ೧೫೪೩ರಲ್ಲಿ ಕೋಪರ್‌ನಿಕಸ್‌ನೇನೋ ಮರಣವನ್ನಪ್ಪಿದ. ಆದರೆ ಅವನ ಸಂಶೋಧನೆ ಆತ ಸತ್ತ ನಂತರ ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿತು. ಆತನ ನಂತರ ಬಂದ ಇಟಲಿಯ ವಿeನಿಗಳಾದ ಗಿಯೋರ್ಡಿನೋ ಬ್ರೂನೋ ಹಾಗೂ ಗೆಲಿಲಿಯೋ ಕೂಡ ಕೋಪರ್‌ನಿಕಸ್‌ನ ವಾದ ಸರಣಿಯನ್ನು ಒಪ್ಪಿದರು. “ಸೌರಮಂಡಲದ ಕೇಂದ್ರಬಿಂದು ಭೂಮಿಯಲ್ಲ. ಸೂರ್ಯ ಭುವನದ ಕೇಂದ್ರದಲ್ಲಿ ಸ್ಥಿರವಾಗಿದ್ದಾನೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ” ಎಂದ ಗೆಲಿಲಿಯೋ Heliocentrism ಅನ್ನು ಸಮರ್ಥನೆ ಮಾಡಿದ. ಇದರಿಂದ ಚರ್ಚ್ ಎಷ್ಟು ಕುಪಿತಗೊಂಡಿತೆಂದರೆ ಆಗಿನ ಪೋಪ್ ಎಂಟನೇ ಅರ್ಬನ್, “ಸೂರ್ಯನೇ ಜಗತ್ತಿನ ಕೇಂದ್ರ ಮತ್ತು ಅದು ಚಲನಶೀಲವಲ್ಲ ಎಂಬ Heliocentrism ಒಂದು ಪೊಳ್ಳು, ತಾತ್ವಿಕವಾದ ಸುಳ್ಳು. ಅದು ಕ್ರೈಸ್ತರ ಪವಿತ್ರ ಸೃಷ್ಟಿ ಸಿದ್ಧಾಂತಕ್ಕೆ ತದ್ವಿರುದ್ಧವಾದುದು” ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡನೆ ಮಾಡಿದರು. ಅಷ್ಟೇ ಅಲ್ಲ, ಇವರಿಬ್ಬರ ಸಂಶೋಧನೆ ಮೇಲೆ ನಿರ್ಬಂಧವನ್ನೂ ಹೇರಿದರು. ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು. 1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ ಪೋಪ್. ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ, ೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.

ಅಷ್ಟಕ್ಕೂ ಇವರಿಬ್ಬರೂ ಮಾಡಿದ ತಪ್ಪೇನು ಗೊತ್ತೆ?

“ದೇವರು ಮೊದಲು ಸ್ವರ್ಗವನ್ನು, ನಂತರ ಜಗತ್ತನ್ನು ಸೃಷ್ಟಿಸಿದ. ಆತ ಭೂಮಿಯನ್ನು ಅಚಲವಾಗಿಟ್ಟಿದ್ದಾನೆ. ಅದು ಚಲಿಸುವುದಿಲ್ಲ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ ಹಾಗೂ ಮೂಲಸ್ಥಾನಕ್ಕೆ ತೆರಳುತ್ತಾನೆ” ಎನ್ನುತ್ತದೆ ಬೈಬಲ್. ಆದರೆ ಕೋಪರ್‌ನಿಕಸ್, ಗೆಲಿಲಿಯೋ, ಬ್ರೂನೋ ಮಾಡಿದ ಸಂಶೋಧನೆಗಳು ಇಂತಹ ನಂಬಿಕೆಯನ್ನು ವೈeನಿಕವಾಗಿ ಸುಳ್ಳು ಎಂದು ಸಾಬೀತುಪಡಿಸಿದ್ದನ್ನು ಪೋಪ್ ಹಾಗೂ ಪಾದ್ರಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಅದುವರೆಗೂ ಹೇಳಿಕೊಂಡು, ನಂಬಿಸಿಕೊಂಡು ಬಂದಿದ್ದೆಲ್ಲ ಬೊಗಳೆ ಎಂದು ಸಾಬೀತಾದರೆ ಸುಮ್ಮನಿರುತ್ತಾರೆಯೇ? ಗೇಲಿಲಿಯೋನನ್ನು ಜೀವನಪರ್ಯಂತ ಗೃಹಬಂಧನದಲ್ಲಿ ಟ್ಟರು, ಬ್ರೂನೋನನ್ನು ಪೈಶಾಚಿಕವಾಗಿ ಕೊಲೆಗೈದರು.

ಇನ್ನು 150 ವರ್ಷಗಳ ಹಿಂದೆ ಇಪ್ಪತ್ತು ವರ್ಷ ಪರಿ ಶ್ರಮ ಪಟ್ಟು, ಐದು ವರ್ಷ ಜಗತ್ತನ್ನು ಸುತ್ತಿ ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ “Evolution Theory” ಅನ್ನು ತೆಗೆದುಕೊಳ್ಳಿ. ಹದಿನೆಂಟನೇ ಶತಮಾನದಲ್ಲಿ The Origin of Species ಎಂಬ ಪುಸ್ತಕವನ್ನು ಹೊರತಂದ ಡಾರ್ವಿನ್, 3.9 ಶತಕೋಟಿ ವರ್ಷಗಳ ಹಿಂದೆ ಗಿಬ್ಬನ್ಸ್ ಎಂಬ ವಂಶದಿಂದ ಜೀವನ ಸಂಕುಲಗಳು ಸೃಷ್ಟಿಯಾದವು. ಗಿಬ್ಬನ್ಸ್ ನಿಂದ ಒರಾಂಗುಟಾನ್ ಬಂತು. ಅದರಿಂದ ಗೊರಿಲ್ಲಾ, ಚಿಂಪಾಂಜಿ ಬಂದವು, ನಂತರ ಮನುಷ್ಯ ಬಂದ” ಎಂದು ಪ್ರತಿಪಾದಿಸಿದ. ಇಂತಹ ಪ್ರತಿಪಾದನೆಯನ್ನು ಪುಷ್ಟಿಕರಿಸು ವಂತೆ ಇಂದಿಗೂ ಲಕ್ಷಾಂತರ ವರ್ಷಗಳ ಹಿಂದಿನ ಪಳೆಯುಳಿಕೆಗಳು ಸಿಗುತ್ತಿವೆ, ಡಾರ್ವಿನ್ನನ ಮಾತನ್ನು ನಿಜವಾಗಿಸುತ್ತಿವೆ. ಆದರೆ ಡಾರ್ವಿನ್ನನ “Evolution Theory”, “10 ಸಾವಿರ ವರ್ಷಗಳ ಹಿಂದೆ ದೇವರು ಕೇವಲ ೬ ದಿನಗಳಲ್ಲಿ ಜಗತ್ತು ಮತ್ತು ಜೀವಸಂಕುಲಗಳನ್ನು ಸೃಷ್ಟಿಸಿದ” ಎನ್ನುವ ಬೈಬಲ್‌ನ “Creationism” ಪೊಳ್ಳು ಎಂದು ಸಾಬೀತು ಮಾಡಿತು. ಹಾಗಾಗಿ ಚರ್ಚ್‌ಗಳು ಡಾರ್ವಿನ್‌ನ ಖಂಡನೆ ಗಿಳಿದವು. ಆದರೆ ಇದೇ ರೀತಿ ದೂಷಣೆ ಮಾಡುತ್ತಾ ಹೆಚ್ಚು ಕಾಲ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಚರ್ಚ್, “Intelligent Design” ಎಂಬ ವಾದ ಸರಣಿಯನ್ನು ಮುಂದಿಟ್ಟಿತು. ಹೌದು, ವಿeನಿಗಳು ಹೇಳುತ್ತಿರುವಂತೆ ಭೂಮಿ ಎಷ್ಟೋ ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು. ಆದರೆ ಜೀವಸಂಕುಲ ಸೃಷ್ಟಿಯಾಗಿದ್ದು 10 ಸಾವಿರ ವರ್ಷಗಳ ಹಿಂದೆ ಎಂದು ತನ್ನ ಥಿಯರಿಯನ್ನೇ ತಿರುಚಲು ಪ್ರಯತ್ನಿಸಿತು. ಆದರೆ ಆಗ್ಗಿಂದಾಗ್ಗೆ ಪತ್ತೆಯಾಗುತ್ತಿರುವ ಕೋಟ್ಯಂತರ ವರ್ಷಗಳ ಹಿಂದೆ ಜೀವಿಸಿದ್ದ ಡೈನೋಸಾರ್‌ಗಳ ಪಳೆಯುಳಿಕೆಗಳು ಬೈಬಲ್‌ನ Creationism ಪ್ರತಿಪಾದನೆಯನ್ನೇ ಸುಳ್ಳಾಗಿ ಸುತ್ತಿವೆ! ಇಂದು ವೈeನಿಕ ಸಂಶೋಧನೆಗಳಿಂದ ಭಾರೀ ಹೊಡೆತ ಬಿದ್ದಿರುವುದೆಂದರೆ ಕ್ಯಾಥೋಲಿಕ್ ಚರ್ಚ್‌ಗಳ ಪ್ರತಿಪಾದನೆಗೆ ಹಾಗೂ ಯಾವ ವಿeನಿಗಳೂ ಬೈಬಲ್ ಪ್ರತಿಪಾದನೆಯನ್ನು ಸಾರಾಸಗಟಾಗಿ ಒಪ್ಪುವುದಿಲ್ಲ.

ಮೊನ್ನೆ ಬೆಂಗಳೂರಿನ ಆರ್ಚ್ ಬಿಶಪ್ ಮೊರಾಸ್ ಅವರು, ‘ನಿಮ್ಮ ದೇವಸ್ಥಾನಗಳ ಗರ್ಭಗುಡಿಯನ್ನು ನಾಶಪಡಿಸಿದ್ದರೆ ಸುಮ್ಮನಿರುತ್ತಿದ್ದಿರಾ?’ಎಂದು ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದನ್ನು ನೋಡಿ ದಾಗ, ‘ನಮಗೆ ಬಹಳ ನೋವಾಗಿದೆ’ ಎನ್ನುತ್ತಲೇ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಗೌರವ ತೋರಿದ್ದನ್ನು ಕಂಡಾಗ, ‘ಕ್ರೈಸ್ತರೆಂದರೆ ಜೀಸಸ್‌ನಷ್ಟೇ ದಯಾಮಯಿಗಳು, ಶಾಂತಿಪ್ರಿಯರು’ ಎಂಬಂತೆ ಪೋಸು ಕೊಟ್ಟಿದ್ದನ್ನು ಗಮನಿಸಿದಾಗ ಬಿಶಪ್ ಮತ್ತು ಕ್ರೈಸ್ತರಿಗೆ ನಾವೂ ಕೆಲವು ಪ್ರಶ್ನೆಗಳನ್ನು ಕೇಳುವುದು ಉಚಿತ ಎನಿಸಿತು.

ನಮ್ಮ ಪ್ರಶ್ನೆಗಳಿಗೆ ಕ್ರೈಸ್ತರೂ ಉತ್ತರಿಸಲಿ ನೋಡೋಣ?

ನಿಮ್ಮ ಕ್ಯಾಥೋಲಿಕ್ ಚರ್ಚ್‌ಗಳು ಮತಾಂತರ ಮಾಡಿದರೂ ಹಿಂದೂಗಳು ಬಾಯಿಮುಚ್ಚಿಕೊಂಡು ಕುಳಿತಿರಬೇಕೆಂದು ಬಯಸುವ ಬಿಶಪ್ ಅವರೇ, 11ನೇ ಶತಮಾನದಲ್ಲಿ ಕ್ರೈಸ್ತರು ಕ್ರುಸೇಡ್ ಆರಂಭಿಸಿದ್ದೇಕೆ? ಅಂದು ಶಾಂತಿ, ಸಾಮರಸ್ಯ ಬೋಧನೆ ಮಾಡಬೇಕಾದ ನಿಮ್ಮ ಧರ್ಮಗುರು ಪೋಪ್ ಅರ್ಬನ್, ಯುದ್ಧ ಕಹಳೆಯೂದಿದ್ದು ಯಾವ ಕಾರಣಕ್ಕಾಗಿ? ನಿಮ್ಮ ಧರ್ಮಕ್ಕೆ ಅಪಾಯ ಎದುರಾದಾಗ ಮುಸ್ಲಿಮರನ್ನು ಮಟ್ಟ ಹಾಕುವ ಹಕ್ಕು ನಿಮಗಿದೆ ಎಂದಾದರೇ ನಿಮ್ಮಿಂದ ಅವಹೇಳನ, ಅಪಾಯಕ್ಕೊಳಗಾದಾಗ ಪ್ರತಿರೋಧವೊಡ್ಡುವ ಹಕ್ಕು ಹಿಂದೂಗಳಿಗಿಲ್ಲವೆ? ಊರ್ವಶಿಯನ್ನು ಸೂಳೆ ಎಂದರೂ ಸುಮ್ಮನಿರಬೇಕೆಂದು ಬಯಸುತ್ತೀರಲ್ಲಾ, ನಿಮ್ಮ ಧರ್ಮ ಗುರು ಪೋಪ್ ಎಂಟನೇ ಅರ್ಬನ್ ಬ್ರೂನೋಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಿಸಿದ್ದೇಕೆ? ಗೆಲಿಲಿಯೋನನ್ನು ಗೃಹಬಂಧನ ದಲ್ಲಿಟ್ಟಿದ್ದೇಕೆ? ಡಾರ್ವಿನ್‌ನನ್ನು ದೂಷಿಸಿದ್ದೇಕೆ? ವೈeನಿಕ ಸಂಶೋಧನೆಗಳನ್ನೇ ಹೊಸಕಿ ಹಾಕಲು ಪ್ರಯತ್ನಿಸುತ್ತಿರಲ್ಲಾ, ನಿಮ್ಮದೆಂಥ ಪ್ರಗತಿಪರ ಧರ್ಮ? ಅದಿರಲಿ, ಹಿಂದೂ ಧರ್ಮವೆಂದರೆ ಬಹುದೇವತಾರಾಧನೆ, ಮೂರ್ತಿಪೂಜೆ, ಮೂಢನಂಬಿಕೆ ಎಂದು ಜರಿಯುತ್ತೀರಲ್ಲಾ, ಹಾಗಾದರೆ ಬೈಬಲ್ ಹೇಳುವಂತೆ ಸೂರ್ಯ ಭೂಮಿಯ ಸುತ್ತ ಸುತುತ್ತಾನಾ ಬಿಶಪ್? ಬೆನ್ನಿಹಿನ್ ತನ್ನ ಮಾಂತ್ರಿಕ ಶಕ್ತಿಯಿಂದ ರೋಗಗಳನ್ನು ಗುಣಪಡಿಸುತ್ತಾನೆ ಎಂದು ಮೋಸ ಮಾಡುತ್ತಿರುವುದು ಮೌಢ್ಯದ ಮಾರಾಟವಲ್ಲವೆ? ಮೋನಿಕಾ ಬೆಸ್ರಾಳ ಕ್ಯಾನ್ಸರ್ ಗಡ್ಡೆಯನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಕರಗಿಸಿದ್ದಾರೆ ಎಂದು ಕಥೆ ಕಟ್ಟಿ ಮದರ್ ಥೆರೇಸಾ ಅವರನ್ನು ಸಂತಪದವಿಗೇರಿಸಲು ಪ್ರಯತ್ನಿಸಿದ್ದು ಕ್ರೈಸ್ತರ ಮೌಢ್ಯವಲ್ಲದೆ ಮತ್ತೇನು? ಇನ್ನು ನಿಮ್ಮ “Creationism” ಹೇಳುವಂತೆ ಜೀವಸಂಕುಲ ಸೃಷ್ಟಿಯಾಗಿದ್ದು ಕೇವಲ 10 ಸಾವಿರ ವರ್ಷಗಳ ಹಿಂದೆಯೇ? ಹಾಗಾದರೆ ಅವೈe ನಿಕ ಎಂಬ ಕಾರಣ ನೀಡಿ ಅಮೆರಿಕ 1987ರಲ್ಲಿ ನಿಮ್ಮ “Creationism” ಥಿಯರಿಯನ್ನು ಪಠ್ಯದಿಂದ ತೆಗೆದು ಹಾಕಿದ್ದೇಕೆ? ಅಮೆರಿಕದ ಸುಪ್ರೀಂ ಕೋರ್ಟೇ ನಿಮ್ಮ “Creation science” ಅನ್ನು ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡುವುದಕ್ಕೆ ತಡೆಹಾಕಿತು ಎಂದರೆ ನಿಮ್ಮ ಪ್ರತಿಪಾದನೆ ಅದೆಷ್ಟು ಸುಳ್ಳುಗಳಿಂದ ಕೂಡಿದ್ದಿರಬಹುದು? ಹಿಂದೂ ಧರ್ಮೀಯರು ವಿಗ್ರಹ ಆರಾಧಕರು ಎನ್ನುತ್ತೀರಲ್ಲಾ, ನೀವೇಕೆ ಜೀಸಸ್, ಮೇರಿಯ ಸಿಮೆಂಟ್ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತೀರಿ? ಏಸುವನ್ನು ಆರಾಧಿಸಿದರೆ ರೋಗ ಗುಣವಾಗುತ್ತದೆ ಎಂದು ಮೋಸ ಮಾಡುತ್ತೀರಲ್ಲಾ, ಹಾಗಾದರೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳೇಕೆ ಬೇಕು? ಅಸ್ವಸ್ಥರಿಗೆ ಬರೀ ಪ್ರಾರ್ಥನೆ ಮಾಡಲು ಹೇಳಬಹುದಲ್ಲವೆ? ಮೊದಲು ಪ್ರಾರ್ಥನೆ ಮಾಡಿ ಎಂದು ಹೇಳಿ, ನಂತರ ಔಷಧ ಕೊಡುವುದೇಕೆ? ಮತಾಂತರದಿಂದ ಮಾನವನ ಉದ್ಧಾರವಾಗುತ್ತದೆ ಎನ್ನುವು ದಾದರೆ ಈ ‘ದಲಿತ ಕ್ರೈಸ್ತ’ರು ಎಲ್ಲಿಂದ ಬಂದರು? ಅಂದರೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೂ ಬಡತನ ಹೋಗಲಿಲ್ಲ, ಕಳಂಕ ಕಳಚಲಿಲ್ಲ ಎಂದಾಯಿತಲ್ಲವೆ? ಅಲ್ಲ, ಕ್ರೈಸ್ತರಾದ ನೀವು ಯಾರನ್ನು ವಂಚಿಸಲು ಚರ್ಚ್‌ಗಳಿಗೆ ‘ದೇವಾಲಯ’ ‘ಮಂದಿರ’ ಅಂತ ಹೆಸರನ್ನಿಡುತ್ತೀರಿ? ನೀವು ನಿಜವಾಗಿಯೂ ಶಾಂತಿಪ್ರಿಯರು ಹಾಗೂ ಅನ್ಯಧರ್ಮ ಕ್ಕೆ ಗೌರವ ಕೊಡುವವರೇ ಆಗಿದ್ದರೆ ಇಂಗ್ಲೆಂಡಿನ ಚರ್ಚ್ಗಳು ಯೋಗದ ಮೇಲೆ ನಿಷೇಧ ಹೇರಿರುವುದೇಕೆ? ಸ್ವಂತತೆಯೇ ಇಲ್ಲದೆ “ಕ್ರಿಶ್ಚಿಯನ್ ಯೋಗ” ಎಂದು ಕಾಪಿ ಮಾಡುತ್ತಿದ್ದೀರಲ್ಲಾ ಇದು ಸರಿಯೇ?

ಇನ್ನು ನೀವು ಹಿಂದೂಗಳನ್ನು ತೆಗಳುವ ಪುನರ್ಜನ್ಮದ ವಿಷಯಕ್ಕೆ ಬರೋಣ. ಮನುಷ್ಯ ಪಾಪ ಮಾಡಿರುತ್ತಾನೆ. ಅದು ಪರಿಹಾರವಾಗಬೇಕಾದರೆ ಜೀಸಸ್‌ನನ್ನು ಆರಾಧಿಸಬೇಕು ಎನ್ನುತ್ತೀರಿ. ಅಂದರೆ ಪಾಪ ಮಾಡಿದ್ದು ಯಾವಾಗ? ಒಂದು ವೇಳೆ ಹುಟ್ಟುವಾಗಲೇ ಮನುಷ್ಯನಿಗೆ ಪಾಪ ಅಂಟಿಕೊಂಡಿರುವುದೇ ಆದರೆ, ಪಾಪ ಮಾಡಿದ್ದಾದರೂ ಯಾವಾಗ? ಹಿಂದಿನ ಜನ್ಮದಲ್ಲೇ ಆಗಿರಬೇಕಲ್ಲವೆ? ಹಾಗಾದರೆ ನೀವೂ ಪುನರ್ಜನ್ಮವನ್ನು ಒಪ್ಪಿಕೊಳ್ಳಬೇಕಾಗುತ್ತಲ್ಲವೆ? ಅದಿರಲಿ, ಹಿಂದೂಯಿಸಂ ಅನ್ನು ಭೂತಪ್ರೇತಗಳ ಧರ್ಮ ಎನ್ನುತ್ತೀರಲ್ಲಾ ಅಮೆರಿಕ, ಬ್ರಿಟನ್, ಐರ್‍ಲೆಂಡ್, ನ್ಯೂಜಿಲ್ಯಾಂಡ್, ಕೆನಡಾ ಹಾಗೂ ಉತ್ತರ ಅಮೆರಿಕದ ರೋಮನ್ ಕ್ಯಾಥೋಲಿಕ್ ಹಾಗೂ ಆಂಗ್ಲಿಕನ್ ಚರ್ಚ್‌ಗಳು ಪ್ರತಿ ವರ್ಷ ಅಕ್ಟೋಬರ್ ೩೧ರಂದು ಆಚರಿಸುವ “Halloween Holiday” ಭೂತ, ಪ್ರೇತಗಳ, ಮಾಟ, ಮಾಯದ ಹಬ್ಬವೇ ಅಲ್ಲವೆ?! ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿಯ ಬಗ್ಗೆ ಮಾತನಾಡುತ್ತೀರಲ್ಲಾ, ನಿಮ್ಮ ಕ್ರೈಸ್ತರು ಸ್ವಧರ್ಮೀಯರೇ ಆಗಿರುವ ಆಫ್ರಿಕನ್ ಕರಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ? ಅದಿರಲಿ, ಗುಲಾಮಗಿರಿಯನ್ನು ಆರಂಭಿಸಿದ್ದು ಕ್ರೈಸ್ತ ಧರ್ಮೀಯರೇ ಅಲ್ಲವೆ? ಆಫ್ರಿಕನ್ ಅಮೆರಿಕನ್ ಕರಿಯರು ಕ್ರೈಸ್ತ ಧರ್ಮವನ್ನು ಬಿಟ್ಟು ಇಸ್ಲಾಮನ್ನು ಸ್ವೀಕರಿಸುತ್ತಿರುವುದೇಕೆ? ೨೦೦೧, ಸೆಪ್ಟೆಂಬರ್ ೧೧ರಂದು ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ “Crusade will continue” ಎಂದ ಜಾರ್ಜ್ ಬುಷ್ ಮಾತಿನ ಅರ್ಥವೇನು? ಕ್ರುಸೇಡ್ ಆರಂಭವಾಗಿದ್ದೇ ಇಸ್ಲಾಮ್‌ನ ಪ್ರಸರಣವನ್ನು ತಡೆಯುವುದಕ್ಕಾಗಿ. ಅಫ್ಘಾನಿಸ್ತಾನ, ಇರಾಕ್ ಹಾಗೂ ಮುಂದಿನ ಗುರಿ ಇರಾನ್. ಹೀಗೆ ಒಂದೊಂದಾಗಿ ಮುಸ್ಲಿಂ ದೇಶಗಳನ್ನೇ ನಾಶಪಡಿಸುತ್ತಿರುವ ನೀವು ಈಗಲೂ ಒಳಂಗಿದೊಳಗೆ ಇಸ್ಲಾಂ ವಿರುದ್ಧದ ಕ್ರುಸೇಡ್ ಮುಂದು ವರಿಸುತ್ತಿದ್ದೀರಿ ಎಂದಾಗಲಿಲ್ಲವೆ?

ಅಣಕವೆಂದರೆ ‘ನ್ಯೂಲೈಫ್ ಚರ್ಚ್’ಗಳ ಮೇಲೆ ನಡೆದ ದಾಳಿಯ ನಂತರ ದೇವೇಗೌಡರು ದಿಲ್ಲಿಯಲ್ಲಿ ನಡೆಸಿದ ಧರಣಿ ಹಾಗೂ ದಾವಣಗೆರೆಯಲ್ಲಿ ನಡೆದ ಕೋಮಸೌಹಾರ್ದ ಸಭೆಯಲ್ಲಿ ಪಾದ್ರಿಗಳ ಜತೆ ಮುಲ್ಲಾಗಳೂ ಪಾಲ್ಗೊಂಡಿದ್ದರು, ಹಿಂದೂ ಸಂಘಟನೆಗಳ ವಿರುದ್ಧ ಘೋಷಣೆ ಕೂಗಿದರು! ಹೇಗಿದೆ ನೋಡಿ ಈ ಹೊಸ ಜೋಡಿ?! ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ಕರ್ನಾಟಕ ಹಾಗೂ ಆಂಧ್ರದ ಚರ್ಚ್‌ಗಳಲ್ಲಿ ಸರಣಿ ಸ್ಫೋಟಗಳಾಗಿದ್ದವು. ಆಗ ಹಿಂದೂ ಸಂಘಟನೆಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ಸಿಕ್ಕಿಬಿದ್ದಿದ್ದು ‘ದೀನ್‌ದಾರ್ ಅಂಜುಮಾನ್’ ಎಂಬ ಮುಸ್ಲಿಂ ಸಂಘಟನೆ! ಇತಿಹಾಸದುದ್ದಕ್ಕೂ ಪರಸ್ಪರ ಕಚ್ಚಾಡು ತ್ತಲೇ ಬಂದಿರುವ ಇವರು ಹಿಂದೂಗಳಿಗೆ ಶಾಂತಿಪಾಠ ಹೇಳಿಕೊಡಲು ಮುಂದಾಗಿದ್ದಾರೆ. ಇಂತಹ ಕೃತ್ರಿಮತೆಯನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ಮತಾಂತರದ ವಿರುದ್ಧದ ಹೋರಾಟ ಮಾಡಿದರಷ್ಟೇ ಸಾಲದು, ಇನ್ನು ಮುಂದೆ ಮರಳಿ ಮಾತೃಧರ್ಮಕ್ಕೆ ಕರೆತರುವ ಪ್ರಕ್ರಿ ಯೆಯೂ ಆರಂಭವಾಗಬೇಕು. ಜತೆಗೆ ದಲಿತರು, ಶೂದ್ರರು ಎಂದು ಮೂಗು ಮುರಿಯುವುದನ್ನು ಬಿಟ್ಟು ನಾವೆಲ್ಲ ಒಂದೇ ಎಂಬುದನ್ನು ಕೃತಿಯಲ್ಲಿ ತೋರಬೇಕು.

ಇದೇನೇ ಇರಲಿ, ಕಟ್ಟಾ ನಾಸ್ತಿಕರಾದ ಚಾರ್ವಾಕರಿಗೂ ಸ್ಥಾನ ನೀಡಿದ, ಮಾನ್ಯ ಮಾಡಿದ ಧರ್ಮ ನಮ್ಮದು. ನಾವು ಧರ್ಮ-ಧರ್ಮಗಳ ನಡುವಿನ ಯುದ್ಧವಾದ ‘ಕ್ರುಸೇಡ್’ ಆರಂಭಿಸಿದವರಿಂದ ಶಾಂತಿಪಾಠ ಕಲಿಯುವ ಅಗತ್ಯವಿಲ್ಲ. ಕ್ರೈಸ್ತರು ಹೇಳುವಂತೆ ನಾವು ಪಾಪದೊಂದಿಗೇ ಹುಟ್ಟಿ ದವರಲ್ಲ. ನಮ್ಮ ವೇದಗಳು ಹೇಳುವಂತೆ, ವಿವೇಕಾನಂದರು ಪುನರುಚ್ಛರಿಸಿದಂತೆ “We are children of immortal bliss. It’s greatest sin to call ourselves as sinners”. ಹೌದು, ನಾವು ಅಮೃತಾತ್ಮರು, ಪಾಪಿಗಳಲ್ಲ. ಮಾಡದ ಪಾಪವನ್ನು ತೊಳೆದುಕೊಳ್ಳಲು ನಾವೇನು ಮತಾಂತರಗೊಳ್ಳಬೇಕಿಲ್ಲ!

Grow up Bishop!

ಕೃಪೆ : ಪ್ರತಾಪ್ ಸಿಂಹ

ಭಾರತವನ್ನು ಬೈಯಿರಿ, ‘ಬುಕರ್’ ಪಡೆಯಿರಿ!

ಮಿಸ್ಟರ್ ಜಿಯಾಬಾವೋ,

ಇಂಟರ್‌ನೆಟ್‌ನಿಂದ ಗಗನ ನೌಕೆಗಳವರೆಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದು ಭಾರತೀ ಯರೇ. ಅವುಗಳನ್ನೆಲ್ಲ ಬ್ರಿಟಿಷರು ನಮ್ಮಿಂದ ಕದ್ದುಕೊಂಡು ಹೋದರು. ಇಂತಹ ಕಥೆಯನ್ನು ನೀವು ಭಾರತಕ್ಕೆ ಕಾಲಿಟ್ಟ ಕೂಡಲೇ ಹೇಳುತ್ತಾರೆ!

Nonsense. ಹತ್ತು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಕೊಟ್ಟ ಅತಿದೊಡ್ಡ ಕೊಡುಗೆಯೆಂದರೆ ಕೋಳಿಗೂಡು!

ಹಳೇ ದಿಲ್ಲಿಗೆ ಹೋಗಿ, ಜಾಮಾ ಮಸೀದಿ ಹಿಂಭಾಗದ ಮಾರುಕಟ್ಟೆಯಲ್ಲಿ ಹೇಗೆ ಕೋಳಿಗಳನ್ನು ಇಟ್ಟಿದ್ದಾರೆ ಎಂಬುದನ್ನು ಕಣ್ಣಾರೆ ನೋಡಿ. ನೂರಾರು ಬಿಳಿಚಿಕೊಂಡ ಕೋಳಿಗಳನ್ನು ತಂತಿಯ ಗೂಡುಗಳಲ್ಲಿ ಬಂಧಿಸಿಟ್ಟಿರುತ್ತಾರೆ. ಅವು ಒಂದಕ್ಕೊಂದು ಅಂಟಿಕೊಂಡು ಕುಳಿತುಕೊಳ್ಳಬೇಕು. ಉಸಿರಾಡಲೂ ಜಾಗವಿರುವುದಿಲ್ಲ. ಅಂತಹ ಗೂಡಿನ ಮೇಲೆ ಕತ್ತಿಯನ್ನು ಝಳಪಿಸುತ್ತಾ ಕಟುಕ ಕುಳಿತಿರುತ್ತಾನೆ. ಅದಾಗ ತಾನೇ ಕಡಿದಿರುವ ಕೋಳಿಯ ಹಸಿ ಮಾಂಸದ ತುಣುಕುಗಳು, ಹೆಪ್ಪುಗಟ್ಟಿರುವ ರಕ್ತ ಗೂಡಿನ ಸುತ್ತ ಹರಡಿರುತ್ತದೆ. ತಮ್ಮ ಸಹೋದರರ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡರೂ, ಮುಂದಿನ ಸರದಿ ತಮ್ಮದೇ ಎಂದು ಗೊತ್ತಿದ್ದರೂ ಬದುಕಿರುವ ಕೋಳಿಗಳು ಬಂಡಾಯವೇಳುವುದಿಲ್ಲ. ಗೂಡಿನಿಂದ ಹೊರಹೋಗಲೂ ಪ್ರಯತ್ನಿಸುವುದಿಲ್ಲ.
ನಮ್ಮ ದೇಶದಲ್ಲಿ ಮನುಷ್ಯರ ಕಥೆಯೂ ಇದೇ ಆಗಿದೆ!

ಒಂದಾನೊಂದು ಕಾಲದಲ್ಲಿ ನಾನು ಹಿಂದಿ ಚಿತ್ರಗಳನ್ನು ನೋಡುತ್ತಿದ್ದೆ(ಆದರೆ ಈಗ ನೋಡುವುದಿಲ್ಲ). ಆ ಕಾಲದಲ್ಲಿ ಚಲನಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆ ಕಪ್ಪು ಪರದೆಯ ಮೇಲೆ ‘೭೮೬’ ಸಂಖ್ಯೆ ಮಿಂಚಿ ಮಾಯವಾಗುತ್ತಿತ್ತು. ಮುಸ್ಲಿಮರು ಅದು ತಮ್ಮ ದೇವರ ಸಂಕೇತವಾದ ಮ್ಯಾಜಿಕ್ ನಂಬರ್ ಎಂದು ಭಾವಿಸುತ್ತಿದ್ದರು. ಇಲ್ಲವಾದರೆ ಬಿಳಿ ಸೀರೆಯುಟ್ಟಿರುವ ಮಹಿಳೆಯೊಬ್ಬಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಳು. ಆಕೆಯ ಅಂಗೈನಿಂದ ಚಿನ್ನದ ನಾಣ್ಯ ಗಳು ಕೆಳಗುರುಳಿ ಪಾದದ ಮೇಲೆ ಬೀಳುತ್ತಿರುತ್ತಿದ್ದವು. ಆಕೆ ಹಿಂದೂಗಳ ಲಕ್ಷ್ಮೀ ದೇವತೆಯಾಗಿರುತ್ತಿದ್ದಳು. ಯಾವುದೇ ಕಥೆಯನ್ನು ಪ್ರಾರಂಭಿಸುವ ಮೊದಲು ದೇವರಿಗೆ ವಂದನೆ ಸಲ್ಲಿಸುವ ಪದ್ಧತಿ ನಮ್ಮ ದೇಶದಲ್ಲಿತ್ತು. ನನಗನಿಸುತ್ತದೆ ನಾನೂ ಯಾವುದಾದರೊಂದು ದೇವರ “Arse”ಗೆ(ಪೃಷ್ಠ) ಮುತ್ತಿಕ್ಕಿ ಬರೆಯಲು ಆರಂಭಿಸಬೇಕೇನೋ! ಆದರೆ ಯಾವ ದೇವರ ಪೃಷ್ಠ?! ಮುಸ್ಲಿಮರಿಗೆ ಒಬ್ಬನೇ ದೇವರಿದ್ದಾನೆ. ಕ್ರೈಸ್ತರಿಗೆ ಮೂವರು ದೇವರಿದ್ದಾರೆ. ಹಿಂದೂಗಳಿಗೆ ಮೂರು ಕೋಟಿ ಅರವತ್ತು ಲಕ್ಷ ದೇವರಿದ್ದಾರೆ. ಎಲ್ಲವನ್ನೂ ಒಟ್ಟು ಸೇರಿಸಿದರೆ 3,60,000,04! ಸರ್, ನಾನು ಕೈಜೋಡಿಸಿ ಕಣ್ಣುಮುಚ್ಚಿ ನನ್ನ ಕರಾಳ ಕಥೆಯ ಮೇಲೆ ಬೆಳಕು ಚೆಲ್ಲು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ. ಮಿಸ್ಟರ್ ಜಿಯಾಬಾವೋ, ದಯವಿಟ್ಟು ಸಹಕರಿಸಿ. ಎಷ್ಟು ಬೇಗ 3,60,000,04 ದೇವರುಗಳ ಪೃಷ್ಠಕ್ಕೆ ಮುತ್ತಿಕ್ಕಬಹುದು ಎಂದು ನಿಮಗನಿಸುತ್ತದೆ?”

ಹೀಗೆ ಸಾಗುತ್ತದೆ ‘ನಮ್ಮ ಕನ್ನಡಿಗ’, ‘ನಮ್ಮ ಮಂಗಳೂರು ಹುಡುಗ’ ಎಂದು ನಾವೆಲ್ಲ ಹೆಮ್ಮೆಪಟ್ಟುಕೊಳ್ಳುತ್ತಿರುವ ಅರವಿಂದ ಅಡಿಗ ಬರೆದಿರುವ “ದಿ ವೈಟ್ ಟೈಗರ್” ಪುಸ್ತಕದ ಕಥೆ. ಮೊದಲ ಏಳೆಂಟು ಪುಟಗಳನ್ನು ಓದುವಾಗಲೇ ಮುಂದೇನು ಹೇಳಬಹುದು ಎಂಬುದರ ಸುಳಿವು ಸಿಗುತ್ತದೆ, ದೇವರ ಬಗ್ಗೆ ಅವರು ಬಳಸುವ ಪದಗಳು ವಿಡಂಬನೆ ಎನಿಸುವ ಬದಲು ಕೀಳು ಅಭಿರುಚಿ ಎನಿಸಿ ಬಿಡುತ್ತವೆ. ‘ದಿ ವೈಟ್ ಟೈಗರ್’ನ ಕಥೆ ಆರಂಭವಾಗುವುದೇ ಒಂದು ವಿಚಿತ್ರ ಸನ್ನಿವೇಶದೊಂದಿಗೆ. ‘ಚೀನಾ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ’ ಎಂಬ ಸುದ್ದಿ ‘ಆಲ್ ಇಂಡಿಯಾ ರೇಡಿಯೋ’ದಲ್ಲಿ ಬಿತ್ತರವಾಗುತ್ತದೆ. ಅದನ್ನು ಕೇಳಿದ ಬಲರಾಮ ಹಲವಾಯಿ ಮನದೊಳಗೆ ಅನೇಕ ಆಲೋಚನೆಗಳು ಹರಿದು ಹೋಗತೊಡಗುತ್ತವೆ. “ಪ್ರತಿ ಬಾರಿ ಮಹಾನ್ ವ್ಯಕ್ತಿಗಳು ದೇಶಕ್ಕೆ ಆಗಮಿಸಿದಾಗಲೂ ನಮ್ಮ ಪ್ರಧಾನಿ ಕರಿ ಕಾರಿನಲ್ಲಿ ಏರ್‌ಪೋರ್ಟ್‌ಗೆ ಆಗಮಿಸು ತ್ತಾರೆ. ಕಾರಿನಿಂದ ಕೆಳಗಿಳಿದು ನಿಮ್ಮ ಹಾಗೂ ಟಿವಿ ಕ್ಯಾಮೆರಾ ಗಳ ಮುಂದೆ ನಮಸ್ತೆ ಮಾಡುತ್ತಾರೆ. ಭಾರತವೆಂಥ ನೈತಿಕತೆ ಯಿಂದ ಕೂಡಿದ, ಪರಿಶುದ್ಧ, ಚಾರಿತ್ರ್ಯಯುತ ರಾಷ್ಟ್ರ ಎಂದು ವರ್ಣಿಸುತ್ತಾರೆ!

ಅದೊಂದು ದೊಡ್ಡ ಜೋಕು”.

ಹಾಗೆನ್ನುತ್ತಾನೆ ಬಲರಾಮ ಹಲವಾಯಿ. “ದಿ ವೈಟ್ ಟೈಗರ್” ಪ್ರಾರಂಭವಾಗುವುದೇ ಹೀಗೆ. ಚೀನಾದ ಪ್ರಧಾನಿ ವೆನ್ ಜಿಯಾಬಾವೋ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯನ್ನೇ ಇಟ್ಟುಕೊಂಡು ಅರವಿಂದ ಅಡಿಗ ಕಥೆ ಹೆಣೆಯುತ್ತಾರೆ. ಜಿಯಾಬಾವೋ ಆಗಮನಕ್ಕೆ ೭ ದಿನಗಳಿರುತ್ತವೆ. ಆ ಏಳು ದಿನಗಳಲ್ಲಿ ಜಿಯಾಬಾವೋಗೆ ಏಳು ಪತ್ರಗಳನ್ನು ಬರೆಯುತ್ತಾರೆ. ಆ ಪತ್ರಗಳಲ್ಲೇ ಬಲರಾಮ ಹಲವಾಯಿ ಎಂಬ ವ್ಯಕ್ತಿಯ ಪಾತ್ರ ಸೃಷ್ಟಿಸುತ್ತಾರೆ. ಆತ ಬೆಂಗಳೂರಿನಲ್ಲಿ ತಳವೂರಿರುವ ಉದ್ಯಮಿ. ವೆನ್ ಜಿಯಾಬಾವೋ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸಿಲಿಕಾನ್ ವ್ಯಾಲಿ ಎನಿಸಿರುವ ಬೆಂಗಳೂರಿನ ಆಮೋಘ ಯಶಸ್ಸಿನ ಹಿಂದಿರುವ ಸತ್ಯವನ್ನು ತಿಳಿಯುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ರೇಡಿಯೋ ಸುದ್ದಿಯನ್ನು ಕೇಳಿ, ‘ಬೆಂಗಳೂರಿನ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ನನಗೆ ಮಾತ್ರ’ ಎಂದುಕೊಳ್ಳುವ ಬಲರಾಮ ಹಲವಾಯಿ, ಜಿಯಾಬಾವೋ ಮುಂದೆ ವಾಸ್ತವವನ್ನು ಅನಾವರಣ ಮಾಡುವ ಸಲುವಾಗಿ ೭ ರಾತ್ರಿ ಕುಳಿತು ಉದ್ದುದ್ದದ ಪತ್ರ ಬರೆಯುತ್ತಾನೆ. ಹಾಗೆ ಬರೆಯುವ ಪತ್ರಗಳಲ್ಲಿ ಗಯಾ ಜಿಲ್ಲೆಯ ಲಕ್ಷ್ಮಣ್‌ಗಢನ ನಿವಾಸಿಯಾದ ತಾನು ಕೇವಲ ಓದಲಷ್ಟೇ ಬರುವಷ್ಟು ಓದಿದವ, ತನ್ನ ಮನೆಯ ಪರಿಸ್ಥಿತಿ ಹೇಗಿತ್ತು, ಕೊನೆಗೆ ಕಾರು ಡ್ರೈವಿಂಗ್ ಕಲಿತು ಹೇಗೆ ಚಾಲಕನ ಕೆಲಸ ಗಿಟ್ಟಿಸಿಕೊಂಡೆ, ಆ ದೆಸೆಯಿಂದಾಗಿ ಮಾಲೀಕನ ಜತೆ ಹೇಗೆ ದಿಲ್ಲಿಗೆ ಬಂದೆ, ದಿಲ್ಲಿಗೆ ಬಂದ ನಂತರ ಹೇಗೆ ಹೊಸ ಶಿಕ್ಷಣ(ಚಾಲಾಕುತನ) ಆರಂಭವಾಯಿತು, ಆಗ ಒಬ್ಬ ನಿಷ್ಠಾವಂತ ಸೇವಕನಾಗಿರಬೇಕೋ ಅಥವಾ ಅಡ್ಡಮಾರ್ಗ ಹಿಡಿದು ದುಡ್ಡು ಮಾಡಬೇಕೋ ಎಂಬ ತಾಕಲಾಟ ಹೇಗೆ ಎದುರಾಯಿತು, ಕೊನೆಗೆ ಮಾಲೀಕನನ್ನೇ ಕೊಂದು, ಒಂದಿಷ್ಟು ಹಣ ಲಪಟಾಯಿಸಿ ಹೇಗೆ ಬೆಂಗಳೂರಿಗೆ ಬಂದು ಐಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ಪಿಕ್ ಅಪ್, ಡ್ರಾಪ್ ಕಾಂಟ್ರಾಕ್ಟ್ ಪಡೆದು ಟ್ರಾವೆಲ್ ಏಜೆನ್ಸಿಯ ಮೂಲಕ ದುಡ್ಡು ಮಾಡಿ ದೊಡ್ಡ ಶ್ರೀಮಂತನಾದೆ ಎಂಬುದನ್ನು ವಿವರಿಸುತ್ತಾನೆ. ಆದರೆ ಒಂದೊಂದು ಪತ್ರಗಳಲ್ಲೂ ನಾಮ್ ಕೆ ವಾಸ್ತೆಗಾಗಿ ತನ್ನ ಕಥೆಯನ್ನು ಫ್ಲಾಶ್ ಬ್ಲಾಕ್‌ನಲ್ಲಿ ಹೇಳುವ ಬಲರಾಮ ಹಲವಾಯಿ, ಭಾರತವನ್ನು ಕೆಟ್ಟದಾಗಿ ಚಿತ್ರಿಸಲು ಕಥೆಯನ್ನು ಬಳಸಿಕೊಳ್ಳುತ್ತಾನೆ. ಕಥೆಗಿಂತ ಹೆಚ್ಚಾಗಿ ಕೊಳಕುಗಳನ್ನೇ ಹೇಳುತ್ತಾ ಹೋಗುತ್ತಾನೆ. ‘ಗಂಗಾ ನದಿ ಬಹಳ ಪವಿತ್ರ ಎನ್ನುತ್ತಾರೆ. ಅವರ ಮಾತು ಕೇಳಿಕೊಂಡು ಗಂಗೆಯಲ್ಲಿ ಮಿಂದರೆ ಹುಶಾರ್! ಅದರಲ್ಲಿ ಬರೀ ಹೆಣ ಮತ್ತು ಹೊಲಸೇ ತುಂಬಿದೆ’ ಎಂದು ಜಿಯಾಬಾವೋ ಅವರನ್ನು ಬಲರಾಮ ಎಚ್ಚರಿಸುತ್ತಾನೆ.

ಹಾಗೆ ಭಾರತದ ಕಟ್ಟಾವೈರಿ ಚೀನಾದ ಪ್ರಧಾನಿಗೆ ಭಾರತದ ಬಗ್ಗೆ ಕೆಟ್ಟ ಚಿತ್ರಣವನ್ನು ಕೊಡುವುದನ್ನು ಓದುವಾಗ ಇದೇನು ಅರವಿಂದ ಅಡಿಗ ಬರೆದಿರುವುದೋ ಅಥವಾ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಅರವಿಂದ ಅಡಿಗನೊಳಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೋ ಎಂಬ ಅನುಮಾನ ಕಾಡುತ್ತದೆ. ನಮ್ಮ ಪೊಲೀಸರೆಂದರೆ ಭ್ರಷ್ಟರು, ನಮ್ಮ ದೇಶದ ತುಂಬೆಲ್ಲ ಕೊಳಕು, ವಂಚನೆಯೇ ತುಂಬಿದೆ, ಶ್ರೀಮಂತರೆಲ್ಲರೂ ಅಡ್ಡಮಾರ್ಗದಿಂದಲೇ ದುಡ್ಡು ಮಾಡಿ ದವರು ಎಂಬಂತೆ ಚಿತ್ರಿಸುತ್ತಾರೆ. “ದಿ ವೈಟ್ ಟೈಗರ್” ಒಂದು ಫಿಕ್ಷನ್ ಆಗಿದ್ದಿದ್ದರೆ ಕಾಲ್ಪನಿಕ ಕಥೆ ಎಂದು ನಾವೂ ಸುಮ್ಮನಾಗಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಿಸ್ಟರಿಯನ್ನು ಫಿಕ್ಷನ್‌ನಂತೆ, ಫಿಕ್ಷನ್ ಅನ್ನು ಹಿಸ್ಟರಿಯಂತೆ ಓದಿಕೊಳ್ಳಬೇಕಾಗಿದೆ. ಏಕೆಂದರೆ “ವೈಟ್ ಟೈಗರ್” ಫಿಕ್ಷನ್ ಆಗಿದ್ದರೂ ಅದರೊಳಗಿರುವುದೇ “ರಿಯಲ್ ಇಂಡಿಯಾ” ಎಂದು ಅರವಿಂದ ಅಡಿಗ ಪ್ರತಿಪಾದಿಸುತ್ತಾರೆ. ಕೊಲಂಬಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿಕೊಂಡಿದ್ದು, ಸ್ವದೇಶಕ್ಕೆ ಬಂದಾಗ ಬರೀ ಟ್ಯಾಕ್ಸಿಗಳಲ್ಲಿ ಓಡಾಡಿಕೊಂಡೇ ಭಾರತವನ್ನು ಅರೆದು ಕುಡಿದಂತೆ ಬರೆಯುತ್ತಾರೆ. ಪುಸ್ತಕದ ಪ್ರಾರಂಭದಲ್ಲಿ “ನಾನು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿದ್ದೇನೆ” ಎಂದು ಅಡಿಗ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಅವರು ಹಿಂದಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸದೇ ಹೋಗಿದ್ದಿದ್ದರೆ “ದಿ ವೈಟ್ ಟೈಗರ್” ಬರೆಯಬೇಕಾದ ಶ್ರಮವನ್ನೇ ತೆಗೆದುಕೊಳ್ಳ ಬೇಕಿರಲಿಲ್ಲ!

“ಇದು ಯಾವುದೋ ಬಾಲಿವುಡ್ ಚಿತ್ರದ ‘ಸ್ಕಿನ್ ಪ್ಲೇ’ಯ ರಫ್ ಕಾಪಿಯಂತಿದೆ. ಪ್ರತಿ ಪಾತ್ರಗಳೂ ಕ್ಲೀಶೆಯಾಗಿ ಕಾಣಿಸುತ್ತವೆ, ಹಾಸ್ಯ ಕಹಿಯಾಗಿದೆ, ಸೂಕ್ಷ್ಮತೆಯೇ ಅದರ ಲ್ಲಿಲ್ಲ. ಬರವಣಿಗೆಯಂತೂ ಮರೆತುಬಿಡುವಂಥದ್ದು” ಎಂದು “ದಿ ಡೈಲಿ ಟೆಲಿಗ್ರಾಫ್”ನಲ್ಲಿ ಸಮೀರ್ ರಹೀಮ್ ಬರೆದಿರುವ ವಿಮರ್ಶೆಯನ್ನು ಓದಿದ ನಂತರ ‘ವೈಟ್ ಟೈಗರ್’ ಅನ್ನು ಕೈಗೆತ್ತಿಕೊಂಡರೆ ಪ್ರತಿ ಪ್ಯಾರಾ ಮುಗಿದಾಗಲೂ ಮನಸು ಅಹುದಹುದೆನ್ನುತ್ತದೆ!

ಪ್ರತಿಪುಟಗಳಲ್ಲೂ ಭಾರತದ ಅವಹೇಳನ, ನಾವು ಸುಳ್ಳು ಗಾರರು ಎಂಬಂತೆ ಪ್ರತಿಪಾದಿಸುವುದು, ತೆಗಳುವುದೇ ಕಾಣುತ್ತದೆ. ನಡುನಡುವೆ ವಿನಾಕಾರಣವಾಗಿ ಮುಸ್ಲಿಮ್ ಹೆಸರುಗಳನ್ನು ಎಳೆದುಕೊಂಡು ಬಂದು ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ಅಂತರ್ಗತ ಪೂರ್ವಗ್ರಹ, ಕೀಳಭಿಪ್ರಾಯ ವಿದೆ ಎಂಬಂತೆ ಪ್ರತಿಬಿಂಬಿಸುತ್ತಾರೆ. ಒಮ್ಮೆ, ಬಲರಾಮ ಹಲವಾಯಿಗೆ ಕೆಲಸ ನೀಡಿದ್ದ ಮಿಸ್ಟರ್ ಅಶೋಕ್ ಅವರ ಸಹೋದರ ಮುಕೇಶ್ ಮಗ ರೋಶನ್ ಕೆಲಸದಾಳು ಗಳ ಜತೆ ಕ್ರಿಕೆಟ್ ಆಡುತ್ತಿರುತ್ತಾನೆ. ಆತ ಪ್ರತಿ ಬಾರಿ ಸಿಕ್ಸ್ ಅಥವಾ ಫೋರ್ ಹೊಡೆದಾಗಲೂ “ನಾನು ಮೊಹಮ್ಮದ್ ಅಜರುದ್ದೀನ್, ಭಾರತದ ನಾಯಕ” ಎಂದು ಜೋರಾಗಿ ಹೇಳುತ್ತಿರುತ್ತಾನೆ. ಅದನ್ನು ಕಂಡು “ನಿನ್ನನ್ನು ಗವಾಸ್ಕರ್ ಎಂದು ಕರೆದುಕೋ, ಮೊಹಮ್ಮದ್ ಅಜರುದ್ದೀನ್ ಒಬ್ಬ ಮುಸ್ಲಿಮ” ಎಂದು ಅಜ್ಜ ಗದರಿಸುತ್ತಾನೆ. ಆದರೆ ನಾವು ಸಚಿನ್ ತೆಂಡೂಲ್ಕರ್‌ನನ್ನು ಎಷ್ಟು ಇಷ್ಟಪಡುತ್ತೇವೆಯೋ ಅಷ್ಟೇ ಪ್ರೀತಿ ಅಜರ್ ಮೇಲೆಯೂ ಇದೆ. ಹಿಂದೂಗಳು ಆತನನ್ನು ಮುಸ್ಲಿಮನೆಂಬಂತೆ ಕಂಡಿದ್ದರೆ ಅಜರ್ ಭಾರತದ ನಾಯಕನೇ ಆಗುತ್ತಿರಲಿಲ್ಲ. ಅಜರುದ್ದೀನ್, ಲಿಯಾಂಡರ್ ಪೇಸ್, ತೆಂಡೂಲ್ಕರ್ ಇವರನ್ನು ನಾವೆಂದೂ ಜಾತಿ, ಧರ್ಮ ನೋಡಿ ಪ್ರೀತಿಸಿದವರಲ್ಲ. ಅಡಿಗ ಅವರಿಗೆ ಈ ಸತ್ಯವೇ ಅರ್ಥವಾಗಿಲ್ಲ.

The Story of India ಹೆಸರಿನಡಿ ಮೈಕೆಲ್‌ವುಡ್ ಎಂಬಾತ ಸಾಕ್ಷ್ಯಚಿತ್ರ(ಡಾಕ್ಯೂಮೆಂಟರಿ)ವೊಂದನ್ನು ರೂಪಿಸಿದ್ದಾರೆ. ಅದಕ್ಕೂ ಮೊದಲು ೨೦ ತಿಂಗಳ ಕಾಲ ಭಾರತವನ್ನು ಸಮಗ್ರವಾಗಿ ಸುತ್ತಿದ್ದಾರೆ. ಎಲ್ಲಾ ಲೈಬ್ರರಿಗಳಿಗೂ ಅಲೆದಿ ದ್ದಾರೆ. ಮಾಹಿತಿ, ಪುಸ್ತಕಗಳನ್ನು ಕಲೆಹಾಕಿ ೧೫ ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಅಂತಹ ಸಂಶೋಧನೆಯ ನಂತರ ರೂಪಿಸಿರುವ ‘ದಿ ಸ್ಟೋರಿ ಆಫ್ ಇಂಡಿಯಾ’ ಎಂಬ ೬ ಗಂಟೆಗಳಷ್ಟು ದೀರ್ಘವಾದ ಸಾಕ್ಷ್ಯಚಿತ್ರ ಭಾರತದ ಇತಿಹಾಸ, ಪರಂಪರೆ ಹಾಗೂ ಹಾಲಿ ಪರಿಸ್ಥಿತಿಯನ್ನು ಹಂತ ಹಂತವಾಗಿ ತೆರೆದಿಡುತ್ತಾ ಸಾಗುತ್ತದೆ. ಹಾಗೆ ಒಂದು ಸಮಗ್ರವಾದ ಸಾಕ್ಷ್ಯಚಿತ್ರವನ್ನು ತಯಾರಿಸಿದರೂ ಭಾರತಕ್ಕೆ ನ್ಯಾಯ ಒದಗಿಸಿಕೊಡಲು ನನಗೆ ಸಾಧ್ಯವಾಗಿಲ್ಲ ಎಂದು ಮೈಕೆಲ್ ವುಡ್ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ. ಆದರೆ ಅಕ್ಟೋಬರ್ ೧೫ರಂದು ‘ಬುಕರ್’ ಪ್ರಶಸ್ತಿ ಪಡೆದಿರುವ ಅರವಿಂದ ಅಡಿಗ, “ವೈಟ್ ಟೈಗರ್”ನ ೩೨೧ ಪುಟಗಳಲ್ಲಿ ಭಾರತವೆಂದರೆ ಹೀಗೆಯೇ ಎಂದು ಜಡ್ಜ್‌ಮೆಂಟ್ ಪಾಸು ಮಾಡಿ ಬಿಡುತ್ತಾರೆ! ಬಹುಶಃ ಅದನ್ನು ಗಮನಿಸಿಯೇ “ಇದು ಮೂಲತಃ ಒಬ್ಬ ಬಾಹ್ಯ ವ್ಯಕ್ತಿಯ ಟಿಪ್ಪಣಿ ಹಾಗೂ ಜಾಳು ಅಭಿಪ್ರಾಯ ಎಂದು ನನಗನಿಸುತ್ತದೆ. ಭಾರತದಲ್ಲಿ ಕಂಡು-ಕೇಳರಿಯದ ಸಾಕಷ್ಟು ಅಂಶಗಳಿವೆ. ಅಡಿಗ ಅವರಲ್ಲಿ ಪ್ರತಿಭೆ ಇದೆ. ಮೊದಲು ಅವರು ತಮ್ಮನ್ನು ದೇಶದೊಳಗೇ ಅದ್ದಿಕೊಂಡು, ನಂತರ ಇತರ ವಿಚಾರಗಳತ್ತ ಗಮನಹರಿಸ ಬೇಕು. ವಿದೇಶಗಳಲ್ಲಿ ನೆಲೆಸಿರುವ ಹಾಗೂ ಅಡಿಗರಂತೆ ವಿದೇಶಗಳಲ್ಲಿ ವ್ಯಾಸಂಗ ಮಾಡಿರುವ ಬಹಳಷ್ಟು ಭಾರತೀಯ ಲೇಖಕರು ಸ್ವದೇಶವನ್ನು ಕ್ರೂರ ಅನ್ಯಾಯ ಹಾಗೂ ಕೊಳಕು ಭ್ರಷ್ಟಾಚಾರದ ತಾಣ ಎಂಬಂತೆಯೇ ಸಾಮಾನ್ಯವಾಗಿ ಚಿತ್ರಿಸುತ್ತಾರೆ” ಎಂದು ಕೆವಿನ್ ರಶ್ಬೈ ಅವರು ‘ವೈಟ್ ಟೈಗರ್’ ಬಗ್ಗೆ ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಬರೆದಿದ್ದಾರೆ.

ಕೆವಿನ್ ರಶ್ಬೈ ಮಾತು ನಿಜಕ್ಕೂ ಅರ್ಥಗರ್ಭಿತ.

ಭಾರತವೆಂದರೆ ಎತ್ತಿನ ಬಂಡಿಗಳ, ರಿಕ್ಷವಾಲಾಗಳ, ಹಾವಾ ಡಿಗರ ರಾಷ್ಟ್ರ. ಇಲ್ಲಿನ ನೀರನ್ನು ಕುಡಿದರೆ ಡಯೇರಿಯಾ ಬರುವುದು ಗ್ಯಾರಂಟಿ ಎಂಬ ತಲತಲಾಂತರದಿಂದ ಬಂದ ವಿದೇಶಿಯರ ಅಭಿಪ್ರಾಯವನ್ನು ‘ವೈಟ್ ಟೈಗರ್’ ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತದೆಯೇ ಹೊರತು ಎಲ್ಲ ರೀತಿಯ ಅಡ್ಡಿ-ಅಡಚಣೆಗಳ ಹೊರತಾಗಿಯೂ ಭಾರತ ಹೇಗೆ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂಬುದರ ಬಗ್ಗೆ ಅಭಿಮಾನಪೂರ್ವಕವಾಗಿ ಕಿಂಚಿತ್ತನ್ನೂ ಹೇಳುವುದಿಲ್ಲ. ಅಲ್ಲದೆ ಅವರ ತೆಗಳಿಕೆಗಳಲ್ಲೂ ಹೊಸತನವಿಲ್ಲ, ಸವಕಲು ಟೀಕೆಗಳೇ. ಶ್ರೀಮಂತರೆಲ್ಲ ದಗಾಕೋರರೇ, ಶ್ರೀಮಂತಿಕೆಯ ಹಿಂದೆ ಮೋಸ, ವಂಚನೆ, ನಿರ್ದಯತೆ, ಡಕಾಯಿತಿಗಳಿವೆ ಎಂಬಂತೆ ಅಡಿಗ ಬರೆಯುತ್ತಾರೆ. ಆದರೆ ಒಂದು ಉದ್ಯಮವನ್ನು ಪ್ರಾರಂಭಿಸಿ ಶ್ರೀಮಂತರಾದ ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರಂತಹವರ ಪ್ರಗತಿಯ ಹಿಂದೆ ಪರಿಶ್ರಮ, ಅಪಾಯವನ್ನು ಮೇಲೆ ಎಳೆದುಕೊಂಡು ಯಶಸ್ಸನ್ನು ಅರಸುವುದು ಹೇಗೆಂಬುದನ್ನು ಕಾಣಬಹುದು. ಹಾಗೆ ಪರಿಶ್ರಮದ ಫಲವಾಗಿ ಬಂದ ಯಶಸ್ಸಿನ ಫಲವನ್ನು ಅವರೊಬ್ಬರೇ ಅನುಭವಿಸಿಲ್ಲ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಎಷ್ಟೋ ಜನರು ನಾರಾಯಣಮೂರ್ತಿಯವರಿಂದಾಗಿ ಮಿಲಿಯನೇರ್‌ಗಳೂ ಆಗಿದ್ದಾರೆ. ಜಗತ್ತಿನ ಯಾವ ದೇಶವೂ ಬಡತನ, ನಿರುದ್ಯೋಗ, ದೌರ್ಜನ್ಯ, ಅನ್ಯಾಯ, ಅನಾಚಾರಗಳಿಂದ ಮುಕ್ತವಾಗಿಲ್ಲ. ಭಾರತದಲ್ಲಿ ಇವುಗಳು ತುಸು ಹೆಚ್ಚಾಗಿಯೇ ಇದ್ದರೂ ಅವುಗಳನ್ನೆಲ್ಲ ಮೀರಿ ನಾವೊಂದು ಬಲಿಷ್ಠ ರಾಷ್ಟ್ರ ವಾಗಿ ಹೊರಹೊಮ್ಮಿದ್ದೇವೆ.

ಭಾರತದಲ್ಲಿ ಶೋಧಿಸುವಂಥದ್ದು, ಗುರುತಿಸುವಂಥದ್ದು, ಹೆಮ್ಮೆಪಟ್ಟುಕೊಳ್ಳುವಂಥದ್ದು ಸಾಕಷ್ಟಿದೆ. ಹಾಗಾಗಿಯೇ ಫ್ರೆಂಚ್ ಲೇಖಕ ಜೀನ್ ಮರೀ ಗುಸ್ತಾವೋ ಲೆ ಕ್ಲೆಝಿಯೋ, ರೋಮಾ ರೋಲ್ಯಾಂಡ್, ಜರ್ಮನ್ ಸಾಹಿತಿ ಹರ್ಮನ್ ಹೆಸ್ಸಿ ಮುಂತಾದವರು ಭಾರತದ ಬಗ್ಗೆ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ರೋಮಾ ರೋಲ್ಯಾಂಡ್ ಅವರು ‘ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಆಂಡ್ ದಿ ಯೂನಿವರ್ಸಲ್ ಗಾಸ್ಪೆಲ್’ ಎಂಬ ಪುಸ್ತಕವನ್ನೇ ಬರೆದಿದ್ದರೆ ಹೆಸ್ಸಿ ಹಾಗೂ ಕ್ಲೆಝಿಯೋ ತಮ್ಮ ಕೃತಿಗಳಲ್ಲಿ ಭಾರತದ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಇವರೆಲ್ಲ ಸಾಮಾನ್ಯ ವ್ಯಕ್ತಿಗಳಲ್ಲ. ಈ ಮೂವರೂ ಸಾಹಿತ್ಯಕ್ಕಾಗಿ ನೊಬೆಲ್ ಪಡೆದಿದ್ದಾರೆ. ಆದರೆ ಅರುಂಧತಿ ರಾಯ್, ವಿ.ಎಸ್. ನೈಪಾಲ್ ಅವರಂತಹವರು ಭಾರತವನ್ನು ಬೈದೇ ‘ಬುಕರ್’ ಪಡೆದರು. ಅರವಿಂದ ಅಡಿಗ ಹೊಸ ಸೇರ್ಪಡೆಯಷ್ಟೆ. ಅಷ್ಟಕ್ಕೂ ‘ಬುಕರ್’ ಕೊಡುವವರು ಭಾರತದ ಮಾಜಿ ಧಣಿಗಳು. ಬ್ರಿಟಿಷರಿಗೆ ಇಂದಿಗೂ ಭಾರತದ ಬಗ್ಗೆ ಕೀಳಭಿಪ್ರಾಯವಿದೆ. ಅಕ್ಟೋಬರ್ ೨೨ರಂದು ಯಶಸ್ವಿಯಾಗಿ ಉಡಾವಣೆ ಮಾಡಿದ ‘ಚಂದ್ರಯಾನ’ವನ್ನೇ ತೆಗೆದುಕೊಳ್ಳಿ. “ಪ್ರತಿ ಭಾರತೀಯನಿಗೂ ಮೂಲಭೂತ ಸೌಕರ್ಯವನ್ನೇ ಒದಗಿಸಲು ಸಾಧ್ಯವಾಗಿಲ್ಲ. ಅಂತಹವರಿಗೆ ಚಂದ್ರಯಾನ ಬೇರೆ ಬೇಕೆ?” ಎಂದು ಬಿಬಿಸಿ ಚಾನೆಲ್ ಟೀಕೆ ಮಾಡಿದೆ. ನಮ್ಮ ವಿeನಿಗಳು ೧೦೦ ಕೋಟಿ ಭಾರತೀಯರು ಹೆಮ್ಮೆಪಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದರೂ ಅದರಲ್ಲೂ ಹುಳುಕು ಹುಡುತ್ತಿದೆ ಬಿಬಿಸಿ. ಅಡಿಗ ಕೂಡ ಅದೇ ವರ್ಗಕ್ಕೆ ಸೇರಿದವರಂತೆ ಕಾಣುತ್ತದೆ. ಪುಸ್ತಕವನ್ನು ಓದಿದ ನಂತರ ನಮ್ಮ ಕನ್ನಡಿಗ, ನಮ್ಮ ಮಂಗಳೂರು ಹುಡುಗ ಎಂಬ ಯಾವ ಅಭಿಮಾನಗಳೂ ಮೂಡುವುದಿಲ್ಲ. ಅರುಂಧತಿ ರಾಯ್ ಅವರಂತೆ ಬುಕರ್ ಪಡೆದ ಕೂಡಲೇ ತನಗೆ ಜಡ್ಜ್‌ಮೆಂಟ್ ಕೊಡುವ, ಎಲ್ಲದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಸಿಕ್ಕಿದೆ ಎಂಬಂತೆ ಅಡಿಗ ಈಗಾಗಲೇ ವರ್ತಿಸುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ತನಗೆ ಅತೀವ ನೋವುಂಟು ಮಾಡಿದೆ ಎಂದಿರುವ ಅಡಿಗ ಮತ್ತೊಬ್ಬ ತಥಾಕಥಿತ ಬುದ್ಧಿಜೀವಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

Watch Out!

ಕೃಪೆ : ಪ್ರತಾಪ್ ಸಿಂಹ

ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!

ಅಂಕಿತ್ ಗುಜರಾತಿನವನು. ಆತನ ವಿವಾಹ ನಿಶ್ಚಿತಾರ್ಥವಾಯಿತು. ಅದರ ಜತೆಗೆ ವಿಚಿತ್ರ ಸಮಸ್ಯೆಯೂ ಶುರುವಾಯಿತು. ಅಂಕಿತ್‌ನ ಸೆಲ್‌ಫೋನ್‌ಗೆ ಆತ ವಿವಾಹವಾಗಲಿದ್ದ ವಧುವಿನ ಸೆಲ್‌ನಿಂದ ದಿನಕ್ಕೆ ಐದಾರು ಎಸ್ಸೆಮ್ಮೆಸ್‌ಗಳು ಬರಲಾರಂಭಿಸಿದವು. ಆದರೆ ಅವು ಪ್ರೀತಿ, ಕಾಳಜಿಯ ಸಂದೇಶಗಳಾಗಿರಲಿಲ್ಲ. ಎಚ್ಚರಿಕೆಯ ಗಂಟೆಗಳಾಗಿದ್ದವು. ನನಗೆ ಬೇರೊಬ್ಬನ ಜತೆ ಸಂಬಂಧವಿದೆ. ನನ್ನನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹುಶಾರ್. ಇಂತಹ ಎಸ್ಸೆಮ್ಮೆಸ್‌ಗಳನ್ನು ಕಂಡು ಆಶ್ಚರ್ಯಚಕಿತನಾದ ಅಂಕಿತ್, ಕಾರಣ ತಿಳಿದುಕೊಳ್ಳುವ ಸಲುವಾಗಿ ನೇರವಾಗಿ ವಧುವನ್ನು ಕಂಡು ವಿಚಾರಿಸಿದಾಗ ಅಂತಹ ಎಸ್ಸೆಮ್ಮೆಸ್‌ಗಳನ್ನು ಆಕೆ ಕಳುಹಿಸಿಯೇ ಇರಲಿಲ್ಲ!

ಅದರ ಬಗ್ಗೆ ಆಕೆಗೆ ಅರಿವೂ ಇರಲಿಲ್ಲ. ಇದೆಂಥ ವಿಚಿತ್ರ ಎಂದು ಸುಮ್ಮನಾಗುವಂತೆಯೂ ಇಲ್ಲ. ಇಬ್ಬರಿಗೂ ಪರಸ್ಪರರ ಮೇಲೆ ವಿಶ್ವಾಸವಿದ್ದರೂ ನಿತ್ಯವೂ ಬರುತ್ತಿದ್ದ ಎಸ್ಸೆಮ್ಮೆಸ್‌ಗಳು ಮನಃಶಾಂತಿಯನ್ನು ಕೆಡಿಸುತ್ತಿದ್ದವು. ಅಂಕಿತ್ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮೊರೆ ಹೋದ. ಆತ ನೀಡಿದ ದೂರಿನ ತನಿಖೆಯ ಜವಾಬ್ದಾರಿ ಸನ್ನಿ ವಾಘೇಲಾನ ಹೆಗಲಿಗೆ ಬಿತ್ತು. ಎಸ್ಸೆಮ್ಮೆಸ್ ಸೆಂಟರ್‌ನ ನಂಬರ್ ತೆಗೆದುಕೊಂಡ ಸನ್ನಿ ತನಿಖೆ ಆರಂಭಿಸಿದ. ಆ ಎಸ್ಸೆಮ್ಮೆಸ್‌ಗಳನ್ನು ವೈಬ್‌ಸೈಟೊಂದರ ಮೂಲಕ ಕಳುಹಿಸಲಾಗಿದೆ ಎಂಬುದನ್ನು ಪತ್ತೆ ಮಾಡಿದ. ಆ ಮೂಲಕ ಯಾವ ಕಂಪ್ಯೂಟರ್‌ನಿಂದ ಕಳುಹಿಸಲಾಗುತ್ತಿದೆ ಎಂಬುದನ್ನು ‘ಐಪಿ’ ಅಡ್ರೆಸ್ ಮೂಲಕ ಕಂಡು ಹುಡುಕಿದ. ಒಂದೇ ದಿನದಲ್ಲಿ ಇಷ್ಟೆಲ್ಲಾ ಕಸರತ್ತುಗಳನ್ನು ಮುಗಿಸಿದ ಸನ್ನಿ, ಅಪರಾಧಿಯನ್ನೂ ಸಿಕ್ಕಿಬೀಳಿಸಿದ. ಆತ ಮತ್ತಾರೂ ಆಗಿರಲಿಲ್ಲ, ಅಂಕಿತ್‌ನೊಂದಿಗೆ ನಿಶ್ಚಿತಾರ್ಥವಾಗಿದ್ದ ಹುಡುಗಿಯ ಪಕ್ಕದ ಮನೆಯ ಗೆಂಡೇತಿಮ್ಮ!

ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಮಧ್ಯೆ ಪ್ರತಿಷ್ಠಿತ ಕಾಲೇಜಾದ ‘ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಗುಜರಾತ್’ನ ನಾಲ್ವರು ವಿದ್ಯಾರ್ಥಿನಿ ಯರು ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ನ ಮುಂದೆ ದೂರೊಂದನ್ನು ಸಲ್ಲಿಸಲು ಬಂದರು. ಯಾರೋ ಕಿಡಿಗೇಡಿಗಳು “ಆರ್ಕಟ್ ಡಾಟ್‌ಕಾಮ್”ನಲ್ಲಿ ಈ ವಿದ್ಯಾರ್ಥಿನಿಯರ ಪ್ರೊಫೈಲ್ ಸೃಷ್ಟಿಸಿ, ಅಶ್ಲೀಲ ಚಿತ್ರಗಳನ್ನು ಹಾಕಿದ್ದರು. ಜತೆಗೆ ಆರ್ಕಟ್‌ಗೆ ಇಣುಕುವವರಿಗೆ ಸ್ನೇಹದ ಬಲೆ ಬೀಸಿ ಅವರೊಂದಿಗೆ ಅಶ್ಲೀಲ ಸಂಭಾಷಣೆಯನ್ನೂ ನಡೆಸುತ್ತಿದ್ದರು. ಅಲ್ಲದೆ ಆ ವಿದ್ಯಾರ್ಥಿನಿಯರ ನೈಜ ಸ್ನೇಹಿತರನ್ನೂ ‘ಫ್ರೆಂಡ್ಸ್ ಲಿಸ್ಟ್’ಗೆ ಸೇರಿಸಿಕೊಂಡು ಸ್ಕ್ರ್ಯಾಪ್ ಬುಕ್‌ನಲ್ಲಿ ಸರಸ ಸಲ್ಲಾಪ ನಡೆಸುತ್ತಿದ್ದರು. ಹೀಗೆ ತಮ್ಮ ಚಾರಿತ್ರ್ಯಕ್ಕೆ ಯಾರೋ ಮಸಿ ಬಳಿಯಲು ಯತ್ನಿಸುತ್ತಾರೆ ಎಂಬುದು ಅರಿವಾದ ಕೂಡಲೇ ಆ ವಿದ್ಯಾರ್ಥಿನಿಯರು ದಾರಿ ಕಾಣದೆ ಕ್ರೈಮ್ ಬ್ರ್ಯಾಂಚ್‌ಗೆ ಬಂದಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೂ ಸನ್ನಿ ವಾಘೇಲಾನೇ. ಆರ್ಕಟ್‌ನ ಮೇಲೆ ನಿಗಾ ಇಡಲು ಆರಂಭಿಸಿದ ಸನ್ನಿ, ಆ ಕಿಡಿಗೇಡಿ ಆನ್‌ಲೈನ್‌ಗೆ ಬರುವುದನ್ನೇ ಕಾದು ಕುಳಿತ. ಆನ್‌ಲೈನ್‌ಗೆ ಬಂದ ಕೂಡಲೇ ತಂತ್ರeನದ ಸಹಾಯದಿಂದ ಆರ್ಕಟ್‌ಗೆ ಲಾಗ್ ಇನ್ ಆಗುತ್ತಿದ್ದ ಕಂಪ್ಯೂಟರ್‌ನ ಐಪಿ ಅಡ್ರೆಸ್ ತಿಳಿದುಕೊಂಡ. ಕೂಡಲೇ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ, ಅಪರಾಧಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದುಬಿಟ್ಟ. ಈ ಬಾರಿ ಸನ್ನಿ ತೆಗೆದುಕೊಂಡಿದ್ದು ೫ ದಿನಗಳನ್ನು.

ಸನ್ನಿಯೇನು ಸಾಮಾನ್ಯ ವ್ಯಕ್ತಿ ಎಂದು ಭಾವಿಸಬೇಡಿ.

ಕಳೆದ ಕೆಲವು ತಿಂಗಳುಗಳಲ್ಲಿ ಜೈಪುರ, ಬೆಂಗಳೂರು, ಅಹಮದಾಬಾದ್, ಸೂರತ್, ದಿಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಂಭವಿಸಿದ ಬಾಂಬ್ ಸ್ಫೋಟಗಳನ್ನು ನೆನಪು ಮಾಡಿಕೊಳ್ಳಿ. ಹಾಗೆ ಪ್ರತಿ ಬಾರಿ ಸ್ಫೋಟಗಳಾದಾಗಲೂ ಅದರ ಬೆನ್ನಲ್ಲೇ, ಇಲ್ಲವೇ ಸ್ಫೋಟಕ್ಕೂ ಕೆಲವು ನಿಮಿಷಗಳ ಮೊದಲು “ಇಂಡಿಯನ್ ಮುಜಾಹಿದ್ದೀನ್” ಎಂಬ ಹೆಸರಿನಲ್ಲಿ ಎಲ್ಲ ಪತ್ರಿಕೆ, ಪೊಲೀಸ್ ಹಾಗೂ ಸರಕಾರಿ ಕಚೇರಿಗಳಿಗೂ ಇ-ಮೇಲ್‌ಗಳು ರವಾನೆಯಾಗುತ್ತಿದ್ದವು. ಆದರೆ ಐಪಿ ಅಡ್ರೆಸ್ ಕಂಡುಹಿಡಿದು ಆ ಇ-ಮೇಲ್‌ಗಳನ್ನು ಎಲ್ಲಿಂದ ಕಳುಹಿಸಲಾಗುತ್ತಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ತನಿಖೆಯನ್ನು ದಾರಿ ತಪ್ಪಿಸುವ ಸಲುವಾಗಿ ಯಾರದ್ದೋ ಅಸುರಕ್ಷಿತ “Wi-Fi”(ಕೇಬಲ್ ರಹಿತ ಇಂಟರ್‌ನೆಟ್ ವ್ಯವಸ್ಥೆ) ನೆಟ್‌ವರ್ಕ್ ಮೂಲಕ ಇ-ಮೇಲ್‌ಗಳನ್ನು ಕಳುಹಿಸಲಾಗುತ್ತಿತ್ತು. ಹಾಗಾಗಿ ಪ್ರತಿಬಾರಿ ಬಾಂಬ್‌ಸ್ಫೋಟಗಳಾದಾಗಲೂ ಲಷ್ಕರೆ ತಯ್ಬಾ, ಜೈಶೆ ಮೊಹಮದ್, ಸಿಮಿ ಎಂಬ ಹೆಸರುಗಳನ್ನೇ ಹೇಳುತ್ತಿದ್ದ ಪೊಲೀಸರಿಗೆ, ಇದ್ಯಾವುದೀ ‘ಇಂಡಿಯನ್ ಮುಜಾಹಿದ್ದೀನ್’ ಎಂದು ತಲೆಕೆರೆದುಕೊಳ್ಳುವಂತಾಗಿತ್ತು.

ಅಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬಂದಿದ್ದೇ ಸನ್ನಿ ವಾಘೇಲಾನ ಬುದ್ಧಿಶಕ್ತಿ.

೧೯೯೬ರಲ್ಲೇ ಅನುಮಾನಕ್ಕೆಡೆಯಾಗಿದ್ದ ‘ಸಿಮಿ’ಯನ್ನು ನಿಷೇಧ ಮಾಡಿದ ನಂತರ ವಿವಿಧ ರೂಪಗಳಲ್ಲಿ ತಲೆಯೆತ್ತು ತ್ತಿರುವ ಭಯೋತ್ಪಾದಕ ಸಂಘಟನೆಗಳ ಇತ್ತೀಚಿನ ಅವತಾ ರವೇ ‘ಇಂಡಿಯನ್ ಮುಜಾಹಿದೀನ್’. ಇದರ ಒಂದು ವೈಶಿಷ್ಟ್ಯವೆಂದರೆ ಇದುವರೆಗೂ ದೇಶದ್ರೋಹಿಗಳು ಬಾಂಬ್ ಸ್ಫೋಟಿಸಿ ಪರಾರಿಯಾಗುತ್ತಿದ್ದರು, ಇಲ್ಲವೇ ತಲೆಮರೆಸಿಕೊಳ್ಳುತ್ತಿದ್ದರು. ಸ್ಫೋಟಕ್ಕೆ ಕಾರಣ ಯಾರು ಎಂಬುದರ ಸುಳಿವೇ ಸಿಗುತ್ತಿರಲಿಲ್ಲ. ಹಾಗಾಗಿ ನಮ್ಮ ಪೊಲೀಸರು ಹಾಗೂ ಗೃಹ ಇಲಾಖೆ ಸಿದ್ಧಸೂತ್ರವೊಂದನ್ನು ಇಟ್ಟುಕೊಂಡಿತ್ತು. ‘ಲಷ್ಕರೆ, ಜೈಶೆ’ ಎಂದು ಬಾಯಿಗೆ ಬಂದ ಒಂದು ಹೆಸರು ಹೇಳಿ ಆರೋಪ ಹೊರಿಸಿ ಬಿಡುತ್ತಿತ್ತು. ಅದನ್ನು ಕಾಲಾಂತರದಲ್ಲಿ ಜನರೂ ಮರೆಯುತ್ತಿದ್ದರು, ತನಿಖೆಯಿಂದಲೂ ಏನೂ ಸಾಬೀತಾಗುತ್ತಿರಲಿಲ್ಲ. ಮತ್ತೆ ಬಾಂಬ್ ಸ್ಫೋಟವಾದ ಕೂಡಲೇ ಅದೇ ಹೆಸರು, ಅದೇ ಆರೋಪಗಳನ್ನು ಪುನರುಚ್ಚರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಲೆಯೆತ್ತಿರುವ ‘ಇಂಡಿಯನ್ ಮುಜಾಹಿದೀನ್’ ಮಾತ್ರ ತೀರಾ ಭಿನ್ನ ಕಾರ್ಯತಂತ್ರ ಅನುಸರಿಸುತ್ತಿದೆ. ಅದಕ್ಕೆ ಪ್ರಚಾರದ ಗೀಳು ಅಂಟಿಕೊಂಡಿದೆ. ಜನರನ್ನು ಭಯಭೀತಗೊಳಿಸುವ ಉದ್ದೇಶವನ್ನೂ ಹೊಂದಿದೆ. ಹಾಗಾಗಿ ಸ್ಫೋಟ ನಡೆಯುವುದಕ್ಕಿಂತ ಕೆಲವೇ ನಿಮಿಷ, ಸೆಕೆಂಡ್‌ಗಳ ಮೊದಲು ಇ-ಮೇಲ್ ಕಳುಹಿಸಿ ಎಲ್ಲಿ ಬಾಂಬ್ ಸ್ಫೋಟಿಸಲಿದೆ ಎಂಬುದರ ಸುಳಿವು ನೀಡುತ್ತಿತ್ತು. ಸ್ಫೋಟದ ನಂತರ ತಾನೇ ಜವಾಬ್ದಾರ ಎಂದು ಹೇಳಿಕೊಳ್ಳುತ್ತಿತ್ತು. ಹೀಗೆ ಪ್ರಚಾರದ ಹಿಂದೆ ಬಿದ್ದಿರುವ, ಆ ಮೂಲಕ ಜಗತ್ತಿನ ಗಮನ ಸೆಳೆಯಲು ಯತ್ನಿಸುತ್ತಿರುವ ಇಂಡಿಯನ್ ಮುಜಾಹಿದೀನ್ ತನ್ನದೇ ಆದ ಮಾಧ್ಯಮ ಕೇಂದ್ರವನ್ನು ಹೊಂದಿದೆ. ಜುಲೈ ೨೬ರಂದು ನಡೆದ ಅಹಮದಾಬಾದ್ ಸ್ಫೋಟಕ್ಕೆ ಸ್ವಲ್ಪ ಮೊದಲು ಅಂದರೆ ಸಾಯಂಕಾಲ ೬.೪೦ಕ್ಕೆ ಇ-ಮೇಲ್ ಕಳುಹಿಸಿದ್ದು ಈ ಮಾಧ್ಯಮ ಕೇಂದ್ರವೇ. ಅಂದು ‘alarbi_gujarat@yahoo.com’ ಎಂಬ ಐಡಿಯಿಂದ ಇ-ಮೇಲನ್ನು ಕಳುಹಿಸಲಾಗಿತ್ತು. ಅದರ ಐಪಿ ಅಡ್ರೆಸ್ “೨೧೦.೨೧೧.೧೩೩.೨೦೦” ಅನ್ನು ಬೆನ್ನುಹತ್ತಿ ಹೋದ ಪೊಲೀಸರು ತಲುಪಿದ್ದು ಮುಂಬೈನ ಕೆನೆತ್ ಹೇವುಡ್‌ನ ನಿವಾಸವನ್ನು. ಆದರೆ ಕೆನೆತ್ ಹೇವುಡ್ ಭಯೋತ್ಪಾದಕನೇನೂ ಆಗಿರಲಿಲ್ಲ. ಆತನ ಅಸುರಕ್ಷಿತ “Wi-Fi” ವ್ಯವಸ್ಥೆಯನ್ನು ಬಳಸಿಕೊಂಡು ಭಯೋತ್ಪಾದಕರು ಮೇಲ್ ಕಳುಹಿಸಿದ್ದರು. ಹಾಗಾಗಿ ಪೊಲೀಸರು ಚಳ್ಳೆಹಣ್ಣು ತಿನ್ನಬೇಕಾಯಿತು. ೨೦೦೮, ಜುಲೈ ೩೧ರಂದು “alarbi_gujarat@yahoo.com” ಎಂಬ ಐಡಿಯಿಂದ ಮತ್ತೆ ಟೆರರ್ ಇ-ಮೇಲ್ ಬಂತು. ಅದರ ಐಪಿ ಅಡ್ರೆಸ್ಸನ್ನು ಬೆನ್ನತ್ತಿ ಹೋದಾಗ ಬರೋಡಾ ಮೆಡಿಕಲ್ ಕಾಲೇಜಿಗೆ ಬಂದು ತಲುಪಬೇಕಾಯಿತು. ೨೦೦೮, ಆಗಸ್ಟ್ ೨೩ರಂದು “alarbi.alhindi@gmail.com”ನಿಂದ ಬಂದ ಮತ್ತೊಂದು ಇ-ಮೇಲ್‌ನ ಐಪಿ ಅಡ್ರೆಸ್ ಹುಡುಕಿಕೊಂಡು ಹೋದಾಗ ಮುಂಬೈನ ಖಾಲ್ಸಾ ಕಾಲೇಜು ಸಿಕ್ಕಿತು. ಅಂದರೆ ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯ ಮೂಲಕ ಕದ್ದುಮುಚ್ಚಿ ಇ-ಮೇಲ್ ಮಾಡುತ್ತಿದ್ದರು. ಅದನ್ನು ಪತ್ತೆಹಚ್ಚಲು ಹೆಣಗುತ್ತಿದ್ದ ಗುಜರಾತ್ ಪೊಲೀ ಸರು ಮುಖ ಮಾಡಿದ್ದು ಸನ್ನಿ ವಾಘೇಲಾನತ್ತ. ಅಷ್ಟಕ್ಕೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಂತಹ ಪ್ರತಿಭಾನ್ವಿತರ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಸನ್ನಿ ವಾಘೇಲಾ, ತನ್ನೆಲ್ಲಾ ಜಾಣ್ಮೆಯನ್ನು ಪಣಕ್ಕಿಟ್ಟು ಶೋಧನೆ ಆರಂಭಿಸಿದ. ಭಯೋತ್ಪಾದಕರು ಯಾರದ್ದೋ “Wi-Fi” ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ದಾರಿ ತಪ್ಪಿಸುತ್ತಿದ್ದರೂ Media Access Control ಮೂಲಕ ಅವರು ಇ-ಮೇಲ್ ಕಳುಹಿಸುತ್ತಿದ್ದ ಕಂಪ್ಯೂಟರ್‌ಗಳನ್ನು ಪತ್ತೆಹಚ್ಚುವಲ್ಲಿ ಸನ್ನಿ ಸಫಲನಾದ. ಹಾಗೆ ಆತ ಕಲೆಹಾಕಿದ ಮಾಹಿತಿಯಿಂದಾಗಿಯೇ ಮೊನ್ನೆ ಅಕ್ಟೋಬರ್ ೬ರಂದು ಆಸಿಫ್ ಬಶೀರ್ ಶೇಕ್, ಮೊಹಮದ್ ಮನ್ಸೂರ್ ಅಸ್ಗರ್ ಪೀರ್‌ಭಾಯ್, ಮುಬಿನ್ ಖಾದರ್ ಶೇಕ್, ಮೊಹಮದ್ ಆತಿಕ್ ಮೊಹಮದ್ ಇಕ್ಬಾಲ್, ದಸ್ತಗಿರ್ ಫಿರೋಝ್ ಮುಜಾವರ್, ಮೊಹಮದ್ ಅಕ್ಬರ್ ಇಸ್ಮಾಯಿಲ್, ಅಹಮದ್ ಬಾವಾ ಅಬೂಬಕರ್ ಮುಂತಾದ ೧೫ ಜನರನ್ನು ನಮ್ಮ ಮಂಗಳೂರು, ಬಾಂಬೆ ಹಾಗೂ ಇತರೆಡೆಗಳಲ್ಲಿ ಪೊಲೀಸರು ಬಂಧಿಸಲು ಸಾಧ್ಯವಾಗಿದ್ದು. ಅದರಲ್ಲೂ ಇಂಡಿಯನ್ ಮುಜಾಹಿದೀನ್‌ನ ಮಾಧ್ಯಮ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಪುಣೆಯ ಮೊಹಮದ್ ಪೀರ್‌ಭಾಯ್ ಹಾಗೂ ಮುಬಿನ್ ಖಾದರ್ ಶೇಕ್‌ನನ್ನು ಬಂಧಿಸಿದ್ದಂತೂ ದೊಡ್ಡ ಸಾಧನೆಯೇ ಸರಿ. ಅದರ ಹೆಗ್ಗಳಿಕೆ ಸನ್ನಿಗೆ ಸಲ್ಲಬೇಕು.

ಇಂದು ಇಡೀ ದೇಶದ ಗಮನ ಸೆಳೆದಿರುವ ಸನ್ನಿಗೆ ಕೇವಲ ೨೧ ವರ್ಷ.

ಆತನೊಬ್ಬ ‘ಎಥಿಕಲ್ ಹ್ಯಾಕರ್’. ಆತನಿಗೆ ಹ್ಯಾಕಿಂಗ್ ಗೀಳು ಅಂಟಿಕೊಂಡಿದ್ದು ಪ್ರಥಮ ಪಿಯುಸಿಯಲ್ಲಿದ್ದಾಗ. ಒಮ್ಮೆ ಆತನ ಇ-ಮೇಲನ್ನು ಯಾರೋ ಹ್ಯಾಕ್ ಮಾಡಿ ಬಿಟ್ಟರು. ಆ ಘಟನೆಯ ನಂತರ ಹ್ಯಾಕಿಂಗ್ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ ಸನ್ನಿ, ಹ್ಯಾಕಿಂಗ್ ಬಗ್ಗೆ ಆಸಕ್ತಿ ಹೊಂದಿರುವವರ ಆನ್‌ಲೈನ್ ಗುಂಪೊಂದನ್ನು ಕಟ್ಟಿಕೊಂಡ. ಅವರ ಜತೆ ಹ್ಯಾಕಿಂಗ್‌ನ ಒಳ-ಹೊರಗುಗಳ ಬಗ್ಗೆ ಚರ್ಚೆ ನಡೆಸಿದ. ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡ. ಇ-ಮೇಲ್ ಹ್ಯಾಕಿಂಗ್ ಬಗ್ಗೆ ತಿಳಿದುಕೊಂಡ ನಂತರ, ‘ಲಾಗ್ ಆಫ್’ ಮಾಡಿದ ನಂತರವೂ ‘ಕುಕಿ’ಗಳ ಸಹಾಯದಿಂದ ಇತರರ ಆರ್ಕಟ್ ಐಡಿಯೊಳಕ್ಕೆ ಹೊಕ್ಕುವುದು ಹಾಗೂ ಖೊಟ್ಟಿ ಎಸ್ಸೆಮ್ಮೆಸ್ (SMS Spoofing)ನತ್ತ ಆತನ ಆಸಕ್ತಿ ತಿರುಗಿತು. ಯಾರದ್ದೋ ನಂಬರ್‌ನಿಂದ ಇನ್ಯಾರಿಗೋ ಎಸ್ಸೆಮ್ಮೆಸ್ ಕಳುಹಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡ. ಆದರೆ ಅದನ್ನು ಪ್ರಯೋಗಿಸಿದ್ದು ಯಾರ ಮೇಲೆ ಗೊತ್ತೆ? ಒಮ್ಮೆ ಕಾಲೇಜಿನಲ್ಲಿ ಇಂಟರನಲ್ ಪರೀಕ್ಷೆ ಇತ್ತು. ಆದರೆ ಸನ್ನಿ ಓದಿಕೊಂಡಿರಲಿಲ್ಲ. ಹಾಗಾಗಿ ಪರೀಕ್ಷೆ ಬರೆಯುವ ಧೈರ್ಯವಿರಲಿಲ್ಲ. ಹಾಗಂತ ಚಕ್ಕರ್ ಹೊಡೆಯುವಂತೆಯೂ ಇರಲಿಲ್ಲ. ಆತ ವ್ಯಾಸಂಗ ಮಾಡುತ್ತಿದ್ದ ‘ನಿರ್ಮಾ’ ಕಾಲೇಜಿನಲ್ಲಿ ಕಟ್ಟುನಿಟ್ಟಾದ ನಿಯಮಗಳಿದ್ದವು. ಹಾಗಾಗಿ ತಾನು ಕಲಿತಿದ್ದ SMS Spoofing ವಿದ್ಯೆಯನ್ನು ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ಪ್ರಯೋಗಿಸಲು ಮುಂದಾದ! “ಕಾರಣಾಂತರದಿಂದ ಇಂಟರ್ನಲ್ ಪರೀಕ್ಷೆ ಯನ್ನು ಮುಂದೂಡಲಾಗಿದೆ” ಎಂಬ ಸಂದೇಶವನ್ನು ಪ್ರಾಂಶುಪಾಲರ ನಂಬರ್‌ನಿಂದ ಎಲ್ಲ ವಿದ್ಯಾರ್ಥಿಗಳಿಗೂ ಕಳುಹಿಸಿದ ಸನ್ನಿ, ವಿದ್ಯಾರ್ಥಿಗಳು ಗೈರು ಹಾಜರಾಗುವಂತೆ ಮಾಡಿ ಪರೀಕ್ಷೆಯೇ ನಡೆಯದಂತೆ ಮಾಡಿದ್ದ! ಇಂತಹ ಫಟಿಂಗತನವನ್ನು ಆತ ಮಾಡಿರಬಹುದು. ಆದರೆ ಸನ್ನಿಗೆ ದೇಶದ ಬಗ್ಗೆ ಅಪಾರ ಕಾಳಜಿ ಇದೆ. ೨೦೦೮ನೇ ಸಾಲಿನಲ್ಲಿ ಗುಜರಾತ್‌ನ ‘ನಿರ್ಮಾ’ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದು ಹೊರಬಂದಿರುವ ಸನ್ನಿಗೆ ಭಾರೀ ಸಂಬಳ-ಸವಲತ್ತನ್ನು ನೀಡುವ ಹಲವಾರು ಉದ್ಯೋಗಗಳು ತಾವಾಗಿಯೇ ಅರಸಿಕೊಂಡು ಬಂದಿದ್ದವು. ಆದರೆ ಆತನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ಆ ಆಸೆ ಈಡೇರದಿದ್ದರೇನಂತೆ, ಅಹಮದಾಬಾದಿನಲ್ಲಿ “ಸೈಬರ್ ಕ್ರೈಮ್ ಸೆಲ್” ಸ್ಥಾಪನೆ ಮಾಡಿರುವ ಆತ, ಸೈಬರ್ ಕಳ್ಳರನ್ನು ಹುಡುಕಿ ಕೊಡುತ್ತಿದ್ದಾನೆ. ಅಮೆರಿಕ ಮೂಲದ ಐಟಿ ಕಂಪನಿ ‘ನೋಬೆಲ್ ವೆಂಚರ್‍ಸ್’ನಲ್ಲಿ ನಡೆದ ಅತಿದೊಡ್ಡ ಡೇಟಾ ಕಳವು ಪ್ರಕರಣದ ರೂವಾರಿಯನ್ನು ಪತ್ತೆಹಚ್ಚಿದ ಸನ್ನಿ, ‘ಇ-ಬೇ’ ಕ್ರೆಡಿಟ್ ಕಾರ್ಡ್ ಮೋಸ, ಖೊಟ್ಟಿ ಎಸ್ಸೆಮ್ಮೆಸ್ ಪ್ರಕರಣ, ಉದ್ಯಮ ವಲಯದಲ್ಲಿನ ಕಡತಗಳ ಕಳ್ಳತನ, ಆರ್ಕಟ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುವುದು ಮುಂತಾದ ೧೬ ಸೈಬರ್ ಅಪರಾಧಗಳನ್ನು ಇದುವರೆಗೂ ಶೋಧಿಸಿದ್ದಾನೆ. ಟೆಕ್ ಹ್ಯಾಕಿಂಗ್, ಮೊಬೈಲ್ ಸೆಕ್ಯುರಿಟಿ, ವೆಬ್ ಸೆಕ್ಯುರಿಟಿ, ಸೈಬರ್ ಫಾರೆನ್ಸಿಕ್ಸ್ ಮುಂತಾದ ವಿಷಯಗಳ ಕುರಿತು ದೇಶಾದ್ಯಂತ ೩೦ ಉಪನ್ಯಾಸಗಳನ್ನು ನೀಡಿದ್ದಾನೆ. ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್ ಹಾಗೂ ಮುಂಬೈ ಭಯೋತ್ಪಾದನಾ ನಿಗ್ರಹ ದಳಗಳಿಗೆ ಸಹಾಯ ನೀಡುತ್ತಿರುವ ಆತ, ಮೊಹಮದ್ ಪೀರ್‌ಭಾಯ್‌ನಂತಹ ಪ್ರಚಂಡ ದೇಶದ್ರೋಹಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಹಾಗಾಗಿ ಆತನ ಜೀವಕ್ಕೂ ಅಪಾಯ ಎದುರಾಗಿದೆ. ಆತ ಮಾಡುತ್ತಿರುವ ಕೆಲಸದ ಬಗ್ಗೆ ಕುಟುಂಬ ವರ್ಗಕ್ಕೆ ತೀವ್ರ ಅಸಮಾಧಾನವಿದೆ. ಆದರೆ ಸನ್ನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಹಮದಾಬಾದ್ ಕ್ರೈಮ್ ಬ್ರ್ಯಾಂಚ್‌ಗೆ ತನ್ನೆಲ್ಲಾ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾನೆ, ಜೀವ ಬೆದರಿಕೆಯನ್ನೂ ಲೆಕ್ಕಿಸದೆ ಉಗ್ರರ ಜಾಲವನ್ನು ಪತ್ತೆ ಹಚ್ಚಿ ನಾಶಪಡಿಸಲು ಸಹಾಯ ಮಾಡುತ್ತಿದ್ದಾನೆ. ಆತನ ಸೇವೆಯನ್ನು ಗುರುತಿಸಿ ‘ರಾಜೀವ್ ಗಾಂಧಿ ಯುವ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಮುಸ್ಲಿಮ್ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಅನಕ್ಷರತೆ ಮತ್ತು ನಿರುದ್ಯೋಗವೇ ಕಾರಣ ಎಂದು ಹಿಂದೆಲ್ಲಾ ಸಬೂಬು ಹೇಳುತ್ತಿದ್ದರು. ಅನರಕ್ಷತೆ ಮತ್ತು ನಿರುದ್ಯೋಗವೆಂಬುದು ಮುಸ್ಲಿಮರನ್ನು ಮಾತ್ರ ಕಾಡುತ್ತಿದೆ ಎಂಬಂತೆ ಬೊಬ್ಬೆ ಹಾಕುತ್ತಿದ್ದರು. ಬಡತನ ಮತ್ತು ಅನಕ್ಷರತೆಗಳು ಭಯೋತ್ಪಾದನೆಗೆ ಕಾರಣ ಎನ್ನುವುದಾದರೆ ಬಡತನರೇಖೆಗಿಂತ ಕೆಳಗಿರುವ ಈ ದೇಶದ ಶೇ. ೩೦ರಷ್ಟು ಭಾರತೀಯರೂ ಭಯೋತ್ಪಾದಕರಾಗಿರಬೇಕಿತ್ತು ಎಂಬ ಕನಿಷ್ಠ eನವೂ ಇಲ್ಲದವರಂತೆ ಮುಸ್ಲಿಮ್ ಭಯೋತ್ಪಾದಕರನ್ನು ಸಮರ್ಥನೆ ಮಾಡುತ್ತಿದ್ದರು. ಆದರೆ ಈಗ ಸತ್ಯ ಬೆತ್ತಲಾಗಿ ನಿಂತಿದೆ. ಇಂದು ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುತ್ತಿರುವ ಮುಸ್ಲಿಮ್ ಯುವಕರು ಬಡವರೂ ಅಲ್ಲ, ಅನಕ್ಷರಸ್ಥರೂ ಅಲ್ಲ. ‘ಇಂಡಿಯನ್ ಮುಜಾಹಿದೀನ್’ನ ಮಾಧ್ಯಮ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದ ಪುಣೆಯ ಮೊಹಮದ್ ಅಸ್ಗರ್ ಪೀರ್ ಭಾಯ್ ‘ಯಾಹೂ ಇನ್‌ಕಾರ್ಪೊರೇಟೆಡ್’ನ ಉದ್ಯೋಗಿ ಯಾಗಿದ್ದ. ವರ್ಷಕ್ಕೆ ೧೯ ಲಕ್ಷ ಸಂಬಳ ಎಣಿಸುತ್ತಿದ್ದ. ಆತನಿಗೆ ಸಹಾಯ ನೀಡುತ್ತಿದ್ದ ಮುಬಿನ್ ಖಾದರ್ ಶೇಕ್ ಕೂಡ ಸಾಫ್ಟ್‌ವೇರ್ ಎಂಜಿನಿಯರ್. ಶ್ರೀಮಂತ ಕುಟುಂಬ ದಿಂದಲೇ ಬಂದವನಾಗಿದ್ದಾನೆ. ಹೀಗೆ ಧರ್ಮದ ಹೆಸರಿನಲ್ಲಿ ಅನ್ನ ನೀಡುತ್ತಿರುವ, ವಿದ್ಯಾದಾನ ಮಾಡಿದ ದೇಶವನ್ನೇ ನಾಶ ಮಾಡಲು ಹೊರಟಿರುವ ಕೃತಘ್ನರು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಬಳ-ಸವಲತ್ತಿನ ಆಸೆ ಬಿಟ್ಟು, ಅಪಾಯವನ್ನು ಮೈಮೇಲೆ ಎಳೆದುಕೊಂಡು ಪೊಲೀಸರಿಗೆ ಸಹಾಯ ನೀಡುತ್ತಿರುವ ಸನ್ನಿ ವಾಘೇಲಾನ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತದೆ ಅಲ್ಲವೆ?

ಕೃಪೆ : ಪ್ರತಾಪ್ ಸಿಂಹ

ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ! ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ!

ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.

ನಮ್ಮ ಬಳಿಯಾದರೂ ಪಾಕಿಸ್ತಾನದ ಪಾತ್ರಕ್ಕೆ ಕನ್ನಡಿ ಹಿಡಿದಂತೆ ಕಸಬ್‌ನಾದರೂ ಇದ್ದಾನೆ. ಆದರೆ ಅಮೆರಿಕದ ಬಳಿ ಯಾವ ಸಾಕ್ಷ್ಯಗಳೂ ಇರಲಿಲ್ಲ. ಹಾಗಂತ ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ಸಾಕ್ಷ್ಯಗಳನ್ನು ಕಲೆಹಾಕುತ್ತಾ ಕುಳಿತುಕೊಳ್ಳಲಿಲ್ಲ. 2001, ಸೆಪ್ಟೆಂಬರ್ 11ರ ದಾಳಿ ನಡೆದು 6 ದಿನಗಳ ಬಳಿಕ ಮಾಧ್ಯಮಗಳ ಮುಂದೆ ನಿಂತ ಬುಷ್, “ನಮ್ಮ ಶತ್ರುಗಳ್ಯಾರು, ಅವರಿಗೆ ಬೆಂಬಲ ನೀಡುತ್ತಿರುವವರ್‍ಯಾರು ಎಂದು ನಮಗೆ ಗೊತ್ತು. ಒಸಾಮಾ ಬಿನ್ ಲಾಡೆನ್‌ನೇ ಮುಖ್ಯ ಶಂಕಿತ. ಒಂದೋ ಲಾಡೆನ್ ಹಾಗೂ ಇತರ ಭಯೋತ್ಪಾದಕರನ್ನು ನಮಗೆ ಹಸ್ತಾಂತರ ಮಾಡಿ ಇಲ್ಲವೆ ಅಮೆರಿಕದ ದಾಳಿಗೆ ತುತ್ತಾಗಿ” ಎಂದರು.

ತಾಲಿಬಾನ್ ಬಗ್ಗಲಿಲ್ಲ.

“ನಮ್ಮ ನಿಲುವು ಸ್ಪಷ್ಟವಾಗಿದೆ. ಒಂದು ವೇಳೆ ಅಮೆರಿಕದ ಬಳಿ ಸಾಕ್ಷ್ಯಧಾರವಿದ್ದರೆ ಕೊಡಲಿ, ಒಸಾಮಾನನ್ನು ನಾವೇ ವಿಚಾರಣೆಗೆ ಒಳಪಡಿಸುತ್ತೇವೆ” ಎಂದರು ಪಾಕಿಸ್ತಾನದಲ್ಲಿದ್ದ ತಾಲಿಬಾನ್ ರಾಯಭಾರಿ ಅಬ್ದುಲ್ ಸಲೀಂ ಝಯೀಫ್. ಬುಷ್ ಮರು ಮಾತನಾಡಲಿಲ್ಲ. ಅಮೆರಿಕದ ಪಡೆಗಳು ಅರಬ್ಬೀ ಸಮುದ್ರದತ್ತ ಹೊರಟವು. ಅಮೆರಿಕದ ಮೇಲೆ ದಾಳಿ ನಡೆದು ತಿಂಗಳು ಕೂಡ ಆಗಿಲ್ಲ, “Operation Enduring Freedom” ಆರಂಭ ವಾಗಿಯೇ ಬಿಟ್ಟಿತು. “ಅಂತಹ ಸೋವಿಯತ್ ರಷ್ಯಾದವರೇ ಅಫ್ಘಾನಿಸ್ತಾನದಿಂದ ಕೈಸುಟ್ಟುಕೊಂಡು ಹೋಗಿದ್ದಾರೆ. ನೆರೆಯಲ್ಲೇ ಇದ್ದರೂ ತಾಲಿಬಾನಿಗಳನ್ನು ಮಣಿಸಲಾಗಲಿಲ್ಲ. ಇನ್ನು ಸಾವಿರಾರು ಮೈಲು ದೂರದಿಂದ ಬಂದು ಅಮೆರಿಕವೇನು ಮಾಡೀತು?” ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ತಕ್ಕಂತೆ “ಲಾಡೆನ್ ನಮ್ಮ ಅತಿಥಿ. ಅತಿಥಿಗಳಿಗೆ ಆಶ್ರಯ, ಸತ್ಕಾರ ನೀಡು ಎನ್ನುತ್ತದೆ ನಮ್ಮ ಪುಶ್ತೂನ್ ಸಂಸ್ಕೃತಿ” ಎಂದ ತಾಲಿಬಾನ್ ಲಾಡೆನ್‌ನನ್ನು ಹಸ್ತಾಂತರ ಮಾಡುವುದಿಲ್ಲ, ಆತನ ತಂಟೆಗೆ ಬಂದರೆ ನಾವೂ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಮುಟ್ಟಿಸಿತು. ಹಾಗಾಗಿ ಅಮೆರಿಕಕ್ಕೆ ಮುಖಭಂಗ ಖಚಿತ ಎಂದು ಪತ್ರಕರ್ತರೂ ಬರೆದರು.

ಆದರೆ ಆಗಿದ್ದೇನು?

2001, ಅಕ್ಟೋಬರ್ 7ರಂದು ದಾಳಿ ಆರಂಭವಾಯಿತು. ಅಮೆರಿಕದ ‘ಕಾರ್ಪೆಟ್ ಬಾಂಬಿಂಗ್’ಗೆ (ನೂರಾರು ಬಾಂಬ್‌ಗಳನ್ನು ಒಮ್ಮೆಲೆ ಸುರಿಯುವುದು) ಅಫ್ಘಾನಿಸ್ತಾನದ ಬೆಟ್ಟ-ಗುಡ್ಡಗಳೇ ಧ್ವಂಸವಾಗತೊಡಗಿದವು. ಆಕ್ರಮಣ ಆರಂಭವಾಗಿ 7 ದಿನ ಕಳೆಯುವಷ್ಟರಲ್ಲಿ ಅಂದರೆ ಅಕ್ಟೋಬರ್ 14ರಂದು ಹೇಳಿಕೆಯೊಂದನ್ನು ಹೊರಡಿಸಿದ ತಾಲಿಬಾನ್, “ಒಂದು ವೇಳೆ ಅಮೆರಿಕ ಬಾಂಬ್ ದಾಳಿಯನ್ನು ನಿಲ್ಲಿಸಿ ಸಾಕ್ಷ್ಯ ಕೊಟ್ಟರೆ ವಿಚಾರಣೆ ನಡೆಸಲು ಲಾಡೆನ್ನನನ್ನು ಮೂರನೇ ರಾಷ್ಟ್ರಕ್ಕೆ ಹಸ್ತಾಂತರಿಸುತ್ತೇವೆ’ ಎಂದಿತು. ಅಮೆರಿಕದ ದಾಳಿ, ಅತಿಥಿ ಸತ್ಕಾರ ಮಾಡುವ ಪುಶ್ತೂನ್ ಸಂಸ್ಕೃತಿಯನ್ನೇ ಸಂಹಾರ ಮಾಡಿತ್ತು! “ಲಾಡೆನ್ ಅಪರಾಧಿಯೋ ಅಥವಾ ಅಮಾಯಕಯೋ ಎಂದು ಚರ್ಚೆ ನಡೆಸುವ ಅಗತ್ಯವಿಲ್ಲ. ಆತ ಅಪರಾಧಿ ಎಂದು ನಮಗೆ ಗೊತ್ತು” ಎಂದ ಬುಷ್, ತಾಲಿಬಾನ್ ಆಹ್ವಾನವನ್ನು ತಿರಸ್ಕರಿಸಿ ದಾಳಿಯನ್ನು ಮುಂದುವರಿಸಿದರು. ಇನ್ನೊಂದೆಡೆ ಜರ್ಮನಿ, ಫ್ರಾನ್ಸ್‌ನಂತಹ ಒಂದಿಷ್ಟು ಐರೋಪ್ಯ ಹಾಗೂ ಇತರ ರಾಷ್ಟ್ರಗಳು, ‘ವಿಶ್ವಸಂಸ್ಥೆಯ ಒಪ್ಪಿಗೆ ಪಡೆಯದೇ ಅಮೆರಿಕ ದಾಳಿ ನಡೆಸುತ್ತಿದೆ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಕರೆದು ಅಮೆರಿಕವನ್ನು ತರಾಟೆಗೆ ತೆಗೆದು ಕೊಳ್ಳಲು, ದಾಳಿಯನ್ನು ನಿಲ್ಲಿಸುವಂತೆ ಒತ್ತಡ ಹೇರಲು ಮುಂದಾದವು. ಅವುಗಳ ಚರ್ಚೆ, ಮಾತುಕತೆ, ಪರಸ್ಪರ ಕಿತ್ತಾಟ ಮುಗಿಯುವಷ್ಟರ ವೇಳೆಗೆ ಆಫ್ಘನ್ ಯುದ್ಧವೇ ಕೊನೆಗೊಂಡಿತ್ತು! ತಾಲಿಬಾನ್ ಪರಾರಿಯಾಗಿತ್ತು. ಕಾಬೂಲ್ ಕೈವಶವಾಗಿತ್ತು. ೨೦೦೧, ಡಿಸೆಂಬರ್ ೨೦ರಂದು ನಿರ್ಧಾರವೊಂದನ್ನು ಕೈಗೊಂಡ ಭದ್ರತಾ ಮಂಡಳಿ, ‘ಅಫ್ಘಾನಿಸ್ತಾನದಲ್ಲಿ ಮಧ್ಯಂತರ ಸರಕಾರ ಸ್ಥಾಪಿ ಸಲು ಎಲ್ಲ ರಾಷ್ಟ್ರಗಳೂ ಸಹಕಾರ ನೀಡಬೇಕು’ ಎಂದಿತು, ಜತೆಗೆ ಅಂತಾರಾಷ್ಟ್ರೀಯ ಶಾಂತಿ ಪಾಲನಾ ಪಡೆಯೊಂದನ್ನು ರಚಿಸಿ ಅಫ್ಘಾನಿಸ್ತಾನಕ್ಕೆ ಕಳುಹಿಸಿತು.

ಇಂತಹ ಕೆಲಸವನ್ನು ಗುಂಡಿಗೆ ಇದ್ದವನು ಮಾಡುತ್ತಾನೆಯೇ ಹೊರತು, ನಮ್ಮಂಥವರಲ್ಲ.

“My Government will not bend before such a show of terrorism“. 1999, ಡಿಸೆಂಬರ್ 24ರಂದು ಇಂಡಿಯನ್ ಏರ್‌ಲೈನ್ಸ್‌ನ ಐಸಿ-814 ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದಾಗ ಮರುದಿನ ಮಾಧ್ಯಮಗಳ ಮುಂದೆ ಹೀಗೆ ಹೇಳಿದ್ದರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಆದರೆ ಇಂತಹ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಭಯೋತ್ಪಾದಕರ ಜತೆ ಸಂಧಾನ ಮಾತುಕತೆ ಆರಂಭವಾಯಿತು. ಭಾರತದ ಜೈಲುಗಳಲ್ಲಿರುವ ಮೂವತ್ತೈದು ಭಯೋತ್ಪಾದಕರನ್ನು ಬಿಟ್ಟರೆ ಹಾಗೂ 20 ಕೋಟಿ ಡಾಲರ್ ಹಣ ನೀಡಿದರೆ ಮಾತ್ರ ಪ್ರಯಾಣಿಕರನ್ನು ಬಿಡುಗಡೆ ಮಾಡುವುದಾಗಿ ಅಪಹರಣಕಾರರು ಪೂರ್ವ ಷರತ್ತು ಹಾಕಿದರು. ಆ ವಿಷಯದಲ್ಲಿ ಸರಕಾರ ಚೌಕಾಶಿ ಆರಂಭಿಸಿತು. ಇತ್ತ ಸಿಟ್ಟಿಗೆದ್ದ ಪ್ರಯಾಣಿಕರ ಕುಟುಂಬದವರು ಹಾಗೂ ಸಂಬಂಧಿಕರು ಸರಕಾರ ವಿಳಂಬ ಮಾಡುತ್ತಿದೆಯೆಂದು ಆರೋಪಿಸಿ ಪ್ರಧಾನಿ ನಿವಾಸದ ಮೇಲೆಯೇ ಮುಗಿಬಿದ್ದರು. ಹೀಗೆ ಒತ್ತಡಕ್ಕೊಳಗಾದ ವಾಜಪೇಯಿಯವರು ಮೌಲಾನಾ ಮೊಹಮದ್ ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಝರ್ಗಾರ್ ಮತ್ತು ಅಹ್ಮದ್ ಉಮರ್ ಸಯೀದ್ ಷೇಕ್ ಮೊದಲಾದ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಲೊಪ್ಪಿದರು. ಡಿಸೆಂಬರ್ 30ರಂದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸ್ವತಃ ಭಯೋತ್ಪಾದಕರನ್ನು ಕರೆದೊಯ್ದು ಕಂದಹಾರ್‌ಗೆ ಬಿಟ್ಟು, 31ರಂದು 154 ಪ್ರಯಾಣಿಕರನ್ನು ಬಿಡಿಸಿಕೊಂಡು ಬಂದರು. ಇದು ಆರೆಸ್ಸೆಸ್‌ನ ಆಗಿನ ಸರಸಂಘಚಾಲಕರಾಗಿದ್ದ ರಾಜೇಂದ್ರ ಸಿಂಗ್ ಅವರನ್ನು ಎಷ್ಟು ಕುಪಿತಗೊಳಿಸಿತೆಂದರೆ “It’s an act of Hindu cowardice” ಎಂದು ಕಟುವಾಗಿ ಟೀಕಿಸಿದರು. ಆದರೆ ವಾಜಪೇಯಿಯವರು ಅಂದು ಸಂದಿಗ್ಧ ಸ್ಥಿತಿಯಲ್ಲಿದ್ದರು. ಒಂದೆಡೆ ಪ್ರಯಾಣಿಕರ ಸಂಬಂಧಿಕರ ಕೋಪ-ತಾಪ, ಮತ್ತೊಂದೆಡೆ ಅತ್ತು-ಕರೆಯುತ್ತಿರುವ ಮುಖಗಳನ್ನೇ ತೋರಿಸಿ ಇಡೀ ದೇಶವಾಸಿಗಳು ಕಣ್ಣೀರು ಹಾಕುವಂತೆ ಮಾಡುತ್ತಿದ್ದ ಮಾಧ್ಯಮಗಳು. ಜತೆಗೆ ೧೯೯೮ರಲ್ಲಿ ಅಣು ಪರೀಕ್ಷೆ ನಡೆಸಿದ್ದಕ್ಕಾಗಿ ಕುಪಿತಗೊಂಡಿದ್ದ ಅಮೆರಿಕ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ಭಯ. ಅಂತಹ ಸಂದರ್ಭದಲ್ಲಿ ಆಡಳಿತದ ಅಷ್ಟೇನೂ ಅನುಭವವಿಲ್ಲದ ವಾಜಪೇಯಿ ಏನುತಾನೇ ಮಾಡಿಯಾರು? ‘ನನ್ನ ಸರಕಾರ ಭಯೋತ್ಪಾದನೆಯ ಇಂತಹ ಪ್ರದರ್ಶನದ ಮುಂದೆ ಮಂಡಿಯೂರುವುದಿಲ್ಲ’ ಎಂದಿದ್ದ ವಾಜಪೇಯಿ ಮೆತ್ತಗಾಗಿ, ಬೇಡಿಕೆಗಳಿಗೆ ಮಣಿದರು.

ಈ ಘಟನೆ ನಡೆದು ೯ ವರ್ಷಗಳ ನಂತರ ಮೊನ್ನೆ ಸಂಭವಿಸಿದ ನವೆಂಬರ್ ೨೬ರ ಮುಂಬೈ ದಾಳಿಯನ್ನೇ ತೆಗೆದುಕೊಳ್ಳಿ. ಇಡೀ ದೇಶವೇ ಒಕ್ಕೊರಲಿನಿಂದ ಹೇಳಿತು, ಯುದ್ಧವಾದರೂ ಸರಿ ಪಾಕಿಸ್ತಾನವನ್ನು ಮಟ್ಟಹಾಕಿ ಅಂತ. ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬರಾಕ್ ಒಬಾಮ ಕೂಡ “ಪ್ರತಿಯೊಂದು ಸಾರ್ವಭೌಮ ರಾಷ್ಟ್ರಗಳಿಗೂ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿದೆ” ಎನ್ನುವ ಮೂಲಕ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಬಹುದು ಎಂಬ ಸೂಚನೆ ನೀಡಿದರು. ಆದರೆ ಪಾಕಿಸ್ತಾನದ ಮೇಲೆ ಬಾಂಬ್ ಹಾಕುವುದು ಬಿಡಿ, ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಒಂದು ಸಣ್ಣ ಪಟಾಕಿಯನ್ನು ಬಿಸಾಡಲೂ ನಮ್ಮ ಕೇಂದ್ರ ಸರಕಾರಕ್ಕೆ ಆಗಲಿಲ್ಲ! ಏಳು ಗುಂಡುಗಳು ಹೊಟ್ಟೆಯನ್ನು ಹೊಕ್ಕಿದ್ದರೂ ಕಸಬ್‌ನ ಬಂದೂಕನ್ನು ಕೈಬಿಡದ ತುಕಾರಾಮ್ ಒಂಬ್ಳೆ ದೇಶವೇ ಮೆಚ್ಚುವ ಶೌರ್ಯ ತೋರಿ ಪಾಕಿಸ್ತಾನದ ಪಾತ್ರಕ್ಕೆ ಸಾಕ್ಷ್ಯ ಒದಗಿಸಿಕೊಟ್ಟರು. ಆದರೂ ದಾಳಿ ನಡೆದ ಮೂರು ತಿಂಗಳಾದರೂ ನಮ್ಮಿಂದ ಏನೂ ಮಾಡಲಾಗಿಲ್ಲ. ಈಗಾಗಲೇ ಪ್ರಧಾನಿ ಹಾಸಿಗೆ ಹಿಡಿದಿದ್ದಾರೆ, ಇನ್ನು ಸ್ವಲ್ಪ ದಿನ ಕಳೆದರೆ ಬಜೆಟ್ ಎನ್ನುತ್ತಾರೆ, ಅದು ಮುಗಿಯುವಷ್ಟರಲ್ಲಿ ಚುನಾವಣೆ ಘೋಷಣೆಯಾಗುತ್ತದೆ.

ಇಂತಹ ನಮ್ಮ ಜನರು, ನಾಯಕರಿಗೆ ಜಾರ್ಜ್ ಬುಷ್ ಅವರನ್ನು ಟೀಕಿಸುವ ನೈತಿಕ ಹಕ್ಕಿದೆಯೇ?

ಜಾರ್ಜ್ ಬುಷ್ ಅವರು ಅಫ್ಘಾನಿಸ್ತಾನದ ಮೇಲೆ ಆಕ್ರ ಮಣ ಮಾಡಿದ್ದು ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಒಬ್ಬ ಸಾಮಾನ್ಯ ವ್ಯಕ್ತಿಯಿರಬಹುದು, ಒಂದು ರಾಷ್ಟ್ರದ ನಾಯಕನಿರಬಹುದು ಪ್ರತಿಫಲದ ನಿರೀಕ್ಷೆಯಿಲ್ಲದೆ ತನ್ನ ಹಣ, ಬಲವನ್ನು ವ್ಯಯಮಾಡಿ ಯಾರದ್ದೋ ಮೇಲೆ ಯುದ್ಧ ಮಾಡುವುದಿಲ್ಲ. ಹಾಗಾಗಿ ಅಮೆರಿಕ ತನ್ನ ಹಿತಾಸಕ್ತಿಗಾಗಿ ಅಫ್ಘಾನಿಸ್ತಾನ, ಇರಾಕ್ ಮೇಲೆ ದಾಳಿ ಮಾಡಿತು ಎಂದು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ. ಆದರೆ ಬುಷ್ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದರಿಂದ ಭಾರತಕ್ಕಾದ ಲಾಭ ಗಳೇನು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಹತ್ತು, ಹದಿನೈದು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿ ಇತ್ತು ಯೋಚನೆ ಮಾಡಿ. ನಮ್ಮ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಸಂಪೂರ್ಣವಾಗಿ ಹೊರಹಾಕಿದ ನಂತರ ಭಯೋತ್ಪಾದಕರ ಮುಂದಿದ್ದ ಏಕೈಕ ಸವಾಲು ನಮ್ಮ ಸೈನಿಕರು. ಆಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳೆಂಥವು? “ಸೈನಿಕರ ಜತೆ ಕಾದಾಟ, ಇಬ್ಬರು ವಿದೇಶಿ ಬಾಡಿಗೆ ಹಂತಕರ ಹತ್ಯೆ”, “ಒಬ್ಬ ಸೈನಿಕ ಹತ್ಯೆ, ವಿದೇಶಿ ಬಾಡಿಗೆ ಹಂತಕರು ಪರಾರಿ”. ಈ ವಿದೇಶಿ ಬಾಡಿಗೆ ಹಂತಕರು ಅಥವಾ Foreign Mercenaries ಯಾರು? ಇವರು ದುಡ್ಡು ಅಥವಾ ಇನ್ನಾವುದೋ ಉದ್ದೇಶ ಸಾಧನೆಗಾಗಿ ಕಾಶ್ಮೀರಕ್ಕೆ ಆಗಮಿಸುತ್ತಿದ್ದು ಯಾವ ರಾಷ್ಟ್ರದಿಂದ? ಇವತ್ತು ಪಾಕಿಸ್ತಾನವನ್ನು Epicenter of terrorism ಅಥವಾ ಭಯೋತ್ಪಾದನೆಯ ಕೇಂದ್ರಸ್ಥಾನ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಅಂತಹ ಅಪಖ್ಯಾತಿ ಅಫ್ಘಾನಿಸ್ತಾನಕ್ಕಿತ್ತು. ಕಾಶ್ಮೀರಕ್ಕೆ ಬಂದು ಹೋರಾಡುತ್ತಿದ್ದ ಬಾಡಿಗೆ ಹಂತಕರಿಗೆ ತರಬೇತಿ ನೀಡುತ್ತಿದ್ದುದು ಐಎಸ್‌ಐ ಹಾಗೂ ತಾಲಿಬಾನ್. ಇಂದಿಗೂ ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ನಮ್ಮ ರಕ್ಷಣಾ ಪಡೆಗಳ ನಡುವೆ ಕಾಳಗ ನಡೆಯುತ್ತದೆಯಾದರೂ ಕಳೆದ ಏಳೆಂಟು ವರ್ಷಗಳಿಂದ “ವಿದೇಶಿ ಬಾಡಿಗೆ ಹಂತಕರು” ಎಂಬ ಹೆಸರು ಕಾಣಿಸುವುದಿಲ್ಲ. ಅದಕ್ಕೆ ಕಾರಣವೇನು? ೨೦೦೧, ಅಕ್ಟೋಬರ್ ೭ರಂದು ಜಾರ್ಜ್ ಬುಷ್ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ಕಾರಣ ತಾಲಿಬಾನಿಗಳು ಮೊದಲು ತಮ್ಮ ಸ್ವಂತ ನೆಲೆಯನ್ನೇ ಉಳಿಸಿಕೊಳ್ಳಲು ಹೋರಾಡಬೇಕಾಗಿ ಬಂತು. ಕಾಶ್ಮೀರಕ್ಕೆ ಬಂದು ಹೋರಾಡುವ ಮಾತು ಹಾಗಿರಲಿ, ಅಫ್ಘಾನಿಸ್ತಾನವೇ ಕೈಬಿಟ್ಟು ಹೋಗುವ ಸ್ಥಿತಿ ಎದುರಾಯಿತು. ಹಾಗಾಗಿ ವಿದೇಶಿ ಭಯೋತ್ಪಾದಕರು ಕಾಶ್ಮೀರಕ್ಕೆ ಬರುವುದು ನಿಂತುಹೋಯಿತು ಹಾಗೂ ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಗೊಳ್ಳತೊಡಗಿತು. ಅತ್ತ ಕೇವಲ ಎರಡೂವರೆ ತಿಂಗಳಲ್ಲಿ ಅಮೆರಿಕದ ಎದುರು ಸೋತುಸುಣ್ಣಾದ ತಾಲಿಬಾನಿಗಳು ಜೀವ ಉಳಿಸಿಕೊಳ್ಳುವುದೇ ದೊಡ್ಡ ವಿಷಯವಾಯಿತು. ಪ್ರಾಣಭಯದಿಂದ ಪಾಕಿಸ್ತಾನದ ಗಡಿಯೊಳಕ್ಕೆ ನುಸುಳಿ ಪರ್ವತಶ್ರೇಣಿಗಳಲ್ಲಿ ಅಡಗಿ ಕುಳಿತರು. ಅವರನ್ನೂ ಬೆನ್ನಟ್ಟಿ ಹೋದ ಬುಷ್, ತನ್ನ ಗಡಿಯನ್ನು ಮುಚ್ಚುವಂತೆ ಪಾಕಿಸ್ತಾನಕ್ಕೆ ಸೂಚಿಸಿದರು. ಪಾಕಿಸ್ತಾನ ತನ್ನ ಸೈನಿಕರನ್ನು ಆಫ್ಘನ್ ಗಡಿಯಲ್ಲಿ ನಿಯೋಜನೆ ಮಾಡಬೇಕಾಗಿ ಬಂತು. ಹಾಗೆ ಬುಷ್ ಅವರು ಪಾಕಿಸ್ತಾನ ತನ್ನ ಪಡೆಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿ ನಿಯೋಜನೆ ಮಾಡುವಂತೆ ಮಾಡಿದ ಕಾರಣ, ನಮ್ಮ ಸೈನಿಕರತ್ತ ಗುಂಡುಹಾರಿಸಿ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸುತ್ತಿದ್ದ ಪಾಕ್ ಸೇನೆಯ ಕುತಂತ್ರಕ್ಕೂ ಕಡಿವಾಣ ಬಿತ್ತು.

ಇದರ ಪರಿಣಾಮವಾಗಿಯೇ ಭಯೋತ್ಪಾದಕರ ಉಪಟಳ ವಿಲ್ಲದೆ ೨೦೦೨ರಲ್ಲಿ ವಾಜಪೇಯಿ ಸರಕಾರ ಕಾಶ್ಮೀರದಲ್ಲಿ ಮೊಟ್ಟ ಮೊದಲ ಬಾರಿಗೆ ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಯಿತು. ಪ್ರತ್ಯೇಕತಾವಾದಿಗಳ ಬಹಿಷ್ಕಾರ ಕರೆಯ ಹೊರತಾಗಿಯೂ ಕಳೆದ ಡಿಸೆಂಬರ್‌ನಲ್ಲಿ ಮತ್ತೆ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಿದ್ದರೆ ಅದರ ಹಿಂದೆಯೇ ಇಂತಹ ಅಂಶಗಳ ಕಾಣಿಕೆಯಿದೆ. ಕಾಶ್ಮೀರ ಸಿಡಿದು ಸ್ವತಂತ್ರವಾಗದಂತೆ ತಡೆದಿದ್ದು ಖಂಡಿತ ನಮ್ಮ ರಕ್ಷಣಾ ಪಡೆಗಳೇ. ಆದರೆ ಇಂದು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ತಿಳಿಯಾದ ಪರಿಸ್ಥಿತಿಗೆ ತಾಲಿಬಾನನ್ನು ಅಮೆರಿಕ ಸದೆ ಬಡಿದಿದ್ದು ಹಾಗೂ ಪಾಕಿಸ್ತಾನಕ್ಕೆ ಕಡಿವಾಣ ಹಾಕಿರುವುದು ಕಾರಣವೇ ಹೊರತು ನಮ್ಮ ಪ್ರಧಾನಿ ಆರಂಭಿಸಿದ ಮುಜಫರಾಬಾದ್ ರೈಲು ಸಂಚಾರವಾಗಲಿ, ಅಭಿವೃದ್ಧಿ ಪ್ಯಾಕೇಜ್‌ಗಳಾಗಲಿ ಅಥವಾ ಇನ್ನಾವುದೇ ‘ಸಿಬಿಎಂ’ಗಳಾಗಲಿ (ವಿಶ್ವಾಸ ಮೂಡಿಸುವ ಕ್ರಮಗಳು) ಅಲ್ಲ.

ಇದಿಷ್ಟೇ ಅಲ್ಲ. ತಾಲಿಬಾನನ್ನು ಮಟ್ಟಹಾಕಿದ ನಂತರ ಹಮೀದ್ ಕರ್ಜಾಯಿ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಒಂದು ಪ್ರಜಾತಾಂತ್ರಿಕ ಸರಕಾರ ಸ್ಥಾಪನೆಯಾಗಿದೆ. ಅಲ್ಲಿನ ಹೆದ್ದಾರಿ ಹಾಗೂ ಸಂಪರ್ಕ ಜಾಲಗಳ ನಿರ್ಮಾಣ ಕಾರ್ಯದ ಗುತ್ತಿಗೆಗಳು ಭಾರತದ ಕಂಪನಿಗಳಿಗೆ ದೊರೆತಿವೆ. ನಮ್ಮ ಎಂಜನಿಯರ್‌ಗಳು ಹಾಗೂ ಕಾರ್ಮಿಕರಿಗೆ ಅಲ್ಲಿ ಉದ್ಯೋಗ ದೊರೆತಂತಾಗಿದೆ. ಆ ರಾಷ್ಟ್ರದ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದರಿಂದ ಅಫ್ಘಾನಿಸ್ತಾನದ ಜತೆ ಭಾರತ ಉತ್ತಮ ಬಾಂಧವ್ಯ ಹೊಂದು ವಂತಾಗಿದೆ. ತಾಲಿಬಾನ್ ಆಡಳಿತವಿದ್ದಾಗ ಅಫ್ಘಾನಿಸ್ತಾನ ಪಾಕ್‌ಗೆ ಮಿತ್ರ ಹಾಗೂ ಭಾರತದ ಪಾಲಿಗೆ ಕಂಟಕವಾಗಿತ್ತು. ಆದರೆ ಅಮೆರಿಕದ ಕೈವಶವಾದ ಮೇಲೆ ಅಫ್ಘಾನಿಸ್ತಾನ ಪಾಕ್‌ಗೆ ಕಂಟಕ ಹಾಗೂ ಭಾರತಕ್ಕೆ ಮಿತ್ರರಾಷ್ಟ್ರವಾಗಿದೆ. ಅಫ್ಘಾನಿಸ್ತಾನದ ಮೂಲಕ ಭಾರತ ತನಗೆ ಅಪಾಯವೊಡ್ಡುತ್ತಿದೆ, ಬಲೂಚಿಸ್ತಾನದಲ್ಲಿ ಬುಡಕಟ್ಟು ಜನಾಂಗಗಳನ್ನು ಎತ್ತಿಕಟ್ಟುತ್ತಿದೆ ಎಂದು ಪಾಕ್ ಹೆದರುತ್ತಿದೆ. ಇದರಿಂದ ಅದು ಎಷ್ಟು ಹತಾಶಗೊಂಡಿದೆಯೆಂದರೆ ಕಾಬೂಲ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ಮಾಡುವಷ್ಟು ಅದರ ಕೋಪ ನೆತ್ತಿಗೇರಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದಾಗ, ಒಬ್ಬ ಅಪ್ರಾಪ್ತ ವಯಸ್ಕ ಬಾಲಕಿ ಇರಬಹುದು, ಮುದುಕಿ ಆಗಿರಬಹುದು. ಆಕೆ ಮನೆಯಿಂದ ಹೊರಹೋಗುವಾಗ ಅಪ್ಪ, ಅಣ್ಣ-ತಮ್ಮ ಅಥವಾ ಗಂಡ ಹೀಗೆ ಯಾರಾದರೂ ಒಬ್ಬ ಗಂಡಸು ಜತೆಯಲ್ಲಿರಬೇಕಿತ್ತು. ಒಬ್ಬಂಟಿಯಾಗಿ ಹೊರಬಂದರೆ ತಾಲಿಬಾನಿಗಳು ಗುಂಡಿಟ್ಟು ಕೊಲೆ ಗೈಯ್ಯುತ್ತಿದ್ದರು. ಗಂಡಸರು ಕಡ್ಡಾಯವಾಗಿ ಗಡ್ಡ ಬೆಳೆಸಬೇಕಿತ್ತು. ಮಹಿಳೆಯರು ಬುರ್ಖಾವಿಲ್ಲದೆ ಓಡಾಡುವಂತಿರ ಲಿಲ್ಲ. ನೀವೇ ಯೋಚನೆ ಮಾಡಿ, ಈಗ್ಗೆ ಕೆಲವೇ ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಬುರ್ಖಾ ಹಾಕದಿದ್ದ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಅವರ ತಲೆ ಬೋಳಿಸುವ ಘಟನೆಗಳು ಜರುಗುತ್ತಿದ್ದವು. ಅದು ತಾಲಿಬಾನ್ ಆಡ ಳಿತದ ಲಕ್ಷಣವಲ್ಲವೆ? ಇಂದು ಅಂತಹ ಯಾವ ಅವಘಢಗಳೂ ಸಂಭವಿಸುತ್ತಿಲ್ಲ. ಏಕೆಂದರೆ ಬುಷ್ ಅಫ್ಘಾನಿಸ್ತಾನದಲ್ಲೇ ತಾಲಿ ಬಾನನ್ನು ಮಟ್ಟಹಾಕಿದ್ದರಿಂದ ಕಾಶ್ಮೀರದ ತಾಲಿಬಾನೀಕರಣಕ್ಕೂ ಕಡಿವಾಣ ಬಿದ್ದಿದೆ.

ಇನ್ನು ಇರಾಕ್ ಮೇಲೆ ಅಮೆರಿಕ ಮಾಡಿದ ದಾಳಿ, ಹೇಳಿದ ಸುಳ್ಳುಗಳನ್ನು ತೆಗೆದುಕೊಂಡು ನಾವೇನು ಮಾಡಬೇಕು?

ಅಷ್ಟಕ್ಕೂ ಇರಾಕ್‌ನ ಬೆಂಬಲಕ್ಕೆ ನಿಲ್ಲಲು ಸದ್ದಾಂ ಹುಸೇನ್ ಅವರೇನು ಸಾಧು-ಸಂತರಾಗಿರಲಿಲ್ಲ. ಸ್ವಂತ ಅಳಿಯಂದಿರನ್ನೇ ಕೊಲ್ಲಿಸಲು ಹೇಸದ ಆತ ೬ ಲಕ್ಷ ಕುರ್ದಿಶ್ ಮುಸ್ಲಿಮರನ್ನೇ ಮಾರಣ ಹೋಮ ಮಾಡಿಸಿದ್ದ. ಇತ್ತ ಅಣ್ವಸ್ತ್ರ ಹೊಂದಲು ಹವಣಿಸುತ್ತಿರುವ ಇರಾನ್‌ಗೆ ಬುಷ್ ಕಡಿವಾಣ ಹಾಕಿದ್ದರಿಂದ ಪರೋಕ್ಷವಾಗಿ ಭಾರತಕ್ಕೂ ಲಾಭವಾಗಿದೆ. ಒಂದು ವೇಳೆ, ಇರಾನ್ ಕೂಡ ಅಣ್ವಸ್ತ್ರ ಹೊಂದಿದ್ದರೆ ಅರಬ್ಬಿ ಸಮುದ್ರದೆಡೆಯಲ್ಲಿರುವ ಭಾರತದ ಮತ್ತೊಂದು ನೆರೆಯ ರಾಷ್ಟ್ರ ಕೂಡ ಅಣ್ವಸ್ತ್ರ ಹೊಂದಿದಂತಾಗುತಿತ್ತು. ಅಕಸ್ಮಾತ್ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷವೇರ್ಪಟ್ಟರೆ ಇರಾನ್ ಯಾರನ್ನು ಬೆಂಬಲಿಸುತ್ತಿತ್ತು? ಮತ್ತೊಂದು ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತೇ ಹೊರತು ಭಾರತವನ್ನಲ್ಲ. ಈ ಹಿನ್ನೆಲೆಯಲ್ಲಿ ಬುಷ್ ಹಾಕಿದ ಕಡಿವಾಣದಿಂದ ಭಾರತಕ್ಕೂ ಅನುಕೂಲವಾಗಿದೆ.

ಬುಷ್ ನೇರವಾಗಿಯೂ ಭಾರತಕ್ಕೆ ಹಲವಾರು ಅನುಕೂಲ ಗಳನ್ನು ಮಾಡಿಕೊಟ್ಟಿದ್ದಾರೆ.

ಯಾರೇನೇ ಬೊಬ್ಬೆ ಹಾಕಿದರೂ ನಮ್ಮ ಜತೆ ಮಾಡಿಕೊಂಡ ಅಣು ಸಹಕಾರ ಒಪ್ಪಂದದ ಹಿಂದೆ ಭಾರತವನ್ನು ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಸಬೇಕೆಂಬ ಅಮೆರಿಕದ ಉದ್ದೇಶ ಇದ್ದೇ ಇದೆ. ಒಂದು ವೇಳೆ ಟೀಕಾಕಾರರು ಹೇಳುತ್ತಿರುವಂತೆ ಅಣು ಒಪ್ಪಂದ ಭಾರತಕ್ಕೆ ಮಾರಕ ಎನ್ನುವುದಾದರೆ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ (ಐಎಇಎ) ಚೀನಾವೇಕೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಿತ್ತು? ಪಾಕಿಸ್ತಾನದ ಜತೆ ತಾನೂ ಕೂಡ ಅಂತಹದ್ದೇ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಚೀನಾವೇಕೆ ಒತ್ತಾಯಿಸುತ್ತಿತ್ತು? ಕ್ಲಿಂಟನ್ ಅವರಂತೆ ‘ಸಿಟಿಬಿಟಿ’ಯೆಂಬ ಬೆದರುಗೊಂಬೆಯನ್ನಿಟ್ಟುಕೊಂಡು ಆಟವಾಡಿಸದೇ ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿಹಾಕದಿದ್ದರೂ ಭಾರತವೊಂದು ಅಣ್ವಸ್ತ್ರ ರಾಷ್ಟ್ರವೆಂದು ಒಪ್ಪಿಕೊಳ್ಳುವ ಔದಾರ್ಯವನ್ನು ಬುಷ್ ತೋರಿದರು. ಕಲ್ಲಿದ್ದಲು ಮುಂತಾದ ಹಾನಿಕಾರಕ ಶಕ್ತಿಮೂಲಗಳು ಹಾಗೂ ತೈಲದ ಮೇಲಿನ ಅತಿಯಾದ ಅವಲಂಬನೆಯನ್ನು ಬಿಡಿ. ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸಿ, “Go Green” ಎಂದು ಭಾರತಕ್ಕೆ ಬುದ್ಧಿ ಹೇಳಿದ್ದೂ ಕೂಡ ಬುಷ್ ಆಡಳಿತವೇ. ಔಟ್‌ಸೋರ್ಸಿಂಗ್ (ವ್ಯಾಪಾರ ಹೊರಗುತ್ತಿಗೆ) ವಿರುದ್ಧ ಅಮೆರಿಕದಾದ್ಯಂತ ವಿರೋಧ ವ್ಯಕ್ತವಾದರೂ, ಕ್ಯಾಲಿಫೋರ್ನಿಯಾದಂತಹ ರಾಜ್ಯ ಕಾನೂನನ್ನೇ ತರಲು ಹೊರಟರೂ ಬುಷ್ ಮಾತ್ರ ಔಟ್‌ಸೋರ್ಸಿಂಗ್ ಪರವಾಗಿ ನಿಂತರು. ಇಲ್ಲದೇ ಹೋಗಿದ್ದರೆ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳೂ ಎಂದೋ ಕೆಲಸ ಕಳೆದುಕೊಳ್ಳುತ್ತಿದ್ದರು.

ಬುಷ್ ಮೇಲೆ ಸಾವಿರ ಜೋಕುಗಳು ಹುಟ್ಟಿರಬಹುದು, ಅವರ ಇಂಗ್ಲಿಷ್‌ನಲ್ಲಿ ವ್ಯಾಕರಣವಿಲ್ಲದೇ ಇರಬಹುದು. ಆದರೆ ದೋಷವಿದ್ದಿದ್ದು ಇಂಗ್ಲಿಷ್‌ನಲ್ಲೇ ಹೊರತು ಅವರ ಗುಂಡಿಗೆಯಲ್ಲಲ್ಲ. ಸೌದಿ ಅರೇಬಿಯಾಕ್ಕೆ ಕಡಿವಾಣ ಹಾಕಿದ್ದು, ಮಧ್ಯ ಏಷ್ಯಾದ ಮೇಲೆ ಹಿಡಿತ ಸಾಧಿಸಿದ್ದು, ಒಪೆಕ್(ತೈಲ ರಫ್ತು ರಾಷ್ಟ್ರಗಳ ಒಕ್ಕೂಟ) ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನನ್ನು ಮಟ್ಟಹಾಕಿದ್ದು, ಇರಾಕ್‌ನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡಿದ್ದು, ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ತೆರೆ ಎಳೆದಿದ್ದು, ಉತ್ತರ ಕೊರಿಯಾಕ್ಕೆ ಲಗಾಮು ಹಾಕಿದ್ದು, ಆಫ್ರಿಕಾಕ್ಕೆ ಅಪಾರ ಸಹಾಯ ನೀಡಿದ್ದು, ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ ಆರಂಭಿಸಿದ್ದು ಬುಷ್ ಹೆಗ್ಗಳಿಕೆ. ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಪುಕ್ಕಟೆ ಪ್ರಚಾರಕ್ಕಾಗಿ ಬಾಲ್ಕನ್ (ಯುಗೋಸ್ಲಾವಿಯಾ) ಮುಸ್ಲಿಮರ ಬೆಂಬಲಕ್ಕೆ ಹೊರಟರು, ತಾಲಿಬಾನ್, ಉತ್ತರ ಕೊರಿಯಾದಂತಹ ರೋಗಿಷ್ಠ ವ್ಯವಸ್ಥೆಗಳು ಬೆಳೆಯಲು ಬಿಟ್ಟಿದ್ದರು. ಆದರೆ ಅವುಗಳನ್ನು ಮಟ್ಟಹಾಕಿದ್ದು ಬುಷ್. ಇಂತಹ ಬುಷ್ ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಅಮೆರಿಕದವರಿಗೇ ಅಪ್ರಿಯರಾಗಿದ್ದು ಖಂಡಿತ ದುರದೃಷ್ಟ. ಅಷ್ಟಕ್ಕೂ ಆರ್ಥಿಕ ಹಿಂಜರಿತಕ್ಕೆ ಬುಷ್ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಎಂಐಟಿ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಐಐಎಂ-ಐಐಟಿಗಳಲ್ಲಿ ಕಲಿತು ಕಂಪನಿಗಳ ‘ಸಿಇಓ’ಗಳಾಗಿದ್ದ ಮಹಾ ಮೇಧಾವಿಗಳು ಮಾಡಿದ ತಪ್ಪಿನ ಪಾತ್ರ ಆರ್ಥಿಕ ಹಿಂಜರಿತದಲ್ಲಿ ಬಹುವಾಗಿದೆ. ರಾಮಲಿಂಗರಾಜು ಅವರಂತಹ ಠಕ್ಕರು ಅಲ್ಲೂ ಇದ್ದಾರೆ. ಆದರೆ ಸಂಕಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬಂತೆ ಎಲ್ಲದಕ್ಕೂ ಮಾಧ್ಯಮಗಳು ಬುಷ್ ಅವರನ್ನೇ ದೂರಿದವು. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ಗೆ ಮಣಿಯದೆ ೮ ವರ್ಷಗಳ ಕಾಲ ಜರ್ಮನಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ ವಿನ್‌ಸ್ಟನ್ ಚರ್ಚಿಲ್ ಅವರನ್ನೇ ಅರ್ಥವ್ಯವಸ್ಥೆಯನ್ನು ಹಾಳುಮಾಡಿದರೆಂದು ದೂರಿ ಜನ ಚುನಾವಣೆಯಲ್ಲಿ ಸೋಲಿಸಿದ್ದರು. ಇನ್ನು ಅಂತಹದ್ದೇ ಕಾರಣಕ್ಕಾಗಿ ಬುಷ್ ಅಪಖ್ಯಾತಿ ಪಡೆದಿದ್ದರಲ್ಲಿಯೂ ಯಾವ ಆಶ್ಚರ್ಯವಿಲ್ಲ. ಆದರೇನಂತೆ ಇಂಟರ್‌ನೆಟ್ ಆಧಾರಿತ ಬ್ಲಾಗ್, ಡಾಟ್‌ಕಾಂಗಳಂತಹ ಯಾವ ಮೀಡಿಯಾ ಹೌಸ್‌ಗಳ ಹಿಡಿತದಲ್ಲಿರದ ಇಂಡಿಪೆಂಡೆಂಟ್ ಮೀಡಿಯಾಗಳಲ್ಲಿ ಬುಷ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವೇ ಇದೆ. ಇತ್ತೀಚೆಗೆ ಭಾರತ ಹಾಗೂ ನೈಜೀರಿಯಾ, ತಾಂಜನಿಯಾದಂತಹ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಲ್ಲಿ ನಡೆದ ಸಮೀಕ್ಷೆಗಳು ಬುಷ್ ಜನಪ್ರಿಯತೆಯನ್ನು ಖಚಿತಪಡಿಸಿವೆ.

ಇಷ್ಟಾಗಿಯೂ ಯಾವನೋ ಬೂಟು ಬಿಸಾಡಿದಾಗ ತಾವೇ ಬಿಸಾಡಿದಷ್ಟು ಖುಷಿಪಟ್ಟವರೂ ನಮ್ಮಲ್ಲಿದ್ದಾರೆ. ಮುಸ್ಲಿಮ್ ರಾಷ್ಟ್ರಗಳನ್ನೇ ಗುರಿಯಾಗಿಸಿಕೊಂಡರು ಎಂದಂದುಕೊಂಡು ಬುಷ್ ಅವರನ್ನು ದ್ವೇಷಿಸುವವರೂ ಇದ್ದಾರೆ. ಆದರೆ ಅದು ಬುಷ್ ಇರಲಿ, ಒಬಾಮ ಆಗಿರಲಿ. ಅಮೆರಿಕದವರು ಯಾವ ಬಾಕಿಯನ್ನೂ ಉಳಿಸಿಕೊಳ್ಳುವುದಿಲ್ಲ. ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು, ಅಣುಬಾಂಬ್ ಮೂಲಕ ಉತ್ತರ ಕೊಟ್ಟಿತು ಅಮೆರಿಕ. ತಾಲಿಬಾನ್ ದಾಳಿ ಮಾಡಿತು, ಅಮೆರಿಕ ತಾಲಿಬಾನ್‌ನ ಮೂಲಸ್ಥಾನವನ್ನೇ ನಾಶ ಮಾಡಿತು. ವಿನಾಕಾರಣ ಎಲ್ಲದಕ್ಕೂ ಅಮೆರಿಕವನ್ನು ತೆಗಳುವ ಬದಲು ಅದರ ಒಳ್ಳೆಯ ಗುಣಗಳನ್ನು ನಾವೇಕೆ ರೂಢಿಸಿಕೊಳ್ಳಬಾರದು? ಅಂದು ಅಫ್ಘಾನಿ ಸ್ತಾನದ ಮೇಲೆ ಆಕ್ರಮಣ ಮಾಡುವಾಗ, “Our war on terror begins with Al Qaeda, but it does not end there” ಎಂದಿದ್ದರು ಬುಷ್. ಅವರ ಮಾತು ನಿಜವಾಗಲಿ, ಒಬಾಮ ಅವರ ಮುಂದಿನ ಗುರಿ ಪಾಕಿಸ್ತಾನವಾಗಲಿ. ನಮ್ಮನ್ನಾಳುವವರಲ್ಲಂತೂ ಅಂತಹ ತಾಕತ್ತಿಲ್ಲ.

Thank you Bush, We certainly love you!

ಕೃಪೆ : ಪ್ರತಾಪ್ ಸಿಂಹ

ಕರ್ನಾಟಕಕ್ಕೂ ಒಬ್ಬ ರಾಜ್ ಠಾಕ್ರೆ ಬೇಡವೆ?!

೧೯೫೭ರಿಂದ ೬೩ರವರೆಗೂ ಬಾಬು ಜಗಜೀವನ್ ರಾಮ್, ೧೯೬೯ರಿಂದ ೭೦ರವರೆಗೂ ಡಾ. ರಾಮ್ ಸುಭಾಗ್ ಸಿಂಗ್, ೧೯೭೩ರಿಂದ ೭೫ರವರೆಗೂ ಲಲಿತ್ ನಾರಾಯಣ ಮಿಶ್ರ, ೧೯೮೦ರಿಂದ ೮೧ರವರೆಗೂ ಕೇದಾರ್ ಪಾಂಡೆ, ೧೯೯೦ರಿಂದ ೧೯೯೧ರವರೆಗೂ ಜಾರ್ಜ್ ಫರ್ನಾಂಡಿಸ್, ೧೯೯೬ರಿಂದ ೧೯೯೮ರವರೆಗೂ ರಾಮ್ ವಿಲಾಸ್ ಪಾಸ್ವಾನ್, ೨೦೦೨ರಿಂದ ೦೪ರವರೆಗೂ ನಿತೀಶ್ ಕುಮಾರ್, ೨೦೦೪ರಿಂದ ಇಂದಿನವರೆಗೂ ಲಾಲು ಪ್ರಸಾದ್ ಯಾದವ್.

ಹೀಗೆ ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿಯವರೆಗೂ ಬಿಹಾರದ ಎಂಟು ಸಂಸದರು ಕೇಂದ್ರ ರೈಲ್ವೆ ಸಚಿವರಾಗಿ ದ್ದಾರೆ. ಯುನೈಟೆಡ್ ಫ್ರಂಟ್, ಎನ್‌ಡಿಎ, ಯುಪಿಎ ಹೀಗೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿ ರೈಲ್ವೆ ಇಲಾಖೆ ಮಾತ್ರ ಬಿಹಾರಿಗಳ ಪಾಲಾಗುತ್ತದೆ. ಅದೇ ಇಲಾಖೆ ಬೇಕೆಂದು ಪಟ್ಟು ಹಿಡಿದು ಪಡೆದುಕೊಳ್ಳುತ್ತಾರೆ. ಹಾಗಾಗಿ ಇಂದು ಹುಬ್ಬಳ್ಳಿ, ಹುಮನಾಬಾದ್, ಹಿಂದು ಪುರ, ತಿರುವನಂತಪುರದಂತಹ ದಕ್ಷಿಣದ ಮೂಲೆ ಗಳಿಗೂ ಹೋದರೂ ರೈಲ್ವೆ ಸ್ಟೇಷನ್‌ಗಳಲ್ಲಿ ಟಿಕೆಟ್ ನೀಡುವವರಿಂದ ತಪಾಸಣೆ ಮಾಡುವವರವರೆಗೂ ಎಲ್ಲಡೆಯೂ ಬಿಹಾರಿಗಳನ್ನು ಕಾಣಬಹುದು. ವಿಶ್ವದ ಅತಿದೊಡ್ಡ ಉದ್ಯೋಗದಾತನಾದ ರೈಲ್ವೆ ಇಲಾಖೆಯನ್ನು ಮೊದಲಿನಿಂದಲೂ ಈ ಬಿಹಾರಿ ರಾಜಕಾರಣಿಗಳು ತಮ್ಮ ಸ್ವಂತ ಆಸ್ತಿಯಂತೆ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ಅದು ಬೆಂಗಳೂರು ಇರಬಹುದು, ಮುಂಬೈ ಆಗಿರಬಹುದು ಅಥವಾ ಯಾವುದೇ ಸ್ಥಳಗಳಲ್ಲಿ ಇರುವ ಖಾಲಿ ಹುದ್ದೆ ಗಳನ್ನು ಭರ್ತಿ ಮಾಡುವ ಅಗತ್ಯ ಬಂದಾಗಲೂ, ಅದರ ಜಾಹೀರಾತು ಪ್ರಕಟವಾಗುವುದು ಪಟನಾ, ಗಯಾ ಮತ್ತು ಉತ್ತರ ಪ್ರದೇಶಗಳಲ್ಲಿ ಮಾತ್ರ. ಹಾಗಾಗಿ ಅಲ್ಲಿನ ಅಭ್ಯರ್ಥಿಗಳು ನೇಮಕಾತಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಧೋರಣೆಯ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಎಲ್ಲರಲ್ಲೂ ಅಸಮಾಧಾನವಿದ್ದರೂ ಪ್ರತಿಭಟಿಸುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಆದರೆ ಪ್ರತಿಭಟಿಸುವ ಹಾಗೂ ಉಗ್ರ ಮಾರ್ಗದಿಂದಲೇ ತಕ್ಕ ಸಂದೇಶ ಮುಟ್ಟಿಸುವ ಧೈರ್ಯ ತೋರಿದ್ದು ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ. ಅಂದು ರೈಲ್ವೆ ಸಚಿವ ಲಾಲು ಯಾದವ್ ಕನ್ನಡಿಗರನ್ನು ‘ಹುಚ್ಚರು’ ಎಂದು ಕರೆದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಕೆಲಸವನ್ನೇ ಮೊನ್ನೆ ಮುಂಬೈನಲ್ಲಿ ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮಾಡಿದೆ. ಹಾಗಾಗಿ ಬೈಸಿಕೊಳ್ಳುವ ಸರದಿ ರಾಜ್ ಠಾಕ್ರೆಯದ್ದಾಗಿದೆ. ಅವರನ್ನು “ಮೆಂಟಲ್ ಕೇಸ್” ಎಂದಿದ್ದಾರೆ ಲಾಲು! ಆದರೆ ಕನ್ನಡಿಗರು ಹುಚ್ಚರು, ರಾಜ್ ಠಾಕ್ರೆ ಮೆಂಟಲ್ ಕೇಸ್ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಲಾಲು ಯಾದವ್ ಅವರನ್ನು ಖಂಡಿಸುವ ಬದಲು ಎಲ್ಲರೂ ರಾಜ್ ಠಾಕ್ರೆಯನ್ನು ದೂಷಿಸುತ್ತಿದ್ದಾರೆ. ಈ ಮಧ್ಯೆ, ಮುಂಬೈನ ಬಸ್ ಏರಿ ನಿರ್ವಾಹಕನನ್ನು ಕಟ್ಟಿಹಾಕಿ ಪಿಸ್ತೂಲಿನಿಂದ ಜನರತ್ತ ಗುಂಡುಹಾರಿಸಿದ ಬಿಹಾರದ ಯುವಕ ರಾಹುಲ್ ರಾಜ್‌ನನ್ನು ಅನಿವಾರ್ಯವಾಗಿ ಪೊಲೀಸರು ಕೊಂದಿದ್ದನ್ನು ಬಿಹಾರಿ ರಾಜಕಾರಣಿಗಳು ದೊಡ್ಡ ವಿವಾದವನ್ನಾಗಿ ಪರಿವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದ ಸರ ಕಾರವನ್ನು ವಜಾ ಮಾಡಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಮೋದಿ, ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಕೇಂದ್ರ ಗಣಿಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೀಗೆ ಎಲ್ಲ ಬಿಹಾರಿ ನಾಯಕರೂ ಒಟ್ಟಾಗಿ ಒಕ್ಕೊರಲಿನಿಂದ ಕೇಂದ್ರ ಸರಕಾರದ ಒತ್ತಡ ಮೇಲೆ ಹೇರುತ್ತಿದ್ದಾರೆ.

ಏಕೆ?

ರಾಜ್ ಠಾಕ್ರೆ ಮಾಡಿದ್ದರಲ್ಲಿ ತಪ್ಪೇನಿದೆ? ನೇಮಕಾತಿಗಾಗಿ ಬಂದವರನ್ನು ಅಟ್ಟಿಸಿಕೊಂಡು ಹೋಗಿದ್ದು, ಹಿಡಿದು ಬಡಿದಿದ್ದು ತಪ್ಪಾಗಿ ಕಾಣುತ್ತಿರಬಹುದು. ಆದರೆ ಅದರ ಹಿಂದಿರುವ ನೋವು, ಹತಾಶೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಲ್ಲವೆ? ೧೯೫೬ರಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ವಿಗಂಡನೆ ಮಾಡಿದ್ದೇಕೆ? ಸ್ಥಳಿಯ ಆಶಯಗಳನ್ನು(Local Aspiration) ಈಡೇರಿಸುವುದಕ್ಕೇ ಅಲ್ಲವೆ? ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿ ಕೊಳ್ಳಲಿ ಎಂಬ ಕಾರಣಕ್ಕೇ ಅಲ್ಲವೆ? ಮುಂಬೈ ತುಂಬ ಅನ್ಯರಾಜ್ಯದವರೇ ತುಂಬಿಕೊಂಡರೆ, “ಛಾತ್ ಪೂಜಾ” ಹೆಸರಿನಲ್ಲಿ ಬಿಹಾರಿಗಳು ಹಾಗೂ ಉತ್ತರ ಪ್ರದೇಶದರು ಒಂದೆಡೆ ಸೇರಿ ರಾಜಕೀಯ ಮಾಡಲು ಹೊರಟರೆ ಸ್ಥಳೀಯರಾದ ಮರಾಠಿ ಜನರ ಕಣ್ಣುಕೆಂಪಾಗದೇ ಇದ್ದೀತೆ? “ಭಾರತ ಕೂಡ ಯುರೋಪ್‌ನಂತೆ. ಅಂದರೆ ಅಲ್ಲಿನ ಕರೆನ್ಸಿ ಒಂದೇ ಆಗಿದ್ದರೂ ಕಲ್ಚರ್ ಮತ್ತು ಭಾಷೆ ನೂರಾರಿವೆ! ನಮ್ಮದೂ ಕೂಡ ನೂರಾರು ಭಾಷೆ, ಸಂಸ್ಕೃತಿಗಳಿರುವ ಯುರೋಪ್!!” ಎನ್ನುವ ರಾಜ್ ಠಾಕ್ರೆಯವರ ವಾದದಲ್ಲೂ ಹುರುಳಿದೆ. ಅವರೇನು ದೇಶ ವಿಭಜನೆಯ ಮಾತನಾಡುತ್ತಿಲ್ಲ. ಆದರೆ ಬೆಂಗಾಲಿ ಜಯಾ ಬಚ್ಚನ್ ಮುಂಬೈ ಅನ್ನು ಕೇಂದ್ರಾಳಿತ ಪ್ರದೇಶ ಮಾಡಿ ಎಂದರೆ ಮರಾಠಿಗರು ಸುಮ್ಮನಿರುತ್ತಾರೆಯೇ? ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ಮಂಗನಾಟವಾಡಲು ಪ್ರಯತ್ನಿಸಿದರೆ ಪೊಲೀಸರು ಸುಮ್ಮನೆ ಕುಳಿತುಕೊಳ್ಳಲು ಆಗುತ್ತದೆಯೇ? ಮುಂಬೈ ಅನ್ನು ಉದ್ಧಾರ ಮಾಡಿದವರಲ್ಲಿ ವಾಡಿಯಾ, ಟಾಟಾಗಳಂತಹ ಪಾರ್ಸಿಗಳು ಹಾಗೂ ಅಂಬಾನಿಗಳಂತಹ ಗುಜರಾತಿಗಳ ಕೊಡುಗೆ ಇರಬಹುದು. ಆದರೆ ಉದ್ಯಮ ವಲಯಕ್ಕೆ ಮಹಾರಾಷ್ಟ್ರ ಪ್ರಶಸ್ತ ವಾತಾವರಣವನ್ನು ನಿರ್ಮಿ ಸಿತ್ತು. ೧೯೬೦ರವರೆಗೂ ಗುಜರಾತ್ ಕೂಡ ಮಹಾರಾಷ್ಟ್ರದ ಒಂದು ಭಾಗವೇ ಆಗಿತ್ತು. ಭಾರತದ “ಫೈನಾನ್ಸಿಯಲ್ ಕ್ಯಾಪಿಟಲ್” ಎಂದು ಹೆಸರು ಪಡೆದಿರುವ ಮುಂಬೈನತ್ತ ಇಂದು ಎಲ್ಲರೂ ಮುಖ ಮಾಡುತ್ತಿರಬಹುದು. ಆದರೆ ಮುಂಬೈನಂತಹ ನಗರ ಈ ಪರಿ ಬೆಳೆಯಲು ಅಲ್ಲಿನ ಜನರ ಕೊಡುಗೆ, ಉದ್ಯಮಸ್ನೇಹೀ ವಾತಾವರಣ ಕಾರಣವಾಗಿವೆ. ಹಾಗಿರುವಾಗ ಸ್ಥಳೀಯರಿಗೆ ಸಿಗಬೇಕಾದ ಉದ್ಯೋಗಗಳನ್ನು ಅನ್ಯರಾಜ್ಯದವರು ಕಿತ್ತು ಕೊಳ್ಳಲು ಪ್ರಯತ್ನಿಸಿದರೆ, ಸ್ಥಳೀಯ ಭಾಷೆಗೆ ಬದಲಾಗಿ ಹಿಂದಿಯನ್ನು ಹೇರಲು ಹೊರಟರೆ ಸಮಸ್ಯೆಗಳೇಳದೇ ಇರುತ್ತವೆಯೇ?

ಆದರೆ ಬಿಹಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ, ಬಿಹಾರಿ ಯುವಕನನ್ನು ಕೊಂದುಹಾಕಿದರು ಎಂದು ರಾಜ್ ಠಾಕ್ರೆ ಮತ್ತು ಮಹಾರಾಷ್ಟ್ರವನ್ನು ದೂಷಿಸಲು, ಅಲ್ಲಿನ ಸರಕಾರವನ್ನು ವಜಾಮಾಡುವಂತೆ ಒತ್ತಾಯ ಮಾಡಲು ಒಂದಾಗಿರುವ ಬಿಹಾರದ ರಾಜಕಾರಣಿಗಳು ತಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಲು ಏಕೆ ಒಟ್ಟಾಗುವುದಿಲ್ಲ? ಹದಿನೈದು ವರ್ಷ ಬಿಹಾರವನ್ನು ಲೂಟಿ ಮಾಡಿದ ಲಾಲುಗೆ ಬಿಹಾರಿಗಳ ಬಗ್ಗೆ ಎಷ್ಟು ಕಾಳಜಿ ಇದೆಯೆಂಬುದು ಯಾರಿಗೂ ಗೊತ್ತಿರದ ಸಂಗತಿಯೇ? ಬಿಹಾರವನ್ನು ಡಕಾ ಯಿತರ ರಾಜ್ಯವನ್ನಾಗಿ ಪರಿವರ್ತಿಸಿದ್ದು ಇದೇ ಲಾಲು, ರಾಬ್ಡಿ, ಪಾಸ್ವಾನ್‌ಗಳೇ ಅಲ್ಲವೆ?

ಹಾಗಾಗಿಯೇ “ಕೋಲ್ಕತಾ ಬೆಂಗಾಲಿಗಳಿಗೆ, ಚೆನ್ನೈ ತಮಿಳಿಗರಿಗೆ ಎಂದಾದರೆ ಮುಂಬೈ ಮರಾಠಿಗಳಿಗೆ” ಎನ್ನುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕೂಗಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ ಠಾಕ್ರೆ ಹೇಳುತ್ತಿರುವುದೇನೋ ಸರಿ, ಆದರೆ ಹಿಡಿದಿರುವ ಮಾರ್ಗ ಸರಿಯಲ್ಲ ಎಂದು ಕೆಲವು ಬುದ್ಧಿಜೀವಿಗಳು ಬೊಟ್ಟು ಮಾಡುತ್ತಿದ್ದಾರೆ. ಆದರೆ ರಾಜ್ ಠಾಕ್ರೆಯವರೇನಾದರೂ ಶಿವಾಜಿ ಪ್ರತಿಮೆಯ ಕೆಳಗೆ ಕುಳಿತು ಸತ್ಯಾಗ್ರಹ ಮಾಡಿದ್ದರೆ ಆಳುವ ಪಕ್ಷದವರು ಸ್ಪಂದಿಸುತ್ತಿದ್ದರೆ? ಮಾಲ್ ಮಾಲೀಕರು ಅಂಗಡಿ, ಕಚೇರಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಮರಾಠಿ ಬೋರ್ಡ್‌ಗಳನ್ನು ನೇತು ಹಾಕಿಕೊಳ್ಳುತ್ತಿದ್ದರೆ? ರಾಜ್ ಠಾಕ್ರೆ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂದು ಕೆಲವರು ದೂರುತ್ತಿದ್ದಾರೆ. ಅಂತಹ ಗಾಂಧಿ ಮಹಾತ್ಮನಿಗೂ ತನಗಿಂತ ದೊಡ್ಡ ನಾಯಕರು ಹೊರಹೊಮ್ಮಬಾರದು ಎಂಬ ಮತ್ಸರವಿದ್ದಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಿರುವಾಗ ರಾಜ್ ಠಾಕ್ರೆಯನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ.

ಅಂದಹಾಗೆ ಕನಡಿಗರಾದ ನಮಗೂ ಒಬ್ಬ ಠಾಕ್ರೆ ಬೇಕೆ?

ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಕನ್ನಡಿಗರಾದ ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಖಂಡಿತ ಬಂದು ನಿಂತಿದೆ. ಬೆಂಗಳೂರು ಕೂಡ ಮತ್ತೊಂದು ಮುಂಬೈನಂತೆಯೇ ಆಗಿದೆ. ಆದರೆ ಒಂದೇ ವ್ಯತ್ಯಾಸ-ನಮ್ಮಲ್ಲೊಬ್ಬ ರಾಜ್ ಠಾಕ್ರೆ ತಲೆಯೆತ್ತಿಲ್ಲ ಅಷ್ಟೇ. ಮುಂಬೈನಲ್ಲಿ ಬಿಹಾರಿ ಹಾಗೂ ಉತ್ತರ ಪ್ರದೇಶವರು ಹೇಗೆ ಹೆಚ್ಚಿಕೊಂಡಿದ್ದಾರೋ ನಮ್ಮ ಬೆಂಗಳೂರಿನಲ್ಲಿ ತೆಲುಗು ಹಾಗೂ ತಮಿಳು ಭಾಷಿಕರ ದರ್ಬಾರು ಕೂಡ ಸಹನೆಯ ಕಟ್ಟೆಯೊಡೆಯುವಂತೆ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾದರು ಎಂಬುದು ಹಳೆಯ ಮಾತಾಯಿತು ಬಿಡಿ. ಆದರೆ ಹೊಸದಾಗಿ ಚುನಾಯಿತವಾಗಿ ರುವ ಈಗಿನ ವಿಧಾನಸಭೆಯಲ್ಲಿ ೧೩ ಜನ ತೆಲುಗುವಾಳ್ಳು ಶಾಸಕರಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ ಶಾಸನಸಭೆಯಲ್ಲಿ ತೆಲುಗಿನಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಅದರಲ್ಲೂ ಈ ಬಳ್ಳಾರಿಯ ರೆಡ್ಡಿ ಸಹೋದರರು ಕರ್ನಾಟಕದ ರಾಜಕಾರಣವನ್ನು ಕುಲಗೆಡಿಸುವುದಕ್ಕೋಸ್ಕರವೇ ಜನ್ಮವೆತ್ತಿದವರಂತೆ ವರ್ತಿಸುತ್ತಿದ್ದಾರೆ. ನಾಡಿದ್ದು ನವೆಂಬರ್ ೩ರಿಂದ ನಡೆಯಲಿರುವ ಹಂಪಿ ಉತ್ಸವ ವನ್ನೇ ತೆಗೆದುಕೊಳ್ಳಿ. ಹಂಪಿ ಉತ್ಸವವನ್ನು ಆರಂಭಿಸಿದ ಹಾಗೂ ಸ್ಥಳೀಯರಾದ ಎಂ.ಪಿ. ಪ್ರಕಾಶ್ ಅವರಿಗೇ ಆಹ್ವಾನ ನೀಡಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರನ್ನೂ ಆಹ್ವಾನಿಸಿಲ್ಲ. ಈ ಜನಾರ್ದನ ಮತ್ತು ಕರುಣಾಕರ ರೆಡ್ಡಿಗಳು ಆ ಮಟ್ಟಿಗೆ ಕನ್ನಡ ನೆಲದಲ್ಲಿ ರೆಡ್ಡಿ(ದ್ವೇಷ) ರಾಜಕಾರಣ ಮಾಡುತ್ತಿದ್ದಾರೆ. ಈಗ್ಗೆ ಕೆಲವೇ ತಿಂಗಳ ಹಿಂದೆ ಬೆಂಗಳೂರಿನಲ್ಲೇ ನಡೆದ ರೆಡ್ಡಿ ಸಮಾವೇಶದಲ್ಲಿ “ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಯಡಿಯೂರಪ್ಪನವರನ್ನು ಅಧಿಕಾರಕ್ಕೆ ತಂದಿದ್ದೇ ನಾವು” ಎಂದು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಹೇಳಿಕೊಂಡಿ ದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಭ್ಯತೆಗೆ ಹೆಸರಾಗಿದ್ದ ನಮ್ಮ ಕರ್ನಾಟಕ ರಾಜಕೀಯ ರೌಡಿಯಿಂಸಗೆ ತಿರುಗುತ್ತಿದೆ. ವೇದಿಕೆಗಳ ಮೇಲೆ ಆ ಮಗ, ಈ ಮಗ ಅಂತ ಬೈದುಕೊಳ್ಳುವ ಮಟ್ಟಕ್ಕಿಳಿಯುತ್ತಿದೆ. ಇದು ಕರ್ನಾಟಕವೋ ಆಂಧ್ರವೋ ಎಂದು ಅನುಮಾನಪಡುವಷ್ಟರಮಟ್ಟಿಗೆ ಹೊಲಸೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ತೆಲುಗುವಾಳ್ಳುಗಳೇ. ಇಂದಲ್ಲ ನಾಳೆ ಈ ಸತ್ಯ ಎಲ್ಲರ ಅನುಭವಕ್ಕೂ ಬರುತ್ತದೆ, ಕಾದು ನೋಡಿ. ಆಂಧ್ರದಲ್ಲಿ ದರ್ಬಾರು ನಡೆಸುತ್ತಿದ್ದ ರೆಡ್ಡಿ, ರಾಜು, ನಾಯ್ಡುಗಳು ನಕ್ಸಲೀಯರ ಕಾಟ ತಾಳಲಾರದೆ ಕರ್ನಾಟಕಕ್ಕೆ ಓಡಿಬಂದು ಬೆಂಗಳೂರನ್ನು ಕುಲಗೆಡಿಸುತ್ತಿದ್ದಾರೆ ಅಷ್ಟೇ. ನಮ್ಮ ನೆರೆಹೊರೆಯಲ್ಲೇ ಇರುವ ತೆಲುಗು ಭಾಷಿಕರ ಬಗ್ಗೆ ನಮ್ಮಲ್ಲಿ ಖಂಡಿತ ಒಳ್ಳೆಯ ಭಾವನೆಯೇ ಇದೆ. ಆದರೆ ಕೆಲವರು ಇಡೀ ಸಮುದಾಯವನ್ನೇ ಕಟಕಟೆಗೆ ತಂದುನಿಲ್ಲಿಸುವಂತೆ ವರ್ತಿಸುತ್ತಿದ್ದಾರೆ. ಈ ರೀತಿ ಅನ್ಯರ ದಬ್ಬಾಳಿಕೆಯಿಂದ ನಮ್ಮ ಸಾಫ್ಟ್‌ವೇರ್ ಕಂಪನಿಗಳೂ ಹೊರತಾಗಿಲ್ಲ. ಕಂಪನಿಗಳೆಲ್ಲ ಒಂದೋ ನಮ್ಮ ಕನ್ನಡಿಗರು ಸ್ಥಾಪಿಸಿದವು ಇಲ್ಲವೆ, ಕನ್ನಡಿಗರು ನಿರ್ಮಿಸಿರುವ ಉದ್ಯಮಸ್ನೇಹೀ ವಾತಾವರಣದಿಂದಾಗಿ ಇಲ್ಲಿಗೆ ಬಂದಿರುವ ವಿದೇಶಿ, ದೇಶಿ ಕಂಪನಿಗಳೇ ಆಗಿವೆ. ಆದರೆ ಟೀಮ್ ಲೀಡರ್, ಪ್ರಾಜೆಕ್ಟ್ ಮೇನೇಜರ್ ಹುದ್ದೆಗಳಲ್ಲಿರುವವರೆಲ್ಲ ತೆಲುಗು, ತಮಿಳು ಇಲ್ಲವೆ ಮಲೆಯಾಳಿಗಳು. ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಇವರು ತಮ್ಮ ರಾಜ್ಯದವರನ್ನೇ ತಂದುತುಂಬಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ, ಕಿರುಕುಳಕ್ಕೂ ಒಳಗಾಗುತ್ತಿದ್ದಾರೆ.

ಪರಭಾಷಿಕರ ಮೇಲೆ ನಮಗೇಕೆ ಕೋಪ ಬರುತ್ತಿದೆಯೆಂ ದರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಕನ್ನಂಬಾಡಿ ಕಟ್ಟಿದ, ಎಚ್‌ಎಎಲ್ ಸೇರಿದಂತೆ ಹಲವಾರು ಕಚೇರಿ, ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ ವಿಶ್ವೇಶ್ವರಯ್ಯ, ನಾರಾಯಣಮೂರ್ತಿ ಎಲ್ಲರೂ ಕನ್ನಡಿಗರೇ. ಯಾರೋ ಹೊರಗಿನವರು ಬಂದು ನಮ್ಮಲ್ಲಿ ಉದ್ಯೋಗ ಸೃಷ್ಟಿಸಿದ್ದಲ್ಲ. ಆದರೆ ಇಂದು ಬೆಂಗಳೂರಿ ನಲ್ಲಿ ಕಾಣಸಿಗುವುದು ತೆಲುಗುವಾಳ್ಳುಗಳ ರಿಯಲ್ ಎಸ್ಟೇಟ್ ಲಾಬಿ, ತಮಿಳು, ಮಲೆಯಾಳಿಗಳ ಸಣ್ಣಬುದ್ಧಿ. ಇಂತಹ ಸಂದರ್ಭದಲ್ಲಿ ನಮಗೂ ಒಬ್ಬ ರಾಜ್ ಠಾಕ್ರೆ ಬೇಕು ಎಂದನಿಸುವುದಿಲ್ಲವೆ? ನಾಳೆ ಬೆಳಗ್ಗೆ ಸಾಫ್ಟ್‌ವೇರ್ ಅಥವಾ ಇನ್ನಾವುದೇ ಕಂಪನಿಯಲ್ಲಿರುವ ಕನ್ನಡಿಗನೊಬ್ಬನಿಗೆ ತೊಂದರೆಯಾಯಿತೆಂದರೆ ಯಡಿಯೂರಪ್ಪನವರು ಸಹಾಯಕ್ಕೆ ಬರುವುದಿಲ್ಲ. ಅವರೇನಿದ್ದರೂ ಪೊಲೀಸರು, ಸರಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಖಾಸಗಿ ಖಜಾನೆಯನ್ನು ಭರ್ತಿ ಮಾಡಿಕೊಳ್ಳುತ್ತಿರುತ್ತಾ ರಷ್ಟೇ! ಎಂತಹದ್ದೇ ಸಮಸ್ಯೆ ಎದುರಾದರೂ, ರಾಜ್ಯ ರಾಜ್ಯ ಗಳ ನಡುವೆ ಸಂಘರ್ಷಗಳೇರ್ಪಟ್ಟಾಗಲೂ ಈ ಬಿಜೆಪಿ, ಕಾಂಗ್ರೆಸ್‌ನವರು ಕೇಂದ್ರದಲ್ಲಿ ಯಾರ ಸರಕಾರವಿದೆ ಎಂಬು ದನ್ನು ನೋಡಿಕೊಂಡೇ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ನಮ್ಮ ಪರವಾಗಿ ಹೊರಾಡುವ ಒಬ್ಬ ನಾಯಕ, ಒಂದು ನೈಜ ಕನ್ನಡ ಪರ ಸಂಘಟನೆ, ಪ್ರಾದೇಶಿಕ ಪಕ್ಷದ ಅಗತ್ಯ ಖಂಡಿತ ಇದೆ.

ನೀವೇ ಯೋಚನೆ ಮಾಡಿ, “ನಿನ್ನ…ನ್… ಏ ಗಾಂಡೂ” ಮುಂತಾದ ಹೊಲಸು ಪದಗಳನ್ನು ಸಿನಿಮಾಗಳ ಮೂಲಕ ಕರ್ನಾಟಕದ ಮನೆಮನೆಗೂ ವಿತರಿಸಿದ, ‘ಕರ್ನಾಟಕದಲ್ಲಿ ಶೂಟಿಂಗ್ ಮಾಡಿದರೆ ಬರುವುದಿಲ್ಲ’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಹಾಗೂ ‘ಇಂಡಿಪೆಂಡೆನ್ಸ್’ ಎಂಬ ಚಿತ್ರದ ಮುಹೂರ್ತವನ್ನು ತಮಿಳುನಾಡಿನಲ್ಲಿ ಮಾಡಿದ್ದ ಸಾಯಿ ಕುಮಾರ್ ಎಂಬ ತೆಲುಗು ಭಾಷಿಕನಿಗೆ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಕೊಡುವ “ಮಹಾನ್ ಮುಖ್ಯಮಂತ್ರಿ ಯಡಿಯೂರಪ್ಪ”ನವರ ಕಣ್ಣಿಗೆ, ಕಾಲು ಶತಮಾನದಿಂದ ಕನ್ನಡಿಗರಿಗೆ ಮನರಂಜನೆ ನೀಡುತ್ತಿರುವ ನಮ್ಮ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್ ಕಾಣುವುದೇ ಇಲ್ಲ!! ಇಂತಹ ಕೃತಘ್ನ ರಾಜಕಾರಣಿಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ನಮ್ಮ ಕನ್ನಡದ ಪರವಾಗಿ ಹೋರಾಡುವ ನಾಯಕರು ಬೇಕೆನಿಸುವುದಿಲ್ಲವೆ? ಈ ದಿಸೆಯಲ್ಲಿ ರೈತ ಸಂಘ, ವಾಟಾಳ್ ನಾಗರಾಜ್, ದಸಂಸ ಪ್ರಯತ್ನ ನಡೆಸಿ ದ್ದವು. ನಮ್ಮ ನೆಲ-ಜಲದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಹಾಗೂ ಅದೊಂದು ಸಮಗ್ರ ಹೋರಾಟವಾಗಿ ರೂಪುಗೊಳ್ಳುತ್ತಿರುವ ಹಂತದಲ್ಲೇ ನಮ್ಮವರೇ ಆದ ಹಾಗೂ “ಮುತ್ಸದ್ದಿ” ಎನಿಸಿಕೊಂಡಿದ್ದ ಗುಳ್ಳೇನರಿ ರಾಮಕೃಷ್ಣ ಹೆಗಡೆಯವರು ಹೇಗೆ ಹೊಸಕಿ ಹಾಕಿದರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದರೆ ಇಂದು ಹಿಂದೆಂದಿಗಿಂತಲೂ ತ್ವರಿತ ಹಾಗೂ ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಧ್ವನಿಯೆತ್ತಬೇಕಾದ ಅಗತ್ಯ ಎದುರಾಗಿದೆ. ಒಂದು ವೇಳೆ, ೧೯೬೦ರ ದಶಕದಲ್ಲಿ ಡಾ. ರಾಜ್, ಬಾಲಕೃಷ್ಣ, ನರಸಿಂಹ ರಾಜು, ಜಿ.ವಿ. ಅಯ್ಯರ್, ಅನಕೃ ಮುಂತಾದವರು ಅನ್ಯ ಭಾಷಾ ಚಿತ್ರಗಳ ಡಬ್ಬಿಂಗ್ ವಿರುದ್ಧ ಯಶಸ್ವಿಯಾಗಿ ಧ್ವನಿಯೆತ್ತದೇ, ಡಬ್ಬಿಂಗನ್ನು ನಿಷೇಧ ಮಾಡಿಸದೇ ಹೋಗಿದ್ದಿದ್ದರೆ ಇವತ್ತು ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳನ್ನು ನೋಡಲು ಥಿಯೇಟರ್‌ಗಳೇ ಇರುತ್ತಿರಲಿಲ್ಲ.

ನೆನಪಿನಲ್ಲಿರಲಿ, ಒಂದು ವೇಳೆ ಪರ ಭಾಷಿಕರನ್ನು ಅದರಲ್ಲೂ ತೆಲುಗುವಾಳ್ಳುಗಳನ್ನು ನಾವು ಮಟ್ಟಹಾಕದೇ ಹೋದರೆ, ಮುಂದೊಂದು ದಿನ ಬೆಳಗಾವಿಯಲ್ಲಿ ಕನ್ನಡಿಗನೊಬ್ಬನನ್ನು ಮೇಯರ್ ಮಾಡಬೇಕಾದರೆ ಹೋರಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆಯಲ್ಲಾ ಅಂಥ ಪರಿಸ್ಥಿತಿ ಬೆಂಗಳೂರಿನಲ್ಲೂ ಸೃಷ್ಟಿಯಾಗುತ್ತದೆ. ಈಗಾಗಲೇ ಬೆಂಗಳೂರಿನ ಜುಟ್ಟನ್ನು ರೆಡ್ಡಿಗಳ ಕೈಗೆ ಕೊಟ್ಟಾಗಿದೆ. ಇನ್ನು ಮೇಯರ್ ಸ್ಥಾನಕ್ಕೆ ನೇರ ಆಯ್ಕೆ ಮಾಡುವ ವ್ಯವಸ್ಥೆಯನ್ನೇನಾದರೂ ತಂದರೆ ವಿಧಾನಸಭೆ ಹಾಗೂ ಕಾರ್ಪೊರೇಶನ್‌ನಲ್ಲೂ “ಮಚ್ಚಾ, ಬಾಬು”ಗಳೇ ತುಂಬಿಕೊಳ್ಳುತ್ತಾರೆ, ಮರೆಯಬೇಡಿ.

ಹಾಗಂತ ಭಾಷೆ, ಸಂಸ್ಕೃತಿ ಹೆಸರಿನಲ್ಲಿ ದೇಶ ವಿಭಜನೆ ಮಾಡಬೇಕೆಂದು ಯಾರೂ ಕೇಳುತ್ತಿಲ್ಲ. ಭಾರತ ಅನ್ನುವ ಒಂದು ಪದಕ್ಕೆ ನಮ್ಮನ್ನೆಲ್ಲ ಭಾವನಾತ್ಮಕವಾಗಿ ಒಂದು ಮಾಡುವ ಶಕ್ತಿಯಿದೆ. ಆದರೆ “ಯೂನಿವರ್ಸಲ್ ಬ್ರದರ್‌ಹುಡ್” ಬಗ್ಗೆ ಎಷ್ಟೇ ಮಾತನಾಡಿದರೂ ಕೊನೆಗೆ ಅಪ್ಪನ ಆಸ್ತಿಗಾಗಿ ಅಣ್ಣತಮ್ಮಂದಿರೇ ಹೊಡೆದಾಡುವಂತೆ “ಸ್ಥಳೀಯರ ಕೂಗು” ಎನ್ನುವುದೂ ಇರುತ್ತದೆ. ಈ ಬೆಂಗಳೂರು ನಮ್ಮದು, ನಮ್ಮ ಕೆಂಪೇಗೌಡ ಕಟ್ಟಿದ್ದು, ನಮ್ಮ ವಿಶ್ವೇಶ್ವರಯ್ಯ ಬೆಳೆಸಿದ್ದು, ನಮ್ಮ ಕನ್ನಡನಾಡು ಎಂದು ಹಕ್ಕು ಪ್ರತಿಪಾದನೆ ಮಾಡುವುದರಲ್ಲಿ, ಪರ ಭಾಷಿಕರ ಸೊಕ್ಕು ಮುರಿಯಬೇಕೆನ್ನುವುದರಲ್ಲಿ, ಅಂಗಡಿ, ಕಾರ್ಖಾನೆಗಳ ಮುಂಗಟ್ಟಿನ ಮೇಲೆ ಕನ್ನಡ ನಾಮಫಲಕಗಳನ್ನು ಹಾಕಿ ಎಂದು ಒತ್ತಾಯಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಯಾವ ಸಂಘಟನೆ ಬೇಕಾದರೂ ಮಾಡಲಿ. ಆದರೆ ನಮಗೆ ಕಟ್ಟಾಳುಗಳು ಬೇಕೇ ಹೊರತು ‘ಕಲೆಕ್ಟರ್’ಗಳಲ್ಲ. ಕನ್ನಡದ ಹೆಸರು ಹೇಳಿಕೊಂಡು “ಕಲೆಕ್ಟರ್” ಕೆಲಸಕ್ಕಿಳಿದರೆ ಕೆಡುವುದು ಕನ್ನಡದ ಹೆಸರೇ. ಜತೆಗೆ ಹೋರಾಟಗಳು ಹಾಗೂ ಹೋರಾಟಗಾರರ ಮೇಲೆ ಜನರಿಗೆ ವಿಶ್ವಾಸವೇ ಹೊರಟು ಹೋಗುತ್ತದೆ.

ಕನ್ನಡ ರಾಜ್ಯೋತ್ಸವದ ದಿನವಾದ ಇಂದಾದರೂ ಕನ್ನಡದ ಬಗ್ಗೆ ನೈಜ ಕಾಳಜಿ ಇರುವ ಎಲ್ಲರೂ ಚಿಂತನೆ ಮಾಡಲಿ.

ಕೃಪೆ : ಪ್ರತಾಪ್ ಸಿಂಹ

ಚಾವ್ಲಾ ಮೂತ್ರಕ್ಕೆ ಹೋದಾಗಲೆಲ್ಲ ವಾಸನೆ ಬಡಿಯುತ್ತಿದ್ದು ಯಾರ ಮೂಗಿಗೆ?

ಈ ಬಿಜೆಪಿಯವರು ಬೇಕೆಂದೇ ತಕರಾರು ತೆಗೆಯುತ್ತಿದ್ದಾರೆ ಎನ್ನಲು ಇದೇನು ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕಂಡು ಹುಡುಕಿದ, ಬಗೆದು ತೆಗೆದ ವಿವಾದವಲ್ಲ. “ನಿಷ್ಪಕ್ಷಪಾತ ನಿರ್ಧಾರ, ನಿಲುವನ್ನು ನಿರೀಕ್ಷಿಸುವ ಹಾಗೂ ಇತರರಿಗೆ ನ್ಯಾಯದಾನ ಮಾಡಬೇಕಾದ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಲು ಈ ವ್ಯಕ್ತಿ ಅನರ್ಹ” ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ 1979ರಲ್ಲೇ ಹೇಳಿದ್ದರು.

1975ರಿಂದ 77ರವರೆಗೂ, ಆ ಕಾಲದಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದ್ದ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಕಿಶನ್ ಚಂದ್‌ಗೆ ನವೀನ್ ಚಾವ್ಲಾ ವೈಯಕ್ತಿಕ ಸಲಹೆಗಾರರಾಗಿದ್ದರು. ಅದೇ ಕಾಲಾವಧಿಯಲ್ಲಿ ಘೋಷಣೆಯಾಗಿದ್ದ ತುರ್ತುಪರಿ ಸ್ಥಿತಿಯ ವೇಳೆ ನಡೆದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಸಿ. ಶಾ ನೇತೃತ್ವದಲ್ಲಿ ಆಯೋಗವೊಂದನ್ನು ನೇಮಕ ಮಾಡಲಾಗಿತ್ತು. 1979ರಲ್ಲಿ ತನ್ನ ವರದಿ ಸಲ್ಲಿಸಿದ ಶಾ ಆಯೋಗ, “ಪ್ರಧಾನಿ ನಿವಾಸದೊಳಕ್ಕೆ ಸುಲಭ ಪ್ರವೇಶ ಹೊಂದಿದ್ದ ಕಿಶನ್ ಚಂದ್ ಹಾಗೂ ಚಾವ್ಲಾ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಾನೂ ಏನನ್ನು ರೇಜಿಗೆ ಹುಟ್ಟಿಸುವಷ್ಟು ದುರುಪಯೋಗಪಡಿಸಿ ಕೊಂಡಿದ್ದಾರೆ. ಜನಸಾಮಾನ್ಯರ ಜತೆ ಪಾಳೇಗಾರರಂತೆ ನಡೆದು ಕೊಂಡಿದ್ದಾರೆ” ಎಂದು ಕಟುವಾಗಿ ಟೀಕಿಸಿತು. ಇಂತಹ ಮಂಗಳಾರತಿಯ ನಂತರ ಅವಮಾನವನ್ನು ತಾಳಲಾರದೆ ಕಿಶನ್‌ಚಂದ್ ಆತ್ಮಹತ್ಯೆ ಮಾಡಿಕೊಂಡರು.

ಆದರೆ ಚಾವ್ಲಾ ಅವರು ಮುಖಕ್ಕೆ ಉಗಿಸಿಕೊಂಡು ೩೦ ವರ್ಷಗಳಾದರೂ ಬದುಕಿರುವುದು ಮಾತ್ರವಲ್ಲ, ಬುದ್ಧಿ ಯನ್ನೂ ಬದಲಾಯಿಸಿಕೊಂಡಿಲ್ಲ!

ಪಕ್ಷಪಾತ ಧೋರಣೆ ತೋರುತ್ತಿರುವ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ವಜಾ ಮಾಡಬೇಕೆಂದು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿಯವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ೨ ಪುಟದ ಪತ್ರ ಬರೆದಿದ್ದಾರೆ. ಅದರ ಜತೆಗೆ 24 ಪುಟದ ಇನ್ನೊಂದು ಬಂಚ್ ಕೂಡ ಇದೆ. ಅದರಲ್ಲಿ ಚಾವ್ಲಾ ಅವರ ಪಕ್ಷಪಾತ ನಿಲುವಿಗೆ ಕನ್ನಡಿ ಹಿಡಿಯುವ 12 ನಿರ್ದಿಷ್ಟ ನಿದರ್ಶನಗಳನ್ನು ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಆಯೋಗದಲ್ಲಿ ಇದುವರೆಗೂ ನಡೆದ ಆಂತರಿಕ ಪತ್ರ ವ್ಯವಹಾರ, ದಾಖಲೆಗಳನ್ನು ಹೊಂದಿರುವ ಇನ್ನೂ 800 ಪುಟಗಳನ್ನೂ ಕಳುಹಿಸಿದ್ದಾರೆ.

ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದು ಜನವರಿ 16ರಂದು. ಅದು ಬೆಳಕಿಗೆ ಬಂದಿದ್ದು, ವಿವಾದ ಸೃಷ್ಟಿಯಾಗಿದ್ದು ಜನವರಿ 31ರಂದು. ಅಣಕವೆಂದರೆ, ಪತ್ರದಲ್ಲಿ ಅವರು ಮಾಡಿರುವ ಆರೋಪಗಳಿಗೆ, ಎತ್ತಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವ ಬದಲು ಎಲ್ಲರೂ ಗೋಪಾಲಸ್ವಾಮಿಯವರನ್ನೇ ಕಟಕಟಗೆ ತಂದು ನಿಲ್ಲಿಸುವ, ನಿಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಪತ್ರದಲ್ಲಿರುವ ಒಂದೊಂದು ಅಂಶಗಳನ್ನೂ ಗಮನಿಸುತ್ತಾ ಹೋಗಿ, ಗೋಪಾಲಸ್ವಾಮಿಯವರು ಬಿಜೆಪಿಯ ಏಜೆಂಟೋ? ಹೇಗೂ ತಾನು ಏಪ್ರಿಲ್ ೨೦ಕ್ಕೆ ನಿವೃತ್ತಿಯಾಗುತ್ತೇನೆ ಮುಂದೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯಪಾಲ ಅಥವಾ ಇನ್ನಾವುದೋ ಹುದ್ದೆಯನ್ನು ಗಳಿಸಿಕೊಳ್ಳಬಹುದು ಎಂಬ ಮುಂದಾಲೋಚನೆಯಿಂದ ವಿವಾದವೆಬ್ಬಿಸುತ್ತಿದ್ದಾರೋ? ಇಂಥ ಎಲ್ಲ ಅನುಮಾನಗಳಿಗೂ ಉತ್ತರ ದೊರೆಯುತ್ತದೆ.

ಗೋಪಾಲಸ್ವಾಮಿಯವರು ಬರೆದ ಪತ್ರದಲ್ಲಿ ಚಾವ್ಲಾರನ್ನು ವಜಾ ಮಾಡಬೇಕೆಂದು ಮಾತ್ರ ಒತ್ತಾಯಿಸಿಲ್ಲ. ಇನ್ನೂ ಎರಡು ಅಂಶಗಳನ್ನು ಎತ್ತಿದ್ದಾರೆ. 1) ಕೇಂದ್ರ ಜಾಗೃತ ಆಯುಕ್ತ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವುದಕ್ಕಾಗಿ ಪ್ರತಿಪಕ್ಷ ನಾಯಕನನ್ನೂ ಒಳಗೊಂಡಿರುವ ಒಂದು ವ್ಯವಸ್ಥೆಯಿದೆ. ಅಂತಹ ವ್ಯವಸ್ಥೆಯನ್ನು ಚುನಾವಣಾ ಆಯುಕ್ತರನ್ನು ನೇಮಕ ಮಾಡುವುದಕ್ಕೂ ರೂಪಿಸಬೇಕು ಎಂಬ ಮಾಜಿ ಚುನಾವಣಾ ಆಯುಕ್ತ ಬಿ.ಬಿ. ಟಂಡನ್ ಅವರ ಶಿಫಾರಸನ್ನು ಜಾರಿಗೆ ತರಬೇಕು. 2) ಕೇಂದ್ರ ಜಾಗೃತ ಆಯೋಗದ ಕಾಯಿದೆಗೆ ಅನುಗುಣವಾಗಿ ಜಾಗೃತ ದಳದ ಆಯುಕ್ತರು ನಿವೃತ್ತಿಯ ನಂತರ ರಾಜತಾಂತ್ರಿಕ ಜವಾಬ್ದಾರಿ ಸೇರಿದಂತೆ ಯಾವುದೇ ಲಾಭದಾಯಕ ಸರಕಾರಿ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಅಂತಹ ನಿಯಮವನ್ನು ಚುನಾವಣಾ ಆಯುಕ್ತರಿಗೂ ಅನ್ವಯಿಸಬೇಕು. ಚುನಾವಣಾ ಆಯುಕ್ತರು ನಿವೃತ್ತಿಯ ನಂತರ 10 ವರ್ಷಗಳವರೆಗೂ ಯಾವುದೇ ರಾಜಕೀಯ ಪಕ್ಷ ಸೇರಬಾರದು, ಚುನಾವಣೆಯಲ್ಲಿ ಸ್ಪರ್ಧಿಸಬಾರದು, ರಾಜ್ಯಪಾಲ ಸ್ಥಾನ ಸೇರಿದಂತೆ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಬಾರದು.

ಇವೆರಡೇ ಅಂಶಗಳು ಸಾಕು ಗೋಪಾಲಸ್ವಾಮಿಯವರ ವ್ಯಕ್ತಿತ್ವನ್ನು ಪರಿಚಯಿಸಲು. ಅಷ್ಟಕ್ಕೂ ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ, ತಮಗೇನೋ ಗಿಟ್ಟುತ್ತದೆ ಎಂಬ ಊಹೆಯಿಂದ ಗೋಪಾಲಸ್ವಾಮಿಯವರು ವಿವಾದವೆಬ್ಬಿಸು ತ್ತಿದ್ದಾರೆ ಎಂದು ಅನುಮಾನ ಪಡಲು ಈ ಮೇಲಿನ ಶಿಫಾರಸು ಗಳಿಂದ ಗೋಪಾಲಸ್ವಾಮಿಯವರಿಗೇ ನಷ್ಟ. ಇನ್ನು ನಿವೃತ್ತಿಯ ನಂತರ ಹತ್ತು ವರ್ಷಗಳವರೆಗೂ ಯಾವುದೇ ಸರಕಾರಿ ಹುದ್ದೆಯನ್ನು ಅಲಂಕರಿಸಬಾರದು ಎಂಬ ಶಿಫಾರಸನ್ನು ತೆಗೆದುಕೊಳ್ಳಿ. ಚುನಾವಣಾ ಆಯುಕ್ತರು ನಿವೃತ್ತಿಯ ನಂತರ ಯಾವುದಾದರೂ ಪಕ್ಷಗಳನ್ನು ಸೇರಿದರೆ, ಅಧಿಕಾರದಲ್ಲಿದ್ದಾಗಲೇ ಅವರಿಗೆ ರಾಜಕೀಯ ಒಲವು-ನಿಲುವುಗಳಿದ್ದವು ಎಂದಾಗುವು ದಿಲ್ಲವೆ? ಅಂತಹ ವ್ಯಕ್ತಿ ಅಧಿಕಾರದಲ್ಲಿದ್ದಾಗ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂಬ ಅನುಮಾನ ಕಾಡುವುದಿಲ್ಲವೆ? ಚುನಾವಣಾ ಆಯೋಗದ ಬಗ್ಗೆ ದೇಶಾದ್ಯಂತ ಅರಿವು ಮೂಡಿಸಿದ ಟಿ.ಎನ್. ಶೇಷನ್ ಅವರಂತಹ ವ್ಯಕ್ತಿಗಳೇ ಕೊನೆಗೆ ಕಾಂಗ್ರೆಸ್ ಸೇರಿ ಗುಜರಾತ್‌ನ ಗಾಂಧಿನಗರದಿಂದ ಲಾಲ್‌ಕೃಷ್ಣ ಆಡ್ವಾಣಿಯವರ ವಿರುದ್ಧ ಸ್ಪರ್ಧಿಸಿದರೆ ಜನರಲ್ಲಿ ಇವರ ಪ್ರಾಮಾಣಿಕತೆಯ ಬಗ್ಗೆಯೇ ಸಂಶಯಗಳು ಮೂಡುವು ದಿಲ್ಲವೆ? ಶೇಷನ್ ಒಬ್ಬರೇ ಅಲ್ಲ, ಈ ಹಿಂದೆ ಮುಖ್ಯ ಚುನಾ ವಣಾ ಆಯುಕ್ತರಾಗಿದ್ದ ಎಂ.ಎಸ್. ಗಿಲ್ ಅವರಂತೂ ಕಾಂಗ್ರೆಸ್ ಸೇರಿದ್ದಲ್ಲದೆ ಪ್ರಸ್ತುತ ಕೇಂದ್ರ ಕ್ರೀಡಾ ಸಚಿವರಾಗಿದ್ದಾರೆ. ಹೀಗೆ, ನಿಷ್ಪಕ್ಷಪಾತ ಧೋರಣೆಯನ್ನು ನಿರೀಕ್ಷಿಸುವ ಹುದ್ದೆಯೇರಿ ಕೊನೆಗೆ ರಾಜಕೀಯಕ್ಕಿಳಿದರೆ ಅವರು ಅಲಂಕರಿಸಿದ್ದ ಹುದ್ದೆಯ ಮೇಲಿನ ಗೌರವ, ವಿಶ್ವಾಸ ಉಳಿಯುತ್ತದೆಯೇ?

ಹಾಗಿರುವಾಗ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಮಾಡಿ ಕೊಂಡು, ‘ಈ ವ್ಯಕ್ತಿ ನಿಷ್ಪಕ್ಷಪಾತ ನಡವಳಿಕೆಯನ್ನು ನಿರೀಕ್ಷಿಸುವ ಯಾವ ಹುದ್ದೆಯನ್ನೂ ನಿರೀಕ್ಷಿಸಲು ಅನರ್ಹ” ಎಂದು ಹೇಳಿಸಿಕೊಂಡಿರುವ ನವೀನ್ ಚಾವ್ಲಾ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾದರೆ ಗತಿಯೇನು? ಇನ್ನು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ಕಮ್ಯುನಿಸ್ಟರು, ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಬೆದರಿಕೆಯ ಹೊರತಾಗಿಯೂ ಯಶಸ್ವಿಯಾಗಿ ಚುನಾವಣೆ ನಡೆಸಿದ ನಂತರ ಕಾಂಗ್ರೆಸ್ಸಿಗರು ಯಾವ ವ್ಯಕ್ತಿಯನ್ನು ಮುಕ್ತಕಂಠ ದಿಂದ ಶ್ಲಾಘಿಸಿದ್ದರೋ ಅದೇ ಗೋಪಾಲಸ್ವಾಮಿ ಇವರಿಗೆ ಇದ್ದಕ್ಕಿ ದ್ದಂತೆ ವಿನಾಶಕಾರಿಯಂತೆ ಕಾಣುತ್ತಿರುವುದೇಕೆ?

ಅದಿರಲಿ, ನವೀನ್ ಚಾವ್ಲಾ ಪ್ರಕರಣವೇನು ಚುನಾವಣೆಯ ಸಂದರ್ಭದಲ್ಲಿ ಬೇಕೆಂದೇ ಕೆದಕಿ ತೆಗೆದಿರುವ ತಗಾದೆಯೇ?

ನವೀನ್ ಚಾವ್ಲಾ ಹಾಗೂ ಅವರ ಪತ್ನಿ ರೂಪಿಕಾ ಅವರು ದತ್ತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಈ ಟ್ರಸ್ಟ್‌ಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರ 6 ಎಕರೆ ಜಾಗವನ್ನು ಪುಕ್ಕಟೆಯಾಗಿ ನೀಡಿದ್ದರೆ, ಕಾಂಗ್ರೆಸ್ಸಿಗರಾದ ಎ.ಎ. ಖಾನ್, ಆರ್.ಪಿ. ಗೋಯೆಂಕಾ, ಅಂಬಿಕಾ ಸೋನಿ, ಕರಣ್ ಸಿಂಗ್, ಎ.ಆರ್. ಕಿದ್ವಾಯಿ ತಮ್ಮ ಸಂಸದರ ನಿಧಿಯಿಂದ ದೇಣಿಗೆ ನೀಡುತ್ತಾ ಬಂದಿದ್ದಾರೆ. ಹೀಗೆ ತುರ್ತುಪರಿಸ್ಥಿತಿಯಿಂದ ಇಂದಿನವರೆಗೂ ಕಾಂಗ್ರೆಸ್ ಜತೆ ಸಂಬಂಧವಿಟ್ಟುಕೊಳ್ಳುತ್ತಾ ಬಂದಿದ್ದ ಚಾವ್ಲಾ ಅವರನ್ನು ಚುನಾವಣಾ ಆಯುಕ್ತರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದಾಗ, ಕೂಡಲೇ ವಜಾ ಮಾಡಬೇಕೆಂದು ಒತ್ತಾಯಿಸಿ ೨೦೪ ಸಂಸದರ ಸಹಿ ಹೊಂದಿದ್ದ ಮನವಿಯನ್ನು ಆಗಿನ ರಾಷ್ಟ್ರಪತಿ ಕಲಾಂ ಅವರಿಗೆ ಎನ್‌ಡಿಎ ನೀಡಿತ್ತು. ಈ ಮಧ್ಯೆ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಹಾಗೂ ಚಾವ್ಲಾ ಅವರ ನಡುವೆಯೂ ಸಂಘರ್ಷಗಳು ಆರಂಭವಾಗಿದ್ದವು. ೨೦೦೭ರಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಗುರುತಿನ ಚೀಟಿಯಿಲ್ಲದವರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲು ಚಾವ್ಲಾ ಪ್ರಯತ್ನಿಸಿದಾಗ ಗೋಪಾಲಸ್ವಾಮಿ ಹಾಗೂ ಚಾವ್ಲಾ ನಡುವೆ ಮೊದಲ ಬಾರಿಗೆ ಸಂಘರ್ಷವೇರ್ಪಟ್ಟಿತ್ತು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ವಿನಾಕಾರಣ ಮುಂದಕ್ಕೆ ಹಾಕಲು ಪ್ರಯತ್ನಿಸಿದ ಚಾವ್ಲಾ ಮತ್ತೆ ಮುಖಭಂಗ ಅನುಭವಿಸಿದರು. ಗುಜರಾತ್ ಚುನಾವಣೆ ಪ್ರಚರಾಂದೋಲನದ ಸಮಯದಲ್ಲಿ ನರೇಂದ್ರಮೋದಿಯವರನ್ನು “ಸಾವಿನ ವ್ಯಾಪಾರಿ”(ಮೌತ್ ಕಾ ಸೌದಾಗರ್) ಎಂದು ಕರೆಯುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಸೋನಿಯಾ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡುವುದನ್ನು ತಡೆಯಲು ಬಂದಾಗಲಂತೂ ಚಾವ್ಲಾ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿರುವುದು ಎಲ್ಲರ ಗಮನಕ್ಕೂ ಬಂದಿತ್ತು. ಈ ಮಧ್ಯೆ, ಚಾವ್ಲಾ ಅವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತು. ಆದರೆ ಇತರ ಆಯುಕ್ತರನ್ನು ವಜಾ ಮಾಡುವ ಅಧಿಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ಸೇರಿದ್ದು ಎಂದು ಗೋಪಾಲಸ್ವಾಮಿಯವರೇ ಕೋರ್ಟ್ ಮುಂದೆ ವಾದಿಸಿದಾಗ ಬಿಜೆಪಿ ಅವರ ಬಳಿಗೇ ಬಂತು.

ಇಷ್ಟಾಗಿಯೂ ಚಾವ್ಲಾ ಎಚ್ಚೆತ್ತುಕೊಳ್ಳಲಿಲ್ಲ.

ಇನ್ನೂ ಮತದಾರರ ಪಟ್ಟಿಯನ್ನು ತಯಾರಿಸಿಲ್ಲ, ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಜನರಲ್ಲಿ ಗೊಂದಲವಿದೆ ಎಂದು ಕುಂಟು ನೆಪ ಹೇಳಿಕೊಂಡು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಮುಂದೂಡಿಸಲು ನಮ್ಮ ಕಾಂಗ್ರೆಸ್ಸಿಗರು ಪ್ರಯತ್ನಿಸಿದ್ದನ್ನು ನೆನಪು ಮಾಡಿಕೊಳ್ಳಿ. ಅದೇ ಲಾಬಿ ಕೆಲಸವನ್ನು ಚಾವ್ಲಾ ಚುನಾವಣಾ ಆಯೋಗದಲ್ಲಿ ಮಾಡಿದರು. ಮತ್ತೆ ಕೈಸುಟ್ಟುಕೊಂಡರು. ಗೋಪಾಲಸ್ವಾಮಿಯವರು ಕರ್ನಾಟಕ ಚುನಾವಣೆ ಮುಗಿದ ನಂತರ ಬಿಜೆಪಿ ದೂರಿನ ಆಧಾರದ ಮೇಲೆ ಕಳೆದ ಜುಲೈನಲ್ಲಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ ಕೂಡಲೇ ಚಾವ್ಲಾ ಒಂದು ತಿಂಗಳ ಕಾಲ ರಜೆ ಹೋದರು. ರಜೆಯಿಂದ ಬಂದ ನಂತರವೂ ಐದು ತಿಂಗಳು ಸತಾಯಿಸಿದರು. ಅವರ ವಿವರಣೆ ದೊರೆತ ನಂತರ ಒಂದೂವರೆ ತಿಂಗಳು ಕುಳಿತು ಸೂಕ್ತ ದಾಖಲೆ ಹಾಗೂ ನಿದರ್ಶನಗಳ ಸಮೇತ ಚಾವ್ಲಾ ಅವರನ್ನು ವಜಾ ಮಾಡುವಂತೆ ಗೋಪಾಲಸ್ವಾಮಿಯವರು ರಾಷ್ಟ್ರಪತಿಗೆ ಪತ್ರ ಕಳುಹಿಸಿದ್ದಾರೆ.

“ಆಯೋಗದ ಪೂರ್ಣ ಪ್ರಮಾಣದ ಸಭೆ ನಡೆಯುತ್ತಿದ್ದ ಸಂದರ್ಭಗಳಲ್ಲಿ ನವೀನ್ ಚಾವ್ಲಾ ಅವರು ಶೌಚಾಲಯಕ್ಕೆಂದು ನಡು ನಡುವೆ ತೆರಳುತ್ತಿದ್ದರು. ಹಾಗೆ ಹೋಗಿ ಬಂದ ಕ್ಷಣ ಮಾತ್ರದಲ್ಲಿ ಉನ್ನತ ಕಾಂಗ್ರೆಸ್ ನಾಯಕರಿಂದ ನನಗೆ ದೂರ ವಾಣಿ ಕರೆಬರುತ್ತಿತ್ತು. ಅಂದರೆ ಆಯೋಗದ ಸಭೆಯಲ್ಲಿ ಚರ್ಚಿಸಲಾಗುತ್ತಿದ್ದ ವಿಷಯಗಳನ್ನು ಯಾರೋ ಸರಕಾರಕ್ಕೆ ಸೋರಿಕೆ ಮಾಡುತ್ತಿದ್ದಾರೆ ಎಂದಾಯಿತಲ್ಲವೆ? ಅಲ್ಲದೆ ಸಭೆಯ ಮಧ್ಯೆ ಕಾಂಗ್ರೆಸ್ಸಿಗರಿಂದ ಬರುತ್ತಿದ್ದ ಕರೆಗಳು ಚುನಾ ವಣಾ ಆಯೋಗದ ಕಾರ್ಯಕಲಾಪದಲ್ಲಿ ಮಾಡುತ್ತಿದ್ದ ಹಸ್ತಕ್ಷೇಪವಲ್ಲದೆ ಮತ್ತೇನು? ಒಮ್ಮೆಯಂತೂ, ಬೆಲ್ಜಿಯಂನಲ್ಲಿ ಸೋನಿಯಾ ಗಾಂಧಿಯವರು ಪಡೆದುಕೊಂಡಿದ್ದ ಪುರಸ್ಕಾರದ ವಿಷಯದಲ್ಲಿ ಆಕೆಯ ಸಂಸತ್ ಸದಸ್ಯತ್ವಕ್ಕೇ ಕುತ್ತು ಬಂದಿದ್ದಾಗ ಆಯೋಗ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಅವರೇ ಆಗಮಿಸಿದ್ದರು. ಗುಜರಾತ್ ವಿಧಾನಸಭೆ ಚುನಾವಣೆಯನ್ನು ಎರಡು ಹಂತದಲ್ಲಿ ಮುಗಿಸಲು ಸೂಕ್ತ ಭದ್ರತೆಯನ್ನು ಒದಗಿಸಲು ಗೃಹಖಾತೆ ನಿರಾಕರಿಸಿದ ನಂತರ ಮೂರು ಹಂತಗಳಲ್ಲಿ ಚುನಾವಣೆ ನಡೆಸಲು ಆಯೋಗ ದಿನಾಂಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಉನ್ನತ ಕಾಂಗ್ರೆಸ್ ನಾಯಕರೊಬ್ಬರು ಪದೇ ಪದೆ ಕರೆ ಮಾಡುತ್ತಿದ್ದರು” ಎಂದು ಗೋಪಾಲಸ್ವಾಮಿಯವರು ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಚಾವ್ಲಾ ಅವರ ನಿಜರೂಪವನ್ನು ಬಯಲು ಮಾಡಿದ್ದಾರೆ.

ಇಂತಹ ಆರೋಪಗಳಿಗೆ ಉತ್ತರ ನೀಡುವ ಬದಲು ಕೇಂದ್ರ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ ಹಾಗೂ ಇತರ ಕಾಂಗ್ರೆಸ್ ನಾಯಕರು ಗೋಪಾಲಸ್ವಾಮಿಯವರ ವಿರುದ್ಧವೇ ದೂಷಣೆ ಮಾಡುತ್ತಿರುವುದೇಕೆ?

ಒಂದು ವೇಳೆ ಕಾಂಗ್ರೆಸ್ಸಿಗರು ಚುನಾವಣಾ ಆಯೋಗದ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎನ್ನುವುದಾದರೆ, ಸಭೆಯ ಮಧ್ಯೆ ಶೌಚಾಲಯಕ್ಕೆ ತೆರಳುತ್ತಿದ್ದ ಚಾವ್ಲಾ ಅವರ ಮೂತ್ರದ ವಾಸನೆ ಕಾಂಗ್ರೆಸ್ಸಿನ ಮೂಗಿಗೆ ಬಡಿದಿಲ್ಲ ಎಂದಾದರೆ ಆರೋಪಗಳನ್ನೇಕೆ ನಿರಾಕರಿಸುತ್ತಿಲ್ಲ? ಸ್ಪಷ್ಟನೆಯನ್ನೇಕೆ ಕೊಡು ತ್ತಿಲ್ಲ?

1966ರ ಸಾಲಿನ ಐಎಎಸ್ ಅಧಿಕಾರಿ ಗೋಪಾಲಸ್ವಾಮಿಯ ವರು ಸಾಮಾನ್ಯ ವ್ಯಕ್ತಿಯಲ್ಲ. ಆಧಾರವಿಲ್ಲದೆ ಏನನ್ನೂ ಹೇಳುವು ದಿಲ್ಲ, ಅಧಿಕಾರವೇ ಇಲ್ಲದ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ಅದು ಕಾಂಗ್ರೆಸ್‌ಗೂ ಗೊತ್ತು. ಹಾಗಾಗಿಯೇ “ಎಲ್ಲ ಮೂವರು ಆಯುಕ್ತರೂ ಸಮಾನರು. ಯಾರನ್ನು ವಜಾಗೊಳಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಕಥೆ ಹೇಳುತ್ತಿದೆ. ಆದರೆ ಮೂವರೂ ಸಮಾನರು ಎಂಬ ವಾದವೇ ದೊಡ್ಡ ಸುಳ್ಳು. ಸಂಬಳ, ಸವಲತ್ತಿನ ವಿಷಯದಲ್ಲಷ್ಟೇ ಇವರು ಸಮಾನರು. ಅಧಿಕಾರ ವಿಷಯ ಬಂದಾಗ ಯೋಗ್ಯ ಕಾರಣಗಳಿದ್ದರೆ ಇತರ ಆಯುಕ್ತರನ್ನು ವಜಾಗೊಳಿಸುವಂತೆ ಶಿಫಾರಸು ಮಾಡುವ ಹಕ್ಕು ಮುಖ್ಯ ಚುನಾವಣಾ ಆಯುಕ್ತರಿಗೆ ಸಂವಿಧಾನದತ್ತವಾಗಿ ಬಂದಿದೆ. ಆ ಕಾರಣಕ್ಕಾಗಿ, “ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಹಾಳುಗೆಡವಬೇಡಿ, ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನವಿದು, ಇದೆಲ್ಲಾ ಬಿಜೆಪಿಯ ಹುನ್ನಾರ, ಪೊಲಿಟಿಕಲ್ ಬಾಸ್ ಥರಾ ವರ್ತಿಸಬೇಡ” ಎಂದು ಗದರಿಸುವ, ಗೋಪಾಲ ಸ್ವಾಮಿಯವರನ್ನೇ ತಪ್ಪಿತಸ್ಥರನ್ನಾಗಿ ಚಿತ್ರಿಸುವ ಕೆಲಸ ಮಾಡು ತ್ತಿದೆ. ನವೀನ್ ಚಾವ್ಲಾ ಅವರ ಸಾಚಾತನದ ಬಗ್ಗೆ ಯಾರೂ ಮಾತನಾಡಲು ಪ್ರಯತ್ನಿಸುತ್ತಿಲ್ಲ. ಅವರು ಸಾಚಾ ಎಂದು ಸಾಬೀತು ಮಾಡುವುದಕ್ಕೂ ಯತ್ನಿಸುತ್ತಿಲ್ಲ. ಬದಲಿಗೆ ಗೋಪಾಲ ಸ್ವಾಮಿಯವರನ್ನು ಬಿಜೆಪಿ ಏಜೆಂಟ್ ಎಂಬಂತೆ ಬಿಂಬಿಸುವ ಕೆಲಸವನ್ನು ಎಲ್ಲರೂ ಮಾಡುತ್ತಿದ್ದಾರೆ. ಬಿಜೆಪಿಯೇನು ಸದ್ಗುಣ ಸಂಪನ್ನರ ಪಕ್ಷ ಎಂದು ಹೇಳುತ್ತಿಲ್ಲ. ಆದರೆ ಯಾವ ಆಧಾರವೂ ಇಲ್ಲದೆ ಗೋಪಾಲಸ್ವಾಮಿಯವರನ್ನು ಬಿಜೆಪಿ ಪಕ್ಷಪಾತಿ ಎಂದು ಬಿಂಬಿಸುವುದು ಆ ವ್ಯಕ್ತಿಗೆ ಬಗೆಯುವ ಅಪಚಾರವಲ್ಲವೆ? ಅದಿರಲಿ, ಹುಟ್ಟು ಕಾಂಗ್ರೆಸ್ಸಿಗ ಪಿ.ಸಿ. ಅಲೆಗ್ಸಾಂಡರ್ ಅವರನ್ನು ರಾಷ್ಟ್ರಪತಿ ಮಾಡಲು ಹೊರಟಿದ್ದು, ಕೊನೆಗೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ತನ್ನ ಉಮೇದುವಾರರನ್ನಾಗಿ ಮಾಡಿ, ಗೆಲ್ಲಿಸಿದ್ದು ಬಿಜೆಪಿಯೇ. ಹಾಗಾದರೆ ಇವರಿಬ್ಬರನ್ನೂ ಬಿಜೆಪಿಯ ಏಜೆಂಟರು ಎನ್ನುವುದಕ್ಕಾಗುತ್ತದೆಯೇ? ಕಲಾಂ ಅವರಂತಹ ರಾಷ್ಟ್ರದ ನೆಚ್ಚಿನ ನೇತಾರ ಎರಡನೇ ಬಾರಿಗೆ ರಾಷ್ಟ್ರಪತಿಯಾಗದಂತೆ ತಡೆದಿದ್ದು, ಇನ್ನಿಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಮೂಲಕ ಶೇಷನ್ ಅವರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದ್ದು ಕಾಂಗ್ರೆಸ್ಸೇ ಅಲ್ಲವೆ?

ಈ ದೇಶದಲ್ಲಿ ಏನೇ ಕೆಟ್ಟ ಕೆಲಸಗಳು ನಡೆದರೂ ಅದರ ಮೂಲ ಕಾಂಗ್ರೆಸ್‌ನಲ್ಲೇ ಇರುತ್ತದೆ. ರಾಜ್ಯಪಾಲರ ಹುದ್ದೆ, ರಾಷ್ಟ್ರಪತಿ ಹುದ್ದೆಯಲ್ಲದೆ ಪ್ರಧಾನಿ ಹುದ್ದೆಯನ್ನೂ ಬಿಡದೇ ಪ್ರತಿಯೊಂದು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಹಾಳುಗೆಡವಿದ, ಎಲ್ಲ ಕೆಟ್ಟ ಕೆಲಸಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟ ಕೀರ್ತಿ ೫೦ ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೇ ಸಲ್ಲಬೇಕು. ಇಂತಹ ವ್ಯಕ್ತಿಗಳು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬ್ಯಾನರ್, ಬಂಟಿಂಗ್ಸ್‌ಗಳನ್ನು ನಿಷೇಧಿಸಿ ಬಿಜೆಪಿಯಿಂದಲೇ ಟೀಕಿಸಿಕೊಂಡಿದ್ದ ಗೋಪಾಲಸ್ವಾಮಿಯವರನ್ನು ಪಕ್ಷಪಾತಿ ಎನ್ನುತ್ತಿದ್ದಾರೆ. ಗೋಪಾಲಸ್ವಾಮಿಯವರ ಹಣೆಯ ಮೇಲೆ ಸದಾ ಕಾಣುವ ಉದ್ದನೆಯ ತಿಲಕವನ್ನು ನೋಡಿ ಅವರನ್ನು ಬಿಜೆಪಿಯವರು, ಬಿಜೆಪಿ ಪರವಿದ್ದಾರೆ ಎನ್ನಬೇಕೇ ಹೊರತು ಅವರ ನಡತೆಯಲ್ಲಿ ಯಾವ ಲೋಪಗಳನ್ನೂ ಪತ್ತೆ ಮಾಡಲು ಸಾಧ್ಯವಿಲ್ಲ.

ಹಣೆಗೆ ಕುಂಕುಮ, ತಿಲಕವಿಟ್ಟವರನ್ನೆಲ್ಲಾ ಬಿಜೆಪಿಯವರು, ಕೋಮುವಾದಿಗಳು ಎಂದು ಕರೆಯುವ ಕಾಲವೂ ಸದ್ಯದಲ್ಲೇ ಬರಬಹುದು!

Gosh!!

ಕೃಪೆ : ಪ್ರತಾಪ್ ಸಿಂಹ