ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಜನವರಿ 23, 2012

ನೇತಾಗಳು ಬಹಳಷ್ಟಿದ್ದರು, ನೇತಾಜಿ ಮಾತ್ರ ಅವರೊಬ್ಬರೇ ಆಗಿದ್ದರು!

Give me Blood, I promise you Freedom!
ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಒಂದೆಡೆ ಸುಭಾಷ್ ಹಾಗೂ ಇತರೆ ಕ್ರಾಂತಿಕಾರಿಗಳು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇವಲ ಕೆಲ ಆಡಳಿತಾತ್ಮಕ ಸ್ವಾತಂತ್ರ್ಯ ಕೊಟ್ಟರೆ ಸಾಕೆಂದು ಭಾವಿಸಿ 1931ರಲ್ಲಿ ಎರಡನೇ ದುಂಡುಮೇಜಿನ ಸಭೆಗೆ ಬ್ರಿಟನ್್ಗೆ ತೆರಳಲು ಮುಂದಾದ ಗಾಂಧೀಜಿ ಭಾರತೀಯರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದನಿಸಿತು.
ಹಾಗಂತ ಸುಭಾಶ್ಚಂದ್ರ ಬೋಸ್ ಗಾಂಧೀಜಿಯವರಂತೆ ಎಂದೂ ಸಣ್ಣತನ ತೋರಲಿಲ್ಲ!
ಅಭಿಪ್ರಾಯಭೇದ ಸ್ವಾತಂತ್ರ್ಯ ಚಳವಳಿಗೆ ಅಡ್ಡಬರಲು ಬಿಡಲಿಲ್ಲ. ನಿಜಹೇಳಬೇಕೆಂದರೆ ಸುಭಾಷ್ ಅವರ ಗುಣನಡತೆಯಲ್ಲೇ ಸಣ್ಣತನಕ್ಕೆ ಸ್ಥಾನವಿರಲಿಲ್ಲ. ಖ್ಯಾತ ಅಧ್ಯಾತ್ಮ ಗುರು ಓಶೋ ರಜನೀಶ್ ಅವರಿಗೂ ಇಷ್ಟವಾದ ಸಂಗತಿಯೂ ಅದೇ. ಸುಭಾಷ್ ಅವರನ್ನು ಬಹಳ ಮೆಚ್ಚಿಕೊಂಡಿದ್ದ ಅವರು ಸುಭಾಷ್-ಗಾಂಧಿ ಬಗ್ಗೆ ಹೀಗೆ ಹೇಳುತ್ತಾರೆ-’I am reminded of a young man. His name was Subhash Chandra. He became a great revolutionary and I have tremendeous respect for him, because he was the only man in India who opposed Mahatma Gandhi; he could see that all this Mahatmahood is simply politics and nothing else’. ಅಂದಮಾತ್ರಕ್ಕೆ ತಲೆಯಲ್ಲಿ ರಕ್ತ ಕ್ರಾಂತಿಯನ್ನೇ ತುಂಬಿಕೊಂಡಿದ್ದ ವ್ಯಕ್ತಿ ಸುಭಾಶ್ಚಂದ್ರ ಬೋಸ್ ಎಂದು ಭಾವಿಸಬೇಡಿ. ಆ ಕಾಲಕ್ಕೆ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್್ಗೆ ಹೋಗಿ ಬ್ಯಾರಿಸ್ಟರ್ ಆಗಿ ಕರಿಕೋಟಿನೊಂದಿಗೆ ಭಾರತಕ್ಕೆ ಯಾರೂ ಬರಬಹುದಿತ್ತು. ಆದರೆ. ಐಸಿಎಸ್ (Indian Civil Service) ಪಾಸಾಗಲು ಹೆಚ್ಚೂ ಕಡಿಮೆ ಸಾಧ್ಯವೇ ಇರಲಿಲ್ಲ! ಪಾಸಾಗಲು ಬ್ರಿಟಿಷರೇ ಅವಕಾಶ ಕೊಡುತ್ತಿರಲಿಲ್ಲ. ಒಂದು ವೇಳೆ ಪಾಸುಮಾಡಿದರೆ ಉನ್ನತ ಆಡಳಿತಾತ್ಮಕ ಸ್ಥಾನಗಳನ್ನು ಭಾರತೀಯರೇ ಆಕ್ರಮಿಸಿ ಬಿಡುತ್ತಾರೆಂಬ ಭಯ ಬ್ರಿಟಿಷರಿಗಿತ್ತು. ಇಂಥ ಅಡೆತಡೆಗಳ ನಡುವೆಯೂ ಐಸಿಎಸ್ ಪಾಸು ಮಾಡಿದ ಮೊದಲ ವ್ಯಕ್ತಿ ರವೀಂದ್ರನಾಥ ಟಾಗೋರರ ಹಿರಿಯಣ್ಣ ಸತ್ಯೇಂದ್ರನಾಥ್ ಬೋಸ್! ಅದು 1863ರಲ್ಲಿ. ನಂತರ ಯಾರಿಂದಲೂ ICS ಪಾಸು ಮಾಡಲಾಗಿರಲಿಲ್ಲ. ಒಂದಿಲ್ಲೊಂದು ಕ್ಷುಲ್ಲಕ ಕಾರಣ ಕೊಟ್ಟು ನಪಾಸು ಮಾಡಿಬಿಡುತ್ತಿದ್ದರು. ಅಂಥ ಅರವಿಂದ ಘೋಷ್್ರನ್ನೇ ಫೇಲು ಮಾಡಿದ್ದರು, ಯಾಕೆ ಗೊತೆ?್ತ ಅರವಿಂದರು ಈ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ICS ಪರೀಕ್ಷೆಯ ಪ್ರತಿಯೊಂದು ಸಬ್ಜೆಕ್ಟ್್ಗಳಲ್ಲೂ ಮೊದಲಿಗರಾಗಿ ಪಾಸಾದರು. ಇನ್ನೇನು ICS ಅಧಿಕಾರಿಯಾದರು ಎನ್ನುವಷ್ಟರಲ್ಲಿ ಕುದುರೆ ಸವಾರಿ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ಫೇಲು ಮಾಡಿದರು. ಕುದುರೆ ಸವಾರಿಗೂ ICS ಪಾಸಾಗಿ ಅಧಿಕಾರಶಾಹಿಯಾಗುವುದಕ್ಕೂ ಏನು ಸಂಬಂಧವೋ ಗೊತ್ತಿಲ್ಲ, ಆದರೆ ಇಂತಹ ಅಡಚಣೆಗಳ ನಡುವೆಯೂ ಸುಭಾಶ್ಚಂದ್ರ ಬೋಸ್ ಐಈಖ ಮಾಡಲು ಇಂಗ್ಲೆಂಡ್್ಗೆ ತೆರಳಿದರು. ಅಂತಿಮ ಪರೀಕ್ಷೆಯಲ್ಲಿ ಇಂಗ್ಲೆಂಡ್್ಗೇ 4ನೇಯವರಾಗಿ ತೇರ್ಗಡೆಯಾದರು. ಅದರಲ್ಲೂ ಇಂಗ್ಲಿಷ್್ರ ಮಾತೃಭಾಷೆಯಾದ ಇಂಗ್ಲಿಷ್ ವಿಷಯದಲ್ಲಿ ಭಾರತೀಯ ಬೋಸ್ ಮೊದಲಿಗರಾಗಿ ಪಾಸಾಗಿದ್ದರು. ಬ್ರಿಟಿಷರ ಯಾವ ತಂತ್ರಗಳೂ ಬೋಸ್ ICS ಅಧಿಕಾರಿಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ICS ಮಾಡಿದವರು ವೃತ್ತಿಗೆ ತೆರಳುವ ಮೊದಲು ಗವರ್ನರ್ ಮುಂದೆ ಸಾಂಪ್ರದಾಯಿಕವಾದ ಒಂದು ಇಂಟರ್್ವ್ಯೂ ಎದುರಿಸಬೇಕು. ಆ ಘಟನೆಯನ್ನು ಓಶೋ ಬಹಳ ಚೆನ್ನಾಗಿ ವಿವರಿಸುತ್ತಾರೆ. ಈ ಬೆಂಗಾಲಿಗಳು ಎಲ್ಲಿಗೇ ಹೋಗಲಿ, ಅದು ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಾಗಿರಲಿ ಬಗಲಲ್ಲೊಂದು ಕೊಡೆಯನ್ನು ಹಿಡಿದೇ ಹೋಗುತ್ತಾರೆ. ಹಾಗೇಕೆ ಎಂದೂ ಯಾರಿಗೆ ಗೊತ್ತಿಲ್ಲ. ಆದರೆ ಕೊಡೆ ಮಾತ್ರ ಕಾಯಂ ಕೈಯಲ್ಲಿರುತ್ತದೆ. ತಲೆಗೆ ಹ್ಯಾಟ್ ಧರಿಸಿ ಗವರ್ನರ್ ಜನರಲ್ ಕಚೇರಿಗೆ ಕಾಲಿರಿಸಿದ ಸುಭಾಷ್ ಬಗಲಲ್ಲೂ ಕೊಡೆಯೊಂದಿರುತ್ತದೆ! ಹಾಗೆ ಬಂದವರೇ ಕುರ್ಚಿಯಲ್ಲಿ ಆಸೀನರಾಗುತ್ತಾರೆ. ಅದನ್ನು ಕಂಡು ಕೆಂಡಾಮಂಡಲರಾದ ಗವರ್ನರ್, “ನಿನಗೆ ಮ್ಯಾನರ್ಸೆ ಗೊತ್ತಿಲ್ಲ. ನಿನ್ನನ್ನು ICS ಪಾಸು ಮಾಡಿದವನಾನು? ಎಂದು ಚೀರಾಡುತ್ತಾರೆ!!
ಆಗ ಸುಭಾಷ್ ಕೇಳುತ್ತಾರೆ-ಯಾವ ಮ್ಯಾನರ್ಸ್ ಬಗ್ಗೆ ಮಾತನಾಡುತ್ತಿದ್ದೀರಿ ನೀವು?
ಗವರ್ನರ್ ಜನರಲ್-ಒಳಬಂದ ಕೂಡಲೇ ಹ್ಯಾಟ್ ತೆಗೆದು ಗೌರವ ಸೂಚಿಸಬೇಕೆಂದು ನಿನಗೆ ಗೊತ್ತಿಲ್ಲವೆ? ಜತೆಗೆ ಕುಳಿತುಕೊಳ್ಳುವ ಮೊದಲು ನನ್ನ ಅನುಮತಿ ಪಡೆದೆಯಾ?
ಬಗಲಲ್ಲಿದ್ದ ಕೊಡೆಯ ಕೊಕ್ಕೆಯನ್ನು ಗವರ್ನರ್ ಜನರಲ್್ನ ಕುತ್ತಿಗೆ ಸುತ್ತಾ ಹಾಕಿದ ಸುಭಾಷ್ ಹೇಳುತ್ತಾರೆ- “ನಡತೆ ಬಗ್ಗೆ ಮಾತನಾಡುವ ನೀನು ಮೊದಲು ಸರಿಯಾಗಿ ನಡೆದುಕೋ. ನಾನು ಒಳಬಂದಾಗ ನೀನು ಮೊದಲು ಎದ್ದು ನಿಲ್ಲಬೇಕಿತ್ತು. ಇಷ್ಟಕ್ಕೂ ಅತಿಥಿ ನಾನೋ ನೀನೋ? ಹ್ಯಾಟು ತೆಗೆದು ಅತಿಥಿಗೆ ಮೊದಲು ನೀನು ಗೌರವ ಸೂಚಿಸಬೇಕಿತ್ತು. ಆದರೆ, ನೀನು ಆ ಕೆಲಸ ಮಾಡಿದೆಯಾ? ಹಾಗಿರುವಾಗ ನಾನೇಕೆ ಹ್ಯಾಟು ತೆಗೆದು ಗೌರವ ಸೂಚಿಸಲಿ? ಇನ್ನು ನಾನು ಒಳಬಂದಾಗ ಕುಳಿತುಕೊಂಡೇ ಇದ್ದೆಯಲ್ಲ ಅದಕ್ಕೆ ನನ್ನ ಅನುಮತಿ ಪಡೆದಿದ್ದೆಯಾ? ಅಂದಮೇಲೆ ನಾನೇಕೆ ನಿನ್ನ ಅನುಮತಿ ಪಡೆಯಬೇಕು? ನೀನು ಹೆಚ್ಚೆಂದರೆ ನನ್ನನ್ನು ICS” ನಿಂದ ತಿರಸ್ಕರಿಸಬಹುದು. ಆದರೆ, ಆ ಅವಕಾಶ ನಿನಗೆ ಕೊಡುವುದಿಲ್ಲ. ನಿನ್ನ ICS ಅನ್ನು ನಾನೇ ತಿರಸ್ಕರಿಸುತ್ತಿದ್ದೇನೆ”. ಹಾಗೆಂದು ಹೊರಬಂದರು.
ಅದು ಸುಭಾಷ್ ವ್ಯಕ್ತಿತ್ವ!
1930ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಬಂಧಿತರಾದ ಸುಭಾಷ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಕಲ್ಕತ್ತಾದ ಮೇಯರ್ ಆಗಿ ಆಯ್ಕೆಯಾದರು. ನಂತರವೂ ಬಂಧನ ತಪ್ಪಲಿಲ್ಲ. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೊಳಗಾದ ಬೋಸರಿಗೆ ಟಿಬಿ ಕಾಯಿಲೆ ಬಂದಿದೆ ಎಂದು ತಿಳಿಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಜರ್್ಲ್ಯಾಂಡ್್ಗೆ ಕಳುಹಿಸಬೇಕೆಂದು ಶಿಫಾರಸ್ಸು ಮಾಡಲಾಯಿತು. ಒಂದು ಕಡೆ ಚಿಕಿತ್ಸೆ ನೆಪದಲ್ಲಿ ದೇಶದಿಂದ ಹೊರದಬ್ಬಿದರೆ ದೊಡ್ಡ ತಲೆನೋವು ಕಡಿಮೆಯಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರೆ ಇನ್ನೊಂದೆಡೆ ದೇಶದಿಂದ ಹೊರಹೋದರೆ ಬ್ರಿಟಿಷರ ಅಡ್ಡಿ ಆತಂಕಗಳಿಲ್ಲದೆ ತಮ್ಮ ಚಟುವಟಿಕೆಗಳನ್ನು ಇನ್ನೂ ತೀವ್ರಗೊಳಿಸಬಹುದೆಂದು ಬೋಸ್ ಭಾವಿಸಿದರು. 1933, ಫೆಬ್ರವರಿ 23ರಂದು ಯುರೋಪ್್ನತ್ತ ಪಯಣ ಆರಂಭಿಸಿದ ಬೋಸ್, 36ರವರೆಗೂ ವಿದೇಶಗಳಲ್ಲಿದ್ದ್ದು ಭಾರತೀಯ ಕ್ರಾಂತಿಕಾರಿಗಳನ್ನು ಭೇಟಿಯಾಗಿ ಸಂಪರ್ಕ ಸಾಧಿಸಿದರು. ಜತೆಗೆ ಯುರೋಪ್್ನ ಸಮಾಜವಾದಿಗಳನ್ನೂ ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ಕೋರಿದರು. ಇಟಲಿಯ ಸರ್ವಾಧಿಕಾರಿ ಬೆನೆಟ್ ಮುಸೋಲಿನಿಯನ್ನು ಭೇಟಿ ಮಾಡಿದ ನಂತರ ವಿಯೆನ್ನಾವನ್ನೇ ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. 1936, ಮಾರ್ಚ್ 27ರಂದು ಭಾರತಕ್ಕೆ ಆಗಮಿಸಿದ ಕೂಡಲೇ ಬೋಸರನ್ನು ನೇರವಾಗಿ ಸೆರೆಮನೆಗೆ ಕಳುಹಿಸಲಾಯಿತು. ಒಂದು ವರ್ಷ ಸುಮ್ಮನಿದ್ದು ಬಿಡುಗಡೆಯಾಗಿ ಹೊರಬಂದ ಕೂಡಲೇ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಆ ವೇಳೆಗಾಗಲೇ ಸುಭಾಷ್ ಹಾಗೂ ಗಾಂಧಿ ನಡುವಿನ ಸಂಘರ್ಷ ತಣ್ಣಗಾಗಿತ್ತು. ಜತೆಗೆ ಸುಭಾಷ್ ಹೆಸರು ದೇಶಕ್ಕೇ ಪರಿಚಿತವಾಗಿತ್ತು. 1938ರಲ್ಲಿ ಹರಿಪುರದಲ್ಲಿ ನಡೆಯಲಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೋಸ್ ಮುಂದಾದರು. ಆ ಕಾರಣಕ್ಕಾಗಿ ಒಂದು ತಿಂಗಳ ಇಂಗ್ಲೆಂಡ್ ಪ್ರವಾಸ ಕೈಗೊಂಡರು. ಸದಾ ಬ್ರಿಟಿಷರ ಕಣ್ಗಾವಲಿನಲ್ಲಿದ್ದ ಬೋಸರದ್ದು ದಿಟ್ಟ ನಿರ್ಧಾರವಾಗಿತ್ತು. ಇಂಗ್ಲೆಂಡ್ ಪ್ರವಾಸದ ವೇಳೆ ಭಾರತೀಯ ವಿದ್ಯಾರ್ಥಿಗಳನ್ನು ಮಾತ್ರವಲ್ಲ ಭಾರತದ ಬಗ್ಗೆ ಮೃದು ನಿಲುವು ಹೊಂದಿದ್ದ ಲೇಬರ್ ಪಕ್ಷದ ನಾಯಕರು ಹಾಗೂ ರಾಜಕೀಯ ಚಿಂತಕರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಯಾಚಿಸಿದರು. ಭಾರತಕ್ಕೆ ಮರಳಿದ ಬೋಸ್ 1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಆದರು.
ಎಲ್ಲರ ಬಾಯಲ್ಲೂ ಬೋಸ್ ಬೋಸ್, ಗಾಂಧೀಜಿ ಎದೆ ಡುಸ್!
1939ರಲ್ಲಿ ಪುನರಾಯ್ಕೆ ಬಯಸಿದ ಬೋಸರನ್ನು ಸೋಲಿಸಲು ಗಾಂಧೀಜಿ ಮುಂದಾದರು. ಆದರೆ, ಬೋಸರನ್ನು ಎದುರಿಸುವ ತಾಕತ್ತು ಯಾರಿಗೂ ಇರಲಿಲ್ಲ. ಸ್ವತಃ ಸ್ಪರ್ಧಿಸಿದರೆ ತನ್ನ ಸಣ್ಣ ಬುದ್ಧಿ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯ ಗಾಂಧೀಜಿಗೆ. ಆ ಕಾರಣಕ್ಕೆ ಡಾ. ಪಟ್ಟಾಭಿ ಸೀತಾರಾಮಯ್ಯ ಎಂಬ ತಮ್ಮ ಚೇಲಾರನ್ನು ಉಮೇದುದಾರರನ್ನಾಗಿ ಮಾಡಿ, “ಪಟ್ಟಾಭಿ ಸೋಲು ನನ್ನ ಸೋಲು’ ಎಂದರು. ಆದರೆ, ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಯುವ ಮನಸ್ಸುಗಳು ಬೋಸ್್ರ ಬೆಂಬಲಕ್ಕೆ ನಿಂತ ಕಾರಣ ಪಟ್ಟಾಭಿ ಸೀತಾರಾಮಯ್ಯನವರು ಸೋತು ಬೋಸ್ ವಿಜಯಿಯಾದರು. ಅವತ್ತು I am beyond love and hate. I am beyond anger, violence’ ಎನ್ನುತ್ತಿದ್ದ ಗಾಂಧೀಜಿಯವರ ನಿಜರೂಪ ಬೆಳಕಿಗೆ ಬಂತು. ಸುಭಾಶ್ಚಂದ್ರ ಬೋಸರನ್ನು ಅಧ್ಯಕ್ಷರೆಂದು ಘೋಷಿಸುವ ಸಮಾರಂಭಕ್ಕೇ ಗಾಂಧೀಜಿ ಹೋಗಲಿಲ್ಲ. ಆದರೇನಂತೆ ಸುಭಾಷ್ ಗಾಂಧೀಜಿ ಮಟ್ಟಕ್ಕಿಳಿಯಲಿಲ್ಲ. ಗಾಂಧೀಜಿ ಕಾಂಗ್ರೆಸ್ ಅನ್ನೇ ಬಣಗಳನ್ನಾಗಿ ಒಡೆಯಲು ಮುಂದಾಗುತ್ತಿದ್ದಾರೆ ಎಂದು ತಿಳಿದ ಕೂಡಲೇ ಸ್ವಾತಂತ್ರ್ಯ ಗಳಿಸುವುದಷ್ಟೇ ನಮ್ಮೆಲ್ಲರ ಏಕಮಾತ್ರ ಗುರಿಯಾಗಬೇಕು, ವೈಯಕ್ತಿಕ ಪ್ರತಿಷ್ಠೆ ಹಾಗೂ ಮಹತ್ವಾಕಾಂಕ್ಷೆಗೆ ಪಕ್ಷ-ಚಳವಳಿ ಒಡೆಯಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೇ ಬೋಸ್ ರಾಜಿನಾಮೆ ನೀಡಿದರು. ಅಷ್ಟೇ ಅಲ್ಲ, 1941, ಜನವರಿ 19ರಂದು ಬ್ರಿಟಿಷರ ಕಣ್ತಪ್ಪಿಸಿ ಜರ್ಮನಿ ಹಾಗೂ ಜಪಾನ್್ಗೆ ತೆರಳುವ ಮೂಲಕ ದೇಶದಿಂದಲೇ ಹೊರನಡೆದರು. Just imagine, ಮುಸೊಲಿನಿ, ಹಿಟ್ಲರ್್ರನ್ನು ಭೇಟಿಯಾಗುವುದೆಂದರೆ ಸಾಮಾನ್ಯ ಮಾತೇ? ಅದೂ ಯಾವ ರಾಷ್ಟ್ರದ ಪ್ರಧಾನಿ, ಅಧ್ಯಕ್ಷ, ಪ್ರಭುವಲ್ಲದೆ ಕೇವಲ ಒಬ್ಬ ಕ್ರಾಂತಿಕಾರಿಗಳ ನೇತಾರನಾಗಿ?!
ಆ ಮೂಲಕ ವಿದೇಶದಲ್ಲೇ ಆಝಾದ್ ಹಿಂದ್ ಫೌಜ್ ಕಟ್ಟಿದ್ದ ಅವರು ಬಂದೂಕಿನಿಂದ ಸ್ವಾತಂತ್ರ್ಯ ಪಡೆಯಲು ಮುಂದಾದರು. ನಿಮಗೆ ಗೊತ್ತಿರಲಿ, 1943ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದ ನಮ್ಮ ದೇಶದ ಮೊಟ್ಟಮೊದಲ ಭಾಗಗಳೆಂದರೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು. ಅವುಗಳನ್ನು ಗೆದ್ದುಕೊಂಡ ಸುಭಾಷ್ ಸ್ವರಾಜ್ ಹಾಗೂ ಶಹೀದ್ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು. Give me blood, I Promise you Fredom ಎಂದು ರೇಡಿಯೋ ಮೂಲಕ ದೇಶವಾಸಿಗಳಿಗೆ ಕರೆಕೊಟ್ಟಿದ್ದೂ ಅದೇ ಸಂದರ್ಭದಲ್ಲಿ. ಎಷ್ಟೇ ಆಗಲಿ ಇತಿಹಾಸ ಸೃಷ್ಟಿಯಾಗುವುದು ಹೇಡಿಗಳಿಂದಲ್ಲ, ಸುಭಾಷ್್ರಂಥ ವೀರಕಲಿಗಳಿಂದ. ನಿಮಗೆ ಇನ್ನೂ ಒಂದು ಅಂಶ ಗೊತ್ತಿರಲಿ, ಭಾರತಕ್ಕೆ ಸ್ವಾತಂತ್ರ್ಯ ದೊರೆಕಿದ ಸಂದರ್ಭದಲ್ಲಿ (1945ರಿಂದ 51) ಬ್ರಿಟನ್್ನಲ್ಲಿ ಆಡಳಿತ ನಡೆಸುತ್ತಿದ್ದುದು ಲೇಬರ್ ಪಕ್ಷ ಹಾಗೂ ಪ್ರಧಾನಿಯಾಗಿದ್ದಿದ್ದು ಕ್ಲಿಮೆಂಟ್ ಅಟ್ಲಿ. ಅವತ್ತು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಅಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟಾಗ ವಿನ್್ಸ್ಟನ್ ಚರ್ಚಿಲ್ ಖಡಾಖಂಡಿತವಾಗಿ ವಿರೋಧಿಸಿದರು. ಒಂದು ವೇಳೆ, ಅಟ್ಲಿ ಪ್ರಧಾನಿಯಾಗಿಲ್ಲದೆ ಇದ್ದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದು ಇನ್ನೂ ವಿಳಂಬವಾಗುತ್ತಿತ್ತು. ಅಂದು ಅಟ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೆ ಒಲವು ತೋರಿಸಿದ್ದರ ಹಿಂದೆಯೂ ಒಂದು ಕಾರಣವಿದೆ. 1938ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದಾಗ ಲೇಬರ್ ಪಕ್ಷದ ನೇತಾರರಾದ ಕ್ಲಿಮೆಂಟ್ ಅಟ್ಲಿ, ಅರ್ಥರ್ ಗ್ರೀನ್್ವುಡ್, ಹೆರಾಲ್ಡ್ ಲಾಸ್ಕಿ, ಜಿಡಿಎಸ್ ಕೋಲ್ ಮತ್ತು ಸರ್ ಸ್ಟಾಫೋರ್ಡ್ ಕ್ರಿಪ್ಸ್ ಮುಂತಾದವರಿಗೆ ಭಾರತಕ್ಕೆ ಏಕೆ ಸ್ವಾತಂತ್ರ್ಯ ನೀಡಬೇಕೆಂದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇ ಸುಭಾಶ್ಚಂದ್ರ ಬೋಸ್! ಅದು 1947ರಲ್ಲಿ ನಮ್ಮ ನೆರವಿಗೆ ಬಂತು.
ಅಂತಹ ಗಂಡುಮಗನ ಜನ್ಮದಿನವಿದು.
1897, ಜನವರಿ 23ರಂದು ಜನಿಸಿದ ಸುಭಾಶ್ಚಂದ್ರ ಬೋಸ್ ಇವತ್ತು 115ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೊಳಗೆ ಸ್ವಾಭಿಮಾನ, ಹೋರಾಟ ಮನೋಭಾವನೆ ತುಂಬಿದ ಅವರನ್ನು ಮರೆಯಲಾದೀತೆ? ಈ ದೇಶ ಎಷ್ಟೋ “ನೇತಾ’ಗಳನ್ನು (ನೇತಾರರು) ಕಂಡಿದೆ. ಆದರೆ, “ನೇತಾಜಿ’ (ನಮ್ಮ ಪ್ರೀತಿ, ಗೌರವಕ್ಕೆ ಭಾಜನರಾದ ನೇತಾರ) ಮಾತ್ರ ಅವರೊಬ್ಬರೇ ಅಲ್ಲವೇ?
- ಕೃಪೆ: ಪ್ರತಾಪ ಸಿಂಹ

ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡೀತೆ?

ಅಂಥದ್ದೊಂದು ಸಾಧ್ಯತೆ ದಿನಕಳೆದಂತೆ ದಟ್ಟವಾಗುತ್ತಲೇ ಇದೆ. ಇಷ್ಟಕ್ಕೂ ಇಸ್ರೇಲ್ ಮುಂದೆ ಇರುವ ಮಾರ್ಗಗಳಾದರೂ ಯಾವುವು? ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳೇ ಅದನ್ನು ಸುತ್ತುವರಿದಿರುವುದು ಮಾತ್ರವಲ್ಲ, ತುಸು ದೂರವಿರುವ ಇರಾನ್್ನ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅವರಂತೂ ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ನಮ್ಮ ಗುರಿ ಎನ್ನುತ್ತಿದ್ದಾರೆ! ಆ ಉದ್ದೇಶಕ್ಕಾಗಿ ಅಣ್ವಸ್ತ್ರ ತಯಾರಿಕೆಯಲ್ಲೂ ತೊಡಗಿದ್ದಾರೆ. ವಿಶ್ವಸಂಸ್ಥೆ ಕೆಲ ದಿಗ್ಬಂಧನೆಗಳನ್ನು ಹೇರಿದ್ದರೂ, ಇನ್ನೂ ಹೆಚ್ಚಿನ ದಿಗ್ಬಂಧನೆಗಳನ್ನು ಹೇರುವುದಾಗಿ ಎಚ್ಚರಿಕೆ ಕೊಟ್ಟಿದ್ದರೂ ಇರಾನ್ ಕ್ಯಾರೇ ಎನ್ನುತ್ತಿಲ್ಲ. ಇರಾನ್ ಅಣ್ವಸ್ತ್ರ ತಯಾರಿಸಿದ ಮರುದಿನವೇ ಯಾರ ಉಳಿವಿಗಾದರೂ ಕುತ್ತು ಎದುರಾಗುವುದಾದರೆ ಅದು ಇಸ್ರೇಲ್್ಗೆ ಹಾಗಿರುವಾಗ ಇಸ್ರೇಲ್ ಕೈಕಟ್ಟಿಕುಳಿತುಕೊಳ್ಳಲು ಸಾಧ್ಯವೆ? ನೀವೇ ಹೇಳಿ, ತನ್ನ 52 ಲಕ್ಷ ಜನರ ಪ್ರಾಣ ಉಳಿಸಿಕೊಳ್ಳಲು ಇಸ್ರೇಲ್ ಏನು ಮಾಡಬೇಕು? ಈ ಹಿನ್ನೆಲೆಯಲ್ಲಿ, ಇರಾನ್ ಅಣ್ವಸ್ತ್ರ ತಯಾರಿಕಾ ಸ್ಥಾವರದ ಮೇಲೆ ದಾಳಿ ಮಾಡಿ ನಾಶಪಡಿಸಬೇಕೇ ಬೇಡವೇ?
Operation Babylon!!
1981ರಲ್ಲಿ ಇರಾಕ್ ಇದೇ ರೀತಿಯೇ ಉದ್ಧಟತನ ತೋರಿತ್ತು. ಅದರ ಅಣ್ವಸ್ತ್ರ ಅಭಿವೃದ್ಧಿ ಹಿಂದೆ ಇದ್ದಿದ್ದೂ ಇಸ್ರೇಲನ್ನು ನಾಶಪಡಿಸುವ ಗುರಿಯೇ. ಆ ಕಾರಣಕ್ಕಾಗಿ 1976ರಲ್ಲಿ ಫ್ರಾನ್ಸ್್ನಿಂದ “Kายั้’ (Osiris) ದರ್ಜೆಯ ಅಣು ರಿಯಾಕ್ಟರ್್ಗಳನ್ನು ಖರೀದಿಸಿತ್ತು. ಅದಕ್ಕೆ ಇರಾಕ್, “ಓಸಿರಾಕ್್’ (Osirak) ಎಂಬ ಹೆಸರಿಟ್ಟಿತು. ಇರಾಕ್ ಅಣು ಯೋಜನೆಗೆ ಇಟಲಿಯೂ ಸಹಕಾರ ನೀಡಿತ್ತು. ಶಾಂತಿಯುತ ಉದ್ದೇಶಕ್ಕಾಗಿನ ವೈಜ್ಞಾನಿಕ ಸಂಶೋಧನೆಗೆ ತಾನು ರಿಯಾಕ್ಟರ್್ಗಳನ್ನು ಖರೀದಿ ಮಾಡಿರುವುದಾಗಿ ಇರಾಕ್ ಹೇಳಿಕೊಂಡರೂ ಅದಕ್ಕೆ ಉದ್ದೇಶ ಶುದ್ಧಿಯಿಲ್ಲ ಎಂಬುದು ಇಸ್ರೇಲ್್ಗೆ ತಿಳಿದಿತ್ತು. 1967ರಲ್ಲಿ ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಈ ಐದೂ ರಾಷ್ಟ್ರಗಳು ಏಕಕಾಲಕ್ಕೆ ಮುಗಿಬಿದ್ದ ನಂತರವಂತೂ ಯಾವುದೇ ಕಾರಣಕ್ಕೂ ಮುಸ್ಲಿಂ ರಾಷ್ಟ್ರಗಳನ್ನು ನಂಬುವಂತಿಲ್ಲ ಎಂಬುದು ಇಸ್ರೇಲ್್ಗೆ ಮನವರಿಕೆಯಾಗಿತ್ತು. ಹಾಗಾಗಿ ಅಣು ಉಪಕರಣಗಳನ್ನು ನೀಡಿದ ಫ್ರಾನ್ಸ್ ಹಾಗೂ ಇಟಲಿಗಳನ್ನು ಬಹಿರಂಗವಾಗಿ ಟೀಕೆ ಮಾಡಿದ ಇಸ್ರೇಲ್, ಯಾವ ಬೆಲೆ ತೆತ್ತಾದರೂ ಸರಿ ತನ್ನ ಭೂಭಾಗವನ್ನು ರಕ್ಷಿಸಿಕೊಳ್ಳುವುದಾಗಿ ಘೋಷಿಸಿತು. 1974ರಿಂದ 1977ರವರೆಗೂ ಇಸ್ರೇಲ್ ಪ್ರಧಾನಿಯಾಗಿದ್ದ (ಮೊದಲ ಅವಧಿಗೆ) ಇಝಾಕ್ ರಬಿನ್ ಕಾಲದಲ್ಲೇ ಇರಾಕ್್ನ ಅಣು ಯೋಜನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಯಾವ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಅದೇ ವೇಳೆಯಲ್ಲೇ ಯೋಜನೆ ಹಾಗೂ ಕಾರ್ಯಾಚರಣೆಯ ತಯಾರಿ ಕೂಡ ಆರಂಭವಾಯಿತು. 1977ರಲ್ಲಿ ಮೆನಚೆಮ್ ಬೆಗಿನ್ ಪ್ರಧಾನಿಯಾದ ನಂತರ ಅದೂ ಇನ್ನೂ ತೀವ್ರಗೊಂಡಿತು. ಇರಾಕ್ ಅಣುಸ್ಥಾವರದ ತದ್ರೂಪಿಯನ್ನು ನಿರ್ಮಾಣ ಮಾಡಿ, ಅದನ್ನು ನಾಶಪಡಿಸುವ ಬಗೆಯ ಬಗ್ಗೆ ಇಸ್ರೇಲಿ ಯೋಧರು ಪ್ರಾಕ್ಟಿಸ್ ಮಾಡಲಾರಂಭಿಸಿದರು. ಈ ಮಧ್ಯೆ ಇಸ್ರೇಲಿ ವಿದೇಶಾಂಗ ಸಚಿವ ಮೋಷೆ ದಯಾನ್, ಫ್ರಾನ್ಸ್ ಮತ್ತು ಇಟಲಿಗಳ ಜತೆ ಸಂಧಾನ ಮಾತುಕತೆ ಆರಂಭಿಸಿದರು. ಆದರೆ ಅಣುಸ್ಥಾವರ ನಿರ್ಮಾಣಕ್ಕೆ ಸಹಕಾರ ನೀಡುತ್ತಿರುವುದನ್ನು ಸ್ಥಗಿತಗೊಳಿಸಲು ಫ್ರಾನ್ಸ್-ಇಟಲಿಗಳೆರಡೂ ನಿರಾಕರಿಸಿದವು. ಇನ್ನು ರಾಜತಾಂತ್ರಿಕ ಸಂಧಾನದಿಂದ ಯಾವ ಫಲವೂ ದೊರೆಯುವುದಿಲ್ಲ, ಜತೆಗೆ ದಾಳಿಯನ್ನು ವಿಳಂಬ ಮಾಡುವುದರಿಂದ ಬಹುದೊಡ್ಡ ಅಪಾಯವಿದೆ ಎಂದು ಬೆಗಿನ್ ಭಾವಿಸಿದರು. 1980ರಲ್ಲಿ ಇಸ್ರೇಲಿ ಗುಪ್ತಚರ ದಳದ ಸೈನಿಕರು ಇರಾಕಿ ಅಣುಸ್ಥಾವರ ನಿರ್ಮಾಣದಲ್ಲಿ ತೊಡಗಿದ್ದ ಈಜಿಪ್ಟ್ ವಿಜ್ಞಾನಿ ಯೆಹಿಯಾ ಅಲ್ ಮಸಾದ್್ರನ್ನು ಹತ್ಯೆಗೈದರು. ಆ ಮೂಲಕ ತಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ಇಸ್ರೇಲ್ ನೀಡಿತು, ಅದೊಂದು ರೀತಿಯಲ್ಲಿ ಇರಾಕ್ ಹಾಗೂ ಫ್ರಾನ್ಸ್-ಇಟಲಿಗಳಿಗೆ ನೀಡಿದ ಪಂಥಾಹ್ವಾನವೂ ಆಗಿತ್ತು. ಈ ಮಧ್ಯೆ ಇರಾಕ್-ಇರಾನ್ ಸಂಘರ್ಷವೂ ಆರಂಭವಾಯಿತು. ಅದನ್ನೇ ನೆಪವಾಗಿಟ್ಟುಕೊಂಡ ಇಸ್ರೇಲ್, ಇರಾಕ್್ನ ಅಣುಸ್ಥಾವರದ ಮೇಲೆ ದಾಳಿ ಮಾಡುವಂತೆ ಇರಾನ್್ಗೆ ಬಹಿರಂಗ ಕರೆಕೊಟ್ಟಿತು. 1980, ಸೆಪ್ಟೆಂಬರ್ 30ರಂದು ಇರಾನ್ ದಾಳಿ ಮಾಡಿ ಸ್ಥಾವರಕ್ಕೆ ಭಾಗಶಃ ಹಾನಿಯುಂಟು ಮಾಡಿತು. ಅದರ ಬೆನ್ನಲ್ಲೇ ಇರಾನ್-ಇಸ್ರೇಲ್-ಅಮೆರಿಕದ ನಡುವೆ ರಹಸ್ಯ ಮಾತುಕತೆ ನಡೆದು ಸಂಧಾನವೇರ್ಪಟ್ಟಿತು. ತುರ್ತು ಅಗತ್ಯ ಬಿದ್ದರೆ ತನ್ನ ತಬ್ರಿಝ್ ವಾಯುನೆಲೆಯಲ್ಲಿ ಇಸ್ರೇಲಿ ವಿಮಾನಗಳು ಇಳಿಯಲು ಅವಕಾಶ ನೀಡುವುದಾಗಿ ಇರಾನ್ ವಾಗ್ದಾನ ಮಾಡಿತು. ಜತೆಗೆ ಇರಾಕಿ ಅಣುಸ್ಥಾವರದ ವಿವರಗಳನ್ನೂ ನೀಡಿತು. ಆದರೆ ಇಸ್ರೇಲಿ ಮಿಲಿಟರಿ ನೆಲೆ ಹಾಗೂ ಇರಾಕಿ ಅಣುಸ್ಥಾವರದ ನಡುವೆ 1600 ಕಿ.ಮೀ. ಅಂತರವಿತ್ತು. ಇಷ್ಟೊಂದು ದೂರವನ್ನು ಇಂಧನ ಮರುತುಂಬಿಸಿಕೊಳ್ಳದೆ ಕ್ರಮಿಸಲು ಸಾಧ್ಯವೇ ಇರಲಿಲ್ಲ. ಅಲ್ಲದೆ ಜೋರ್ಡಾನ್ ಹಾಗೂ ಸೌದಿ ಆಗಸವನ್ನು ದಾಟಿ ಹೋಗಬೇಕಾದ್ದರಿಂದ ಆ ದೇಶಗಳ ವಾಯು ವ್ಯಾಪ್ತಿಯನ್ನೂ ಉಲ್ಲಂಘಿಸಬೇಕಿತ್ತು. ಹಾಗಾಗಿ ಮಾರ್ಗಮಧ್ಯದಲ್ಲೇ ಇಂಧನ ಮರುತುಂಬಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆ ಸಂದರ್ಭದಲ್ಲೂ ಇಸ್ರೇಲಿಗಳು ಕೈಚೆಲ್ಲಿ ಕೂರಲಿಲ್ಲ. ಅಪಾರ ಇಂಧನ ತುಂಬಿಕೊಂಡಿರುವ ಹಾಗೂ ಶಸ್ತ್ರಸಜ್ಜಿತ ಎಫ್-16 ಯುದ್ಧವಿಮಾನಗಳ ದಂಡನ್ನೇ ಕಳುಹಿಸಲು ನಿರ್ಧರಿಸಿತು. ಅವುಗಳಿಗೆ ಎಫ್-15 ಯುದ್ಧವಿಮಾನಗಳು ನೆರೆ ರಾಷ್ಟ್ರಗಳನ್ನು ಹಾದುಹೋಗುವಾಗ ರಕ್ಷಣೆ ನೀಡುವಂತೆ ಸೂಚಿಸಲಾಯಿತು.
ಅದೇ Operation Babylon!!
ಈ ಮಧ್ಯೆ ಇರಾಕಿ ಅಣುಸ್ಥಾವರಕ್ಕೆ ಅಣು ಇಂಧನ ತುಂಬಿಸುವ ಮೊದಲೇ ನಾಶಪಡಿಸುವುದೊಂದೇ ವಿಕಿರಣ ಪ್ರಸರಣವನ್ನು ತಡೆಯಲು ಇರುವ ಮಾರ್ಗ ಎಂದು ತಿಳಿಯಿತು. 1980, ಜೂನ್್ನೊಳಗೆ ಓಸಿರಾಕ್ ರಿಯಾಕ್ಟರ್್ಗೆ ಅಣು ಇಂಧನ ತುಂಬಿಸಿ ಕಾರ್ಯಾರಂಭಗೊಳಿಸುವುದು ಖಚಿತ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮಾಹಿತಿ ನೀಡಿತು. ಎಂಟು ಎಫ್-16ಗಳು ಅಣಿಯಾದವು, ಅಗಣಿತ ಎಫ್-15ಗಳೂ ಸಿದ್ಧಗೊಂಡವು. ಝೀವ್ ರಾಝ್, ಆಮೋಸ್ ಯದ್ಲಿನ್, ದೊಬ್ಬಿ ಯಾಫೆ, ಅಮಿರ್ ನಾಚುಮಿ, ಇಫ್ತಾ ಸ್ಪೆಕ್ಟರ್, ರೆಲಿಕ್ ಶಫಿರ್ ಹಾಗೂ ಇಲಾನ್ ರಾಮೋನ್ ಹೀಗೆ 8 ಪೈಲಟ್್ಗಳು ಎಫ್-16 ವಿಮಾನಗಳನ್ನೇರಿದರು.
1981, ಜೂನ್ 7!
ಆಪರೇಶನ್ ಬ್ಯಾಬಿಲೋನ್ ಆರಂಭವಾಯಿತು. 2 ಸಾವಿರ ಪೌಂಡ್ ತೂಕದ ಬಾಂಬ್್ಗಳನ್ನು ಹೊತ್ತ ಯುದ್ಧವಿಮಾನಗಳು ಜೋರ್ಡಾನ್, ಸೌದಿಯನ್ನು ಮೂರ್ಖರನ್ನಾಗಿಸಿ ಇರಾಕ್ ಗಡಿಯೊಳಕ್ಕೆ ನುಸುಳಿದವು. ಹದಿನಾರರಲ್ಲಿ 8 ಬಾಂಬುಗಳು ರಿಯಾಕ್ಟರ್್ನ ಸ್ಥಾವರದ ಮೇಲೆ ಬಿದ್ದು ಸಂಪೂರ್ಣವಾಗಿ ನಾಶಪಡಿಸಿದವು. ಅಷ್ಟೇ ಅಲ್ಲ, ಅಷ್ಟೂ ಯುದ್ಧವಿಮಾನಗಳು ಸುರಕ್ಷಿತವಾಗಿ ಇಸ್ರೇಲ್್ಗೆ ಮರಳಿದವು! ಅದು ಅಣುಸ್ಥಾವರವೊಂದರ ಮೇಲೆ ನಡೆದ ವಿಶ್ವದ ಮೊದಲ ವಾಯುದಾಳಿಯಾಗಿತ್ತು! ಆ ದಾಳಿಯಿಂದ ಇರಾಕ್ ಮತ್ತೆಂದೂ ಚೇತರಿಸಿಕೊಳ್ಳಲಿಲ್ಲ. ಅಣಕವೆಂದರೆ 1981ರಲ್ಲಿ ಇರಾಕ್ ಅಣಸ್ಥಾವರವನ್ನು ನಾಶಪಡಿಸಲು ಯಾವ ದೇಶ ಸಹಕರಿಸಿತ್ತೋ ಅದೇ ಇರಾನ್ ಇಂದು ಅಣ್ವಸ್ತ್ರ ತಯಾರಿಸಲು, ಇಸ್ರೇಲನ್ನು ವಿಶ್ವಭೂಪಟದಿಂದಲೇ ನಾಶಪಡಿಸಲು ಮುಂದಾಗಿದೆ!!
“Peace will come when the Arabs will love their children more than they hate us”- ಹಾಗೆಂದಿದ್ದರು ಇಸ್ರೇಲಿನ ಲೆಜೆಂಡರಿ ಪ್ರಧಾನಿ ಗೋಲ್ಡಾ ಮೈರ್. ದುರದೃಷ್ಟವಶಾತ್, ಅರಬ್ಬರು ತಮ್ಮ ಮಕ್ಕಳನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಯಹೂದಿಗಳನ್ನು ದ್ವೇಷಿಸುತ್ತಾರೆ. ಹಾಗಾಗಿ ಉದ್ಧಾರವಾಗಬೇಕು ಎನ್ನುವುದಕ್ಕಿಂತ ಅನ್ಯಧರ್ಮೀಯರನ್ನು ನಾಶಪಡಿಸಬೇಕೆಂಬ ಇಚ್ಛೆಯೇ ಅವರಲ್ಲಿ ಉತ್ಕಟವಾಗಿದೆ. ಇಂತಹ ವಾಸ್ತವದ ಬೆನ್ನಲ್ಲೇ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(IAEA) ನೀಡಿರುವ ವರದಿಯಂತೂ ಇಸ್ರೇಲ್್ನ ಆತಂಕವನ್ನು ಇನ್ನೂ ಹೆಚ್ಚು ಮಾಡಿದೆ. ಅಣ್ವಸ್ತ್ರ ಅಭಿವೃದ್ಧಿ, ಯುದ್ಧತಲೆಗಳ ನಿರ್ಮಾಣ, ಅದನ್ನು ್ನಕೊಂಡೊಯ್ಯುವ ಯುದ್ಧವಿಮಾನಗಳ ಹೊಂದುವಿಕೆ ಎಲ್ಲ ವಿಭಾಗಗಳಲ್ಲೂ ಇರಾನ್ ಭಾರೀ ಪ್ರಗತಿ ತೋರುತ್ತಿದೆ. ಇನ್ನು 12ರಿಂದ 24 ತಿಂಗಳೊಳಗಾಗಿ ಇರಾನ್ ಒಂದು ಅಣ್ವಸ್ತ್ರ ರಾಷ್ಟ್ರವಾಗುವ ಎಲ್ಲ ಸಾಧ್ಯತೆಯೂ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ಇರಾನ್ ಮೇಲೆ ಕಟ್ಟುನಿಟ್ಟಾದ ಆರ್ಥಿಕ ದಿಗ್ಬಂಧನೆಗಳನ್ನು ಹೇರಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಯುರೋಪಿಯನ್ ದೇಶಗಳು ಸಿದ್ಧವಿದ್ದರೂ ವಿಟೋ ಅಧಿಕಾರ ಹೊಂದಿರುವ ಚೀನಾ ಹಾಗೂ ರಷ್ಯಾಗಳು ಉಲ್ಟಾ ಹೊಡೆದಿವೆ. ಅವು ಇರಾನ್್ಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿವೆ. ಈ ಅಪಾಯ ದಶಕದ ಹಿಂದೆಯೇ ಇಸ್ರೇಲ್್ನ ಗಮನಕ್ಕೆ ಬಂದಿತ್ತು. ಆಗ ಪ್ರಧಾನಿಯಾಗಿದ್ದ ಅರಿಯಾಲ್ ಶರಾನ್ “ಮೊಸಾದ್್’ನ ಹೊಸ ಮುಖ್ಯಸ್ಥ ಮೈರ್ ದಾಗನ್್ರನ್ನು ಕರೆದು ವಿಚಾರ ತಿಳಿಸಿದಾಗ, “ತಾನು ಇರಾನ್್ನ ಅಣು ಯೋಜನೆಯನ್ನು ತಡೆಯುವುದಾಗಿ ಅವರು ವಾಗ್ದಾನ ಮಾಡಿದ್ದರು. ಅಮೆರಿಕದ ಸಹಾಯ ಪಡೆದು ವೈರಸ್್ಗಳನ್ನು ಬಿಟ್ಟು ಕಂಪ್ಯೂಟರ್್ಗಳೇ ಸ್ಥಬ್ತವಾಗುವಂತೆ ಮಾಡಲಾರಂಭಿಸಿದರು. ಆಪರೇಶನ್ ಬ್ಯಾಬಿಲಾನ್ ತೆರನಾದ ದಾಳಿ ಬೇಡವೆಂದು ವಿಜ್ಞಾನಿಗಳನ್ನು ಕೊಲ್ಲುವ ಕಾರ್ಯಕ್ಕೆ ಇಸ್ರೇಲ್ ಕೈಹಾಕಿತು. 2010ರಿಂದ ಇದುವರೆಗೂ 6 ಇರಾನಿ ಅಣು ವಿಜ್ಞಾನಿಗಳನ್ನು ಇಸ್ರೇಲ್ ಹತ್ಯೆ ಮಾಡಿದೆ. ಮೊನ್ನೆ ಜನವರಿ 11ರಂದು ಮುಸ್ತಾಫಾ ಅಹ್ಮದಿ ರೋಶನ್ ಎಂಬ ಮತ್ತೊಬ್ಬ ವಿಜ್ಞಾನಿಯನ್ನು ಮ್ಯಾಗ್ನೆಟಿಕ್ ಬಾಂಬಿಟ್ಟು ಕೊಲೆಗೈದಿದೆ. ಇಂತಹ ಕ್ರಮಗಳು ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡುವುದನ್ನು ಕೆಲ ವರ್ಷಗಳ ಕಾಲ ವಿಳಂಬ ಮಾಡಿದವೇ ಹೊರತು ಇನ್ನು 24 ತಿಂಗಳಲ್ಲಿ ಇರಾನ್ ಅಣುರಾಷ್ಟ್ರವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗಿರುವಾಗ ಇಸ್ರೇಲ್ ಏನು ಮಾಡಬೇಕು? ಇಸ್ರೇಲನ್ನು ನಾಶ ಮಾಡುವುದೇ ತನ್ನ ಉದ್ದೇಶ ಎನ್ನುತ್ತಿರುವ ವ್ಯಕ್ತಿ(ಅಹ್ಮದಿಜೆನಾದ್) ಹಾಗೂ ರಾಷ್ಟ್ರ ಅಣ್ವಸ್ತ್ರ ಹೊಂದುವುದನ್ನು ನೋಡುತ್ತಾ ಕುಳಿತುಕೊಳ್ಳುವುದಾದರೂ ಹೇಗೆ? ಇಸ್ರೇಲ್ ಮುಂದೆ ಇರುವುದು ಎರಡೇ ಮಾರ್ಗಗಳು-ಒಂದು ಇರಾನ್ ಅಣ್ವಸ್ತ್ರ ಹೊಂದಲು ಬಿಟ್ಟು, ತನ್ನ ಬಳಿಯೂ ಅಣ್ವಸ್ತ್ರವಿರುವುದರಿಂದ ಯುದ್ಧಕ್ಕೆ ಕೈಹಾಕಿದರೆ ಇಬ್ಬರೂ ನಾಶವಾಗಬೇಕಾಗುತ್ತದೆ ಎಂಬ ಅಂಶವೇ ಇರಾನಿನ ಕೈಕಟ್ಟುತ್ತದೆ ಎಂದು ಭಾವಿಸುವುದು, ಇಲ್ಲವೇ ಆಪರೇಶನ್ ಬ್ಯಾಬಿಲೋನ್ ಥರದ ದಾಳಿಗೆ ಕೈಹಾಕುವುದು.
ಇರಾನ್-ಇಸ್ರೇಲ್ ಕಿತ್ತಾಡಿದರೆ ನಮಗೇನಂತೆ?
ಹಾಗೆಂದು ಕುಳಿತುಕೊಳ್ಳಲು ಸಾಧ್ಯವಿಲ್ಲ. 2007ರಲ್ಲಿ ಇದೇ ಪ್ರಶ್ನೆ ಎದುರಾಗಿತ್ತು. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯು ಇರಾನ್ ವಿರುದ್ಧ ದಿಗ್ಬಂಧನೆ ಹೇರಲು ಮುಂದಾಗ ಮತದಾನದ ವೇಳೆ ಭಾರತ ತೆಗೆದುಕೊಳ್ಳುವ ನಿರ್ಧಾರ ನಿರ್ಣಾಯಕವಾಗಿತ್ತು. ನಮ್ಮ ಕಮ್ಯುನಿಸ್ಟರು, “ಸಿಕ್ಯು’ಲರ್್ವಾದಿಗಳು, ತಥಾಕಥಿತ ವಿರೋಧಿಗಳು ಭಾರತ ಇರಾನ್ ಪರವಾಗಿ ಮತಹಾಕುವಂತೆ ಒತ್ತಡ ಹೇರಿದ್ದರು. ಅದೇ ವೇಳೆಗೆ ಭಾರತ-ಅಮೆರಿಕ ನಾಗರಿಕ ಅಣು ಸಹಕಾರ ಒಪ್ಪಂದವೂ ನಿರ್ಣಾಯಕ ಹಂತದಲ್ಲಿತ್ತು. ಆ ಒತ್ತಡ ಹಾಗೂ ಕೆಲ ಪರಿಗಣನೆಗಳಿಂದಾಗಿ ಯುಪಿಎ ಸರ್ಕಾರ IAEAಯಲ್ಲಿ ಇರಾನ್ ವಿರುದ್ಧ ಮತಹಾಕಿತು. ಅಷ್ಟೇ ಅಲ್ಲ, “We don’t want one more nuclear neighbour’ ಎಂದು ಸಾರ್ವಜನಿಕವಾಗಿ ಹೇಳಿದ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಇರಾನ್ ಅಣ್ವಸ್ತ್ರ ಹೊಂದುವುದನ್ನು ದಿಟ್ಟವಾಗಿ ವಿರೋಧಿಸಿದ್ದರು. ಹೌದು, ಇರಾನ್ ಅಣ್ವಸ್ತ್ರ ಹೊಂದುವುದು ನಮಗೂ ಒಳ್ಳೆಯದೇನಲ್ಲ. ನೀವೇ ಹೇಳಿ, ಒಂದು ವೇಳೆ ಭಾರತ ಮತ್ತು ಪಾಕ್ ನಡುವೆ ಯುದ್ಧವೇರ್ಪಟ್ಟರೆ ಇರಾನ್ ಯಾರನ್ನು ಬೆಂಬಲಿಸುತ್ತದೆ? ಮುಸ್ಲಿಂ ರಾಷ್ಟ್ರಗಳಿಂದಲೇ ಕೂಡಿರುವ ಆರ್ಗನೈಜೇಶನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್ (OIC) ಅನ್ನು ಇಂದು ಲೆಕ್ಕಿಸಬೇಕಿಲ್ಲ. ಆದರೆ 21ನೇ ಶತಮಾನಕ್ಕೂ ಮೊದಲು ಈ OIC ಭಾರತಕ್ಕೆ ದೊಡ್ಡ ತಲೆನೋವಾಗಿತ್ತು. ಪ್ರತಿ ವರ್ಷವೂ ನಡೆಯುತ್ತಿದ್ದ OIC ಶೃಂಗದಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನ ಗೊತ್ತುವಳಿಯೊಂದನ್ನು ಹೊರಡಿಸುತ್ತಿತ್ತು. ಅದಕ್ಕೆ ಸರ್ವಾನುಮತದ ಅಂಗಿಕಾರ ದೊರೆಯುತ್ತಿತ್ತು. ಇರಾನ್ ಸೇರಿದಂತೆ ಎಲ್ಲ ರಾಷ್ಟ್ರಗಳೂ ಅದನ್ನು ಬೆಂಬಲಿಸುತ್ತಿದ್ದವು. ಅವರಲ್ಲಿರುವ ಇಸ್ಲಾಮಿಕ್ ಬ್ರದರ್್ಹುಡ್ ದೇಶಗಳ ಎಲ್ಲೆಮೀರಿ ಎಲ್ಲರನ್ನೂ ಒಂದು ಮಾಡಿಬಿಡುತ್ತದೆ. 1991ರಲ್ಲಿ ಮೊದಲ ಕೊಲ್ಲಿ ಯುದ್ಧ(ಇರಾಕ್) ನಡೆದಾಗ ಅಮೆರಿಕದ ವಿಮಾನಗಳಿಗೆ ಅಂತಾರಾಷ್ಟ್ರೀಯ ನಿಯಮದಂತೆ ಬಾಂಬೆಯಲ್ಲಿ ರೀಫ್ಯುಯೆಲಿಂಗ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಮ್ಮ ಮುಸ್ಲಿಮರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಾಳೆ ಇಸ್ರೇಲ್ ಏನಾದರೂ ಇರಾನ್ ಮೇಲೆ ದಾಳಿ ಮಾಡಿದರೆ ಕಟ್ಟರ್್ವಾದಿ ಮುಸ್ಲಿಮರು ಭಾರತದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಾರೆ. ಇವತ್ತು ಅಮೆರಿಕ, ಅದರಲ್ಲೂ ಜಾರ್ಜ್್ಬುಷ್ ಹಾಗೂ ಇಸ್ರೇಲನ್ನು ಯಾರೆಷ್ಟೇ ಟೀಕಿಸಿದರೂ ಅವರಿಂದ ನಮಗಾದ ಲಾಭವನ್ನು ಮರೆಯುವಂತಿಲ್ಲ. ಒಂದು ವೇಳೆ 2001ರಲ್ಲಿ ಅಮೆರಿಕವೇನಾದರೂ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ತಾನಿಬಾನನ್ನು ನಾಶಪಡಿಸದೇ ಹೋಗಿದ್ದರೆ ಅಲ್ಲಿನ ಭಯೋತ್ಪಾದಕರು ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು ಜಿಹಾದ್ ನಡೆಸುತ್ತಾ ಇರುತ್ತಿದ್ದರು. ಇಸ್ರೇಲಂತೂ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಅತ್ಯಾಧುನಿಕ ಯುದ್ಧಸಾಮಗ್ರಿಗಳನ್ನು ನೀಡಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ದಿನವೊಂದಕ್ಕೆ ಕನಿಷ್ಠ 30 ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿದ್ದ ಇಸ್ರೇಲ್್ನ ನೋವನ್ನು ನಾವು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಮುಸ್ಲಿಂ ಭಯೋತ್ಪಾದಕರಿಗೆ ಅರ್ಥವಾಗುವುದು ಬುಲೆಟ್್ನ ಭಾಷೆಯೊಂದೇ. ಆ ಕಾರಣಕ್ಕಾಗಿಯಾದರೂ ನಾವು ಇಸ್ರೇಲನ್ನು ಬೆಂಬಲಿಸಬೇಕು.
“If the Arabs (Muslims) put down their weaponstoday there would be no more violence. If the Israelis put down their weapons today there would be no more Israel!!”-
ಒಂದು ವೇಳೆ ಅರಬ್ಬರು ಬಂದೂಕು ಕೆಳಗಿಟ್ಟರೆ ಹಿಂಸೆ ಎನ್ನುವುದೇ ಇಲ್ಲವಾಗುತ್ತದೆ, ಆದರೆ ಇಸ್ರೇಲಿಗಳು ಶಸ್ತ್ರಾಸ್ತ್ರ ಕೆಳಗಿಟ್ಟರೆ ಇಸ್ರೇಲ್ ರಾಷ್ಟ್ರವೇ ಇಲ್ಲದಾಗುತ್ತದೆ ಎಂದು 2004ರಲ್ಲಿ ಇಸ್ರೇಲಿ ಪತ್ರಿಕೆಯೊಂದು ಬರೆದಿತ್ತು. ಅದರಲ್ಲಿ ನಮಗೂ ಒಂದು ಸಂದೇಶವಿದೆಯೆನಿಸುವುದಿಲ್ಲವೆ?
- ಕೃಪೆ: ಪ್ರತಾಪ ಸಿಂಹ


ಗುರುವಾರ, ಜನವರಿ 12, 2012

ಸ್ವಾಮಿ ವಿವೇಕಾನಂದ

1893ರ ಸೆಪ್ಟೆಂಬರ್ 11ರಂದು ಅಮೆರಿಕಾದ ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸುನಂತಹುದು.

ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 118 ವರ್ಷಗಳ ಹಿಂದೆ ಅವರು ನುಡಿದ ಆ ನುಡಿಗಳು ಇಂದಿಗೂ ಯುವಜನತೆಗೆ ಪ್ರೇರಣಾದಾಯಿಯಾಗಿವೆ. ಅಮೆರಿಕದ ಜನತೆಯನ್ನು ಸಹೋದರ ಸಹೋದರಿಯರೆ ಎಂದು ಉದ್ದೇಶಿಸಿ ಕಂಚಿನ ಕಂಠದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಲ್ಲಿ ಕೇಳಿ. ಸಾಧ್ಯವಾದರೆ ಅವರು ಸಾರಿದ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. [ಶಿಕಾಗೋ ಭಾಷಣ ಕೇಳಿರಿ]

39 ವರ್ಷದಲ್ಲಿಯೇ ಅಗಾಧವಾದುದನ್ನು ಸಾಧಿಸಿದ ಆ ಮಹಾನ್ ಸಂತನನ್ನು ಪಡೆದ ಈ ಭಾರತ ಮಾತೆ ಮಾತ್ರವಲ್ಲ ಅವರನ್ನು ಹೆತ್ತ ಅಮ್ಮ ಭುವನೇಶ್ವರಿ ಕೂಡ ಧನ್ಯಳು. ಇದೇ ದಿನ ಅಂದರೆ, ಜನವರಿ 12, 1863ರಂದು ಭುವನೇಶ್ವರಿ ದೇವಿಯ ಗರ್ಭದಲ್ಲಿ ಕೋಲ್ಕತಾದಲ್ಲಿ ನರೇಂದ್ರನಾಥ ದತ್ತರಾಗಿ ವಿವೇಕಾನಂದರು ಜನಿಸಿದರು. ಬಾಲ್ಯದಲ್ಲಿ ತಾಯಿಯಿಂದ ಕಲಿತ ಜೀವನದ ಅತ್ಯಮೂಲ್ಯ ಪಾಠಗಳೇ ವಿವೇಕಾನಂದರನ್ನು ಆ ಮಟ್ಟಕ್ಕೆ ಬೆಳೆಸಲು ಸಾಧ್ಯವಾಯಿತು.

ಧಾರ್ಮಿಕ ಭಾವನೆಯವಳಾಗಿದ್ದ ಭುವನೇಶ್ವರಿ ದೇವಿಯಿಂದ ಭಕ್ತಿಯ ಜೊತೆಗೆ ತಮ್ಮನ್ನು ತಾವು ನಿಗ್ರಹಿಸುವುದನ್ನು ವಿವೇಕಾನಂದರು ಕಲಿತರು. ಅವರು ತಾಯಿ ಹೇಳಿದ "ನಿರ್ಮಲ ಜೀವನ ಸಾಗಿಸು, ಗೌರವದಿಂದ ಬಾಳು, ಅನ್ಯರ ಗೌರವಕ್ಕೆ ಧಕ್ಕೆ ತರಬೇಡ. ಯಾವಾಗಲೂ ಶಾಂತವಾಗಿರು. ಆದರೆ, ಅವಶ್ಯಕತೆ ಬಿದ್ದಾಗ ಸಿಡಿದೇಳು" ಎಂಬ ನುಡಿಗಳು ಎಲ್ಲ ಭಾರತೀಯರಿಗೆ ಅನ್ವಯವಾಗುತ್ತದೆ. ಅತ್ಯುತ್ತಮ ಮೌಲ್ಯಗಳನ್ನು ಬೋಧಿಸಿದ ಆ ಮಾತೆಯನ್ನು ಪಡೆದ ಈ ಭಾರತ ಕೂಡ ಧನ್ಯ. ಆಕೆಯನ್ನು ನಮಿಸೋಣ.
 ಕೃಪೆ : kannada.oneindia.in

ಭಾನುವಾರ, ಜನವರಿ 8, 2012

ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!

ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು?
Look down at your feet! The road that is under your feet is the road you have passed over and is the same road that you see before. It will be soon under your feet, March on!!
ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಸ್ವಾಮಿ ವಿವೇಕಾನಂದರು ಹಿಮಾಲಯವನ್ನು ಏರುತ್ತಿರುತ್ತಾರೆ. ಅವರ ಜತೆಗಿದ್ದ ಸನ್ಯಾಸಿಯೊಬ್ಬ ಇನ್ನು ನನ್ನಿಂದ ನಡೆಯಲಾಗುವುದಿಲ್ಲ ಎಂದು ಅಲ್ಲಿಯೇ ಕುಳಿತು ಬಿಡುತ್ತಾನೆ. ಆಗ ವಿವೇಕಾನಂದರು ಈ ಪ್ರೇರಕ ನುಡಿಗಳನ್ನಾಡುತ್ತಾರೆ-’ಒಮ್ಮೆ ತಿರುಗಿ ನೋಡು. ನೀನು ಹಿಂದೆ ಯಾವ ರಸ್ತೆಯನ್ನು ಕ್ರಮಿಸಿ ಬಂದಿದ್ದಿಯೋ, ಮುಂದೆ ಇರುವುದೂ ಅದೇ ರಸ್ತೆ. ಹೆಜ್ಜೆ ಹಾಕು, ಅದೂ ಕ್ಷಣಮಾತ್ರದಲ್ಲಿ ಸಾಗಿಬಿಡುತ್ತದೆ.
Conquer
ಮುನ್ನುಗ್ಗು
ಡೋಂಟ್ ಲುಕ್್ಬ್ಯಾಕ್
ಗೋ ಅಹೆಡ್
ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಓದಿದರೆ ಇಂತಹ ಮಾತುಗಳೇ ಹೆಚ್ಚಾಗಿ ಕಾಣುತ್ತವೆ. ಅವರು ನಿಜವಾದ “Youth Icon’ ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಅರ್ಥಗರ್ಭಿತವೆನಿಸುತ್ತದೆ. ಅವರೊಬ್ಬ ಸನ್ಯಾಸಿ, ಹಿಂದು ಧರ್ಮೋದ್ಧಾರಕ ಮಾತ್ರವಾಗಿರಲಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವ ಗುಣನೀತಿಗಳನ್ನು ಅಳವಡಿಸಿಕೊಳ್ಳಬೇಕೋ ಅವುಗಳ ಸಾಕಾರಮೂರ್ತಿಯೂ ಆಗಿದ್ದರು. ವಿಶ್ವಧರ್ಮ ಸಮ್ಮೇಳನದ ನಂತರ ಯೂರೋಪ್ ಪ್ರವಾಸದಲ್ಲಿದ್ದ ವಿವೇಕಾನಂದರ ವೇಷಭೂಷಣಗಳನ್ನು ಕಂಡ ಬ್ರಿಟಿಷನೊಬ್ಬ, ‘ಒಬ್ಬ ಜಂಟಲ್್ಮನ್ ಥರ ಡ್ರೆಸ್ ಮಾಡಿಕೊಳ್ಳುವುದಕ್ಕಾಗುವುದಿಲ್ಲವೇ?’ ಎಂದು ಕಿಚಾಯಿಸುತ್ತಾನೆ. ‘ನಿಮ್ಮ ಸಂಸ್ಕೃತಿಯಲ್ಲಿ ಬಟ್ಟೆಯಿಂದ ಒಬ್ಬ ವ್ಯಕ್ತಿ ಜಂಟಲ್್ಮನ್ ಹೌದೋ ಅಲ್ಲವೋ ಎಂಬುದನ್ನು ಅಳೆಯುತ್ತೀರಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಒಬ್ಬನ ಚಾರಿತ್ರ್ಯದ ಮೇಲೆ ಅದು ನಿರ್ಧಾರಿತವಾಗುತ್ತದೆ’ ಎಂದು ವಿವೇಕಾನಂದರು ಹೇಳಿದಾಗ ಬ್ರಿಟಿಷನು ತಲೆತಗ್ಗಿಸಿ ನಿಲ್ಲುವಂತಾಗುತ್ತದೆ. ವಿವೇಕಾನಂದರ ಮಾತುಗಳೇ ಹಾಗೆ, ಗುಂಡಿಗಿಂತ ಬಲಿಷ್ಠ.
ಅವರ ಮೂಲ ಹೆಸರು ನರೇಂದ್ರ. ಒಮ್ಮೆ ತರಗತಿಯ ಜಿಯೋಗ್ರಫಿ ಮೇಷ್ಟ್ರು ತಪ್ಪು ಉತ್ತರ ಕೊಟ್ಟನೆಂಬ ಕಾರಣಕ್ಕೆ ನರೇಂದ್ರನನ್ನು ದಂಡಿಸುತ್ತಾರೆ. ಆದರೆ ತಾನು ಕೊಟ್ಟಿದ್ದು ಸರಿಯಾದ ಉತ್ತರವನ್ನೇ ಎಂದು ನರೇಂದ್ರನಿಗೆ ಗೊತ್ತಿತ್ತು. ಹಾಗಾಗಿ ನರೇಂದ್ರ ವಾದಕ್ಕಿಳಿಯುತ್ತಾನೆ. ಕುಪಿತರಾದ ಮೇಷ್ಟ್ರು, ‘ತಪ್ಪು ಉತ್ತರ ಹೇಳಿದ್ದಲ್ಲದೆ, ವಾದ ಮಾಡುತ್ತೀಯಾ?’ ಎಂದು ಮತ್ತೆರಡು ಭಾರಿಸುತ್ತಾರೆ. ಈ ಘಟನೆಯಿಂದ ನೊಂದ ನರೇಂದ್ರ ಅಳುತ್ತಲೇ ಮನೆಗೆ ಬರುತ್ತಾನೆ. ಏನಾಯಿತೆಂದು ಅಮ್ಮ ಕೇಳುತ್ತಾಳೆ. ಆಗ ನಡೆದ ಘಟನೆಯನ್ನು ಹೇಳುತ್ತಾನೆ. ನಾನು ಸರಿಯಾದ ಉತ್ತರ ಹೇಳಿದರೂ ಮೇಷ್ಟ್ರು ದಂಡಿಸಿದರು ಎಂದಾಗ, ಅಮ್ಮ ಹೇಳುತ್ತಾಳೆ- Follow the truth always no matter what happens!! ಇದು ನರೇಂದ್ರನ ಮೇಲೆ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ಆತ ಬೆಳೆದು ದೊಡ್ಡವನಾಗಿ ಸ್ವಾಮಿ ವಿವೇಕಾನಂದರಾದ ಮೇಲೆ ಹೇಳುತ್ತಾರೆ-”Everything can be sacrificed for truth, but truth cannot be sacrificed for anything!” ಸ್ವಾಮಿ ವಿವೇಕಾನಂದರ ಅಮೆರಿಕದ ಶಿಷ್ಯೆ ಮಿಸ್ ಮ್ಯಾಕ್್ಲಾರ್ಡ್ ಹೀಗೆ ಹೇಳುತ್ತಾಳೆ-’ನಾನು ಈ ಆಧುನಿಕ ಪ್ರಪಂಚದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ. ಮೊದಲನೆಯವರು ಜರ್ಮನಿಯ ಚಕ್ರವರ್ತಿ ಕೈಸರ್ ಹಾಗೂ ಎರಡನೆಯವರು ಸ್ವಾಮಿ ವಿವೇಕಾನಂದ’. ಆಕೆಯೇ ಮುಂದುವರಿದು ‘ಈ ಇಬ್ಬರ ನಡುವೆ ಇರುವ ವ್ಯತ್ಯಾಸವೇನು?’ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಹಾಗೂ ಅವಳೇ ಉತ್ತರಿಸುತ್ತಾಳೆ. ‘ಒಂದು ವೇಳೆ ನೀವೇನಾದರೂ ಕೈಸರ್ ಎದುರು ನಿಂತರೆ ತೀರಾ ಕುಬ್ಜರಾಗಿ ಕಾಣುತ್ತೀರಿ, ಸಣ್ಣ ಧೂಳಿನ ಕಣದಂತೆ ಭಾಸವಾಗುತ್ತೀರಿ. ಆದರೆ ಸ್ವಾಮಿ ವಿವೇಕಾನಂದರಂಥ ಆಧ್ಯಾತ್ಮ ಶಕ್ತಿಯ ಎದುರು ನಿಂತಾಗ ನಿಮಗೆ ನೀವೇ ಬೃಹದಾಕಾರವಾಗಿ ಕಾಣುತ್ತೀರಿ, ಉಬ್ಬಿಹೋಗುತ್ತೀರಿ, ನಿಮ್ಮೊಳಗೂ ಒಬ್ಬ ದೊಡ್ಡ ವ್ಯಕ್ತಿ ಇದ್ದಾನೆ ಎಂದನಿಸುತ್ತದೆ. ಏಕೆಂದರೆ ಅವರ ಪ್ರೇರಕ ಮಾತುಗಳು ಹಾಗಿರುತ್ತವೆ’! “Before any wordly greatness you feel very small, Before any spiritual greatness like Swami Vivekananda you feel very strong! ಎಂದು ಆಕೆ ವಿವರಿಸುತ್ತಾಳೆ. 1893ರಲ್ಲಿ ವಿಶ್ವಧರ್ಮ ಸಮ್ಮೇಳವನ್ನುದ್ದೇಶಿ ಸ್ವಾಮಿ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿ ಮೂಕವಿಸ್ಮಿತನಾದ ಅಮೆರಿಕದ ಪತ್ರಕರ್ತನೊಬ್ಬ Columbus discovered the soil of America, Vivekananda discovered the Soul of America!”ಎಂದು ಮರುದಿನ ಪತ್ರಿಕೆಯಲ್ಲಿ ಬರೆಯುತ್ತಾನೆ.
ಹೌದು, ಅವರು ಹಿಂದು ಧರ್ಮದ ನಿಜವಾದ ರಾಯಭಾರಿ!
ವಿಶ್ವಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಆಗಮಿಸಿದಾಗ, ‘ಬುದ್ಧ ಏಷ್ಯಾಗೆ ಸಂದೇಶವನ್ನು ತಂದಂತೆ, ನಾನು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಸಂದೇಶವನ್ನು ತಂದಿದ್ದೇನೆ’ ಎಂದು ವಿವೇಕಾನಂದರು ಹೇಳುತ್ತಾರೆ. ಅವರನ್ನು ‘ಹಿಂದೂ ಧರ್ಮದ ರಾಯಭಾರಿ’ ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the global face of India. He was the first Ambassador of modern India to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಶನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ ಐಟಿಜ್ಝಛಟಿ ಜಝ್ಟಿಡ, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ತುಂಬ articulate AW, extemporeಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್್ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life”‘ (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!
ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್್ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, ‘ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಪಟ್ಟು ಹೆಚ್ಚಾಯಿತು’ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, If Gandhiji is the father of the nation, then Vivekananda is the grandfather of the nationಿ ಎಂದು ಹೇಳಬಹುದಲ್ಲವೇ?!
ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್್ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, ‘ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ’ ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-’ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ’!
ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!
ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- ‘ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?’ ಎನ್ನುತ್ತಾರೆ. ಮತಾಂತರದ ಬಗ್ಗೆ ಅವರು ಹೇಳಿದ್ದೇನು ಗೊತ್ತೆ?-”ಹಿಂದುವೊಬ್ಬ ಮತಾಂತರಗೊಂಡರೆ ನಮ್ಮ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ”. ಇಂತಹ ಸ್ವಾಮಿ ವಿವೇಕಾನಂದರು ಜನಿಸಿದ್ದು 1863, ಜನವರಿ 12ರಂದು. ಇದೇ ತಿಂಗಳ 12ಕ್ಕೆ ಅವರ 150ನೇ ಜನ್ಮದಿನ. ಈ ದೇಶ ಹಾಗೂ ಸನಾತನ ಧರ್ಮವನ್ನು ತಾಯಿಯಂತೆ ಪ್ರೀತಿಸುವುದು, ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ.
- ಕೃಪೆ: ಪ್ರತಾಪ ಸಿಂಹ

ಮಂಗಳವಾರ, ಜನವರಿ 3, 2012

ಚೀನಾದ ವಿರುದ್ಧ ಇವರ ಪೌರುಷ ಸತ್ತು ಬಿದ್ದಿದೆ ಏಕೆ?

ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?!
‘ನಮ್ಮ ಜಮ್ಮು-ಕಾಶ್ಮೀರವನ್ನು “ವಿವಾದಿತ ಪ್ರದೇಶ’ ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ “ಮಹಾ ಚೀನಾ’ ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ ಚೀನಾದ ಸಾರ್ವಭೌಮತೆಯನ್ನೂ ಪ್ರಶ್ನಿಸಬೇಕು. ಚೀನಾದ ವಿಷಯದಲ್ಲಿ ಬಾಗಿ ಶರಣಾಗುವ ಬದಲು ಭಾರತ ಇನ್ನಾದರೂ ಬೆನ್ನುಹುರಿ ತೋರಬೇಕು’.
ಹಾಗಂತ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಡಿಸೆಂಬರ್ 5ರಂದು ಕೇಂದ್ರ ಸರ್ಕಾರಕ್ಕೆ ಕರೆಕೊಟ್ಟಿದ್ದಾರೆ!
ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ 1998ರಲ್ಲೇ ಚೀನಾವೇ ನಮ್ಮ “Enemy No.1′ ಎನ್ನುವ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದರು. 1962ರ ಯುದ್ಧದ ನಂತರ ಯಾವ ಭಾರತೀಯನೂ ಚೀನಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಾಗಲಿ, ವಿಶ್ವಾಸವನ್ನಾಗಲಿ ಹೊಂದಿಲ್ಲ. ಇಷ್ಟಕ್ಕೂ ಚೀನಾದ ಬಗ್ಗೆ ಈ ಪರಿ ಸಂಶಯ, ಶಂಕೆ, ಅನುಮಾನ ಮನೆಮಾಡಲು ಕಾರಣವಾದ ಘಟನೆಗಳಾದರೂ ಯಾವುವು? ನಾವೇಕೆ ಚೀನಾವನ್ನು ನಂಬಿಕೂರುವ ಸ್ಥಿತಿಯಲ್ಲಿಲ್ಲ? ಉಮರ್ ಅಬ್ದುಲ್ಲಾ ಇಂಥದ್ದೊಂದು ಹೇಳಿಕೆ ನೀಡಲು ಕಾರಣವಾದರೂ ಏನು?
1. ಕಳೆದ 2 ವರ್ಷಗಳಿಂದ ಭಾರತ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಚೀನಾ ಇಂದಿಗೂ ನಮ್ಮ ಜಮ್ಮು-ಕಾಶ್ಮೀರದವರ ಪಾಸ್್ಪೋರ್ಟ್್ಗೆ ಶಿಕ್ಕಾ ಹಾಕುವ ಬದಲು ಪ್ರತ್ಯೇಕ ಹಾಳೆಯಲ್ಲಿ ವೀಸಾ (Stapled Visa) ನೀಡುತ್ತದೆ.
2. ಅರುಣಾಚಲ ಪ್ರದೇಶದವರಿಗಂತೂ ವೀಸಾವನ್ನೇ ಕೊಡುವುದಿಲ್ಲ. ಏಕೆಂದರೆ ಅರುಣಾಚಲ ಪ್ರದೇಶ ತನ್ನದು, ಅಲ್ಲಿನ ಜನ ಚೀನಾಕ್ಕೆ ಆಗಮಿಸಲು ವೀಸಾ ಅಗತ್ಯವಿಲ್ಲ ಎನ್ನುತ್ತಿದೆ.
3. 2007ರಲ್ಲಿ ಬೀಜಿಂಗ್್ಗೆ ಹೊರಟಿದ್ದ ನಮ್ಮ 100 ಐಎಎಸ್ ಅಧಿಕಾರಿಗಳ ಅಧ್ಯಯನ ಪ್ರವಾಸವನ್ನೇ ರದ್ದು ಮಾಡಬೇಕಾಯಿತು. ಏಕೆಂದರೆ ಅದರಲ್ಲಿದ್ದ ಒಬ್ಬ ವ್ಯಕ್ತಿ ಅರುಣಾಚಲ ಪ್ರದೇಶದವರಾಗಿದ್ದರು, ಅವರಿಗೆ ಚೀನಾ ವೀಸಾ ನೀಡಲಿಲ್ಲ. ಅದಕ್ಕೆ ಪ್ರತಿಭಟನೆ ರೂಪದಲ್ಲಿ ಭಾರತ ಪ್ರವಾಸವನ್ನೇ ರದ್ದು ಮಾಡಿತು. ಅರುಣಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿ ಗೇಗಾಂಗ್ ಅಪಾಂಗ್್ಗೂ ಚೀನಾ ವೀಸಾ ನಿರಾಕರಿಸಿತ್ತು.
4. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಏಷ್ಯನ್ ಡೆವೆಲಪ್್ಮೆಂಟ್ ಬ್ಯಾಂಕಿನಿಂದ ಬರಬೇಕಿದ್ದ ಸಹಾಯನಿಧಿಗೆ ಚೀನಾದ ಅಡ್ಡಗಾಲು.
5. 2010, ಅಗಸ್ಟ್್ನಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಅದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು!
ಇದು ನಿಮಗೆ ಚೀನಾದ ಉದ್ಧಟತನವೆನಿಸುವುದಿಲ್ಲವೆ? ಇಂತಹ ದಾರ್ಷ್ಟ್ಯಕ್ಕೆ ಕಾರಣವಾದರೂ ಏನು? ಅಥವಾ ಚೀನಾದ ನೈಜ ಉದ್ದೇಶವನ್ನು, ನೈಜ ಮುಖವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತ ವಿಫಲವಾಯಿತೇ? ಅಥವಾ ಅರ್ಥಮಾಡಿಕೊಂಡರೂ ನಮ್ಮ ಆಳುವ ನಾಯಕರಲ್ಲಿದ್ದ ಕ್ಷಾತ್ರ ಗುಣದ ಕೊರತೆಯೇ ಚೀನಾವೆಂಬ ಬಹುದೊಡ್ಡ ಅಪಾಯದ ಸೃಷ್ಟಿಗೆ ಕಾರಣವಾಯಿತೆ?
ಈ ಸಂಶಯ ಖಂಡಿತ ಕಾಡುತ್ತಿದೆ!
‘ಟಿಬೆಟ್ ಹಸ್ತವಿದ್ದಂತೆ. ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ North East Frontier Agency (ಅರುಣಾಚಲ ಪ್ರದೇಶ) ಅದರ 5 ಬೆರಳುಗಳಿದ್ದಂತೆ. ಅವುಗಳನ್ನು ಸ್ವತಂತ್ರಗೊಳಿಸಬೇಕು’ ಎಂದು ಚೀನಿ ನಾಯಕ ಮಾವೋ ಝೆಡಾಂಗ್ 6 ದಶಕಗಳ ಹಿಂದೆಯೇ ಸಾರ್ವಜನಿಕವಾಗಿ ಹೇಳಿದ್ದರು! ಅವರ ಧೂರ್ತ ಯೋಚನೆ ಹಾಗೂ ಯೋಜನೆ 1946ರಲ್ಲಿಯೇ ಬಹಿರಂಗವಾಗಿತ್ತು. 1950ರ ನಂತರವಂತೂ, “ತೈವಾನ್ ಟಿಬೆಟ್ ಹಾಗೂ ಹೈನನ್ ದ್ವೀಪಗಳನ್ನು ಮರುವಶಪಡಿಸಿಕೊಳ್ಳಲಾಗುವುದು’ ಎಂದು ಪದೇ ಪದೆ ಹೇಳಲಾರಂಭಿಸಿದ್ದರು. 1949ರಲ್ಲಿ ಕಮ್ಯೂನಿಸ್ಟರು ಚೀನಾದ ಚುಕ್ಕಾಣಿ ಹಿಡಿದ ನಂತರ ಹೊರಬಂದ ಚೀನಾದ ಭೂಪಟ ಕೊರಿಯಾ, ಮಂಗೋಲಿಯಾ, ಬರ್ಮಾ, ಮಲೇಷಿಯಾ, ಟಿಬೆಟ್, ನೇಪಾಳ, ಸಿಕ್ಕಿಂ, ಭೂತಾನ್್ಗಳನ್ನೂ ಒಳಗೊಂಡಿತ್ತು. ಇಷ್ಟಾಗಿಯೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು ಎಚ್ಚೆತ್ತುಕೊಳ್ಳಲೇ ಇಲ್ಲ. 1959ರಲ್ಲಿ ಚೀನಾ ಟಿಬೆಟ್ಟನ್ನು ಕಬಳಿಸಿದಾಗಲೂ ನೆಹರು ನಿದ್ರೆಯಿಂದೇಳಲೇ ಇಲ್ಲ. ಅದರ ಫಲವೇ 1962ರ ಯುದ್ಧ. ಅದರಲ್ಲಿ ನಮ್ಮ ಲಡಾಕ್್ನ 37 ಸಾವಿರ ಚದುರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿತು. ಒಂದು ಕಾಲದಲ್ಲಿ ಅರುಣಾಚಲ ಪ್ರದೇಶ ಕೂಡ ಟಿಬೆಟ್್ನ ಒಂದು ಭಾಗವಾಗಿತ್ತು. ಬ್ರಿಟಿಷರು ಮ್ಯಾಕ್್ಮಹೋನ್ ರೇಖೆ ಎಳೆದ ಮೇಲೆ ಅರುಣಾಚಲ ಪ್ರದೇಶ ಪ್ರತ್ಯೇಕಗೊಂಡು ಭಾರತಕ್ಕೆ ಸೇರಿತು. ಹಾಗಾಗಿ ಅದನ್ನೂ ಸ್ವತಂತ್ರಗೊಳಿಸಬೇಕು, ಅಂದರೆ ತನ್ನದಾಗಿಸಿಕೊಳ್ಳಬೇಕೆಂದು ಚೀನಾ ಹೊರಟಿದೆ. ಅದರ ಫಲವೇ ವೀಸಾ ನಿರಾಕರಣೆ! ಲಡಾಕ್ ಸಂಪೂರ್ಣವಾಗಿ ದೊರೆತಿಲ್ಲವೆಂಬ ಕಾರಣಕ್ಕೆ ನೀಡುತ್ತಿರುವುದೇ Stapled Visa! ನಮ್ಮಲ್ಲಿ “ಬೆರಳು ತೋರಿದರೆ ಹಸ್ತ ನುಂಗುತ್ತಾರೆ’ ಎಂಬ ಮಾತು ಜನಜನಿತವಾಗಿದೆ. ಆದರೆ ಹಸ್ತವನ್ನೇ ಮೊದಲು ನುಂಗಿರುವ ಚೀನಾ ಇನ್ನು ಬೆರಳುಗಳನ್ನು (ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ ಅರುಣಾಚಲ ಪ್ರದೇಶ) ಬಿಟ್ಟೀತೆ?
ಅದರ ಸೂಚನೆಗಳು ಈಗಾಗಲೇ ಸಿಕ್ಕಿವೆ!
ಕಳೆದ ಒಂದು ವರ್ಷದಲ್ಲಿ ಚೀನಾ ಸುಮಾರು 300ಕ್ಕೂ ಹೆಚ್ಚು ಭಾರಿ ಗಡಿ ನಿಯಮ ಉಲ್ಲಂಘನೆ ಮಾಡಿದೆ. ಮತಾಂಧ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಆಕ್ರಮಿತ ಕಾಶ್ಮೀರದ ಗಿಲ್ಗಿಟ್್ನಲ್ಲಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚೀನಾ ತನ್ನ 11 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ. ತುರ್ತು ಪರಿಸ್ಥಿತಿ ಎದುರಾದರೆ, ಅಂದರೆ ತುರ್ತಾಗಿ ಯುದ್ಧ ಮಾಡಬೇಕಾದ ಸಂದರ್ಭ ಬಂದರೆ ಕೇವಲ 21 ದಿನಗಳಲ್ಲಿ 5 ಲಕ್ಷ ಸೈನಿಕರನ್ನು ಭಾರತದ ಗಡಿಗೆ ತಂದು ನಿಲ್ಲಿಸುವ ತಾಕತ್ತು ಚೀನಾಕ್ಕಿದೆ ಎಂದು 2010 ಏಪ್ರಿಲ್್ನಲ್ಲಿ ನಮ್ಮ ಸೇನಾಪಡೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ! ಟಿಬೆಟ್ ಭಾರತ ಗಡಿಯುದ್ದಕ್ಕೂ ಚಾಚಿದಂತೆ 1142 ಕಿ. ಮೀ. ರೈಲು ಹಳಿ ಹಾಕಿರುವ ಚೀನಾ, ಅದನ್ನು ಕಠ್ಮಂಡು, ಮ್ಯಾನ್ಮಾರ್, ಭೂತಾನ್, ಪಾಕಿಸ್ತಾನ ಹಾಗೂ ಮಧ್ಯ ಏಷ್ಯಾಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಟಿಬೆಟ್್ನಲ್ಲಿ 8 ಹಾಗೂ ನೆರೆಯ ಕ್ಷಿನ್್ಜಿಯಾಂಗ್್ನಲ್ಲಿ 10 ವಾಯುನೆಲೆಗಳನ್ನು ಸ್ಥಾಪಿಸಿರುವ ಅದು, 2020ರೊಳಗೆ ಇನ್ನೂ 22 ಹೊಸ ವಾಯುನೆಲೆಗಳನ್ನು ನಿರ್ಮಾಣ ಮಾಡಲಿದೆ. ಇವೆಲ್ಲ ಏನನ್ನು ಸೂಚಿಸುತ್ತವೆ? ಇವ್ಯಾವುವೂ ನಾಗರಿಕರ ಉಪಯೋಗಕ್ಕಾಗಿ ಹಾಕುತ್ತಿರುವ ಹಳಿಗಳಲ್ಲ. ಯುದ್ಧ ಸಂದರ್ಭದಲ್ಲಿ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ತ್ವರಿತ ಹಾಗೂ ನಿರಂತರವಾಗಿ ಸಾಗಣೆ ಮಾಡುವ ಉದ್ದೇಶ ಹೊಂದಿವೆ. ಇವತ್ತು ಚೀನಿ ನೌಕಾಪಡೆ ಯೆಲ್ಲೋ ಸಮುದ್ರ, ಕೊರಿಯನ್ ಕೊಲ್ಲಿ, ಮಲೇಷಿಯಾ ಜಲಸಂಧಿ ನಂತರ ನಮ್ಮ ಹಿಂದೂಮಹಾಸಾಗರದ ಮೇಲೂ ನಿಯಂತ್ರಣ ಹೊಂದಲು ಮುಂದಾಗಿದೆ. ಅದರ ಭಾಗವಾಗಿಯೇ ಶ್ರೀಲಂಕಾದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ನಮ್ಮ ಭಾಷಾಂಧ ತಮಿಳರಿಗೆ ಹೆದರಿ ಭಾರತ ಕೈಕಟ್ಟಿ ಕುಳಿತ ಕಾರಣ ಎಲ್್ಟಿಟಿಇ ವಿರುದ್ಧದ ಕಾರ್ಯಾಚರಣೆಗೆ ಮದ್ದುಗುಂಡು ಪೂರೈಕೆ ಮಾಡಿದ ಚೀನಾ, ಶ್ರೀಲಂಕಾದ ಮೇಲೆ ನಿಯಂತ್ರಣ ಸಾಧಿಸುವುದಕ್ಕೂ ಪ್ರಯತ್ನಿಸುತ್ತಿದೆ. 2010ರಲ್ಲಿ ಶ್ರೀಲಂಕಾಕ್ಕೆ ಹರಿದು ಬಂದು ವಿದೇಶಿ ಬಂಡವಾಳದಲ್ಲಿ ಶೇ. 90 ಭಾಗ ಚೀನಾದ್ದಾಗಿದೆ. ಇವತ್ತು ಅಮೆರಿಕದ ಶೇ.40ರಷ್ಟು ಸೆಕ್ಯುರಿಟಿ ಬಾಂಡ್್ಗಳನ್ನು ಖರೀದಿ ಮಾಡಿಟ್ಟುಕೊಳ್ಳುವ ಮೂಲಕ ವಿಶ್ವದ ಹಿರಿಯಣ್ಣನನ್ನೇ ಆಟವಾಡಿಸುತ್ತಿರುವ ಚೀನಾ, ಶ್ರೀಲಂಕಾವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾಲ ದೂರವಿಲ್ಲ. ಇನ್ನು ಮ್ಯಾನ್ಮಾರ್(ಬರ್ಮಾ) ವಿಷಯಕ್ಕೆ ಬಂದರೂ ಈಗಾಗಲೇ ಅಲ್ಲಿನ ಬಂದರುಗಳ ಅಭಿವೃದ್ಧಿ, ರಸ್ತೆ ನಿರ್ಮಾಣದ ನೆಪದಲ್ಲಿ ಬೇರುಬಿಟ್ಟಿರುವ ಚೀನಾ, ಅಲ್ಲಿ ಯಥೇಚ್ಛವಾಗಿರುವ ನೈಸರ್ಗಿಕ ಅನಿಲದ ಎಲ್ಲ ಗುತ್ತಿಗೆಗಳನ್ನೂ ತನ್ನದಾಗಿಸಿಕೊಂಡಿದೆ. ಬಾಂಗ್ಲಾದಲ್ಲೂ ಬಂದರು ನವೀಕರಣದ ನೆಪದಲ್ಲಿ ಚೀನಾ ಕಾಲಿಟ್ಟಿದೆ. ಇತ್ತ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಈಗಾಗಲೇ ಚೀನಾದ ಗಾಳಕ್ಕೆ ಸಿಕ್ಕಿದೆ. ಸಾಮಾನ್ಯವಾಗಿ ನೇಪಾಳದಲ್ಲಿ ಯಾರೇ ಪ್ರಧಾನಿಯಾದರೂ ಅವರ ಮೊದಲ ಭೇಟಿ ಭಾರತವಾಗಿರುತ್ತದೆ. ಆದರೆ 2008ರಲ್ಲಿ ಮಾವೋವಾದಿ ನಾಯಕ ಪ್ರಚಂಡ ಪ್ರಧಾನಿಯಾದಾಗ ಅವರು ಮೊದಲು ಭೇಟಿ ಕೊಟ್ಟಿದ್ದು ಮಾತ್ರ ಚೀನಾಕ್ಕೆ!
ಇದರ ಸಂದೇಶವೇನು? ಇದಕ್ಕೆಲ್ಲ ಯಾರನ್ನು ದೂರಬೇಕು? ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?
1962ರಲ್ಲಿ ಅಕ್ಸಾಯ್್ಚಿನ್ ಭೂಭಾಗವನ್ನು ಚೀನಾ ವಶಪಡಿಸಿಕೊಂಡಾಗ ಪ್ರಧಾನಿ ನೆಹರು ಸಂಸತ್ತಿನಲ್ಲಿ ನೀಡಿದ ಸಮರ್ಥನೆ ಏನು ಗೊತ್ತೆ? “ಅಲ್ಲಿ ಒಂದು ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ. ಅದನ್ನು ಚೀನಾಕ್ಕೆ ಆಕ್ರಮಿಸಿದ್ದರಿಂದ ಭಾರತ ಕಳೆದುಕೊಂಡಿದ್ದೇನೂ ಇಲ್ಲ’! ಇದರಿಂದ ಕುಪಿತರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಂಸದ ಮಹಾವೀರ್ ತ್ಯಾಗಿಯವರು ತಮ್ಮ ಬೋಳುದಲೆಯನ್ನು ತೋರುತ್ತಾ, “ಇಲ್ಲೂ ಕೂಡ ಏನೂ ಬೆಳೆಯುವುದಿಲ್ಲ. ಹಾಗಂತ ಇದನ್ನೂ ತುಂಡು ಮಾಡಬೇಕೇ ಅಥವಾ ಅನ್ಯರಿಗೆ ಕೊಟ್ಟುಬಿಡಲಾದೀತೆ?’ ಎಂದು ನೆಹರು ಮೇಲೆ ಟೀಕಾಪ್ರಹಾರ ಮಾಡುತ್ತಾರೆ. ವಾಸ್ತವದಲ್ಲಿ ಟೋಪಿಯೊಳಗಿದ್ದ ನೆಹರು ಮಂಡೆ ಕೂಡ ಬೊಳುದಲೆಯೇ ಆಗಿತ್ತು, ಜೊತೆಗೆ ಅವರ ಬುದ್ಧಿಯೂ ಬೋಳಾಗಿತ್ತು! ಅದರ ದುಷ್ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನೆಹರು ಮಾಡಿದ ಮೂರ್ಖ ಕೆಲಸ ಇಷ್ಟಕ್ಕೇ ನಿಲ್ಲುವುದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಹಾಗೂ ರಿಪಬ್ಲಿಕ್ ಆಫ್ ಚೀನಾ ಈ 5 ರಾಷ್ಟ್ರಗಳು ಮಾತ್ರ ವಿಟೋ ಅಧಿಕಾರ ಹೊಂದಿವೆ. ಚೀನಾ ಹೊಂದಿರುವ ವಿಟೋ ಅಧಿಕಾರ 1949ರ ನಂತರ ತೈವಾನ್ ಬಳಿಯಿತ್ತು. ಅದನ್ನು ಅಮೆರಿಕ ಭಾರತಕ್ಕೆ ನೀಡುವ ಸೂಚನೆ ನೀಡಿದರೂ ಅಂತಿಮವಾಗಿ ಚೀನಾಕ್ಕೆ ಸಲ್ಲುವಂತೆ ಮಾಡಿದ್ದು ನಮ್ಮ ಮಹಾನ್ ನೆಹರು. ಇದನ್ನು ರಾಘವ ಬೆಹಲ್ ಬರೆದಿರುವ “ಸೂಪರ್ ಪವರ್್’ ಪುಸ್ತಕದಲ್ಲೂ ದಾಖಲಿಸಲಾಗಿದೆ,
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ನೆಹರು ಮೂರ್ಖತನವನ್ನು ಅದರಲ್ಲಿ ಒಪ್ಪಿಕೊಂಡಿದ್ದಾರೆ!
ದುರದೃಷ್ಟವಶಾತ್, ಅಂತಹ ನೆಹರು ಅವರ ಕುಟುಂಬವೇ ಹಿಂಬಾಗಿಲಿನಿಂದ ಇಂದು ದೇಶವನ್ನಾಳುತ್ತಿದೆ. ಇತ್ತ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವ ಭಾಗವನ್ನೊಳಗೊಂಡ ಜಮ್ಮು-ಕಾಶ್ಮೀರದ ಉಸ್ತುವಾರಿ ಹೊಂದಿರುವ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಅವರಿಗೆ ಚೀನಾ ವೀಸಾ ನಿರಾಕರಣೆ ಮಾಡಿದೆ, ದಲೈಲಾಮ ಸಭೆಯನ್ನು ರದ್ದುಪಡಿಸುವಂತೆ ಬಹಿರಂಗವಾಗಿ ಒತ್ತಡ ಹೇರುತ್ತಿದೆ, ಡಿಸೆಂಬರ್ 1ರಂದು ನಡೆದ ದಲೈಲಾಮ ಜತೆಗಿನ ಕಾರ್ಯಕ್ರಮಕ್ಕೆ ಹೋಗದಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್್ಗೆ ಸಲಹೆ ನೀಡುವಷ್ಟರ ಮಟ್ಟಿಗೆ ಚೀನಾ ದಾರ್ಷ್ಟ್ಯ ಪ್ರದರ್ಶಿಸುತ್ತಿದೆ. ಈ ಘಟನೆಯ ನಂತರವೇ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಗಂಡೆದೆ ತೋರುವಂತೆ ಕರೆ ನೀಡಿರುವುದು. ಇಷ್ಟಾಗಿಯೂ ಪ್ರಧಾನಿ ಮನಮೋಹನ್ ಸಿಂಗ್ ಅವರಾಗಲಿ, ಅವರಿಗೆ ಮೂಗುದಾರ ಹಾಕಿ ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಾಗಲಿ ಬಾಯಿಬಿಟ್ಟಿಲ್ಲ. ಈ ಕಾಂಗ್ರೆಸ್ಸಿಗರ ತಾಕತ್ತು ಪ್ರದರ್ಶನವಾಗುವುದೇನಿದ್ದರೂ ಅಣ್ಣಾ ಹಜಾರೆಯಂತಹ ವಯೋವೃದ್ಧರ ಮುಂದಷ್ಟೇ. ಛೇ!
- ಕೃಪೆ: ಪ್ರತಾಪ ಸಿಂಹ